ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಜೇಂದ್ರ ಮೋಕ್ಷ

ವಿಕಿಸೋರ್ಸ್ದಿಂದ

ಗಜೇಂದ್ರ ಮೋಕ್ಷ

      ಆಪತ್ಕಾಲದಲ್ಲಿ ಭಗವಂತನ ನಾಮಸ್ಮರಣೆ ಮಾಡಿದರೆ ಬೆಟ್ಟದಂತೆ ಬಂದ ಕಷ್ಟಗಳು ಮಂಜಿನಂತೆ ಕರಗುವುವು ಎಂಬುದಕ್ಕೆ ಇದೊಂದು ದೃಷ್ಟಾಂತ.  ಇದನ್ನು ಭಾಗವತದಲ್ಲಿ ಪ್ರಸ್ತಾಪಿಸಲಾಗಿದೆ.

ಇಂದ್ರದ್ಯುಮ್ನ ಪಾಂಡ್ಯದೇಶದ ರಾಜ. ವಿಷ್ಣುಭಕ್ತ. ಒಮ್ಮೆ ತ್ರಿಕೂಟಾಚಲದ ಕಣೆವೆಯಲ್ಲಿ ಮೌನ ತಪಸ್ಸಿನಲ್ಲಿದ್ದಾಗ ತನ್ನಲ್ಲಿಗೆ ಬಂದ ಅಗಸ್ತ್ಯ ಮಹರ್ಷಿಯನ್ನು ಗೌರವಿಸದ ಕಾರಣ ಋಷಿ ಶಾಪಕ್ಕೆಡೆಯಾಗಿ ಗಜ ಜನ್ಮ ಪಡೆದ. ಹೀಗೆ ಇಂದ್ರದ್ಯುಮ್ನ ಆನೆಯಾಗಿ ಕೊಳದಲ್ಲಿ ನೀರು ಕುಡಿಯುತ್ತಿದ್ದಾಗ ಮೊಸಳೆಯೊಂದು ಬಂದು ಆತನ ಕಾಲು ಹಿಡಿಯಿತು. ಏನು ಮಾಡಿದರೂ ತನ್ನನ್ನು ಮೊಸಳೆ ಬಿಡದೆ ಇದ್ದುದನ್ನು ಕಂಡು ಇಂದ್ರದ್ಯುಮ್ನನಿಗೆ ಪೂರ್ವಜನ್ಮದ ಸ್ಮರಣೆಯುಂಟಾಗಿ ಬಿಡುಗಡೆಯಾಗಿ ವಿಷ್ಣುವನ್ನು ಪ್ರಾರ್ಥಿಸಿದ. ಆಗ ವಿಷ್ಣು ಪ್ರತ್ಯಕ್ಷನಾಗಿ ಮೊಸಳೆಯನ್ನು ಕೊಂದು ಇಂದ್ರದ್ಯುಮ್ನ ಶಾಪಮುಕ್ತನಾಗುವಂತೆ ಮಾಡಿದ. *