ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆರ್ಕ್‌ರೈಟ್, ಸರ್ ರಿಚರ್ಡ್
ಗೋಚರ
೧೭೩೨-೧೭೯೨. ಇಂಗ್ಲೆಂಡಿನ ಸಂಶೋಧಕ. ೧೩ ಮಕ್ಕಳಲ್ಲಿ ಈತನೇ ಕಿರಿಯವ. ಚಿಕ್ಕ ವಯಸ್ಸಿನಲ್ಲಿ ಕ್ಷೌರಿಕ ವೃತ್ತಿಯನ್ನು ಈತನಿಗೆ ಕಲಿಸಿತಾದರೂ ತನ್ನ ೩೫ನೆಯ ವಯಸ್ಸಿನಲ್ಲಿ ಇದನ್ನು ತೊರೆದು ನೂಲುವ ಕೆಲಸದಲ್ಲಿ ತನ್ನ ಆಸಕ್ತಿಯನ್ನು ತೋರಿದ. ನೇಯುವ ಚೌಕಟ್ಟನ್ನು ಕಂಡುಹಿಡಿದು (೧೭೬೯), ಹಾರ್ಗೀರವನ ನೇಯುವ ಯಂತ್ರವನ್ನು ಅಭಿವೃದ್ಧಿಗೊಳಿಸಿದ. ಇದರಿಂದಾಗಿ ಒಂದೇ ಸಲಕ್ಕೆ ಅಧಿಕ ಸಂಖ್ಯೆಯ ದಾರದ ಎಳೆಗಳನ್ನು ಉಪಯೋಗಿಸುವುದು ಸಾಧ್ಯವಾಯಿತು. ಈ ನೇಯುವ ಯಂತ್ರದ ವಿರುದ್ಧ ಆದಗೊಂದಲಗಳಿಂದಾಗಿ ಈತ ಲ್ಯಾಂಕಷೈರನ್ನು ತ್ಯಜಿಸಿ ನಾಟಿಂಗ್ಹ್ಯಾಂಗೆ ಬಂದು ಸೇರಿದ. ಈತ ರಚಿಸಿದ ಈ ಯಂತ್ರದ ಬಗ್ಗೆ ಅನೇಕ ತೊಂದರೆಗಳನ್ನು ಅನುಭವಿಸಿ, ತಯಾರಿಕಾ ಸ್ವಾಮ್ಯದ ಬಗ್ಗೆ ಹಲವಾರು ಮೊಕದ್ದಮೆಗಳನ್ನೆದುರಿಸಿಯೂ ಶ್ರೀಮಂತನಾಗಿ ಬಾಳಿದ.