ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುದ

ವಿಕಿಸೋರ್ಸ್ ಇಂದ
Jump to navigation Jump to search

ಠರಗರುಳಿನ ನಾಳದ ಕೆಳಕೊನೆಯ ಕಂಡಿ (ಏನಸ್). ಇದನ್ನು ಸ್ನಾಯುಗಳು ಸುತ್ತುವರಿದಿವೆ. ಮಲ ಹೊರದೂಡಿಕೆಯನ್ನು ಹತೋಟಿಗೊಳಿಸುವ ಈ ಸ್ನಾಯುಗಳಿಗೆ ಗುದವನ್ನು ಕುಗ್ಗಿಸುವ ಸ್ನಾಯು (ಏನಲ್ ಸ್ಪಿಂಕ್ಚರ್) ಎಂದು ಹೆಸರಿಸಲಾಗಿದೆ. ಇದು ಕುಗ್ಗಿದಾಗ ಒಳಪಕ್ಕದಲ್ಲಿರುವ ಲೋಳೆ ಪೊರೆಯೂ ಹೊರಗಡೆ ಇರುವ ಚರ್ಮವೂ ಸುಕ್ಕುಗಟ್ಟುತ್ತವೆ. ಗುದದೊಳಗಿರುವ ಲೋಳೆಪೊರೆಯಲ್ಲಿನ ಅಪಧಮನಿಗಳು ಬಲವಿಲ್ಲದವಾಗಿ, ಹಿಗ್ಗಿ ರಕ್ತ ಗೂಡಿರುವುದಕ್ಕೆ ಮೊಳೆಗಳು (ಪೈಲ್ಸ್‌) ಎಂದು ಹೆಸರು. ಇವು ಕೆಲವು ಸಂದರ್ಭಗಳಲ್ಲಿ ಗುದದಿಂದ ಹೊರಗೂ ಕಾಣಿಸಿಕೊಳ್ಳುವುವು. ಕೆಲವೇಳೆ ಮಲ ವಿಸರ್ಜನೆಯೊಂದಿಗೆ ನೋವಿಲ್ಲದೆಯೇ ಇವುಗಳಿಂದ ರಕ್ತ ಸುರಿದು ಹೋಗಬಹುದು.