ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಳು ಕೊರೆಯುವ ಕುಟ್ಟಿ

ವಿಕಿಸೋರ್ಸ್ದಿಂದ

ಕಾಳು ಕೊರೆಯುವ ಕುಟ್ಟಿ

 ಕೋಲಿಯಾಪ್ಟಿರ ಗಣದ ಬ್ರಾಸ್ಟೈಕಿಡೀ ಕುಟುಂಬಕ್ಕೆ ಸೇರಿದ ರೈeóÉೂೀಪರ್ತ ಡಾಮಿನಿಕ ಎಂಬ ವೈಜ್ಞಾನಿಕ ಹೆಸರಿನ ಕೀಟ. ಪೀಪಾಯಿ ಆಕಾರದ ದೇಹ, ಮಾಸಲು ಕಪ್ಪುಬಣ್ಣ. ಕೆಳಕ್ಕೆ ಬಗ್ಗಿದಂಥ ತಲೆ, ತಲೆಯ ಮುಂದಕ್ಕೆ ಚಾಚಿರುವ ಎದೆಯ ಮೊದಲ ಖಂಡ. ತುದಿಯಲ್ಲಿ ಉಬ್ಬಿರುವ ಕುಡಿ ಮೀಸೆಗಳು-ಇದರ ಮುಖ್ಯಲಕ್ಷಣಗಳು. ಇದು ದ್ವಿದಳ ಧಾನ್ಯಗಳಲ್ಲಿ ಉಂಡೆ ಕಾಳುಗಳಿಗೆ ಮಾತ್ರ ಕಂಟಕಕಾರಿ. ಸಾಮಾನ್ಯವಾಗಿ ಅಕ್ಕಿ ಸೊಂಡಿಲುಕೀಟದೊಂದಿಗೆ ಇರುವುದುಂಟು. ತಾಯಿಕೀಟ ಒಂದು ಬಾರಿಗೆ ಸುಮಾರು 500 ಮೊಟ್ಟೆಗಳನ್ನಿಡುತ್ತದೆ. ಹುಳುಗಳು ಪ್ರಾರಂಭದಲ್ಲಿ ಕಾಳಿನ ಹೊರಗಿನ ಧೂಳು, ಹುಡಿ ತಿಂದು ಕೊಂಡಿದ್ದು ಆಮೇಲೆ ಕಾಳನ್ನು ಕೊರೆದು ಒಳಗೆ ಪ್ರವೇಶಿಸುತ್ತವೆ. ಕಾಳಿನ ಮೇಲೆ ಕಾಣಿಸುವ ರಂಧ್ರಗಳು ಪ್ರೌಢಕೀಟ ಹೊರಗೆ ಬಂದ ತೂತುಗಳೇ ವಿನಾ ಮರಿ ಒಳಗೆ ಹೋಗಲು ಮಾಡಿದುವಲ್ಲ. ಕೀಟಗಳು ಸುಮಾರು ನಾಲ್ಕು ವಾರ ಬದುಕಿರುತ್ತವೆ.

            (ಡಿ.ಎಸ್.)