ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೋರಿ, ವಿಲಿಯಮ್ಜಿ ಜಾನ್ಸನ್
ಗೋಚರ
ಕೋರಿ, ವಿಲಿಯಮ್ಜಿ ಜಾನ್ಸನ್ 1823-1892
ಕವಿ. ಚಾಲ್ರ್ಸ್ ಜಾನ್ಸನ್ನನ ಮಗ. ಹುಟ್ಟಿದ್ದು ಟೊರಿಂಗ್‍ಟನ್‍ನಲ್ಲಿ. ಕೇಂಬ್ರಿಜ್‍ನ ಈಟನ್ ಮತ್ತು ಕಿಂಗ್ಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ಹಲವು ಕಾಲ ಅಲ್ಲಿಯೇ ಸಹಾಧ್ಯಾಪಕನಾಗಿ ಕೆಲಸ ಮಾಡಿದ. ಈತನ ಐಯೋನಿಕ ಎಂಬ ಕವನ ಸಂಕಲನ 1858ರಲ್ಲಿ ಅನಾಮಧೇಯವಾಗಿ ಪ್ರಕಟಗೊಂಡಿತು. ಈತ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳ ಅತ್ಯಂತ ಚತುರ ಕವಿ ಎನಿಸಿದ್ದ. ಹೆರಾಕ್ಲಿಟಸ್ ಈತನ ಶ್ರೀಷ್ಠ ಕವನ. ಇದು ಕ್ಯಾಲಿಮಾಕಸ್ ಎಂಬ ಅಲೆಕ್ಸಾಂಡ್ರಿಯನ್ ಕವಿಯ ಕವನದ ಸಂಗ್ರಹಾನುವಾದ. (ಎನ್.ಎಸ್.ಎಲ್.)