ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾವಾಲ್ಕಾಂಟೀ, ಜೋಡೋ

ವಿಕಿಸೋರ್ಸ್ ಇಂದ
Jump to navigation Jump to search

ಕಾವಾಲ್‍ಕಾಂಟೀ, ಜೋಡೋ 

1255-1300. ಇಟಲಿಯ ಕವಿ. ಅತ್ಯುತ್ತಮ ಭಾವಗೀತೆಗಳನ್ನು ರಚಿಸಿದ್ದಾನೆ. ಹಲವಾರು ಪ್ರೇಮಗೀತೆಗಳನ್ನು ಬರೆದು, ತನ್ನ ತೀಕ್ಷ್ಣ ಬುದ್ಧಿಶಕ್ತಿಯಿಂದ ಸಮಕಾಲೀನ ಕವಿಯಾದ ಡಾಂಟೆಯ ಮೇಲೆ ಪರಿಣಾಮಕಾರಿಯಾದ ವರ್ಚಸ್ಸು ಬೀರಿದ್ದಾನೆ. ಮೊದಲು ಇವರಿಬ್ಬರಲ್ಲೂ ಗಾಢವಾದ ಸ್ನೇಹವಿದ್ದು ಕೊನೆಗೆ ಪರಸ್ವರ ದ್ವೇಷ ಬೆಳೆಯಿತನ್ನಲಾಗಿದೆ. ವರ್ಣೀಯ ಕಲಹದಲ್ಲಿ ಗಡೀಪಾರಾಗಿದ್ದ ಈತನನ್ನು ಸಾಯುವ ಮುನ್ನ ತೀವ್ರ ಕಾಯಿಲೆಯಿದ್ದಾಗ ವಾಪಸ್ಸು ಕರೆಸಿಕೊಳ್ಳಲಾಯಿತು. ಫ್ಲಾರೆನ್ಸಿನ ಮಲರಿಯದಲ್ಲಿ ಈತ ಮರಣಹೊಂದಿದ.

(ಎಚ್.ಕೆ.ಆರ್.)