ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಮನಿಯರ್ ಸ್ಟೇಸಿ

ವಿಕಿಸೋರ್ಸ್ದಿಂದ

ಆಮನಿಯರ್ ಸ್ಟೇಸಿ (1887 - 1928) ಯುದ್ಧಕಾಲದ ಸಂಸಾರವೊಂದರ ಕಥೆಯನ್ನು ನಿರೂಪಿಸುವ ದಿ ಕ್ವೆರಿಲ್ಸ್ ಎಂಬ ಪ್ರಸಿದ್ಧ ಕಾದಂಬರಿಯ ಕರ್ತೃ. ಇಂಗ್ಲೀಷ್ ಕಾದಂಬರಿಕಾರ, ಕಥೆಗಾರ. ತಂದೆ ಶಿಲ್ಪಿ. ಚಿತ್ರಕಲೆಯಲ್ಲೂ ಅಭಿರುಚಿಯುಂಟು. ಮೊದಲ ಮಹಾಯುದ್ಧದಲ್ಲಿ ಭಾಗವಹಿಸಿದ. ಹಾರ್ಟ್‍ಬೀಟ್ (1922), ಓವರ್ ಹರ್ಡ್(1924), ದಿ ಬೇಬಿ ಗ್ರಾಂಡ್ (1926), ಲಿಟ್ಲ್ ವಿಂಡೋಸ್ (1931)- ಈತನ ಪ್ರಸಿದ್ಧ ಪುಸ್ತಕಗಳು. ಆಧುನಿಕ ಕಥಾಪ್ರಂಪಚದಲ್ಲಿ ಅತಿ ಮುಖ್ಯರಲ್ಲೊಬ್ಬನೆಂದು ಹೆಸರು ಪಡೆದಿದ್ದಾನೆ.

(ಎಸ್.ಎ.ಎಸ್.)