ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಕಿ

ವಿಕಿಸೋರ್ಸ್ದಿಂದ

ಕುಕಿ

ಚಿಂದ್ವಿನ್ ಕಣಿವೆಯಿಂದ ಬಂದು ನಾಗಾಜನರೊಂದಿಗೆ ಬೆರೆತ ಒಂದು ಪಂಗಡ. ಈ ಜನ ಬರ್ಮ ಮತ್ತು ಅಸ್ಸಾಂಗಳನ್ನು ಪ್ರತ್ಯೇಕಿಸುವ ಬೆಟ್ಟಪ್ರದೇಶದಲ್ಲಿ ನಾಮತಲೀಕ್ ನದಿಯ ದಕ್ಷಿಣಭಾಗದಲ್ಲಿ ವಾಸಿಸುತ್ತಾರೆ. ಇವರಲ್ಲಿ ಬಹುಪತ್ನೀತ್ವವೂ ನಿಯೋಗಪದ್ಧತಿಯೂ ರೂಢಿಯಲ್ಲಿವೆ. ಸೃಷ್ಟಿಕರ್ತನಲ್ಲಿ ನಂಬಿಕೆಯಿಟ್ಟು ಈ ಜನ ಸತ್ತವರ ಆತ್ಮಗಳು ಭಗವಂತನ ನಿಲಯವನ್ನು ಸೇರಿ ಸುಖದಿಂದಿರುತ್ತಾರೆ ಎಂದು ನಂಬುತ್ತಾರೆ. ಇವರಲ್ಲಿ ಕೆಲವರು ಸತ್ತವರನ್ನು ಹೂಳುತ್ತಾರೆ. ಕೆಲವರು ಸುಡುತ್ತಾರೆ.

 

(ಜಿ.ಎಚ್.)