ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡ ಪುಸ್ತಕ ಪ್ರಾಧಿಕಾರ
ಕನ್ನಡ ಪುಸ್ತಕ ಪ್ರಾಧಿಕಾರ : ಕರ್ನಾಟಕ ಸರ್ಕಾರದಿಂದ 1993 ಅಕ್ಟೋಬರ್ 20ರಂದು ಅಸ್ತಿತ್ವಕ್ಕೆ ಬಂದ ಸ್ವಾಯತ್ತ ಸಂಸ್ಥೆ. ಪುಸ್ತಕ ಸಂಸ್ಕೃತಿಯನ್ನು ಹುಟ್ಟುಹಾಕುವುದು, ಬೆಳೆಸುವುದು ಹಾಗೂ ಪರಿಚಲನೆಗೊಳಿಸುವುದು ಇದರ ಉದ್ದೇಶ. ವಿಶೇಷವಾಗಿ ಕನ್ನಡದಲ್ಲಿ ಲೇಖಕ, ಪ್ರಕಾಶಕ, ಮಾರಾಟಗಾರ ಹಾಗೂ ಓದುಗರ ನಡುವಿನ ಸಂಬಂಧವನ್ನು ಹೆಚ್ಚಿಸುವುದೂ ನಾಡಿನಾದ್ಯಂತ ವಾಚಕರಿಗೆ ಒಳ್ಳೆಯ ಗ್ರಂಥಗಳು ಸುಲಭ ಬೆಲೆಗೆ ದೊರೆಯುವಂತೆ ನೋಡಿಕೊಳ್ಳುವುದೂ ಈ ಮೂಲಕ ಕನ್ನಡ ಪುಸ್ತಕೋದ್ಯಮ ಪ್ರಪಂಚವನ್ನು ಜನಪರಗೊಳಿಸುವುದೂ ಇದರ ಆಶಯಗಳು. ಕನ್ನಡ ಪುಸ್ತಕ ಪ್ರಕಾಶಕರ ಆರ್ಥಿಕ ಹಾಗೂ ಬೌದ್ಧಿಕ ಶ್ರಮಕ್ಕೆ ನೆರವಾಗುವ ಸಲುವಾಗಿ ಆಯಾ ವರ್ಷ ಪ್ರಕಟಗೊಂಡ ಪುಸ್ತಕಗಳ ಸಗಟು ಖರೀದಿ ಮಾಡುವುದು, ಖರೀದಿಸಿದ ಕೃತಿಗಳನ್ನು ನಾಡಿನ ಸಾರ್ವಜನಿಕ ಗ್ರಂಥಾಲಯಗಳಿಗೂ ಶಾಲೆ-ಕಾಲೇಜು ಹಾಗೂ ಸಂಘ ಸಂಸ್ಥೆಗಳಿಗೂ ವಿತರಿಸುವುದು, ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ವಿe್ಞÁನ, ಮಾನವಿಕ ಮುಂತಾದ ವಿವಿಧ e್ಞÁನ ಶಿಸ್ತುಗಳಲ್ಲಿ ಪರಿಣತರಾದ ವಿದ್ವಾಂಸರಿಂದ ಪುಸ್ತಕಗಳನ್ನು ಬರೆಸುವುದು, ಯುವ ಪ್ರತಿಭೆಗಳನ್ನು ಗುರುತಿಸಿ ಅವರ ಕೃತಿಗಳ ಪ್ರಕಟಣೆಗಾಗಿ ಧನಸಹಾಯ, ಸಾಲ, ಅನುದಾನ ಹಾಗೂ ಬಹುಮಾನಗಳನ್ನು ನೀಡಿ ಅವರಿಗೆ ಉತ್ತೇಜನ ನೀಡುವುದು, ಸರ್ಕಾರಿ, ಅರೆ ಸರ್ಕಾರಿ, ವಿಶ್ವವಿದ್ಯಾಲಯ ಹಾಗೂ ಖಾಸಗಿ ಸಂಘಸಂಸ್ಥೆಗಳ ಸಹಕಾರದೊಂದಿಗೆ ಪುಸ್ತಕೋದ್ಯಮದ ಆಂದೋಲನಕ್ಕೆ ಅಗತ್ಯವಾದ ಕಾರ್ಯಕ್ರಮಗಳನ್ನು ರೂಪಿಸಿ ಈ ಉದ್ಯಮವನ್ನು ವಿಸ್ತರಿಸುವುದೂ ಪ್ರಾದಿsಕಾರದ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಪುಸ್ತಕ ಪ್ರಾದಿsಕಾರ ಕೆಲವು ಯೋಜನೆಗಳನ್ನು ರೂಪಿಸಿಕೊಂಡಿದೆ . 1. ಪುಸ್ತಕ ಪ್ರಕಟಣೆ: ವಿಷಯದ ಸಂವಹನದ ದೃಷ್ಟಿಯಿಂದ ಕೃತಿ ಸರಳ ವಾಗಿದ್ದು ಅದನ್ನು ಕೊಂಡು ಓದುವ ಹಾಗೆ ಮಾಡಬೇಕೆಂಬ ದೃಷ್ಟಿಯಿಂದ ಅಗ್ಗದ ಬೆಲೆಯಲ್ಲಿ ಸುಲಭವಾಗಿ ದೊರೆಯುವಂತೆ ಮಾಡುವ ಜನಪ್ರಿಯ ಪುಸ್ತಕ ಮಾಲೆ, ಎಲ್ಲರೂ ಕಡ್ಡಾಯವಾಗಿ ತಿಳಿದುಕೊಳ್ಳಲೇ ಬೇಕಾದ ವಿಷಯಗಳನ್ನೊಳಗೊಂಡ ಮೂಲಭೂತ ಶೈಕ್ಷಣಿಕ ಮಾಲೆ, ವೈe್ಞÁನಿಕ ವಿಚಾರಗಳನ್ನು ಒಳಗೊಂಡ ವಿe್ಞÁನ ದೀಪಮಾಲೆ, ವಿಶೇಷವಾಗಿ ಮಕ್ಕಳ ಮನಸ್ಸನ್ನು ಅರಳಿಸಬಲ್ಲ ಹಾಗೂ ಅವರ ಪ್ರತಿಭೆಯನ್ನು ಉದ್ದೀಪನಗೊಳಿಸಬಲ್ಲ ಮಕ್ಕಳ ಪುಸ್ತಕ ಮಾಲೆ, ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಕೃತಿಗಳನ್ನು ಪ್ರಕಟಿಸುವ ಪಂಪ ಪ್ರಶಸ್ತಿ ಕೃತಿ ಮಾಲೆ, ನೋಬೆಲ್ ಪುರಸ್ಕೃತ ಸಾಹಿತ್ಯಮಾಲೆ, ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ಜಾನಪದ ಮಾಲೆಗಳು ಈ ನಿಟ್ಟಿನಲ್ಲಿ ಕೆಲವು ಮುಖ್ಯ ಪ್ರಯತ್ನಗಳು. ಗ್ರಾಮ ಸಂಸ್ಕೃತಿ ಮಾಲೆ, ಸಾಮಾನ್ಯರಿಗೆ ಕಾನೂನು ಮಾಲೆಗಳ ಅಡಿಯಲ್ಲಿ ಅನೇಕ ಕೃತಿಗಳನ್ನೂ ಅನುವಾದಗಳನ್ನೂ ಪ್ರಕಟಿಸಿಲಾಗುತ್ತಿದೆ.
2. ಪುಸ್ತಕ ಸಗಟು ಖರೀದಿ ಮತ್ತು ಕೊಡುಗೆ: ಕನ್ನಡದಲ್ಲಿ ಪ್ರಕಟವಾಗುವ ಎಲ್ಲ ಪ್ರಥಮಾವೃತ್ತಿ ಗ್ರಂಥಗಳನ್ನು ಸಗಟಾಗಿ ಖರೀದಿಸಿ ಲೇಖಕ ಪ್ರಕಾಶಕರಿಗೆ ನೆರವು ನೀಡುವುದು, ಹೀಗೆ ಖರೀದಿಸಿದ ಗ್ರಂಥಗಳನ್ನು ನಾಡಿನ ಸಾರ್ವಜನಿಕ ಗ್ರಂಥಾಲಯಗಳಿಗೂ ದಲಿತ ಮತ್ತು ಹಿಂದುಳಿದ ವರ್ಗಗಳು ಹಾಗೂ ಗ್ರಾಮೀಣ ಪ್ರದೇಶದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಸಾಹಿತ್ಯ ಪರಿಷತ್ತಿನ ಗ್ರಂಥಾಲಯಕ್ಕೂ ಹೊರನಾಡಿನ ಕನ್ನಡ ಸಂಘ ಸಂಸ್ಥೆಗಳು ಸ್ಥಾಪಿಸಿದ ಗ್ರಂಥಾಲಯಗಳಿಗೂ ಉಚಿತವಾಗಿ ವಿತರಿಸುವುದು ಈ ಯೋಜನೆಯ ಮೂಲೋದ್ದೇಶ.
3. ಪುಸ್ತಕ ಪ್ರಕಟಣೆ ಸಹಾಯ: ಉದಯೋನ್ಮುಖ ಬರೆಹಗಾರರಿಗೆ ಮತ್ತು ಉತ್ತಮ ಲೇಖಕರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಲೇಖಕರ ಮೊದಲ ಪುಸ್ತಕ ಪ್ರಕಟಣೆಗಾಗಿ ಆರ್ಥಿಕ ನೆರವು ನೀಡಲಾಗುತ್ತದೆ. ಅಪರೂಪವÆ ಅಲಭ್ಯವÆ ಆದ ಗ್ರಂಥಗಳನ್ನೂ ಮಕ್ಕಳ ಕೃತಿಗಳನ್ನೂ ಪ್ರಾದಿsಕಾರವೇ ಪ್ರಕಟಿಸುವುದರ ಜೊತೆಗೆ ಖಾಸಗಿ ಪ್ರಕಾಶಕರಿಗೆ ವಿವಿಧ ರೂಪದ ಆರ್ಥಿಕ ಸಹಾಯ ನೀಡಲಾಗುತ್ತದೆ. ಹಾಗೆಯೇ ಸೃಜನೇತರ ಸಾಹಿತ್ಯ ಪ್ರಕಾರಗಳಾದ ಜಾನಪದ, ವಿe್ಞÁನ, ಇತಿಹಾಸ, ಸಂಶೋಧನಾತ್ಮಕ ಕೃತಿಗಳಿಗೆ ಸಹಾಯಧನ ನೀಡುವ ಯೋಜನೆಯೂ ರೂಪುಗೊಂಡಿದೆ.
4. ಪುಸ್ತಕಗಳ ಪ್ರಚಾರ ಹಾಗೂ ಮೇಘ: ವಿವಿಧ ಸಂಘ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಹಾಗೂ ಗಡಿಭಾಗಗಳಲ್ಲಿ ಪುಸ್ತಕ ಮಾರಾಟ ಆಂದೋಲನದ ಅಂಗವಾಗಿ ಒಂದುವಾರಕಾಲ ವಾರ್ಷಿಕ ಪುಸ್ತಕ ಮೇಳವನ್ನು ನಡೆಸಲಾಗುತ್ತದೆ. ಇದರಲ್ಲಿ ಎಲ್ಲ ಪುಸ್ತಕ ಪ್ರಕಾಶಕರನ್ನು ಬರಮಾಡಿಕೊಂಡು ಪುಸ್ತಕೋದ್ಯಮದ ಸಾಧಕ -ಬಾಧಕಗಳನ್ನು ಮನನ ಮಾಡಿಕೊಡುವುದೂ ಈ ಯೋಜನೆಯ ಉದ್ದೇಶವಾಗಿದೆ. 5. ಸಂಚಾರಿ ಹಾಗೂ ಗ್ರಂಥ ಸರಸ್ವತಿ ಮಳಿಗೆಗಳು: ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲೂ ಕನ್ನಡ ಪುಸ್ತಕಗಳ ಮಾರಾಟ ಹಾಗೂ ಪ್ರದರ್ಶನಕ್ಕಾಗಿ ಸಂಚಾರಿ ಪುಸ್ತಕ ಮಳಿಗೆಗಳನ್ನೂ ರಾಜ್ಯದ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಗ್ರಂಥ ಸರಸ್ವತಿ ಹೆಸರಿನ ಮಳಿಗೆಗಳನ್ನೂ ಅನುಷ್ಠನಗೊಳಿಸಲಾಗಿದೆ. ಈಗಾಗಲೇ ದಾವಣಗೆರೆ ಬಸ್ ನಿಲ್ದಾಣದಲ್ಲಿ ಮಳಿಗೆ ಆರಂಭವಾಗಿದೆ. ಹಾಸನದಲ್ಲಿ ಸಂಸತ್ ಸದಸ್ಯರ ಅನುದಾನದಿಂದ ಮಳಿಗೆ ನಿರ್ಮಿಸುವ ಪ್ರಯತ್ನಗಳು ನಡೆಸಿವೆ. ಈ ಯೋಜನೆಯಿಂದ ಪುಸ್ತಕಗಳನ್ನು ವಾಚಕರಿಗೆ ಸುಲಭವಾಗಿ ಒದಗಿಸುವುದರ ಜೊತೆಗೆ ಕೆಲವರಿಗೆ ಸ್ವಾವಲಂಬಿ ಉದ್ಯೋಗಾವಕಾಶವನ್ನು ದೊರಕಿಸಿ ಕೊಡುತ್ತಿದೆ.
6. ಪುಸ್ತಕ ಸಂಸ್ಕೃತಿ ಪ್ರಸಾರಪ್ರೋತ್ಸಾಹ: ರಾಜ್ಯಾದ್ಯಂತ ವಿಚಾರ ಸಂಕಿರಣಗಳು, ಕಮ್ಮಟಗಳು, ಸಭೆಸಮಾರಂಭಗಳು ಹಾಗೂ ಸಂವಾದಗಳನ್ನು ಏರ್ಪಡಿಸುವುದರ ಮೂಲಕ ಪುಸ್ತಕ ಸಂಸ್ಕೃತಿಯ ಮಹತ್ವದ ಪರಿಚಯ ಮಾಡಿಕೊಡಲಾಗುತ್ತಿದೆ. ಸಗಟು ಹಾಗೂ ವಿಶೇಷ ಖರೀದಿ ಯೋಜನೆಯಡಿಯಲ್ಲಿ ಲೇಖಕ - ಪ್ರಕಾಶಕರಿಗೆ ಸಹಾಯ ಮಾಡುವುದು, ಅತ್ಯುತ್ತಮ ಪ್ರಕಾಶಕರನ್ನು ಗುರುತಿಸಿ 25 ಸಾವಿರ ರೂಪಾಯಿಗಳ ಮೊತ್ತ ಪ್ರಶಸ್ತಿ ನೀಡುವುದು - ಇವು ಕೂಡ ಪ್ರಾದಿsಕಾರದ ಕಾರ್ಯಭಾಗವಾಗಿದೆ. ಇದುವರೆಗೆ ಈ ಪ್ರಶಸ್ತಿಯನ್ನು ಬೆಂಗಳೂರಿನ ಕ್ರೈಸ್ಟ್ ಕಾಲೇಜು ಕನ್ನಡ ಸಂಘ (1998), ಮೈಸೂರಿನ ತಳುಕಿನ ವೆಂಕಣ್ಣಯ್ಯ ಸ್ಮಾರಕ ಪ್ರತಿಷಾವಿನ (1999), ಬೆಂಗಳೂರಿನ ಸಪ್ನಾ ಬುಕ್ ಹೌಸ್ (2000) ಮೈಸೂರಿನ ಸಂವಹನ ಮತ್ತು ಬಳ್ಳಾರಿಯ ಲೋಹಿಯಾ ಪ್ರಕಾಶನ ಸಂಸ್ಥೆಗಳು ಪಡೆದುಕೊಂಡಿವೆ (2003). ಅಚ್ಚುಕಟ್ಟಾಗಿ ಮುದ್ರಣಗೊಂಡ ಹಾಗೂ ಸೊಗಸಾದ ಮುಖಪುಟ ವಿನ್ಯಾಸವುಳ್ಳ ಕೃತಿಗಳಿಗೆ 15 ಸಾವಿರ ರೂಗಳ ಮೊದಲನೆಯ, 10 ಸಾವಿರ ರೂಗಳ ಎರಡನೆಯ ಹಾಗೂ 5 ಸಾವಿರ ರೂಗಳ ಮೂರನೆಯ ಬಹುಮಾನ ನೀಡಲಾಗುತ್ತಿದೆ. 5 ಸಾವಿರ ರೂಪಾಯಿಗಳ ಮೊತ್ತದ ಬಹುಮಾನವನ್ನು ವಿಶೇಷವಾಗಿ ಮಕ್ಕಳ ಪುಸ್ತಕಗಳಿಗಾಗಿಯೇ ಮೀಸಲಿರಿಸಲಾಗಿದೆ.
7. ಪ್ರಾಧಿಕಾರದ ಪದಾಧಿಕಾರಿಗಳು: ಒಬ್ಬರು ಅಧ್ಯಕ್ಷರು, ಹದಿಮೂರು ಮಂದಿ ಸದಸ್ಯರು ಮತ್ತು ಒಬ್ಬರು ಸಂಚಾಲಕರನ್ನು ಒಳಗೊಂಡಂತೆ ಪದಾದಿsಕಾರಿಗಳ ಸಮಿತಿಯ ರಚನೆಯಾಗಿರುತ್ತದೆ. ಪ್ರತಿ ಮೂರು ವರ್ಷಗಳ ಅವದಿsಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕಮಾಡಲಾಗುತ್ತದೆ. ಪುಸ್ತಕ ಚಿಂತಕರು, ಪುಸ್ತಕ ಪ್ರೇಮಿಗಳು ಹಾಗೂ ವಿದ್ವಾಂಸರನ್ನೊಳಗೊಂಡಂತೆ ಸರಕಾರದ ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಮುದ್ರಣ ಮತ್ತು ಲೇಖನ ಸಾಮಗ್ರಿಗಳ ನಿರ್ದೇಶನಾಲಯದ ನಿರ್ದೇಶಕರು ಮತ್ತು ಕರ್ನಾಟಕ ಪುಸ್ತಕ ಪ್ರಕಾಶಕರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಈ ಸಮಿತಿಯ ಸದಸ್ಯರಾಗಿರುತ್ತಾರೆ. ಇದರ ಸಂಚಾಲಕತ್ವವನ್ನು ಪ್ರಾದಿsಕಾರದ ಆಡಳಿತಾದಿsಕಾರಿಗಳಿಗೆ ವಹಿಸಿಕೊಡಲಾಗಿರುತ್ತದೆ. *