ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಲ್ಸೇಸ್

ವಿಕಿಸೋರ್ಸ್ ಇಂದ
Jump to navigation Jump to search

ಈ ಪ್ರಾಂತ್ಯದ ವಿಸ್ತೀರ್ಣ ಸು. 8288 ಚ.ಕಿಮೀ. ಜನಸಂಖ್ಯೆ ಸು. 18,15,488 (2006). ಇದರ ಮುಖ್ಯನಗರ ಸ್ಟ್ರಾಸ್ಬರ್ಗ್. ಹಾತ್-ರಿಹನ್ ಮತ್ತು ಬಾಸ್ ರಿಹನ್ಗಳನ್ನೊಳಗೊಂಡು ಫ್ರಾನ್ಸ್ ದೇಶದ ಪ್ರಮುಖ ಭಾಗವಾಗಿದೆ. ಅಲ್ಯೂಮಿನಿಯಂ ಖನಿಜ ನಿಕ್ಷೇಪಗಳನ್ನೊಳಗೊಂಡ ಪರ್ವತ ಶ್ರೇಣಿಗಳಿವೆ. ಮುಲ್ಹೌಸನ ಉತ್ತರಕ್ಕೆ ಪೊಟ್ಯಾಷ್ನ ನಿಕ್ಷೇಪಗಳುಂಟು. ಬೆಲ್ಪೋರ್ಟ್ ಮತ್ತು ಕಾಲ್ಮಾರಿನ ಸುತ್ತುಮುತ್ತಲಲ್ಲಿ ಹತ್ತಿಗಿರಣಿಗಳು ಮತ್ತು ಸಾವೆರಿನ್ನಲ್ಲಿ ಉಣ್ಣೆಗಿರಣಿಗಳು ಇವೆ. ಆಹಾರವಸ್ತು ಸಂಸ್ಕರಣ, ರಾಸಾಯನಿಕಗಳು, ಯಂತ್ರೋಪಕರಣಗಳ ಉದ್ದಿಮೆಗಳೂ ಇವೆ. ದ್ರಾಕ್ಷಿ ಬೆಳೆಯನ್ನು ಹೆಚ್ಚಾಗಿ ಉತ್ಪಾದಿಸುತ್ತಾರೆ. ಲ್ಯೂಟರ್, ಮೊಡರ್, ಥೌರ್ ನದಿಗಳು ಈ ಪ್ರದೇಶದಲ್ಲಿ ಹರಿಯುತ್ತವೆ. 870ರಲ್ಲಿ ಇದು ಫ್ರೆಂಚರಿಂದ ಜರ್ಮನಿಯವರ ಆಡಳಿತಕ್ಕೆ ಬಂತು. 1798ರಲ್ಲಿ ಮತ್ತೆ ಫ್ರೆಂಚರ ಆಡಳಿತಕ್ಕೆ ಬಂತು. 1871-1919 ಮತ್ತು 1940-45ರ ಅವಧಿಯಲ್ಲೂ ಜರ್ಮನರ ಆಡಳಿತದಲ್ಲಿದ್ದು, ಇದೀಗ ಫ್ರಾನ್ಸಿನ ಬಹು ಮುಖ್ಯಭಾಗವಾಗಿದೆ.