ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಮರಿ

ವಿಕಿಸೋರ್ಸ್ದಿಂದ

ಕಮರಿ : ವೇಗವಾಗಿ ಹರಿಯುವ ನೀರಿನ ಗತಿಯಿಂದ ಆದ ನೆಲದ ಕೊರೆತ (ರೆವಾಯ್ನ್‌). ಕೊರಕಲಿಗಿಂತ ಕಿರಿಯದು. ಇದೊಂದು ಚಿಕ್ಕ ಇಕ್ಕಟ್ಟಾದ ಕಡಿದು ಬದಿಗಳಿರುವ ಕಣಿವೆ. ಕಮರಿಗಳು ಭೂಮಿಯ ಮೇಲ್ಭಾಗದಲ್ಲಿ ಸ್ಥರಭಂಗವಾದ ಜಾಗಗಳಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುತ್ತವೆ. ಪ್ರತಿಯೊಂದು ಜಲಪಾತಗಳ ನಂತರ ಈ ತೆರನ ಕಮರಿಗಳನ್ನು ಭೂಮಿಯ ಮೇಲ್ಮೈಯಲ್ಲಿ ಕಾಣಬಹುದು (ನೋಡಿ- ಕಣಿವೆ; ಕೊರಕಲು). *