ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೊಲೊನ್ನ, ವಿಟ್ಟೋರಿಯ
ಗೋಚರ
ಕೊಲೊನ್ನ, ವಿಟ್ಟೋರಿಯ 1490-1547. ಇಟಲಿಯ ಶ್ರೀಮಂತ ಮನೆತನವೊಂದರಲ್ಲಿ ಹುಟ್ಟಿದ ಕವಯಿತ್ರಿ. ಎಳೆಯ ವಯಸ್ಸಿನಲ್ಲೆ ಕವನ ರಚನೆ ಮಾಡತೊಡಗಿದಳು. ಕೆಲಕಾಲ ಪತಿಯಿಂದ ದೂರ ಇದ್ದಳಲ್ಲದೆ ಪತಿ ಗತಿಸಿದ ಮೇಲೆ ಜೀವನದ ಬಹುಭಾಗವನ್ನು ಕಾನ್ವೆಂಟುಗಳಲ್ಲಿ ಏಕಾಂತದಲ್ಲೂ ದೀನದಲಿತರ ಸೇವೆಯಲ್ಲೂ ಕಳೆದಳು. ಪ್ರಸಿದ್ಧ ಚಿತ್ರಕಾರ ಮೈಕೆಲೆಂಜಲೊವಿನೊಡನೆ ಈಕೆಗಿದ್ದ ಸ್ನೇಹ ಪ್ರಸಿದ್ಧವಿದೆ. ದಿ ರೈಮ್ ಸ್ಪಿರಿಚುಯ್ಯಾಲಿ ಎಂಬ ಕವನ ಸಂಕಲನದಲ್ಲಿ ಈಕೆ ತನ್ನ ಪತಿಯ ಗುಣಗಾನ ಮಾಡಿದ್ದಾಳೆ. (ಎಚ್.ಕೆ.ಆರ್.)