ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೂರಲು ಮೀನು
ಗೋಚರ
ಕೂರಲು ಮೀನು
ಸಿಪ್ರಿನಿಡೆ ಕುಟುಂಬಕ್ಕೆ ಸೇರಿದ ಬಾರ್ಬಸ್ ಅಥವಾ ಪಂಟಿಯಸ್ ಜಾತಿಯ ಹಲವಾರು ಸಿಹಿನೀರು ಮೀನುಗಳು. ಪಕ್ಕೆ, ಹರಗಿ ಕರಸೆ ಸಣ್ಣ ಗೆಂಡೆ, ಪರ್ಕೆ, ಜಬ್ಬು, ಗೆಂಡೆ, ಕಿಜನ್ ಗುಡ್‍ಪಕ್ಕೆ, ಬುರಾ ಹೀಗೆ ಹಲವಾರು ಸ್ಥಳೀಯ ನಾಮಗಳಿಂದ ಕರೆಯಲ್ಪಡುವ ಸಣ್ಣ ಮೀನುಗಳು. ಸಾಮನ್ಯವಾಗಿ ಎಲ್ಲ ಸಿಹಿನೀರು ಪ್ರದೇಸಗಳಲ್ಲಿ ಕಾಣ ಸಿಗುತ್ತವೆ. ಕರ್ನಾಟಕದ ಕೃಷ್ಣ ಕಾವೇರಿ ಮತ್ತು ಪಶ್ಚಿಮಾಭಿಕುಖವಾಗಿ ಹರಿಯವ ನದಿಗಳಲ್ಲಿ, ಹಳ್ಳ ಕೊಳ್ಳಗಳಲ್ಲಿ ಇವೆ. ಇವು ಸಾಮಾನ್ಯವಾಗಿ 10 ರಿಂದ 15 ಸೆಂ.ಮೀವರೆಗೆ ಬೆಳೆಯುತ್ತವೆ. ಮಳೆಗಾಲದಲ್ಲಿ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ. ಎಳೆ ಬಲೆಗಳು, ಕುಡುಮೆಗಳು, ಗಾಳಗಳ ಸಹಾಯದಿಂದ ಇವುಗಳನ್ನು ಹಿಡಿಯುತ್ತಾರೆ. ಈ ಮೀನುಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ತಿನುತ್ರಾರೆ.