ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೂಪರ್, ಗ್ಯಾರಿ

ವಿಕಿಸೋರ್ಸ್ದಿಂದ

ಕೂಪರ್, ಗ್ಯಾರಿ

1901-1961. ತನ್ನ ಸರಳ ಹಾಗೂ ಗಂಭೀರ ಪಾತ್ರಗಳಿಂದ ಲಕ್ಷಾಂತರ ಸಿನಿಮಾ ಪ್ರೇಮಿಗಳ ಹೃದಯವನ್ನು ಸೂರೆಗೊಂಡ ಅಮೆರಿಕದ ಪ್ರಖ್ಯಾತ ಚಲನಚಿತ್ರನಟ. ಸಾಮ್ಯುಯಲ್ ಗೋಲ್ಡ್‍ವಿನ್ ಈತನನ್ನು ಬೆಳಕಿಗೆ ತಂದ. 1926ರಲ್ಲಿ ತೆರೆ ಕಂಡ ದಿ ವಿನ್ನಿಂಗ್ ಆಫ್ ಬಾರ್‍ಬರ ವರ್ತ್ ಎಂಬುದರಲ್ಲೀತ ಒಂದು ಗೌಣ ಪಾತ್ರ ವಹಿಸಿದ್ದನಾದರೂ ಸಾಕಷ್ಟು ಖ್ಯಾತಿ ಪಡೆದ. 1931ರಲ್ಲಿ ತೆರೆಕಂಡ ರೂಬೆನ್ ಮಮೌಲಿನ್‍ನ ಸಿಟಿ ಸ್ಟ್ರೀಟ್ಸ್‍ನಲ್ಲಿ ಪ್ರಧಾನ ಪಾತ್ರವಹಿಸಿದ. ಈ ಚಿತ್ರ ಹೆಸರು ಹಣ ಎರಡನ್ನೂ ಗಳಿಸಿ ಕೂಪರನ ಖ್ಯಾತಿಗೂ ಕಾರಣವಾಯಿತು. ಎ ಫೇರ್ ವೆಲ್ ಟು ಆರಮ್ಸ್(1933). ದಿ ಪ್ಲೇನ್ಸ್‍ಮನ್ (1936). ಮಿಸ್ಟರ್ ಡೀಡ್ಸ್ ಗೋಸ್ ಟು ಟೌನ್(1936), ಸಾರ್ಜೆಂಟ್ ಯಾರ್ಕ್(1941). ಫಾರ್ ಹೂಮ್ ದಿ ಬೆಲ್ ಟೋಲ್ಸ್(1943), ಹೈ ನೂನ್(1952)- ಇವು ಈತ ನಟಿಸಿದ ಅತ್ಯುತ್ತಮ ಚಿತ್ರಗಳಲ್ಲಿ ಕೆಲವು. 									 *