ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಐತರೇಯ ಆರಣ್ಯಕ

ವಿಕಿಸೋರ್ಸ್ದಿಂದ

ಐತರೇಯ ಆರಣ್ಯಕ: ಋಗ್ವೇದಕ್ಕೆ ಸೇರಿದ ಐತರೇಯ ಬ್ರಾಹ್ಮಣದ ಕಡೆಯ ಅಧ್ಯಾಯಗಳು. ಇದರಲ್ಲಿ ಆರಣ್ಯಕಗಳೆಂಬ ಐದು ಭಾಗಗಳಿವೆ. ಮಹೀದಾಸ ಐತರೇಯ ಇದರ ಋಷಿ. ಬ್ರಹ್ಮ, ಆತ್ಮ, ಜನ್ಮಾಂತರ ಮತ್ತು ಸೃಷ್ಟಿಕ್ರಮದ ತತ್ತ್ವಗಳನ್ನು ಇದು ಚರ್ಚಿಸುತ್ತದೆ. ಈ ಭಾವನೆಗಳೇ ಐತರೇಯ ಉಪನಿಷತ್ತಿನಲ್ಲಿ ಬೃಂಹಿತವಾಗಿ ಗಹನವೂ ಮಹತ್ತರವೂ ಆದ ದರ್ಶನಗಳಾಗಿವೆ. (ಸಿ.ಜಿ.ಪಿ.)