ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಕುದ್ಮಿ

ವಿಕಿಸೋರ್ಸ್ದಿಂದ

ಕಕುದ್ಮಿ : ಸೂರ್ಯವಂಶದ ರಾಜ. ರೇವತ ಎಂಬುದು ಈತನ ಇನ್ನೊಂದು ಹೆಸರು. ತನ್ನ ಮಗಳಾದ ರೇವತಿಗೆ ಯಾರು ತಕ್ಕ ವರ ಎಂಬುದನ್ನು ತಿಳಿಯಲು ಅವಳನ್ನು ಬ್ರಹ್ಮನ ಹತ್ತಿರ ಕರೆದುಕೊಂಡು ಹೋದ. ಬ್ರಹ್ಮಲೋಕದಲ್ಲಿ ದೇವಋಷಿಗಳು ಶಾಸ್ತ್ರಚರ್ಚೆ ಮಾಡುತ್ತಿದ್ದರು. ಅದು ಮುಗಿದ ಮೇಲೆ ಕಕುದ್ಮಿ ಬ್ರಹ್ಮನನ್ನು ಕೇಳಲಾಗಿ ಭೂಲೋಕವನ್ನು ಬಿಟ್ಟು ನೀನು ಬಹಳ ಕಾಲ ಇಲ್ಲಿದ್ದದ್ದರಿಂದ ನಿನಗೆ ತಿಳಿಯಲಿಲ್ಲ; ಈಗ ವಸುದೇವನ ಹಿರಿಯ ಮಗ ಬಲರಾಮ ಇವಳಿಗೆ ತಕ್ಕ ವರ ಎಂದು ಬ್ರಹ್ಮ ಹೇಳಿದ. ಆ ಪ್ರಕಾರ ಕಕುದ್ಮಿ ಭೂಲೋಕಕ್ಕೆ ಬಂದು ಬಲರಾಮನಿಗೆ ತನ್ನ ಮಗಳಾದ ರೇವತಿಯನ್ನು ಕೊಟ್ಟು ಮದುವೆ ಮಾಡಿದ. ಕಕುದ್ಮಿ ಎಂಬ ಹೆಸರಿನ ಆನರ್ತದೇಶದ ದೊರೆಯೊಬ್ಬನಿದ್ದಾನಲ್ಲದೆ ಅದು ವಿಷ್ಣುವಿನ ಒಂದು ನಾಮಾಂತರವೂ ಆಗಿದೆ. (ಬಿ.ಎಚ್.ಎಸ್.)