ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎರಿಟ್ರಿಯ

ವಿಕಿಸೋರ್ಸ್ ಇಂದ
Jump to navigation Jump to search

ಎರಿಟ್ರಿಯ: 1952ರಿಂದ ಇಥಿಯೋಪಿಯದ ಚಕ್ರವರ್ತಿಯ ಅಧೀನದಲ್ಲಿರುವ ಒಂದು ಸ್ವಯಮಾಡಳಿತ ಪ್ರಾಂತ್ಯ. ಹಿಂದೆ ಇಟಲಿಯ ವಸಾಹತು ಆಗಿತ್ತು. 1993ರ ಮೇ 24ರಂದು ಸ್ವತಂತ್ರ್ಯ ರಾಷ್ಟ್ರವಾಯಿತು. ಆಗ್ನೇಯ ಆಫ್ರಿಕದಲ್ಲಿ ಕೆಂಪು ಸಮುದ್ರದ ದಡದ ಮೇಲಿದೆ. ವಾಯವ್ಯದಲ್ಲಿ ಸುಡಾನ್ ಗಣರಾಜ್ಯವೂ ಆಗ್ನೇಯದಲ್ಲಿ ಹಿಂದೆ ಫ್ರೆಂಚ್ ಸೋಮಾಲಿ ಲ್ಯಾಂಡ್ ಆಗಿದ್ದ ಪ್ರದೇಶವೂ ದಕ್ಷಿಣದಲ್ಲಿ ಇಥಿಯೋಪಿಯವೂ ಇವೆ, ಉತ್ತರ ಅಕ್ಷಾಂಶ 18º2ದಿ-12º42ದಿವರಗೆ ಪು.ರೇ. 36º-43º ವರೆಗೆ. ಕಸಾರ್ ಭೂಶಿರದಿಂದ ಡುಮೈರಾ ಭೂಶಿರದವರೆಗೆ ಹಬ್ಬಿರುವ ಇದರ ವಿಸ್ತೀರ್ಣ 1,17,600 ಚ.ಕಿಮೀ. (45,405 ಚ.ಮೈ) ಜನಸಂಖ್ಯೆ 4,000000 (2002) ಅಸ್ಮಾರ ರಾಜಧಾನಿ. ಇದು ಸಮುದ್ರಮಟ್ಟಕ್ಕಿಂತ 2280ಮೀ ಎತ್ತರದಲ್ಲಿದ್ದು 1,17,000 ಜನಸಂಖ್ಯೆ ಹೊಂದಿದೆ. ದೇಶದಲ್ಲಿ ನೆಲೆಸಿರುವ 17,500 ಇಟಾಲಿಯನರಲ್ಲಿ ಬಹು ಮಂದಿ ನಗರದಲ್ಲಿದ್ದಾರೆ. ಮುಖ್ಯ ರೇವುಪಟ್ಟಣ ಕೆಂಪುಸಮುದ್ರದ ತೀರದಲ್ಲಿರುವ ಮಸಾವ. ಇಲ್ಲಿಂದ ಅಗೋರ್ಡಾಟ್ ನಗರದವರೆಗೆ ಅಸ್ಮಾರದ ಮೂಲಕ ಸಾಗುವ 307 ಕಿಮೀ ದೂರದ ರೈಲು ಮಾರ್ಗವಿದೆ.

ಎರಿಟ್ರಿಯದ ಉತ್ತರ ಭಾಗ ಸುಡಾನಿನ ಮೈದಾನದಿಂದ ಕೆಂಪು ಸಮುದ್ರದ ಕರಾವಳಿಯವರೆಗೆ ಇಥಿಯೋಪಿಯ ಪ್ರಸ್ಥಭೂಮಿಯನ್ನು ಹಾಯ್ದು ಹಬ್ಬಿದೆ. ಎರಿಟ್ರಿಯದ ಸಮುದ್ರ ತೀರದ ಉದ್ದ 1079 ಕಿಮೀ. ತೀರದ ಬಂiÀÄಲು ಪ್ರದೇಶ ಸು. 35-80 ಕಿಮೀ ಅಗಲ. ಇಲ್ಲಿ ಸೆಕೆ ಹೆಚ್ಚು, ಆದರ್ರ್‌ತೆಯೂ ಹೆಚ್ಚು; ಮಳೆ ಅನಿಶ್ಚಿತ. ಈ ಬಂiÀÄಲಿನಿಂದ ಪಶ್ಚಿಮದ ಪರ್ವತಗಳ ಕಡೆಗೆ ಭೂಮಿ ಏರುತ್ತ ಹೋಗುತ್ತದೆ. ಈ ಪರ್ವತಗಳಲ್ಲಿ ಸೋನ (ಸು. 3013 ಮೀ) ಅತ್ಯುನ್ನತ ಶಿಖರ. ಉನ್ನತ ಪ್ರದೇಶಕ್ಕೆ ಹೋದಂತೆ ಸಮಶೀತೋಷ್ಣ ವಾಯಗುಣವನ್ನು ಕಾಣಬಹುದು. ಇಲ್ಲಿ ಬೇಸಗೆಯಲ್ಲಿ ಮಳೆಯಾಗುತ್ತದೆ. ವಾಯವ್ಯದಲ್ಲಿ ಈ ಪ್ರದೇಶ ಸುಡಾನಿನ ಬೆಂಗಾಡಿನ ಕಡೆಗೆ ಇಳಿಜಾರಾಗಿದೆ. ಇಲ್ಲಿ ನೀರಾವರಿಯ ಸಹಾಯದಿಂದ ಎತ್ತರಕ್ಕೆ ಅನುಸಾರವಾಗಿ ಉಷ್ಣವಲಯದ ಮತ್ತು ಸಮಶೀತೋಷ್ಣವಲಯದ ಧಾನ್ಯಗಳನ್ನು ಬೆಳೆಯಲಾಗುತ್ತದೆ. ಎತ್ತರ ಪ್ರದೇಶಗಳಲ್ಲಿ ಆಹಾರಧಾನ್ಯ (ಹೆಚ್ಚಾಗಿ ಗೋದಿ), ಕಾಫಿ,

ಹೊಗೆಸೊಪ್ಪು, ಹಣ್ಣು ತರಕಾರಿ - ಇವು ಮುಖ್ಯ ಬೆಳೆಗಳು, ಮಳೆ ಕಡಿಮೆಯಿರುವ ತಗ್ಗಿನ ಪ್ರದೇಶಗಳಲ್ಲಿ ಮರಗೋಂದು, ಎಣ್ಣೆ ಬೀಜಗಳು, ಖರ್ಜೂರ-ಇವು ಮುಖ್ಯ ಉತ್ಪನ್ನಗಳು, ಪಶುಪಾಲನೆಯೂ ನಡೆಯುತ್ತದೆ.

ಕಣಿವೆಗಳಲ್ಲಿ ನೀರಾವರಿಯಿಂದ ಹತ್ತಿ ಬೆಳೆಸುತ್ತಾರೆ; ಮಸಾವದ ಸುತ್ತಮುತ್ತಲೂ ಇದರ ಬಳಿ ಇರುವ ಡಾಹ್ಲಾಕ್ ದ್ವೀಪ ಸ್ತೋಮದಲ್ಲೂ ಮೀನು ಹಿಡಿಯುವುದು ಜನರ ಮುಖ್ಯ ಉದ್ಯೋಗ. ಉಗಾರೋ ಮತ್ತು ಮಸಾವಗಳ ಹತ್ತಿರ ಸ್ವಲ್ಪ ಚಿನ್ನ ದೊರಕಿದೆ. ಕೈಗಾರಿಕೆ ಅತ್ಯಲ್ಪ. ಹತ್ತಿ ಮತ್ತು ಸಿಮೆಂಟ್ ಕಾರ್ಖಾನೆಗಳು ಕೆಲವಿವೆ. ಉಪ್ಪನ್ನೂ ತಯಾರಿಸುತ್ತಾರೆ. ಎರಿಟ್ರಿಯದ ಪ್ರಸ್ಥಭೂಮಿ ಪ್ರದೇಶದಲ್ಲಿ ಕಾಪ್ಟ್‌ ಕ್ರೈಸ್ತ ಪಂಗಡದ ಜನರೂ, ಉತ್ತರದಲ್ಲಿ ಮತ್ತು ಸಮುದ್ರತೀರದಲ್ಲಿ ಮುಸ್ಲಿಮರೂ, ನೈರುತ್ಯ ಭಾಗದಲ್ಲಿ ನೀಗ್ರೊಗಳೂ ಹೆಚ್ಚಾಗಿ ವಾಸಿಸುತ್ತಾರೆ. (ಟಿ.ಇ.ಎಚ್.)