ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎಲ್ಯಾಟೊಸ್ಟೆಮ

ವಿಕಿಸೋರ್ಸ್ದಿಂದ

ಎಲ್ಯಾಟೊಸ್ಟೆಮ: ಆರ್ಟಿಕೇಸೀ ಕುಂಟುಂಬಕ್ಕೆ ಸೇರಿದ ಒಂದು ಸಸ್ಯಜಾತಿ. ಉಷ್ಣ ಹಾಗೂ ಉಪೋಷ್ಣವಲಯಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಇದರಲ್ಲಿ ಸುಮಾರು 120 ಪ್ರಭೇದಗಳಿವೆ. ಭಾರತದಲ್ಲಿ ಸು. 29 ಪ್ರಭೇದಗಳು ಬೆಳೆಯುತ್ತವೆ. ಇವುಗಳಲ್ಲಿ ಮುಖ್ಯವಾದ ಎ.ಸೆಸೈಲ್ ಎಂಬುದು ಹಿಮಾಲಯ, ಅಸ್ಸಾಂ ಮತ್ತು ನೀಲಗಿರಿ ಬೆಟ್ಟಗಳಲ್ಲಿ 5396.24 ಮೀ. ಎತ್ತರದ ಪ್ರದೇಶಗಳಲ್ಲಿ ಬೆಳೆಯುವುದು.

ಇದು ಒಂದು ಮೂಲಿಕೆ, ಚಿಕ್ಕದಾಗಿದ್ದಾಗ ನೆಲದ ಮೇಲೆಯೆ ಹರಡಿಕೊಂಡಂತಿ ದ್ದರೂ ಕ್ರಮೇಣ, ಯಾವುದಾದರೂ ಆಸರೆ ಸಿಕ್ಕಿದರೆ, ಬಳ್ಳಿಯಂತೆ ಹಬ್ಬಿ 2.5 ಮೀ ಎತ್ತರಕ್ಕೆ ಬೆಳೆಯ ಬಲ್ಲುದು. ಎಲೆಗಳು ಸರಳ, ಅವುಗಳ ತೊಟ್ಟು ಚಿಕ್ಕವು. ಆಕಾರ ಭಲ್ಲೆಯಂತೆ. ಅಂಚು ಗರಗಸದ ಹಲ್ಲಿನಂತೆ.

ಇದರ ಎಲೆಗಳಿಂದ ತಯಾರಿಸಿದ ಬೆಚ್ಚಾರವನ್ನು (ಪೋಲ್ಟೀಸ್) ಉದರ ಸಂಬಂಧಿ ವ್ಯಾಧಿಗಳ ನಿವಾರಣೆಗೆ ಉಪಯೋಗಿಸುತ್ತಾರೆ. *