ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಷ್ಟ್ರ ಪಕ್ಷಿ

ವಿಕಿಸೋರ್ಸ್ದಿಂದ

ಉಷ್ಟ್ರ ಪಕ್ಷಿ - ಬದುಕಿರುವ ಅತಿ ದೊಡ್ಡ ಪಕ್ಷಿ (ಆಸ್ಟ್ರಿಚ್). ಗಂಡು ಸುಮಾರು 8' ಎತ್ತರವೂ 150 ಕೆಜಿ ಪೌಂಡ್ ತೂಕವೂ ಇರುತ್ತದೆ. ಹೆಣ್ಣು ಸ್ವಲ್ಪ ಕಿರಿಯದು. ಹಾರಲಾಗದ ಪಕ್ಷಿ ಇದು. ಆದರೆ ಬಲು ವೇಗವಾಗಿ ಓಡಬಲ್ಲುದು. ವಾಸಸ್ಥಳ ಸಾಮಾನ್ಯವಾಗಿ ಅರೇಬಿಯ ಮತ್ತು ಆಫ್ರಿಕ ದೇಶಗಳ ಮರಳು ಕಾಡುಗಳು. ನಿಯರ್ನಿತಿಸ್ ಉಪವರ್ಗದ ಈ ಪ್ರಾಣಿಯ ಶಾಸ್ತ್ರನಾಮ ಸ್ಟ್ರುಥಿಯೋ ಕ್ಯಾಮೆಲಸ್. ಉಷ್ಟ್ರಪಕ್ಷಿಯ ರೆಕ್ಕೆಗಳಲ್ಲಿ ಹಲವು ಟೊಳ್ಳುಕಾಂಡದ ದಪ್ಪಗರಿಗಳಿವೆ. ತಲೆ ಸಣ್ಣದು. ಕತ್ತು ಉದ್ದ, ಎರಡರ ಮೇಲೂ ಗರಿಗಳ ಹೊದಿಕೆಯಿಲ್ಲ. ಅಗಲವಾದ ಚಪ್ಪಟೆಯದ ಕೊಕ್ಕು. ಕಾಲುಗಳು ಉದ್ದ, ಬಲವಾಗಿವೆ. ಇವಕ್ಕೂ ಗರಿಗಳ ಹೊದಿಕೆಯಿಲ್ಲ. ಅಗಲವಾದ ಚಪ್ಪಟೆಯಾದ ಕೊಕ್ಕು. ಕಾಲುಗಳು ಉದ್ದ, ಬಲವಾಗಿವೆ. ಇವಕ್ಕೂ ಗರಿಗಳ ಹೊದಿಕೆಯಿಲ್ಲ. ಎರಡು ಕಾಲುಬೆರಳುಗಳು ಮಾತ್ರ ಇವೆ. ಕೆಳಭಾಗದಲ್ಲಿ ಮೆತ್ತೆ ಇದೆ. ಒಂದು ಕಾಲುಬೆರಳು ಮತ್ತೊಂದಕ್ಕಿಂತ ಉದ್ದವಾಗಿದೆ. ಇವನ್ನು ಸರ್ವಭಕ್ಷಕಗಳೆಂದು ಕರೆದರೂ ತಿನ್ನುವುದು ಸಾಮಾನ್ಯವಾಗಿ ಗಿಡಗಂಟೆಗಳನ್ನೇ. ಬಹುಪತ್ನಿತ್ವ ಹೆಚ್ಚು. ಅನೇಕ ಹೆಣ್ಣುಗಳು ಒಂದು ಗಂಡು ಇರುವ ಗುಂಪುಗಳಲ್ಲಿ ವಾಸಿಸುವುದು ಪದ್ಧತಿ. ಸಾಮಾನ್ಯವಾಗಿ ಒಂದು ಹೆಣ್ಣು ಹಕ್ಕಿ ಒಂದು ಸಲಕ್ಕೆ ಒಂದು ಮೊಟ್ಟೆ ಇಡುತ್ತದೆ. ಇದನ್ನು ಗಂಡು ಮೊದಲೇ ತೋಡಿದ ಬಿಲಗಳಲ್ಲಿ ಅಡಗಿಸುತ್ತದೆ. ಮೊಟ್ಟೆಗಳಿಗೆ ಕಾವುಕೊಟ್ಟು ಕಾಪಾಡುವ ಕೆಲಸವನ್ನು ಎರಡೂ ಹಕ್ಕಿಗಳು ನಿರ್ವಹಿಸುತ್ತವೆ. ಮರಿ ಹುಟ್ಟಿದಾಗಲೇ ಅದಕ್ಕೆ ಗರಿಗಳ ಹೊದಿಕೆ ಇರುತ್ತದೆ. ಅದು ಸ್ವತಂತ್ರವಾಗಿ ತಿರುಗಾಡಿ ತಾಯಿತಂದೆಗಳ ಸಹಾಯವಿಲ್ಲದೆ ಆಹಾರವನ್ನು ಹುಡುಕಿಕೊಳ್ಳಬಲ್ಲುದು. ಗಂಡು ಹಕ್ಕಿಗಳಿಗೆ ಮಾಂಸಯುತವಾದ ಶಿಶ್ನವಿದೆ. ಹಾಗೆ ಹೆಣ್ಣುಹಕ್ಕಿಗಳಲ್ಲಿ ಹೆಂಬುಲ್ಲ(ಕ್ಲಿಟೋರಿಸ್) ಉಂಟು. ಇವು ವಿಕಾಸದಲ್ಲಿ ಮೀಸೊಜೋಯಿಕ್ ಯುಗದ ಅಂತ್ಯದಲ್ಲಿ ಕಾಣಿಸಿಕೊಂಡವು.

ಚಿತ್ರ :ಉಷ್ಟ್ರಪಕ್ಷಿ

ದಕ್ಷಿಣ ಅಮೆರಿಕ ಖಂಡದಲ್ಲಿ ರ್ಹಿಯ ಅಮೆರಿಕಾನ ಪ್ರಭೇದದ ಹುಲ್ಲಿಗಾವಲುಗಳಲ್ಲಿ ವಾಸಿಸುತ್ತವೆ. ಗರಿಗಳನ್ನು ಅಲಂಕಾರಕ್ಕೆ ಉಪಯೋಗಿಸುತ್ತಾರೆ. ದಕ್ಷಿಣ ಆಫ್ರಿಕ ಮತ್ತು ಕ್ಯಾಲಿಫೋರ್ನಿಯಗಳಲ್ಲಿ ಉಷ್ಟ್ರಪಕ್ಷಿಗಳನ್ನು ಕಾಣಬಹುದು.

(ಎಚ್.ಬಿ.ಡಿ.) (ಪರಿಷ್ಕರಣೆ: ಕೆ ಎಸ್ ನವೀನ್)