ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಜ್ಜತ್ ನಗರ
ಗೋಚರ
ಇಜ್ಜತ್ ನಗರ- ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಉತ್ತರ ಭಾಗದಲ್ಲಿರುವ ಪ್ರದೇಶ. ಹಿಂದೆ ಇದನ್ನು ಇಜ್ಜತ್ ನಗರವೆಂದು ಕರೆಯಲಾಗುತ್ತಿತ್ತು. ಈ ಊರು ತಾರ್ ಮರವನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತದೆ. ಸ್ವಯಂಚಾಲಿತ ಯಂತ್ರಗಳ ನಿಪುಣ ಇಜ್ಜóತ್ ಬ್ರೌನ್ ಎಂಬುವನಿಂದ ಎಪ್ಪತ್ತೈದು ವರ್ಷಗಳ ಹಿಂದೆ ಈ ಊರು ನಿರ್ಮಾಣವಾಯಿತು. ರೈಲ್ವೆ ಹಳಿಗಳ ನಡುವೆ ನಗರ ನಿರ್ಮಾತೃವಿನ ಗೋರಿಯಿದೆ.
ಹದಿನೈದು ವರ್ಷಗಳ ಹಿಂದೆ ಇದೊಂದು ನಿರ್ಜನ ಪ್ರದೇಶವಾಗಿತ್ತು. ಈಗ ವಾಣಿಜ್ಯ ಹಾಗೂ ಸಂಪರ್ಕವಿಭಾಗಗಳ ಜೊತೆಗೆ ಏಷ್ಯಾದಲ್ಲೇ ಬಹು ದೊಡ್ಡದಾದ ಪಶುವೈದ್ಯ ಸಂಶೋಧನಾಲಯವನ್ನು ಪಡೆದಿದೆ. ಈ ಸಂಸ್ಥೆಯಲ್ಲಿ ಸುಮಾರು ಎರಡು ಸಾವಿರ ಜನ ಕೆಲಸ ಮಾಡುತ್ತಿದ್ದಾರೆ. ಲೋಕೊ ವರ್ಕ್‍ಷಾಪ್, ರೈಲ್ವೆ ಆಸ್ಪತ್ರೆ, ಶಾಲೆಗಳು ಈ ನಗರದ ಜನಸಂಖ್ಯೆಯನ್ನು ಬೆಳೆಸುವುದರಲ್ಲಿ ಸಹಕಾರಿಯಾಗಿದೆ. ನಗರ ಅಭಿವೃದ್ಧಿ ಪಥದಲ್ಲಿದೆ. (ಎಸ್.ಡಿ.ಎಂ.)