ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೊರಿಯನ್ ಭಾಷೆ

ವಿಕಿಸೋರ್ಸ್ದಿಂದ
   ಮೂಲದೊಡನೆ ಪರಿಶೀಲಿಸಿ

ಕೊರಿಯನ್ ಭಾಷೆ

ಕೊರಿಯನ್ ಭೂಪ್ರದೇಶದ ಜನ ಬಳಸುವ ಭಾಷೆ ಇದು. ಈ ಭಾಷೆಯಲ್ಲಿ ಕೊರಿಯ ಎಂದರೆ ಪರ್ವತಶ್ರೇಣಿ ಹಾಗೂ ನದಿಗಳಿಂದ ಕೂಡಿದ ಎತ್ತರ ಪ್ರದೇಶ ಎಂದು ಅರ್ಥವಾಗುತ್ತದೆ. 935 ರಿಂದ 1392ರವರೆಗೆ ಆಳಿದ ಕೋರ್ಯೋ ಅಥವಾ ಕೋರೈ ವಂಶದವರಿಂದ ಈ ನಾಡಿಗೆ ಕೊರಿಯ ಎಂಬ ಹೆಸರು ಬಂದಿದೆ. ಕೊರಿಯನ್ನರು ಚೀನೀ ಮತ್ತು ಜಪಾನೀಯರಂತೆ ಮಂಗೋಲಿಯನ್ ಬುಡಕಟ್ಟಿಗೆ ಸೇರಿದವರಾಗಿದ್ದರೂ ಕೆಲವು ವಿಶಿಷ್ಟ ಲಕ್ಷಣಗಳನ್ನುಳ್ಳವರಾಗಿದ್ದಾರೆ.

ಕೊರಿಯನ್ ಭಾಷೆ ತುರ್ಕಿ, ಮಂಗೋಲ ಮತ್ತು ಜಪಾನೀ (ಚೀನೀ ಭಾಷೆಯನ್ನು ಬಿಟ್ಟು) ಭಾಷೆಗಳಂತೆಯೇ ಯೂರಲ್-ಆಲ್ಟೇಯಿಕ್ ಭಾಷಾ ವರ್ಗಕ್ಕೆ ಸೇರಿದ್ದಾಗಿದೆ. ಕೊರಿಯದ ಆಡು ಭಾಷೆ ಹಾಗೂ ದೇಶೀ ಶಬ್ದಸಂಪತ್ತು ಇದೇ ಭಾಷಾ ವರ್ಗದ ಇತರ ಭಾಷೆಗಳಿಗಿಂತ ಭಿನ್ನವಾಗಿದೆ. ಚೀನದ ಸಾಂಸ್ಕøತಿಕ ಪ್ರಭಾವ ಇದರ ಲಿಖಿತ ಭಾಷೆಯ ಮೇಲೆ ಸಾಕಷ್ಟು ಆಗಿದೆ. ಐರೋಪ್ಯ ದೇಶಗಳಲ್ಲಿ ಗ್ರೀಕ್ ಮತ್ತು ಲ್ಯಾಟಿನ್‍ಗಳಂತೆ ಚೀನೀಭಾಷೆ ಕೂಡ ಕೊರಿಯ ದೇಶದಲ್ಲಿ ಅನೇಕ ಶತಮಾನಗಳವರೆಗೆ ಅಭಿಜಾತ ಭಾಷೆಯ ರೂಪದಲ್ಲಿ ಪ್ರಚಲಿತವಾಗಿತ್ತು. ಕೊರಿಯನ್ ಭಾಷೆಯನ್ನು ಬಳಸುವ ಜನ ಸುಮಾರಾಗಿ 30,000,000. ಈ ಭಾಷೆಯ ಒಂದು ಉಪಭಾಷೆಯಾದ ಸಿವೋಲದಲ್ಲಿ ಕೆಳಗಿನ ಸ್ವರ ಮತ್ತು ವ್ಯಂಜನಗಳನ್ನು ಕಾಣಬಹುದು. ಸಿವೋಲ ಉಪಭಾಷೆಯ ಸ್ವರಪದ್ಧತಿಯನ್ನು ಪೂರ್ವಸ್ವರ, ಮಧ್ಯಸ್ವರ, ಪಶ್ಚಸ್ವರ ಎಂದು ಮೂರಾಗಿ ವಿಭಾಗಿಸಬಹುದು. ಪೂರ್ವ ಸ್ವರ ಮಧ್ಯಸ್ವರ ಪಶ್ಚಸ್ವರ

ಈ(i)     	ಈ(i)    	ಊ(u)
ಎ(e)     	ಎ(e)     	ಓ(o)
ಆ(ಚಿ)     	ಅ(ಚಿ)     	ಓ(o)

ಕೊರಿಯನ್ ಭಾಷೆಯ ಅಗ್ರಸ್ವರಗಳ ಉಚ್ಛಾರವನ್ನು ಕ್ರಮವಾಗಿ ಇಂಗ್ಲಿಷಿನಲ್ಲಿಯ ಠಿiಣ, ಠಿeಣ ಮತ್ತು ಠಿಚಿಣ ಎಂಬ ಶಬ್ದಗಳಲ್ಲಿ ಬರುವ ಸ್ವರಗಳಂತೆ ಮಾಡಬಹುದು. ಇದರ ಮಧ್ಯಸ್ವರಗಳ ಉಚ್ಚಾರವನ್ನು ಕ್ರಮವಾಗಿ ಇಂಗ್ಲಿಷಿನಲ್ಲಿಯ ಠಿuಣ ಠಿuಣಣ ಮತ್ತು ಠಿಚಿ ಗಳಂತೆ ಮಾಡಬಹುದು. ಇದರ ಪಶ್ವಸ್ವರಗಳ ಉಚ್ಚಾರವನ್ನು ಕ್ರಮವಾಗಿ ಇಂಗ್ಲಿಷಿನಲ್ಲಿಯ ಖue ಮತ್ತು ಖoತಿ ಹಾಗೂ ಜರ್ಮನ್ ಭಾಷೆಯ bose ಎಂಬ ಶಬ್ದಗಳಲ್ಲಿಯ ಸ್ವರಗಳಂತೆ ಮಾಡಬಹುದು. ಕೊರಿಯನ್ನಿನ ಕೆಲವು ಉಪಭಾಷೆಗಳಲ್ಲಿ ಆ (ಚಿ) ಮತ್ತು ಎ (e) ಹಾಗೂ ಈ (i)ಮತ್ತು ಎ (e)ಎಂಬ ಸ್ವರಗಳು ಅರ್ಥವ್ಯತ್ಯಾಸವನ್ನುಂಟುಮಾಡುವ ಸಾಮಥ್ರ್ಯವನ್ನು ಕಳೆದುಕೊಂಡಿವೆ.

ಕೊರಿಯನ್ ಭಾಷೆಯ (ಸಿವೋಲ ಉಪಭಾಷೆಯ) ವ್ಯಂಜನಗಳನ್ನು ಶಿಥಿಲ, ದೃಢ, ಮಹಾಪ್ರಾಣ ಎಂದು ವಿಭಾಗಿಸಬಹುದು. ಶಿಥಿಲ : ಪ(ಠಿ) ತ (ಣ) ಚ(ಛಿ) ಕ (ಞ) ಹ(h) ದೃಡ : ಪ್ಪ (ಠಿಠಿ) ತ್ತ (ಣಣ) ಚ್ಚ (ಛಿಛಿ) ಕ್ಕ (ಞಞ) ಸ್ಸ (ssss) ಮಹಾಪ್ರಾಣ : ಫ (ಠಿh) ಥ (ಣh) ಛ (ಛಿh) ಖ (ಞh) ನಾಸಿಕ್ಯ : ಮ (m) ನ (ಟಿ) ಞ (ಟಿ) ಙ (ಟಿ) ಅರ್ಧ ವ್ಯಂಜನ ವ(ತಿ) ಯ (ಥಿ)

ಕೊರಿಯನ್ ಭಾಷೆಯಲ್ಲಿ ಶಿಥಿಲ ವ್ಯಂಜನಗಳಾದ ಪ(ಠಿ), ತ(ಣ), ಚ(ಛಿ), ಕ(ಞ)ಗಳು ಸ್ವರಮಧ್ಯದಲ್ಲಿ ಬ(b), ದ(ಜ), ಜ(ರಿ) ಮತ್ತು ಗ(g) ಗಳಂತೆ ಉಚ್ಚಾರವಾಗುತ್ತದೆ. ಅಕ್ಷರದ ಪ್ರಾರಂಭದಲ್ಲಿ ಕೊರಿಯನ್ನಿನ ಲ (ಟ) ಧ್ವನಿ ಜಪಾನೀ ರ(ಡಿ) ಧ್ವನಿಯಂತೆ ಉಚ್ಚಾರವಾಗುತ್ತದೆ. ಇದರ ಕೆಲವು ಉಪಭಾಷೆಗಳಲ್ಲಿ ದೀರ್ಘತೆ, ಸ್ವರಾಘಾತಗಳೂ ಕಂಡುಬರುತ್ತವೆ.

ಕೊರಿಯನ್ನರು ಚೀನೀ ಭಾಷೆಯ ಆಧಾರದ ಮೇಲೆ ತಮ್ಮ ಆಡುಭಾಷೆಗೆ ಲಿಖಿತಭಾಷೆಯ ರೂಪವನ್ನು ಕೊಟ್ಟರು. ಇದಕ್ಕೆ ಅವರು ಇದು (Iಜu) ಎಂಬ ಹೆಸರನ್ನು ಇಟ್ಟರು. ಅನಂತರ 1443ರ ಹಾನಕಿಲ್ (ಊಚಿಟಿಞiಟ ) ಅಥವಾ ಎನ್ಮುನ್(eಟಿmuಟಿ) ಎಂಬ ಸರಳವಾದ ಲಿಪಿಯನ್ನು ಶೋಧಿಸಿದರು. ಇದನ್ನು ಶೋಧಿಸಿದ ವಿಜ್ಞಾನಿಗಳಲ್ಲಿ ಛೋಂಗ್ ಇಂಛೀ ಹಾಗೂ ಸೋಂಗ್ ಸುಮ್ಮುನ್ ಮತ್ತು ಪಿನ್ ಶುಕಛೂ ಎಂಬುವರು ಕೊರಿಯದ ರಾಜನಾದ ಶೇಜಾಂಗ್‍ನ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದರು. ಇದರಲ್ಲಿ 24 ಅಕ್ಷರಗಳಿವೆ. ಪ್ರಾರಂಭದಲ್ಲಿ ಜಪಾನೀ ಮತ್ತು ಚೀನೀ ಭಾಷೆಗಳಂತೆ ಕೊರಿಯನ್ ಭಾಷೆಯನ್ನು ಕೂಡಾ ಮೇಲಿನಿಂದ ಕೆಳಕ್ಕೆ ಬರೆಯುತ್ತಿದ್ದರು. ಎರಡನೆಯ ಮಹಾಯುದ್ಧದ ಅನಂತರ ಸಮಾನಾಂತರ ರೇಖೆಯಾಗಿ ಬರೆಯುವ ರೂಢಿ ಹೆಚ್ಚಿನ ಪ್ರಶಸ್ತಿ ಪಡೆಯಿತು. ಟೈಪುಯಂತ್ರಕ್ಕೆ ಅಕ್ಷರಗಳನ್ನು ಹೊಂದಿಸಿಕೊಳ್ಳುವುದೇ ಇದರ ಮುಖ್ಯ ಉದ್ದೇಶ.

ಭಾಷೆಯಂತೆಯೇ ಕೊರಿಯನ್ ಸಾಹಿತ್ಯವೂ ಪ್ರಾಚೀನವಾದದ್ದು. ಇದರ ಸಾಹಿತ್ಯದ ಮೇಲೆ ಚೀನ ಮತ್ತು ಜಪಾನ್ ಸಂಸ್ಕøತಿಗಳ ಪ್ರಭಾವ ಸಾಕಷ್ಟಾಗಿದೆ. ಇದಕ್ಕೆ ಅವರ ನಡುವೆ ಬಹುಕಾಲದಿಂದ ಇದ್ದ ಹೆಚ್ಚಿನ ಸಂಪರ್ಕ ಕಾರಣ. ಚೀನೀ ಭಾಷೆ ಏಕಾಕ್ಷರ ತಾನ ಭಾಷೆ ಆಗಿದ್ದರೂ ಅದಕ್ಕೆ ಸಂಬಂಧಪಟ್ಟ ಕೊರಿಯನ್ ಭಾಷೆ ಬಹ್ವಕ್ಷರ ಭಾಷೆಯಾಗಿದೆ. (ಕೆ.ಪಿ.ಎಎನ್.)