ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಡ್ರಿಯನ್, ಎಡ್ಗರ್ ಡೌಗ್ಲಾಸ್

ವಿಕಿಸೋರ್ಸ್ ಇಂದ
Jump to navigation Jump to search

ಆಡ್ರಿಯನ್, ಎಡ್ಗರ್ ಡೌಗ್ಲಾಸ್ (1889-1977). 1932ರ ಶರೀರಕ್ರಿಯಾಶಾಸ್ತ್ರ ಮತ್ತು ವೈದ್ಯಕೀಯದ ನೊಬೆಲ್ ಪ್ರಶಸ್ತಿಯನ್ನು ಬ್ರಿಟನ್ನಿನ ಮತ್ತೊಬ್ಬ ನರತಜ್ಞ ಷೆರಿಂಗ್‍ಟನ್ ಸರ್ ಚಾಲ್ರ್ಸ್‍ಸ್ಕಾಟ್‍ನೊಂದಿಗೆ ಹಂಚಿಕೊಂಡ. 1915ರಲ್ಲಿ ಕೇಂಬ್ರಿಜ್‍ನ ಟ್ರಿನಿಟಿ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದ. ನರಕೋಶಗಳ ಉದ್ರೇಕತೆಯ ಕಾರ್ಯ ವಿವರಣೆಯನ್ನು ಕೂಲಂಕಷವಾಗಿ ವಿವರಿಸಿರುವ ಕೀರ್ತಿ ಇವನದು. ಮೂರ್ಛೆ ರೋಗ ಮತ್ತು ಮೆದುಳಿಗೆ ಸಂಬಂಧಪಟ್ಟ ಸಂಶೋಧನೆಗಳಿಗೆ ಇವನ ಕೊಡುಗೆ ಹೊಸ ಹಾದಿಯನ್ನು ತೆರೆಯಿತು. 1950 ರಿಂದ 1955 ರವರೆಗೆ ಈತನು ರಾಯಲ್ ಸೊಸೈಟಿಯ ಅಧ್ಯಕ್ಷನಾಗಿದ್ದ. 1942ರಲ್ಲಿ ಆರ್ಡರ್ ಆಫ್ ಮೆರಿಟ್ ಪಾರಿತೋಷಕವನ್ನು ಪಡೆದ. 1955ರಲ್ಲಿ ಬ್ಯಾರೋನಿ ಪದಕ ಲಭಿಸಿದೆ. ನರವಿಜ್ಞಾನಕ್ಕೆ ಸಂಬಂಧಿಸಿದ ಹಲವಾರು ಪ್ರಕಟಣೆಗಳಿವೆ.

(ಡಾ||ಎನ್.ಎಸ್.ಲೀಲಾ)