ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾರ್ಟ್ರೈಟ್, ವಿಲಿಯಂ
ಗೋಚರ
ಕಾರ್ಟ್ರೈಟ್, ವಿಲಿಯಂ
1611-1643. ಪ್ರಾದ್ರಿ ಮತ್ತು ಆಂಗ್ಲ ನಾಟಕಕಾರ. ವಿದ್ಯಾಭ್ಯಾಸ ವೆಸ್ಟ್‍ಮಿನಿಸ್ಟರ್ ಶಾಲೆ ಮತ್ತು ಆಕ್ಸ್‍ಫರ್ಡ್‍ಗಳಲ್ಲಿ. ಬೆನ್ ಜಾನ್ಸನ್, ಹೆನ್ರಿ ವಾಹನ್, ಐಸಾಕ್ ವಾಲ್ಟನ್-ಇವರ ಸ್ನೇಹಿತನೀತ. ಕೆಲವು ಉತ್ತಮ ಕವನಗಳು ಹಾಗೂ ನಾಟಕಗಳನ್ನು ಬರೆದಿದ್ದಾನೆ. ವಿದ್ವಾಂಸ, ವಿನೋದ ಪ್ರಿಯ ಮತ್ತು ಉತ್ತಮ ನಾಟಕಕಾರನೆಂದು ತನ್ನ ಸಮಾಕಾಲೀನರ ಹೊಗಳಿಕೆಗೆ ಪಾತ್ರನಾಗಿದ್ದ. ದಿ ರಾಯಲ್ ಸ್ಲೇವ್, ದಿ ಸೀಜ್, ದಿ ಲೇಡಿ ಎರಂಟ್ ಈತನ ಉತ್ತಮ ನಾಟಕಗಳು.
(ಎನ್.ಎಸ್.ಎಲ್.)