ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಂಭರಾಶಿ
ಗೋಚರ
ಕುಂಭರಾಶಿ
ರಾಶಿಚಕ್ರದ ಮೇಲಿನ ಹನ್ನೆರಡು ರಾಶಿಗಳಲ್ಲಿ ಹನ್ನೊಂದನೆಯದು (ಅಕ್ವಾರಿಯಸ್). ಮೊದಲನೆಯದು ಮೇಷರಾಶಿ. ಇದರ ವ್ಯಾಪ್ತಿ 20 ಗಂ. 35 ಮಿ.-20 ಗಂ. 55 ಮೀ. ವಿಷುವದಂಶ ಹಾಗೂ 3ಉ-25 ದ. ಘಂಟಾವೃತ್ತಾಂಶ. ಇದೊಂದು ದಕ್ಷಿಣಾಕಾಶದ ನಕ್ಷತ್ರಪುಂಜ. ರಾಶಿಚಕ್ರದ ಮೇಲಿರುವುದರಿಂದ ಮಾತ್ರ ಇದಕ್ಕೆ ಪ್ರಾಧಾನ್ಯ ಬಂದಿದೆ. ಮಂದ ಪ್ರಕಾಶದ ನಕ್ಷತ್ರಗಳು ಇದನ್ನು ರಚಿಸುವುದರಿಂದ ಈ ರಾಶಿಯನ್ನು ಖಚಿತವಾಗಿ ಗುರುತಿಸುವುದು ಕಷ್ಟ.