ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಖನಕ
ಗೋಚರ
ಖನಕ
ವಿದುರನ ಆಪ್ತಮಿತ್ರ. ದುರ್ಯೋಧನ ವಾರಣಾವತದಲ್ಲಿ ಪಾಂಡವರಿಗಾಗಿ ಅರಗಿನ ಮನೆಯನ್ನು ಕಟ್ಟಿಸುವಾಗ ಅದರ ಮೇಲ್ವಿಚಾರಣೆಯನ್ನು ಈತನಿಗೆ ಒಪ್ಪಿಸಿದ್ದ. ಖನಕ ವಿದುರನ ಸೂಚನೆಯ ಮೇರೆಗೆ ಅಲ್ಲಿ ಒಂದು ಸುರಂಗ ಮಾರ್ಗವನ್ನು ಏರ್ಪಡಿಸಿದ. ಪಾಂಡವರು ಹಸ್ತಿನಾವತಿಯಿಂದ ವಾರಣಾವತಕ್ಕೆ ಬಂದಾಗ ಈ ವಿಚಾರವನ್ನು ವಿದುರ ಭೀಮನಿಗೆ ರಹಸ್ಯವಾಗಿ ತಿಳಿಸಿದ. ಮುಂದೆ ಅರಮನೆಗೆ ಬೆಂಕಿಬಿದ್ದಾಗ ಭೀಮಾದಿಗಳು ಗುಪ್ತಮಾರ್ಗದಿಂದ ಪಾರಾಗಲು ಇದರಿಂದ ಅನುಕೂಲವಾಯಿತು. *