ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ

ವಿಕಿಸೋರ್ಸ್ ಇಂದ
Jump to navigation Jump to search

ಕನ್ನಡ ವರ್ಣಮಾಲೆಯಲ್ಲಿನ ವರ್ಗೀಯ ವ್ಯಂಜನಗಳ ಸರಣಿಯಲ್ಲಿ ಮೊದಲನೆಯದು. ಕ್ ಮತ್ತು ಅ ಸೇರಿ ಆಗಿದೆ. ಲಂಬರೇಖೆ ಮತ್ತು ಸಮತಲರೇಖೆಗಳಿಂದ ಕೂಡಿದ ಈ ಅಕ್ಷರದ ಬ್ರಾಹ್ಮೀಸ್ವರೂಪ ಶಾತವಾಹನರ ಕಾಲದಲ್ಲಿ ಕೆಲವು ಬದಲಾವಣೆಗಳನ್ನು ಹೊಂದಿದೆ. ಲಂಬರೇಖೆ ಎಡಭಾಗಕ್ಕೆ ಸ್ವಲ್ಪ ಬಾಗುತ್ತದೆ ಮತ್ತು ಸಮತಲರೇಖೆ ಸಣ್ಣದಾಗುತ್ತದೆ. ತ್ರಿಕೋಣಾ ಕೃತಿಯ ತಲೆಕಟ್ಟು ಕಾಣಬರುತ್ತದೆ. ಕದಂಬರ ಕಾಲದಲ್ಲಿ ಚೌಕ ತಲೆಯ ತಲೆಕಟ್ಟಿನ ಜೊತೆಗೆ ಲಂಬರೇಖೆ ಇನ್ನೂ ಬಾಗುತ್ತದೆ. ಪ್ರ.ಶ. 9ನೆಯ ಶತಮಾನದಲ್ಲಿ ಲಂಬರೇಖೆಯ ಕೆಳಭಾಗ ವೃತ್ತವಾಗುವ ಪ್ರವೃತ್ತಿಯನ್ನು ವ್ಯಕ್ತಪಡಿಸುತ್ತದೆಯಲ್ಲದೆ ತಲೆಕಟ್ಟು ಸ್ಪಷ್ಟವಾಗುತ್ತದೆ. ಪ್ರ. ಶ. 13ನೆಯ ಶತಮಾನದಲ್ಲಿ ಅಕ್ಷರದ ಆಕಾರ ಗುಂಡಾಗಿ ಅದೇ ರೂಪ ಮುಂದಿನ ಶತಮಾನಗಳಲ್ಲಿಯೂ ಮುಂದುವರಿಯುತ್ತದೆ. ಈ ಅಕ್ಷರ ಕಂಠ್ಯ ಅಘೋಷ ಸ್ಪರ್ಶ ವ್ಯಂಜನ ಧ್ವನಿಯನ್ನು ಸೂಚಿಸುತ್ತದೆ. (ಎ.ವಿ.ಎನ್.)