ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಟೋ

ವಿಕಿಸೋರ್ಸ್ದಿಂದ

ಆಟೋ ಇಂಗ್ಲಿಷ್ ಭಾಷೆಯಲ್ಲಿ ಒಂದು ಪೂರ್ವ ಪ್ರತ್ಯಯ, ಸ್ವಯಂ ಎಂಬ ಅರ್ಥ. ಉದಾಹರಣೆಗೆ ಆಟೋಬಯಾಗ್ರಫಿ (ಸ್ವಂತಜೀವನ ಚರಿತ್ರೆ ಅಥವಾ ಆತ್ಮಚರಿತ್ರೆ), ಆಟೋಕ್ರೇಟ್ (ಸ್ವಂತಸಾಮಥ್ರ್ಯವಂತ ಅಥವಾ ನಿರಂಕುಶಪ್ರಭು), ಆಟೋಮೊಬೀಲ್ (ಸ್ವಯಂಚಾಲಕ ವಾಹನ) ಇತ್ಯಾದಿ. ಬಳಕೆಯ ಅರ್ಥದಲ್ಲಿ ಒಂದು ಪುಟ್ಟ ಸ್ವಯಂಚಾಲಕ ವಾಹನ. ಅಂತರ್ದಹನ ಎಂಜಿನ್ನಿನಿಂದ (ನೋಡಿ- ಅಂತರ್ದಹನ-ಎಂಜಿನ್ನುಗಳು) ಬಲ ನಿರ್ಮಾಣವಾಗಿ ವಾಹನದ ಚಲನೆ ಸಾಧ್ಯವಾಗುತ್ತದೆ. ಒಬ್ಬ ಚಾಲಕ ಮತ್ತು ಇಬ್ಬರು ಪ್ರಯಾಣಿಕರನ್ನು ಇದು ಒಯ್ಯಬಲ್ಲುದು. ಜನಸಂದಣಿಯ ನಡುವೆ ಮೂಲೆ ಮೂಲೆಗಳಿಗೆ ಕ್ಷಿಪ್ರ ವೇಳೆಯಲ್ಲಿ ಕಡಿಮೆ ಬಾಡಿಗೆ ದರದಲ್ಲಿ ಸರಾಗವಾಗಿ ಸಾಗಬಲ್ಲ ಈ ವಾಹನ ನಗರಗಳಲ್ಲಿ ಸರ್ವಜನಪ್ರಿಯ ಸಾರಿಗೆ ಸಾಧನ. ಆದರೆ ಇದು ಕಾರುವ ಹೊಗೆ, ಉಂಟು ಮಾಡುವ ಗಲಭೆ ಕಿರುಕುಳದಾಯಕವೂ ಹೌದು. ಆಟೋ ಮೂರು ಚಕ್ರದ ವಾಹನ. ಇದರಲ್ಲಿಯೇ ಸ್ವಲ್ಪ ದೊಡ್ಡದೂ ಹೆಚ್ಚು ಅಶ್ವಸಾಮಥ್ರ್ಯವುಳ್ಳದ್ದೂ ಆಗಿರುವ ಟೆಂಪೋ ವಾಹನವನ್ನು ನಗರಗಳ ಒಳಗೆ ಭಾರವಸ್ತುಗಳನ್ನು ಸಾಗಿಸಲು ಉಪಯೋಗಿಸುತ್ತಾರೆ.