ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೇನಿಸ್ ವೆನಾಟಿಸಿ

ವಿಕಿಸೋರ್ಸ್ದಿಂದ

ಕೇನಿಸ್ ವೆನಾಟಿಸಿ

ಆಕಾಶದಲ್ಲಿರುವ 88 ನಕ್ಷತ್ರಪುಂಜಗಳಲ್ಲಿ ಒಂದು. ಇದರ ವ್ಯಾಪ್ತಿ ವಿಷುವದಂಶ 12 ಗಂಟೆ 5ಮಿ.-14ಗಂ 5ಮಿ, ಮತ್ತು ಘಂಟಾವೃತ್ತಾಂಶ 28ಲಿ-52ಲಿ ಉ. ಬರಿಗಣ್ಣಿನಿಂದ ಈ ಪುಂಜವನ್ನು ಗುರುತಿಸುವುದು ಕಷ್ಟ. ಅರಸಾಮೇಜರ್ (ಸಪ್ತರ್ಷಿ ಮಂಡಲ), ಸಿಂಹರಾಶಿ, ಕನ್ಯಾರಾಶಿ ಮತ್ತು ಬೋವೋಟೀಸ್ ಈ ನಕ್ಷತ್ರ ಪುಂಜಗಳು ಆವೃತಿಸುವ ಆಕಾಶವಲಯದ ಒಳಗೆ ಕೇನಿಸ್ ವೆನಾಟಿಸೈ ಇದೆ. ಇದರಲ್ಲಿರುವ ಪ್ರಧಾನ ನಕ್ಷತ್ರದ ಹೆಸರು ಕಾರ್ ಕರೋಲಿ. ಈ ಪುಂಜಕ್ಕೆ ಕಾಲಭೈರವ ಎಂಬ ಹೆಸರಿದೆ.