ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಖಖೂಂದ
ಗೋಚರ
ಖಖೂಂದ ಉತ್ತರ ಪ್ರದೇಶದ ಗೋರಖಪುರ ರೈಲು ನಿಲ್ದಾಣದಿಂದ 39 ಮೈಲಿಗಳ ದೂರದಲ್ಲಿರುವ ನೋನಖಾರ ರೈಲು ನಿಲ್ದಾಣಕ್ಕೆ ಮೂರು ಮೈಲಿ ದೂರದಲ್ಲಿದೆ. ಇದನ್ನು ಪ್ರಾಚೀನ ಕಿಷ್ಕಿಂದೆ ಎಂದೂ, ಇದು ಒಂಬತ್ತನೆಯ ತೀರ್ಥಂಕರನಾದ ಪುಷ್ಪದಂತನ ಜನ್ಮಭೂಮಿ ಎಂದೂ ಹೇಳಲಾಗಿದೆ. ಇಲ್ಲಿಯ ದೇವಾಲಯದಲ್ಲಿ ಈ ತೀರ್ಥಂಕರನ ಮೂರ್ತಿ ಇದೆ. (ಬಿ.ಜಿ.)