ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಖುರ್ಜಾ
ಗೋಚರ
ಖುರ್ಜಾ - ಉತ್ತರಪ್ರದೇಶದ ಬುಲಂದ್‍ಶಹರ್ ಜಿಲ್ಲೆಯ ಒಂದು ಪಟ್ಟಣ. ದೆಹಲಿಯ ಆಗ್ನೇಯಕ್ಕೆ (45) ಮೈ. ದೂರದಲ್ಲಿದೆ. ಜನಸಂಖ್ಯೆ (50,242) (1971). ಇದು ಅನೇಕ ರಾಷ್ಟ್ರೀಯ ಹೆದ್ದಾರಿಗಳ ಕೂಡುದಾಣ; ಪ್ರಮುಖ ವ್ಯಾಪಾರಕೇಂದ್ರ. ಇದರ ಸುತ್ತಣ ಪ್ರದೇಶದ ಮುಖ್ಯ ಉತ್ಪನ್ನಗಳಾದ ಗೋದಿ, ಬಾರ್ಲಿ, ಜೋಳ, ಹತ್ತಿ, ಕಬ್ಬು ಇವು ಇಲ್ಲಿ ಮುಖ್ಯವಾಗಿ ವ್ಯಾಪಾರವಾಗುತ್ತವೆ. ಇಲ್ಲಿ ಅನೇಕ ಹತ್ತಿಗಿರಿಣಿಗಳುಂಟು. ಕಲಾತ್ಮಕ ಮಣ್ಣಿನ ಪಾತ್ರೆಗಳ ತಯಾರಿಕೆಗೂ ಖುರ್ಜಾ ಪ್ರಸಿದ್ಧಿ ಪಡೆದಿದೆ. ಇಲ್ಲಿಯ ಸುಂದರ ಜೈನದೇವಾಲಯ ಅಸಂಖ್ಯಾತ ಭಕ್ತರನ್ನು ಆಕರ್ಷಿಸುತ್ತದೆ. (ಎಸ್.ಎಲ್.ಕೆ.)