ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರಾರು

ವಿಕಿಸೋರ್ಸ್ದಿಂದ
     ಮೂಲದೊಡನೆ ಪರಿಶೀಲಿಸಿ

ಕರಾರು : ಒಂದು ಪಕ್ಷ ಇನ್ನೊಂದು ಪಕ್ಷದ ಮೌಲ್ಯಯುಕ್ತ (ವ್ಯಾಲ್ಯುಯಬಲ್) ಪ್ರತಿಫಲಕ್ಕಾಗಿ ಏನನ್ನಾದರೂ ಕೊಡುವುದಾಗಿಯೊ ಮಾಡುವುದಾಗಿಯೊ ಅಥವಾ ವರ್ಜಿಸುವುದಾಗಿಯೊ ಸಮ್ಮತಿಸಿ, ಇಬ್ಬರ ಅಥವಾ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳ ನಡುವೆ ಏರ್ಪಟ್ಟ, ಕಾನೂನುರೀತ್ಯಾ ಚಲಾಯಿಸಬಹುದಾದ, ಒಪ್ಪಂದ (ಕಾಂಟ್ರ್ಯಾಕ್ಟ್‌). ಪ್ರತಿಯೊಂದು ಕರಾರಿಗೂ ತಳಹದಿಯಾಗಿ ಒಪ್ಪಂದವಿರಬೇಕು. ಇದನ್ನು ಭಾರತದ ಕರಾರು ಕಾಯಿದೆಯಲ್ಲಿ ವಿವರಿಸಲಾಗಿದೆ. ಪ್ರಪ್ರಥಮವಾಗಿ ಒಬ್ಬ ವ್ಯಕ್ತಿ (ಅಥವಾ ಒಂದು ಪಕ್ಷ) ಇನ್ನೊಬ್ಬ ವ್ಯಕ್ತಿಗೆ (ಅಥವಾ ಇನ್ನೊಂದು ಪಕ್ಷಕ್ಕೆ) ಏನನ್ನಾದರೂ ಕೊಡಲು, ಮಾಡಲು ಅಥವಾ ಮಾಡದೆ ಇರಲು ತನ್ನ ಇಚ್ಛೆಯನ್ನು ವ್ಯಕ್ತಪಡಿಸಬೇಕು. ಇದು ಪ್ರಸ್ತಾಪ (ಅಫರ್). ಈ ಪ್ರಸ್ತಾಪಕ್ಕೆ ಇನ್ನೊಬ್ಬ ವ್ಯಕ್ತಿಯ (ಅಥವಾ ಇನ್ನೊಂದು ಪಕ್ಷದ) ಒಪ್ಪಿಗೆ ದೊರಕಿಸಿಕೊಳ್ಳುವ ಉದ್ದೇಶದಿಂದ ಇದನ್ನು ಮಾಡಿರಬೇಕು. ಯಾರಿಗೆ ಈ ಪ್ರಸ್ತಾಪ ಮಾಡಲಾಗಿದೆಯೋ ಆತ ಇದನ್ನು ಸ್ವೀಕರಿಸಬೇಕು ಅಥವಾ ಇದಕ್ಕೆ ಸಮ್ಮತಿಸಬೇಕು (ಅಕ್ಸೆಪ್ಟ್‌). ಆಗ ಈ ಪ್ರಸ್ತಾಪ ವಾಗ್ದಾನ (ಪ್ರಮಿಸ್) ಎನಿಸಿಕೊಳ್ಳುತ್ತದೆ. ವಾಗ್ದಾನ ಮಾಡಿದವನ ಇಚ್ಛೆಯಂತೆ ಅದಕ್ಕೆ ಪ್ರತಿಯಾಗಿ ವಾಗ್ದಾನ ಸ್ವೀಕರ್ತ ಏನನ್ನಾದರೂ ಕೊಡಲು, ಮಾಡಲು ಅಥವಾ ಮಾಡದಿರಲು ನೀಡಿದ ವಚನವೇ ಪ್ರತಿಫಲ (ಕನ್ಸಿಡರೇಷನ್). ಪ್ರಸ್ತಾಪಕಾರನ ವಾಗ್ದಾನಕ್ಕೆ ಸ್ವೀಕರ್ತನ ಪ್ರತಿ ವಾಗ್ದಾನವೇ ಪ್ರತಿಫಲ; ಸ್ವೀಕರ್ತನ ವಾಗ್ದಾನಕ್ಕೆ ಮೊದಲನೆಯವನ ವಚನವೇ ಪ್ರತಿಫಲ. ಹೀಗೆ ಪರಸ್ಪರ ಪ್ರತಿಫಲಮೂಲವಾದ ಪ್ರತಿಯೊಂದು ವಾಗ್ದಾನವೂ ಅಥವಾ ವಾಗ್ದಾನಗಳ ಮೊತ್ತವೂ ಒಪ್ಪಂದವೆನಿಸಿಕೊಳ್ಳುತ್ತದೆ. ಈ ಒಪ್ಪಂದದಲ್ಲಿ ಯಾರೊಬ್ಬರು ವಾಗ್ದಾನ ಮುರಿದರೂ ಆದರಿಂದ ಭಂಗಪಟ್ಟ ಇನ್ನೊಬ್ಬರು ಕಾಯಿದೆಯ ಮೂಲಕ ಒಪ್ಪಂದವನ್ನು ಚಲಾಯಿಸುವುದು ಸಾಧ್ಯವಾಗದಿದ್ದರೆ ಆಗ ಅದು ಕರಾಕೆನಿಸುವುದಿಲ್ಲ. ಅದು ಶೂನ್ಯ (ವಾಯ್ಡ್‌) ಒಪ್ಪಂದ. ಸಂಬಂಧಿಸಿದ ಪಕ್ಷ ಅಥವಾ ಪಕ್ಷಗಳ ಇಚ್ಛೆಯಂತೆ ಕಾನೂನುರೀತ್ಯಾ ಚಲಾಯಿಸಬಹುದಾದ ಅಥವಾ ಬಿಡಬಹುದಾದ ಒಪ್ಪಂದವನ್ನು ವಿವಜರ್ಯ್‌ (ವಾಯ್ಡಬಲ್) ಕರಾರು ಎನ್ನಲಾಗುತ್ತದೆ.

ಕರಾರು ಮಾಡಿಕೊಳ್ಳಲು ಅರ್ಹತೆಯುಳ್ಳ ಪಕ್ಷಗಳು ಕಾನೂನುಬದ್ಧ ಪ್ರತಿಫಲಕ್ಕಾಗಿ, ಕಾನೂನುಬದ್ಧ ಉದ್ದೇಶದಿಂದ, ಖುದ್ದು ರಾಜಿಯಿಂದ ಮಾಡಿಕೊಂಡ, ಶೂನ್ಯವೆಂದು ಅಭಿವ್ಯಕ್ತವಾಗಿ ಘೋಷಿತವಲ್ಲದ ಎಲ್ಲ ಒಪ್ಪಂದಗಳೂ ಕರಾರುಗಳೆಂದು ಭಾರತದ ಕರಾರು ಕಾಯಿದೆಯ 10ನೆಯ ಕಲಮಿನಲ್ಲಿ ಹೇಳಲಾಗಿದೆ.

ಕರಾರು ಮಾಡಿಕೊಳ್ಳುವವರಿಗೆ ಇರಬೇಕಾದ ಅರ್ಹತೆಯ ವಿಚಾರವನ್ನು ಭಾರತದ ಕರಾರು ಕಾಯಿದೆಯ 11ನೆಯ ಕಲಮಿನಲ್ಲಿ ವಿವೇಚಿಸಲಾಗಿದೆ. ಯಥೋಚಿತ ಕಾನೂನಿನ ಪ್ರಕಾರ ಪ್ರಾಪ್ತವಯಸ್ಕನೂ ಸ್ವಸ್ಥಚಿತ್ತನೂ ಆಗಿದ್ದು, ಕರಾರು ಮಾಡಿಕೊಳ್ಳಲರ್ಹನೆಂದು ಆತನಿಗೆ ಸಂಬಂಧಿಸಿದ ಯಾವ ಕಾನೂನಿನಿಂದಲೂ ವರ್ಜಿಸಲ್ಪಡದ ಪ್ರತಿಯೊಬ್ಬನಿಗೂ ಈ ಅರ್ಹತೆಯುಂಟು. 18 ವರ್ಷ ತುಂಬಿದಾತ ಸಾಮಾನ್ಯವಾಗಿ ಪ್ರಾಪ್ತವಯಸ್ಕ. ಅಪ್ರಾಪ್ತವಯಸ್ಕನಿಗೆ ಯಾವುದಾದರೂ ನ್ಯಾಯಾಲಯದಿಂದ ಪಾಲಕನ (ಗಾರ್ಡಿಯನ್) ನೇಮಕವಾಗಿದ್ದರೆ

ಅವನನ್ನು (ಪಾಲಿತ) ಪ್ರಾಪ್ತವಯಸ್ಕನೆಂದು ಪರಿಗಣಿಸಲು ಅವನಿಗೆ 21 ವರ್ಷ ತುಂಬಿರಬೇಕು. ಕರಾರಿನ ವ್ಯಕ್ತಿಗಳು ಸ್ವಸ್ಥಚಿತ್ತದಿಂದ ಕೂಡಿರಬೇಕೆಂಬುದು ಇನ್ನೊಂದು ನಿಯಮ, ಎಂದರೆ ತಾನು ಮಾಡಿಕೊಳ್ಳುತ್ತಿರುವ ಕರಾರಿನ ಅಂಶಗಳನ್ನು ತಿಳಿದುಕೊಳ್ಳಲು ಸಮರ್ಥನಾಗಿದ್ದು ತನ್ನ ಹಿತಗಳ ಮೇಲೆ ಅದರ ಪರಿಣಾಮ ಏನಾದೀತು ಎಂಬುದನ್ನು ಬುದ್ಧಿವಂತಿಕೆಯಿಂದ ನಿರ್ಧರಿಸಲು ಶಕ್ತನಾಗಿರಬೇಕು (12ನೆಯ ಕಲಂ). ವ್ಯಕ್ತಿಗೆ ಚಿತ್ತಸ್ವಾಸ್ಥ್ಯವಿಲ್ಲದಾಗ ಅತ ಮಾಡಿಕೊಂಡು ಒಪ್ಪಂದ ಊರ್ಜಿತವಾಗದೆ ಹೋಗಬಹುದು.

ಸ್ವಸ್ಥಚಿತ್ತರು ಮಾಡಿಕೊಂಡ ನಿರುಪಾಧಿಕ ಸಮ್ಮತಿಯಿಂದ (ಫ್ರೀ ಕನ್ಸೆಂಟ್) ಒಪ್ಪಂದವಾಗಿರಬೇಕು. ಇಬ್ಬರು ಅಥವಾ ಹೆಚ್ಚು ಮಂದಿ ಒಂದು ವಿಚಾರದ ಬಗ್ಗೆ ಒಂದೇ ಅರ್ಥದಲ್ಲಿ ಒಪ್ಪಿಗೆ ನೀಡುವುದೇ ಸಮ್ಮತಿ, ಒಂದೇ ಮಾತಿನ ಅರ್ಥ ಒಬ್ಬೊಬ್ಬರಿಗೆ ಒಂದೊಂದು ರೀತಿ ಆಗುವ ಸಂಭವ ಮತ್ತು ಸಾಧ್ಯತೆ ಉಂಟು. ಉದಾ: ಒಬ್ಬ ಇನ್ನೊಬ್ಬನಿಗೆ ಮೈಸೂರಿನಲ್ಲಿರುವ ತನ್ನ ಹೊಸ ಮನೆ ಮಾರುವುದಾಗಿ ಮಾತು ಕೊಟ್ಟ ಪಕ್ಷದಲ್ಲಿ, ಆ ಒಬ್ಬನಿಗೆ ಎರಡು ಮನೆಗಳು ಇರುವ ಸಂಗತಿ ಇನ್ನೊಬ್ಬನಿಗೆ ಗೊತ್ತಿಲ್ಲದಿದ್ದರೆ, ತಾನು ನೋಡಿರುವ ಮನೆಯೇ ಮಾರಾಟಕ್ಕೆ ಇರುವ ಮನೆ ಎಂದು ಇನ್ನೊಬ್ಬ ಭಾವಿಸಬಹುದು. ಆದರೆ ಮಾರಲಿರುವ ಮನೆ ಆ ಇನ್ನೊಬ್ಬ ನೋಡಿಲ್ಲದ ಮನೆಯಾಗಿರಬಹುದು. ಆಗ ಮೊದಲಿನವ ಮಾರುತ್ತೇನೆಂದು ಹೇಳಿದ ಮನೆಯೇ ಒಂದು, ಎರಡನೆಯವ ಕೊಳ್ಳಲು ಒಪ್ಪಿದ ಮನೆಯೇ ಇನ್ನೊಂದು, ಹೀಗೆ ಇವರಿಬ್ಬರೂ ಒಪ್ಪಂದಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಬೇರೆ ಬೇರೆ ಅರ್ಥ ಬರುವಂತಿರುವುದರಿಂದ ಇದು ಕರಾರಾಗಿರಲಾರದು (ಕಲಂ 13).

ಒತ್ತಾಯ (ಕೊಯರ್ಷನ್), ಅನುಚಿತ ಪ್ರಭಾವ (ಅನ್ಡೂ ಇನ್ಪ್ಲುಯೆನ್ಸ್‌), ವಂಚನೆ (ಫ್ರಾಡ್), ತಪ್ಪು ನಿರೂಪಣೆ (ಮಿಸ್ರೆಪ್ರಸೆಂಟೇಷನ್). ತಪ್ಪು ಗ್ರಹಿಕ (ಮಿಸ್ಟೇಕ್) ಇವುಗಳಿಲ್ಲದ್ದೇ ನಿರುಪಾಧಿಕ ಸಮ್ಮತಿ-ಎಂದು ಭಾರತೀಯ ಕರಾರು ಕಾಯಿದೆಯಲ್ಲಿ ಹೇಳಲಾಗಿದೆ. ಪ್ರತಿಯೊಂದು ಕರಾರಿಗೂ ಸಾಮಾನ್ಯವಾಗಿ ಪ್ರತಿಫಲ ಇರಬೇಕು. ಒಪ್ಪಂದದ ಪ್ರತಿಫಲ ಅಥವಾ ಉದ್ದೇಶ ನ್ಯಾಯಬದ್ಧವಾಗಿರಬೇಕು. ಕಾನೂನಿನಿಂದ ನಿಷೇಧಿಸಲ್ಪಟ್ಟು, ಜಾರಿಗೆ ಬಂದರೆ ಯಾವುದಾದರೂ ಕಾನೂನಿನ ಅಂಶಗಳನ್ನು ಮುರಿಯುವಂಥ, ವಂಚನೆಯಿಂದ ಕೂಡಿದ, ಇನ್ನೊಬ್ಬರಿಗೆ ಅಥವಾ ಅವರ ಸ್ವತ್ತಿಗೆ ಹಾನಿ (ಇಂಜರಿ)ಕಾರಕವಾದ ಅಥವಾ ಅನೈತಿಕವಾದದ್ದೆಂದೋ ಸಾರ್ವಜನಿಕ ಕಾರ್ಯ ನೀತಿಗೆ ವಿರುದ್ಧವಾದದ್ದೆಂದೋ ನ್ಯಾಯಾಲಯದಿಂದ ಪರಿಗಣಿತವಾದ ಪ್ರತಿಫಲ ಅಥವಾ ಉದ್ದೇಶ ನ್ಯಾಯಬದ್ಧವೆನಿಸುವುದಿಲ್ಲ (ಕಲಂ 23). ಯಾವುದು ಕಾನೂನು ಬದ್ಧ ಪ್ರತಿಫಲ ಅಥವಾ ಉದ್ದೇಶ. ಯಾವುದು ಅಲ್ಲ ಎಂಬ ಬಗ್ಗೆ ಭಾರತೀಯ ಕರಾರು ಕಾಯಿದೆಯಲ್ಲಿ ಅನೇಕ ಉದಾಹರಣೆಗಳನ್ನು ಕೊಡಲಾಗಿದೆ. ಃಗೆ ಒಂದು ಮನೆ ಮಾರಲು ಂ ವಾಗ್ದಾನ ಮಾಡುತ್ತ್ತಾನೆ. ಅದಕ್ಕೆ ಃ ರೂ 10,000 ಕೊಡಲು ಮಾಡುವ ವಾಗ್ದಾನವೇ ಂ ಮನೆ ಮಾರಲು ಮಾಡುವ ವಾಗ್ದಾನಕ್ಕೆ ಪ್ರತಿಫಲ. ಃಯ ವಾಗ್ದಾನಕ್ಕೆ ಂಯ ವಾಗ್ದಾನವೇ ಪ್ರತಿಫಲ. ಇವು ನ್ಯಾಯಬದ್ಧ ಪ್ರತಿಫಲಗಳು. ಸರ್ಕಾರದಲ್ಲಿ ಃಗೆ ಒಂದು ನೌಕರಿ ಕೊಡಿಸಿಕೊಡಲು ಂ ವಾಗ್ದಾನ ಮಾಡುತ್ತಾನೆ. ಇದಕ್ಕೆ ಪ್ರತಿಯಾಗಿ ರೂ 1,000 ಕೊಡಲು ಃ ವಾಗ್ದಾನ ಮಾಡುತ್ತಾನೆ. ಇದು ಶೂನ್ಯ ಒಪ್ಪಂದ. ಏಕೆಂದರೆ ಇದರ ಪ್ರತಿಫಲ ನ್ಯಾಯಬದ್ಧವಲ್ಲ. ಂಯ ಮನೆಯಲ್ಲಿ ದರೋಡೆ ಮಾಡಿ ಪಡೆದ ಮೇಲೆ ಪದಾರ್ಥಗಳನ್ನು ಅವನಿಗೆ ಹಿಂದಿರುಗಿಸಲು ಃಗೆ ಬಾಡಿಗೆಗೆ ಕೊಡಲು ಒಪ್ಪುತ್ತಾಳೆ. ಭಾರತೀಯ ದಂಡಸಂಹಿತೆಯ ಪ್ರಕಾರ ಬಾಡಿಗೆಗೆ ಕೊಡುವುದು ದಂಡಾರ್ಹವಲ್ಲವಾದರೂ ಅದು ಆನೈತಿಕವಾದ್ದರಿಂದ ಈ ಒಪ್ಪಂದ ಕರಾರೆನಿಸುವುದಿಲ್ಲ. ಮುಂದೆ ಕೊಟ್ಟಿರುವ ಸಂದರ್ಭಗಳಲ್ಲಿ ಒಂದು ಒಪ್ಪಂದ ಶೂನ್ಯ (ವಾಯ್ಡ್‌) ಎನಿಸುತ್ತದೆ:

1 ಒಂದು ಅಥವಾ ಹಲವು ಉದ್ದೇಶಗಳಿಗೆ ಸಂಬಂಧಿಸಿದ ಪ್ರತಿಫಲ ಅಥವಾ ಅದರ ಯಾವುದಾದರೂ ಭಾಗವೋ ಒಂದು ಉದ್ದೇಶಕ್ಕೆ ಸಂಬಂಧಿಸಿದ ಹಲವು ಪ್ರತಿಫಲಗಳಲ್ಲಿ ಯಾವುದಾದರೊಂದೋ ಅಥವಾ ಅದರ ಯಾವುದಾದರೂ ಭಾವೋ ನ್ಯಾಯವಿದ್ಧವಾದಾಗ ಒಪ್ಪಂದ ಶೂನ್ಯವೆನಿಸುತ್ತದೆ (ಕಲಂ 24:)

2 ಪ್ರತಿಫಲವಿಲ್ಲದ ಒಪ್ಪಂದವೂ ಶೂನ್ಯವೇ ಉದಾ: ಏನೂ ಪ್ರತಿಫಲವಿಲ್ಲದೆ ಃಗೆ ಂ ರೂ 1,000 ಕೊಡಲು ವಾಗ್ದಾನ ಮಾಡುತ್ತಾನೆ. ಇದು ಶೂನ್ಯ ಆದರೆ ಈ ನಿಯಮಕ್ಕೆ ಮುಂದಿನ ಅಪವಾದಗಳಿವೆ :

(1) ಲಿಖಿತವಾಗಿ ವ್ಯಕ್ತವಾದ, ತತ್ಕಾಲದಲ್ಲಿ ಜಾರಿಯಲ್ಲಿರುವ ಕಾನೂನು ರೀತ್ಯಾ ನೋಂದಣಿಗೊಳಿಸಿದ್ದಾಗಿದ್ದು, ಎರಡೂ ಪಕ್ಷಗಳ ಪರಸ್ಪರ ನಿಕಟ ಬಾಂಧವ್ಯ ಫಲವಾದ ಸಹಜ ಪ್ರೀತಿ ಅಥವಾ ಮಮತೆಯ ಕಾರಣದಿಂದ ಆರದಾದರೆ ಅಂಥ ಒಪ್ಪಂದ ಪ್ರತಿಫಲರಹಿತವೆಂದು ಶೂನ್ಯವಾಗುವುದಿಲ್ಲ ಉದಾ: ತನ್ನ ಮಗನಲ್ಲಿ ಹೊಂದಿರುವ ಸಹಜವಾದ ಪ್ರೀತಿ ಮಮತೆಗಳಿಂದಾಗಿ ತಂದೆ ಅವನಿಗೆ ರೂ 1,000 ಕೊಡಲು ವಾಗ್ದಾನ ಮಾಡಿ ಬರೆಹಕ್ಕಿಳಿಸಿ ನೋಂದಣಿ ಮಾಡಿಸುತ್ತಾನೆ. ಇದು ಕರಾರು.

(2) ಒಬ್ಬನಿಗೆ ಇನ್ನೊಬ್ಬ ಆಗಲೇ ಸ್ವತಃ ಏನನ್ನಾದರೂ ಮಾಡಿದ್ದು, ಅಥವಾ ಮೊದಲನೆಯಾತ ನ್ಯಾಯವಾಗಿ ಮಾಡಬೇಕಾಗಿದ್ದನ್ನು ಎರಡನೆಯಾತ ಮಾಡಿದ್ದು, ಅದಕ್ಕಾಗಿ ಮೊದಲನೆಯಾತ ಎರಡನೆಯವನಿಗೆ ಭಾಗಶಃವಾಗಿಯೋ ಪುರ್ತಿಯಾಗಿಯೋ ಪರಿಹಾರ ನೀಡಲು ಮಾಡಿದ ವಾಗ್ದಾನ ಶೂನ್ಯವೆನಿಸುವುದಿಲ್ಲ. ಉದಾ: ಃಯ ಥೈಲಿ (ಪರ್ಸ್) ಂಗೆ ಸಿಕ್ಕಿ, ಆತ ಅದನ್ನು ಃಗೆ ಕೊಡುತ್ತಾನೆ. ಇದಕ್ಕಾಗಿ ಂಗೆ ಃ ರೂ 50 ಕೊಡಲೊಪ್ಪುತ್ತಾನೆ. ಇದು ಕರಾರು. ಃಯ ಕಿರಿ ವಯಸ್ಸಿನ ಮಗನನ್ನು ಂ ಸಲಹುತ್ತಾನೆ. ಇದಕ್ಕಾಗಿ ಂಗೆ ತಗಲುವ ಖರ್ಚನ್ನು ಕೊಡಲು ಃ ವಾಗ್ದಾನ ಮಾಡುತ್ತಾನೆ. ಇದೂ ಕರಾರೇ.

(3) ದಾವೆ ಹೊಡುವ ಅವಧಿ ತೀರದಿದ್ದ ಪಕ್ಷದಲ್ಲಿ ಪಾವತಿಗಾಗಿ ಹಕ್ಕು ಚಲಾಯಿಸಬಹುದಾಗಿದ್ದ ಸಾಲಿಗನ (ಕ್ರೆಡಿಟರ್) ಋಣಿಯೋ (ಡೆಟರ್) ಆತನಿಂದ ಸೂಕ್ತ ಅಧಿಕಾರ ಪಡೆದ ಕಾರ್ಯಸ್ಥನೋ (ಏಜೆಂಟ್) ಸಹಿ ಹಾಕಿ ಮಾಡಲಾದ ಲಿಖಿತ ವಾಗ್ದಾನವೂ ಕರಾರೇ. ದಾನಿಯಾದಾತ ದಾನಸ್ವೀಕೃತನಿಗೆ ಮಾಡಿದ ದಾನ ಕೂಡ ಈ ವಿಧಿಯಿಂದ ಅಬಾಧಿತವಾಗಿರುತ್ತದೆ. ಅಲ್ಲದೆ ಒಂದು ಒಪ್ಪಂದಕ್ಕೆ ವಾಗ್ದಾತ (ಪ್ರಾಮಿಸರ್) ನೀಡಿರುವ ಸಮ್ಮತಿ ಅಬಾಧಿತವಾಗಿರಬೇಕೆಂಬುದು ಮುಖ್ಯವೇ ವಿನಾ, ಅದಕ್ಕೆ ಪ್ರತಿಫಲ ಸಾಕಷ್ಟಿಲ್ಲವೆಂಬ ಕಾರಣದಿಂದಾಗಿಯೇ ಆ ಒಪ್ಪಂದ ಶೂನ್ಯವಾಗುವುದಿಲ್ಲವೆಂಬುದು ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶ. ಉದಾಹರಣೆಗೆ ಒಬ್ಬ ತನ್ನ ರೂ 10,000 ಬೆಲೆಬಾಳುವ ಮನೆಯನ್ನು ರೂ. 10ಕ್ಕೆ ಮಾರಲು ಒಪ್ಪುತ್ತಾನೆ. ಆತನ ಸಮ್ಮತಿ ಅಬಾಧಿತವಾಗಿದ್ದು ಪಕ್ಷದಲ್ಲಿ, ಪ್ರತಿಫಲ ಸಾಕಷ್ಟಿಲ್ಲವಾಗಿದ್ದರೂ ಈ ಒಪ್ಪಂದ ಕರಾರೆನಿಸುತ್ತದೆ. ಒಪ್ಪಂದಕ್ಕೆ ವಾಗ್ದಾತ ನೀಡಲಾದ ಸಮ್ಮತಿ ಅಬಾಧಿತ ಹೌದೇ ಅಲ್ಲವೇ ಎಂಬುದನ್ನು ನಿರ್ಣಯಿಸುವಾಗ ಪ್ರತಿಫಲ ಯಥೋಚಿತವೇ ಅಲ್ಲವೇ ಎಂಬ ವಿಚಾರವನ್ನೂ ನ್ಯಾಯಾಲಯ ಪರಿಗಣಿಸಬಹುದು (ಕಲಂ 25). 3 ಅಪ್ರಾಪ್ತವಯಸ್ಕರ ವಿನಾ ಇತರರ ವಿವಾಹವನ್ನು ಪ್ರತಿಬಂಧಿಸಿಯೋ ನ್ಯಾಯಬದ್ಧವಾದ ಯಾವುದೇ ಬಗೆಯ ವೃತ್ತಿ, ವ್ಯಾಪಾರ ಅಥವಾ ವ್ಯವಹಾರವನ್ನು ಕೈಗೊಳ್ಳಲು ಯಾವೊಬ್ಬ ವ್ಯಕ್ತಿಗೆ ತಡೆಯೊಡ್ಡಿಯೋ ಮಾಡಿಕೊಳ್ಳಲಾದ ಪ್ರತಿಯೊಂದು ಒಪ್ಪಂದವೂ ಶೂನ್ಯವಾಗುತ್ತದೆ. ಆದರೆ ಈ ನಿಯಮಕ್ಕೆ ಒಂದು ಅಪವಾದವುಂಟು. ಒಬ್ಬ ತನ್ನ ವ್ಯವಹಾರ (ಬಿಸಿನೆಸ್) ಸುನಾಮವನ್ನು (ಗುಡ್ವಿಲ್) ಮಾರಾಟ ಮಾಡಿದಾಗ, ಅದನ್ನು ಕೊಂಡವನೋ ಅವನಿಂದ ಈ ಹಕ್ಕು ಪಡೆದವನೋ ಈ ಬಗೆಯ ವ್ಯವಹಾರವನ್ನು ಮಾಡುತ್ತಿರುವವರೆಗೂ ಒಂದು ಗೊತ್ತಾದ ಸ್ಥಳೀಯ ಮಿತಿಯೊಳಗೆ ಇಂಥದೇ ವ್ಯಾಪಾರ ಮಾಡುವುದಿಲ್ಲವೆಂದು ಸುನಾಮದ ಸ್ಥಳೀಯ ಮಿತಿಯೊಳಗೆ ಇಂಥದೇ ವ್ಯಾಪಾರ ಮಾಡುವುದಿಲ್ಲವೆಂದು ಸುನಾಮದ ಮಾರಾಟಗಾರ ಒಪ್ಪಬಹುದು. ಅದರ ಆ ವ್ಯವಹಾರದ ಸ್ವರೂಪದ ದೃಷ್ಟಿಯಿಂದ ಇಂಥ ಮಿತಿಗಳು ನ್ಯಾಯವಾದವೆಂಬುದಾಗಿ ನ್ಯಾಯಾಲಯಕ್ಕೆ ವೇದ್ಯವಾಗಬೇಕಾದ್ದು ಅವಶ್ಯ (ಕಲಂ 27).

ಅವಲಂಬಕ ಕರಾರು (ಕಂಟಂಜೆಂಟ್ ಕಾಂಟ್ರ್ಯಾಕ್ಟ್‌) : ಕರಾರುಗಳಲ್ಲಿ ಇದು ಒಂದು ಪ್ರಭೇದ ಅನುಬಂದಿಯಾಗಿ (ಕೊಲ್ಯಾಟರೆಲ್) ಯಾವುದೋ ಒಂದು ಘಟನೆ ಸಂಭವಿಸಿದರೆ ಅಥವಾ ಸಂಭವಿಸದಿದ್ದರೆ ಏನನ್ನಾದರೂ ಮಾಡಲು ಅಥವಾ ಮಾಡದಿರಲು ಮಾಡಿಕೊಂಡ ಕರಾರು ಇದು. ಃಯ ಮನೆ ಸುಟ್ಟುಹೋದರೆ ಅವನಿಗೆ ರೂ 10,000 ಕೊಡಲು ಂ ಒಪ್ಪುತ್ತಾನೆ. ಇದು ಅವಲಂಬಕ ಕರಾರು. ವಾಗ್ದಾನವನ್ನು ನೆರವೇರಿಸುವುದೂ ಬಿಡುವುದೂ ಈ ಘಟನೆಯನ್ನೇ ಅವಲಂಬಿಸಿದೆ (ಕಲಂ 31). ಅನಿಶ್ಚಿತವಾದ ಒಂದು ಭಾವೀ ಘಟನೆ ಸಂಭವಿಸಿದರೆ ಏನನ್ನಾದರೂ ಮಾಡಲು ಅಥವಾ ಮಾಡದಿರಲು ಮಾಡಿಕೊಂಡ ಅವಲಂಬಿಕ ಕರಾರನ್ನು ಆ ಘಟನೆ ಸಂಭಿವಿಸಿದ ವಿನಾ ಮಾಡದಿರಲು ಮಾಡಿಕೊಂಡ ಅವಲಂಬಕ ಕರಾರನ್ನು ಆ ಘಟನೆ ಸಂಭವಿಸಿದ ವಿನಾ ಅಥವಾ ಸಂಭವಿಸುವ ವರೆಗೂ ಚಲಾಯಿಸುವ ಹಾಗಿಲ್ಲ. ಆ ಘಟನೆ ಅಸಾಧ್ಯವಾದಾಗ ಅಂಥ ಕರಾರೂ ಶೂನ್ಯವಾಗುತ್ತದೆ (ಕಲಂ 32). ಅನಿಶ್ಚಿತವಾದ ಒಂದು ಭಾವೀ ಸಂಭವಿಸದಿದ್ದರೆ ಏನನ್ನಾದರೂ ಮಾಡಲು ಅಥವಾ ಮಾಡದಿರಲು ಮಾಡಿಕೊಂಡ ಅವಲಂಬಕ ಕರಾರನ್ನು ಆ ಘಟನೆ ಅಸಾಧ್ಯವಾದಾಗ ಮಾತ್ರವೇ ಚಲಾಯಿಸಬಹುದಲ್ಲದೆ ಅದಕ್ಕೆ ಮುಂಚೆಯಲ್ಲ (ಕಲಂ 33). ಖಚಿತಗೊಳಿಸುವ ಭವಿಷ್ಯತ್ಕಾಲದಲ್ಲಿ ಒಬ್ಬ ವ್ಯಕ್ತಿ ಏನು ಮಾಡುವನೆಂಬುದೇ ಅವಲಂಬಕ ಕರಾರಿನ ಭಾವೀ ಘಟನೆಯಾಗಿದ್ದ ಪಕ್ಷದಲ್ಲಿ ಆತನ ಯಾವುದೋ ವರ್ತನೆಯಿಂದಾಗಿ ಮುಂದೆ ಆತ ಹಾಗೆ ಮಾಡುವುದು ಸಾಮಾನ್ಯವಾಗಿ ಅಸಾಧ್ಯವಾಗುವುದಾದರೆ ಕರಾರಿನ ಘಟನೆಯೂ ಅಸಾಧ್ಯವೆಂದು ತಿಳಿಯತಕ್ಕದ್ದು. ಉದಾ: ಅಯನ್ನು ಃ ವಿವಾಹವಾಗುವುದಾದರೆ ಅವನಿಗೆ ಎಷ್ಟೋ ಹಣ ಕೊಡುವುದಾಗಿ ಂ ಒಪ್ಪುತ್ತಾನೆ. ಆದರೆ ಆಕೆಯೊಂದಿಗೆ ವಿವಾಹವಾಗುತ್ತದೆ. ಈಗ ಃ ಮತ್ತು ಆ ಗಳ ವಿವಾಹ ಅಸಾಧ್ಯವೆಂದು ತಿಳಿಯಬೇಕು. ಮುಂದೆ ಆ ತೀರಿಕೊಳ್ಳಬಹುದು. ಅನಂತರ ಃಯನ್ನು ಆ ವಿವಾಹವಾಗಬಹುದು. ಆದರೂ ಈ ಸಾಧ್ಯತೆಯನ್ನು ಇಲ್ಲಿ ಪರಿಗಣಿಸತಕ್ಕದ್ದಲ್ಲ (ಕಲಂ 34). ನಮೂದಿತವಾದ ಅನಿಶ್ಚಿತ ಘಟನೆಯೊಂದು ಒಂದು ನಿಗದಿಯಾದ ಅವಧಿಯಲ್ಲಿ ಸಂಭವಿಸುವುದು ಅಸಾಧ್ಯವಾಯಿತಾದರೆ, ಆ ಕರಾರು ಶೂನ್ಯವಾಗುತ್ತದೆ. ಉದಾ: ನಿಶ್ಚಿತವಾದ ಹಡಗೊಂದು ಒಂದು ವರ್ಷದೊಳಗೆ ಹಿಂತಿರುಗಿದ ವರ್ಷದಲ್ಲಿ ಃಗೆ ಎಷ್ಟೊ ಹಣವನ್ನು ಕೊಡುವುದಾಗಿ ಂ ವಾಗ್ದಾನ ಮಾಡುತ್ತಾನೆ. ಒಂದು ವರ್ಷದೊಳಗಾಗಿ ಆ ಹಡಗು ಮರಳಿದರೆ ಕರಾರನ್ನು ಜಾರಿಗೆ ಕೊಡಬೇಕಾಗುತ್ತದೆ. ಒಂದು ವರ್ಷದೊಳಗಾಗಿ ಆ ಹಡಗು ಸುಟ್ಟು ಹೋದರೆ ಕರಾರು ಶೂನ್ಯವಾಗುತ್ತದೆ. ನಮೂದಿತವಾದ ಅನಿಶ್ಚಿತ ಘಟನೆ ಹೋದರೆ ಕರಾರು ಶೂನ್ಯವಾಗುತ್ತದೆ. ನಮೂದಿತವಾದ ಅನಿಶ್ಚಿತ ಘಟನೆಯೊಂದು ಒಂದು ನಿಗದಿಯಾದ ಅವಧಿಯಲ್ಲಿ ಸಂಭವಿಸದಿದ್ದ ಪಕ್ಷದಲ್ಲಿ ಏನನ್ನಾದರೂ ಮಾಡಲು ಅಥವಾ ಮಾಡದಿರಲು ಅವಲಂಬಕ ಕರಾರು ಮಾಡಿಕೊಂಡಿದ್ದಲ್ಲಿ ಆ ನಿಗದಿತ ಅವಧಿಯಲ್ಲಿ ಅಂಥ ಘಟನೆ ಸಂಭವಿಸಿದ್ದರೆ ಅಥವಾ ಅಷ್ಟರೊಳಗೆ ಅಂಥ ಘಟನೆ ಸಂಭವಿಸುವುದಿಲ್ಲವೆಂಬುದು ಖಂಡಿತವಾಗಿದೆ, ಆ ಕರಾರನ್ನು ಚಲಾಯಿಸಬಹುದು. ನಿಶ್ಚಿತವಾದ ಹಡಗೊಂದು ಒಂದು ವರ್ಷದೊಳಗೆ ಮರಳಿಬಾರದಿದ್ದರೆ ಃಗೆ ಎಷ್ಟೊ ಹಣ ಕೊಡುವುದಾಗಿ ಂ ವಾಗ್ದಾನ ಮಾಡುತ್ತಾನೆ. ಒಂದು ವರ್ಷದೊಳಗೆ ಹಡಗು ಹಿಂತಿರುಗದಿದ್ದರೆ ಅಥವಾ ಅಷ್ಟರಲ್ಲಿ ಹಡಗು ಸುಟ್ಟುಹೋದರೆ ಕರಾರನ್ನು ಜಾರಿಗೆ ಕೊಡಬೇಕು (ಕಲಂ 35).

ಅಸಾಧ್ಯವಾದೊಂದು ಘಟನೆ ಸಂಭವಿಸಿದರೆ ಏನನ್ನಾದರೂ ಮಾಡುವುದಾಗಿ ಅಥವಾ ಮಾಡದಿರುವುದಾಗಿ ಅವಲಂಬಕ ಒಪ್ಪಂದ ಮಾಡಿಕೊಂಡಿದ್ದ ಪಕ್ಷದಲ್ಲಿ, ಆ ಘಟನೆ ಅಸಾಧ್ಯವೆಂಬುದು ಆ ಒಪ್ಪಂದ ಮಾಡಿಕೊಂಡ ಸಮಯದಲ್ಲಿ ಪಕ್ಷಗಳಿಗೆ ಗೊತ್ತಿರಲಿ ಗೊತ್ತಿಲ್ಲದಿರಲಿ, ಅದು ಶೂನ್ಯ ಒಪ್ಪಂದವನಿಸುತ್ತದೆ. ಉದಾ : ಎರಡು ಸರಳರೇಖೆಗಳು ಒಂದು ಜಾಗವನ್ನು ಸುತ್ತುಗಟ್ಟುವುದಾದರೆ ರೂ 1,000 ಕೊಡುವುದಾಗಿ ಒಬ್ಬ ಇನ್ನೊಬ್ಬನೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಕರಾರು ಎನ್ನಲು ಸಾಧ್ಯವಿಲ್ಲ. ಅದು ಶೂನ್ಯ ಒಪ್ಪಂದ. ಂಯ ಮಗಳಾದ ಅ ಯನ್ನು ಃ ಮದುವೆಯಾಗುವುದಾದರೆ ಃಗೆ ರೂ 1,000 ಕೊಡುವುದಾಗಿ ಂ ಒಪ್ಪುತ್ತಾನೆ. ಆ ಸಮಯದಲ್ಲಿ ಅ ಜೀವಂತವಾಗಿಲ್ಲವೆಂಬುದು ಂ, ಃ, ಇಬ್ಬರಿಗೂ ಗೊತ್ತಿಲ್ಲ, ಈ ಒಪ್ಪಂದವೂ ಶೂನ್ಯವೇ (ಕಲಂ 36)(ನೋಡಿ- ವಿಮೆ).

                                                                (ಕೆ.ಸಿ.)