ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಷ್ಣಜನ್ಯ ವಿದ್ಯುಚ್ಛಕ್ತಿ

ವಿಕಿಸೋರ್ಸ್ದಿಂದ

ಉಷ್ಣಜನ್ಯ ವಿದ್ಯುಚ್ಛಕ್ತಿ

ಕೆಲವು ವಿದ್ಯುದ್‍ವಾಹಕ ಹರಳುಗಳ ಉಷ್ಣತಾಮಟ್ಟಗಳಲ್ಲಿ ಬದಲಾವಣೆ ಉಂಟುಮಾಡಿದಾಗ ಜನಿಸುವ ಶಕ್ತಿ (ಪೈರೋ ಎಲೆಕ್ಟ್ರಿಸಿಟಿ). ಇದನ್ನು ವಿದ್ಯುಧ್ರುವೀಕರಣ (ಎಲೆಕ್ಟ್ರಿಕ್ ಪೋಲರೈಸೇಷನ್) ಅಥವಾ ಘನ ಸೆಂಟಿಮೀಟರಿಗೆ ದ್ವಿಧ್ರುವಮಹತ್ವಾಂಕದಿಂದ (ಡೈಪೋಲ್ ಮೊಮೆಂಟ್ ಪರ್ ಸಿ.ಸಿ.) ಅಳೆಯುವರು. ಕೆಲವು ಅವಾಹಕಗಳಲ್ಲಿ ಉಷ್ಣತೆಯನ್ನು ∆ಖಿ ಬದಲಾಯಿಸಿದಾಗ ಹುಟ್ಟುವ ವಿದ್ಯುದ್ಧ್ರುವೀಕರಣ ∆P, ∆ಖಿ ಅನಂತ ಸೂಕ್ಷ್ಮವಾಗಿರುವಾಗ

ಸಮೀಕರಣದಿಂದ ತತ್ಸಂಬಂಧ ∆P ನ್ನು ಅಳೆಯಬಹುದು. ∆1, ∆2, ∆3 ಇವು ಪರಸ್ಪರ ಲಂಬವಾಗಿರುವ ಮೂರು ದಿಸೆಗಳಲ್ಲಿ ∆P ಯ ಘಟಕಗಳು (ಕಾಂಪೊನೆಂಟ್ಸ್). ಈ ಪರಿಮಾಣದ ಹೆಸರು ಉಷ್ಣಜನ್ಯವಿದ್ಯುತ್ಪರಿಣಾಮ (ಪೈರೋ ಎಲೆಕ್ಟ್ರಿಕ್ ಎಫೆಕ್ಟ್) ಠಿ1, ಠಿ2, ಠಿ3 ಇವು ಉಷ್ಣಜನ್ಯವಿದ್ಯುತ್ತಿನ ಆಯಾ ದಿಕ್ಕಿನ ಗುಣಕಗಳು (ಪೈರೋ ಎಲೆಕ್ಟ್ರಿಕ್ ಕೋಎಪಿಶಂಟ್ಸ್). ಒಂದು ಹರಳಿನಲ್ಲಿ ಈ ಪರಿಣಾಮವಿರಬೇಕಾದರೆ ಅದಕ್ಕೆ ನಿಶ್ಚಿತವಾದ ಧ್ರುವಾಕ್ಷ ಇರಬೇಕು. 32 ವರ್ಗಗಳ ಹರಳುಗಳಲ್ಲಿ 10ಕ್ಕೆ ಮಾತ್ರ ಈ ವೈಶಿಷ್ಟ್ಯವಿದೆ. ಟಾರ್ಮಾಲಿನ್, ಟಾರ್ಟಾರಿಕ್ ಆಮ್ಲ ಮತ್ತು ಕಬ್ಬಿನಿಂದ ಮಾಡಿದ ಸಕ್ಕರೆ ಈ 10ರಲ್ಲಿ ಸೇರಿವೆ. ಉಷ್ಣದ ಕಾರಣವಾಗಿ ಹರಳಿನ ವಿಕಾಸ ಅದರ ರಚನೆಯ ವೈಶಿಷ್ಟ್ಯದಿಂದಾಗಿ ನಿರ್ಬಂಧಿತವಾಗಿರುವುದೋ ಅಥವಾ ಅನಿರ್ಬಂಧಿತವಾಗಿದೆಯೋ ಎನ್ನುವುದರ ಮೇಲೆ ಉಷ್ಣಜನ್ಯವಿದ್ಯುತ್ತಿನ ಪರಿಣಾಮ ಅವಲಂಬಿಸಿದೆ. ನಿರ್ಬಂಧಿತವಾಗಿದ್ದಲ್ಲಿ ಆ ಹರಳಿನಲ್ಲಿ ಪ್ರಾಥಮಿಕ (ಪ್ರೈಮರಿ) ಉಷ್ಣಜನ್ಯವಿದ್ಯುತ್ ತೋರಿಬರುವುದು. ಅನಿರ್ಬಂಧಿತವಾಗಿದ್ದಲ್ಲಿ ಅಂಥ ಹರಳಿನಲ್ಲಿ ಪ್ರಾಥಮಿಕ ಪರಿಣಾಮದ ಮೇಲೆ ದ್ವಿತೀಯಕ ಪರಿಣಾಮವೂ ಕಂಡುಬರುತ್ತದೆ. ದ್ವಿತೀಯಕ ಪರಿಣಾಮದ ಹೆಸರು ಸಂಮರ್ದ ವಿದ್ಯುತ್ಪರಿಣಾಮ (ಪೀಜೊó ಎಲೆಕ್ಟ್ರಿಕ್ ಎಫೆಕ್ಟ್.). ಕಾರಣ, ಇದು ಉಷ್ಣತಾವಿಕಾಸದಿಂದ ಹುಟ್ಟುವ ಸಂಮರ್ದದ ದೆಸೆಯಿಂದ ಹುಟ್ಟುತ್ತದೆ. ಅಣುವಾದದ ಪ್ರಕಾರ ಪ್ರಾಥಮಿಕ ಪರಿಣಾಮ ಹರಳುಗಳಲ್ಲಿ ಎಲೆಕ್ಟ್ರಾನುಗಳ ವಿತರಣೆ ಬದಲಾಗುವುದರಿಂದ ಹುಟ್ಟುತ್ತದೆ. ದ್ವಿತೀಯಕ ಪರಿಣಾಮ ಧನ ಮತ್ತು ಋಣ ಅಯಾನುಗಳ ಸ್ಥಳಾಂತರದಿಂದ ಹುಟ್ಟುತ್ತದೆ.

  (ಎಂ.ಐ.ಎಸ್.)