ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನಿಷ್ಕ 2

ವಿಕಿಸೋರ್ಸ್ದಿಂದ

ಕನಿಷ್ಕII : 119. ಕುಷಾಣ ವಂಶದ ಪ್ರಸಿದ್ಧದೊರೆ. ಒಂದನೆಯ ಕನಿಷ್ಕನ ಅನಂತರ ತನ್ನ ತಮ್ಮನಾದ ಹುವಿಷ್ಕನೊಡನೆ ರಾಜ್ಯವಾಳಿದ ವಾಸಿಷ್ಕನ ಮಗ. ಇವನೂ ಇವನ ತಂದೆಯಂತೆ ಚಿಕ್ಕಪ್ಪನಾದ ಹುವಿಷ್ಕನೊಡನೆ ದೀರ್ಘಕಾಲ ಸಹರಾಜ್ಯಭಾರ ಮಾಡಿ ಅನಂತರ

ಇವನೊಬ್ಬನೇ ರಾಜ್ಯವಾಳಿದ. ಅದನ್ನು ಹುವಿಷ್ಕನ ಅಡಳಿತದ ಕಾಲವೆಂದೇ ಜನರು ಪರಿಗಣಿಸುತ್ತಿದ್ದುದರಿಂದ ಇವನ ಆಳ್ವಿಕೆಯ ಕಾಲ ಬಹಳ ಕಡಿಮೆಯೆಂಬುದಾಗಿ ದಾಖಲೆಗಳಿಂದ ತಿಳಿದುಬರುತ್ತದೆ. ಈತನ ಬಗ್ಗೆ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ. ಕನಿಷ್ಕ ಶಕೆಯ

40ನೆಯ ವರ್ಷದ ಅರಾಶಾಸನದಲ್ಲಿ ಈತನನ್ನು ಹೆಸರಿಸಲಾಗಿದೆ. ತನ್ನ ಕಾಲದ ರೋಮನ್ ಚಕ್ರವರ್ತಿಗಳ ಮಾದರಿಯಲ್ಲಿ ಈತ ಕೈಸರ್ (ಸೀಸರ್) ಎಂಬ ಬಿರುದು ಧರಿಸಿದ್ದ. *