ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯಾರಕ್ಯಾಲ್

ವಿಕಿಸೋರ್ಸ್ದಿಂದ

ಕ್ಯಾರಕ್ಯಾಲ್ ಕಾರ್ನಿವೊರ ಗಣದ ಫೆಲಿಡಿ ಕುಟುಂಬಕ್ಕೆ ಸೇರಿದ ಮಾಂಸಾಹಾರಿಯಾದ ಚತುಷ್ಟಾದ ಪ್ರಾಣಿ. ಫೆಲಿಸ್ ಅಥವಾ ಲಿಂಕ್ಸ್ ಕ್ಯಾರಕ್ಯಾಲ್ ಎಂಬುದು ಇದರ ವೈಜ್ಞಾನಿಕ ಹೆಸರು. ಪರ್ಶಿಯನ್ ಲಿಂಕ್ಸ್ ಎಂದೂ ಇದನ್ನು ಕರೆಯುವುದಿದೆ. ಆಫ್ರಿಕ ಮತ್ತು ನೈಋತ್ಯ ಏಷ್ಯಗಳಲ್ಲಿ ಇದರ ವ್ಯಾಪ್ತಿ ಹೆಚ್ಚು. ಗಾತ್ರದಲ್ಲಿ ತೋಳಕ್ಕಿಂತ ದೊಡ್ಡದು. ದೇಹದ ಬಣ್ಣ ಅಚ್ಚಕಂದು ಅಥವಾ ದ್ರಾಕ್ಷಾರಸದ ಕೆಂಪು. ಕಣ್ನಿನ ಮೇಲ್ಭಾಗದಲ್ಲಿ ಬಿಳಿಯಬಣ್ಣದ ಒಂದು ಚುಕ್ಕೆ ಇದೆ. ಕಿವಿಯ ತುದಿಯಲ್ಲಿ ಉದ್ದವಾದ ಕಪ್ಪು ಕೂದಲಿನ ಗೊಂಚಲು ಇದೆ. ಕ್ಯಾರಕ್ಯಾಲ್ ಅತ್ಯಂತ ಬಲಶಾಲಿ ಮತ್ತು ಕ್ರೂರಿ. ಹುಲ್ಲು ಪೊದೆ ಮುಂತಾದೆಡೆ ವಾಸಿಸುತ್ತದೆ. ಸಣ್ಣ ಜಿಂಕೆಗಳು, ಮೊಲ, ಕಾಡುಕೋಳಿ ಮೊದಲಾದವು ಇದರ ಮೆಚ್ಚಿನ ಆಹಾರ. ಈ ಪ್ರಾಣಿಯನ್ನು ಪಳಗಿಸಿ ಚಿಕ್ಕ ಚತುಷ್ಪಾದಿಗಳನ್ನೂ ಪಕ್ಷಿಗಳನ್ನೂ ಹಿಡಿಯುವುದಕ್ಕೆ ಉಪಯೋಗಿಸುತ್ತಾರೆ. (ಎಸ್.ಎನ್.ಕೆ.ಯು.)