ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಟಾಸ್

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಕಟಾಸ್ : ಉತ್ತರ ಪಂಜಾಬಿನಲ್ಲಿ ಒಂದು ಪ್ರಸಿದ್ಧ ಯಾತ್ರಾಸ್ಥಳ. ಶಿವನು ಸತಿಯನ್ನು ಕಳೆದುಕೊಂಡಾಗ ಅವನ ಕಣ್ಣೀರಿನಿಂದ ಕಟಾಕಕ್ಷವೆಂಬ ಹೆಸರಿನ ಇಲ್ಲಿನ ಸರೋವರಗಳಲ್ಲೊಂದು ಆಯಿತೆಂದು ಸ್ಥಳಪುರಾಣ ತಿಳಿಸುತ್ತದೆ. ಇಲ್ಲಿ ಕ್ಷೀಣದಶೆಯಲ್ಲಿರುವ ಹನ್ನೆರಡು ದೇವಾಲಯಗಳಲ್ಲಿ ಏಳು, ಪಾಂಡವರು ತಮ್ಮ ವನವಾಸದ ಕಾಲದಲ್ಲಿ ಕಟ್ಟಿದವೆಂದು ಒಂದು ಐತಿಹ್ಯವಿದೆ. ಈ ದೇವಾಲಯಗಳ ವಾಸ್ತು ಶಿಲ್ಪ ಕಾಶ್ಮೀರಿ ಶೈಲಿಯನ್ನು ಹೋಲುತ್ತದೆ. (ಜಿ.ಎಚ್.)