ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉತ್ತರಪಕ್ಷ

ವಿಕಿಸೋರ್ಸ್ದಿಂದ

ಉತ್ತರಪಕ್ಷ

1 ವಾದದಲ್ಲಿ ಒಂದು ವಿಷಯವನ್ನು ಕುರಿತು ಪ್ರತಿಪಕ್ಷೀಯನಿಂದ ಮಂಡಿತವಾದ, ನೈಜವಲ್ಲದ, ಪೂರ್ವಪಕ್ಷರೂಪವಾದ ವಿಚಾರ ಪರಂಪರೆಯನ್ನು ಯುಕ್ತಿ ಪ್ರಮಾಣಾದಿಗಳಿಂದ ಸಕಾರಣವಾಗಿ ಖಂಡಿಸಿ ನೈಜವಾದ ಸಿದ್ಧಾಂತವನ್ನು ಪ್ರತಿಪಾದಿಸಿ ಸ್ಥಾಪಿಸುವುದು.

2 ಮೀಮಾಂಸಾಶಾಸ್ತ್ರದಲ್ಲಿ ಐದು ಅಂಗಗಳಿಂದ ಕೂಡಿದ ವಾಕ್ಯಸಮುದಾಯ. ರೂಪ ಅಧಿಕರಣಗಳಲ್ಲಿ ಬರುವ ವಿಷಯ, ವಿಶಯ (ಸಂಶಯ), ಪೂರ್ವಪಕ್ಷ, ಉತ್ತರ, ನಿರ್ಣಯಗಳೆಂಬ ಐದು ಅವಯವಗಳಲ್ಲಿ ನಾಲ್ಕನೆಯದು.

3 ಚಾಂದ್ರಮಾನ ತಿಂಗಳುಗಳನ್ನು ಶುಕ್ಲಪಕ್ಷ ಕೃಷ್ಣಪಕ್ಷ ಎಂದು ಎರಡಾಗಿ ವಿಭಾಗ ಮಾಡಿದ್ದಾರೆ. ಇದರಲ್ಲಿ ಕೃಷ್ಣಪಕ್ಷದ ಪ್ರಥಮ ತಿಥಿಯಿಂದ ಅಮಾವಾಸ್ಯೆ ತಿಥಿ ಪೂರ್ತಿ ಇರುವ ಉತ್ತರ ಮಾಸಾರ್ಧ ರೂಪ ಪಕ್ಷ. (ಎಸ್.ಎನ್.ಕೆ.)