ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯಾಬ್ರರಾ, ಗೇಬ್ರಿಯೆಲೊ
Jump to navigation
Jump to search
ಕ್ಯಾಬ್ರರಾ, ಗೇಬ್ರಿಯೆಲೊ
1552-1602. ಇಟಲಿಯ ಕವಿ. ತನ್ನ ಕಾಲದ ರಾಜರುಗಳನೇಕರ ಕೃಪಾದೃಷ್ಟಿಗೆ ಪಾತ್ರನಾಗಿ ಸುಖಜೀವನವನ್ನು ನಡೆಸಿದವ. ಭಾವಗೀತೆಯ ರಚನೆಯಲ್ಲಿ ನೂತನ ಪ್ರಯೋಗಗಳನ್ನು ಮಾಡಿದ್ದಾನೆ. ಪಿಂಡಾರ್ ಕವಿಯನ್ನು ಅನುಸರಿಸಿ ಬರೆದ ಹಲವು ವಿಡಂಬನ ಕಾವ್ಯಗಳಲ್ಲಿ ಮತ್ತು ಲಘುಕವನಗಳಲ್ಲಿ ಈತನ ಕಲಾಪ್ರೌಢಿಮೆ ವ್ಯಕ್ತವಾಗಿದೆ. ವಡ್ರ್ಸ್‍ವರ್ತ್ ಕವಿ ಈತನನ್ನು ಬಹಳವಾಗಿ ಮೆಚ್ಚಿಕೊಂಡು ಈತನ ಕೆಲವು ಚರಮವಾಕ್ಯಗಳನ್ನು ಅನುವಾದಿಸಿದ್ದಾನೆ.
(ಎಚ್.ಕೆ.ಆರ್.)