ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುರು 2

ವಿಕಿಸೋರ್ಸ್ದಿಂದ

ಗುರು 2

ಸೌರವ್ಯೂಹದಲ್ಲಿ ಅತ್ಯಂತ ದೊಡ್ಡ ಗಾತ್ರದ ಗ್ರಹ; ಸೂರ್ಯನ ಸುತ್ತಲೂ ಕಕ್ಷಿಸುತ್ತಿರುವ ಒಂಬತ್ತು ಗ್ರಹಗಳನ್ನು ಸೂರ್ಯನಿಂದ ಅವುಗಳ ದೂರಾನುಸಾರ ಪಂಕ್ತಿಸಿದರೆ ಇದರ ಸ್ಥಾನ ಐದನೆಯದು. ಬಾಹ್ಯ ಗ್ರಹಗಳಲ್ಲಿ (ಜ್ಯೂಪಿಟರ್) ಗುರು ಮೊದಲನೆಯದು. ಇದರ ಸೂರ್ಯಪಾಶ್ರ್ವದಲ್ಲಿ ಮಂಗಳದ ಕಕ್ಷೆಯೂ ಎದುರುಪಾಶ್ರ್ವದಲ್ಲಿ ಶನಿಯ ಕಕ್ಷೆಯೂ ಇವೆ. ಮಂಗಳ ಹಾಗೂ ಗುರು ಕಕ್ಷೆಗಳ ನಡುವೆ ಕ್ಷುದ್ರಗ್ರಹಗಳ ಹೊನಲು ಸಹ ಉಂಟು.

ಗಾತ್ರ ಮತ್ತು ದ್ರವ್ಯರಾಶಿ: ಗುರುವಿನ ಸರಾಸರಿ ವ್ಯಾಸ 1,38,058 ಕಿ.ಮೀಗಳು (ಭೂಮಿ 7.927) . ಮೇರುವ್ಯಾಸ (ಠಿ) ಸುಮಾರು 1,33,308 ಕಿ.ಮೀ ಮತ್ತು ಸಮಭಾಜಕೀಯವ್ಯಾಸ (e) ಸುಮಾರು 1,42,807ಕಿ.ಮೀ. ಈ ವ್ಯತ್ಯಾಸ ಗಮನಾರ್ಹ. ಇದಕ್ಕೆ ಮೇರುಚಪ್ಪಟೆತನದ ಪ್ರಮಾಣ ಎಂದು ಹೆಸರು. ಇದರ ಬೆಲೆ (e-ಠಿ) / e ಎಂದರೆ ಸುಮಾರು 1/15. ಭೂಮಿಯ ಚಪ್ಪಟೆತನದ ಬೆಲೆ ಸುಮಾರು 1 / 297. ಸೌರವ್ಯೂಹದ ಗ್ರಹಗಳ ಪೈಕಿ ಅತ್ಯಧಿಕ ಚಪ್ಪಟೆತನವಿರುವುದು ಶನಿಗ್ರಹಕ್ಕೆ (1/9.5); ಎರಡನೆಯ ಸ್ಥಾನ ಗುರುವಿಗೆ ಸಲ್ಲುತ್ತದೆ. ಗುರುವಿನ ಘನಗಾತ್ರದಲ್ಲಿ 1,200ಕ್ಕಿಂತಲೂ ಹೆಚ್ಚು ಭೂಮಿಗಳನ್ನು ತುಂಬಬಹುದು. ಆದರೆ ಗುರುವಿನ ದ್ರವ್ಯರಾಶಿ ಈ ಗಾತ್ರಾನುಸಾರ ಬೃಹತ್ತಾಗಿಲ್ಲ. ಗುರುವಿನ ಸರಾಸರಿ ಸಾಂದ್ರತೆ 1.35 (ಭೂಮಿಯದು 5.52). ಸೌರವ್ಯಾಸದ 1/10ಕ್ಕಿಂತ ಸ್ವಲ್ಪ ಹೆಚ್ಚು ಉದ್ದದ ವ್ಯಾಸವಿರುವ ಗುರುವಿನ ದ್ರವ್ಯರಾಶಿ ಸೌರವ್ಯೂಹದ ಇತರ ಎಲ್ಲ ಗ್ರಹಗಳ ದ್ರವ್ಯರಾಶಿಗಿಂತ 2.5 ಪಟ್ಟು ಜಾಸ್ತಿ ಉಂಟು. ಸೂರ್ಯ ಮತ್ತು ಗುರು ದ್ರವ್ಯರಾಶಿಗಳು 1000:1 ನಿಷ್ಪತ್ತಿಯಲ್ಲಿವೆ. ಭೂಮಿ ಮತ್ತು ಗುರು ದ್ರವ್ಯರಾಶಿಗಳ ನಿಷ್ಪತ್ತಿ 1:318. ಗುರುತಲದಲ್ಲಿ ಗುರುತ್ವ ಭೂತಲದ 2.64 ಪಟ್ಟು ಹೆಚ್ಚಿಗೆ ಉಂಟು. ಆದ್ದರಿಂದ ಭೂತಲದಲ್ಲಿ 150 ಪೌಂಡ್ ತೂಗುವ ಒಬ್ಬ ವ್ಯಕ್ತಿ ಗುರುತಲದಲ್ಲಿ 396 ಪೌಂಡ್ ತೂಗುತ್ತಾನೆ. ಹೀಗಾಗಿ ಗುರುವಿನ ಮೇಲೆ ಇಳಿಯಬಹುದಾದ ಮನುಷ್ಯನ ಕಾಲುಗಳು ದೇಹದ ಏರಿದ ತೂಕವನ್ನು ಹೊರಲಾಗದೆ ಕುಸಿದರೆ ಆಶ್ಚರ್ಯವಿಲ್ಲ. ಗುರುತಲದಲ್ಲಿ ವಿಮೋಚನವೇಗ (ಎಂದರೆ, ಗ್ರಹದ ಗುರುತ್ವಾಕರ್ಷಣ ಬಲದ ಅಪ್ಪುಗೆಯಿಂದ ಬಿಡುಗಡೆಗೊಂಡು ಆಕಾಶಯಾನ ಮಾಡಲು ಬೇಕಾಗುವ ಪ್ರಾರಂಭಿಕ ಕನಿಷ್ಠ ವೇಗ; ಎಸ್ಕೇಪ್ ವೆಲಾಸಿಟಿ) ಸೆಕೆಂಡಿಗೆ 60ಕಿ.ಮೀ (ಭೂಮಿ 7). ಸೌರವ್ಯೂಹದ ಬೇರೆ ಎಲ್ಲ ಗ್ರಹಗಳ ವಿಮೋಚನ ವೇಗಗಳೂ ಇದಕ್ಕಿಂತ ಕಡಿಮೆ. ಇಷ್ಟು ಹಿರಿದಾದ ವಿಮೋಚನ ವೇಗವಿರುವುದರಿಂದ, ಎಂದರೆ ಗುರು ತನ್ನ ಪರಿಸರದಲ್ಲಿ ಅಷ್ಟೊಂದು ಬಲಯುತವಾಗಿ ವಸ್ತುಗಳನ್ನು ತಲದೆಡೆಗೆ ಸೆಳೆಯುವುದರಿಂದ, ಗುರು ತನ್ನನ್ನು ಆವರಿಸಿರುವ ಎಲ್ಲ ಬಗೆಯ ಅನಿಲಗಳನ್ನೂ ಉಳಿಸಿಕೊಳ್ಳಬಲ್ಲುದು.

ಕಕ್ಷೆ: ಸೂರ್ಯನ ಸುತ್ತ ಗುರುವಿನ ಕಕ್ಷೆ ಒಂದು ದೀರ್ಘವೃತ್ತ. ಇದರ ಒಂದು ನಾಭಿಯಲ್ಲಿ ಸೂರ್ಯ ಉಂಟು. ಸೂರ್ಯನಿಂದ ಗುರುವಿನ ಸರಾಸರಿ ದೂರ 7,78,113 ಮಿಲಿಯನ್ ಕಿ.ಮೀ. (ಭೂಮಿ 92.9 ಮಿ.) ಎಂದರೆ 5.2028 ಖಗೋಲಮಾನಗಳು (ಭೂಮಿ 1). ಸೂರ್ಯ-ಗುರು ಅತಿಸಮೀಪವಾಗಿರುವಾಗ (ಸೂರ್ಯನೀಚಬಿಂದು) ಅವುಗಳ ನಡುವಿನ ದೂರ (ಜ1) 459.8 ಮಿ.ಮೈ., ಅವು ಅತಿ ದೂರವಾಗಿರುವಾಗ (ಸೂರ್ಯೋಚ್ಚಬಿಂದು) ಈ ದೂರ (ಜ2). 815.95 ಮಿ.ಕಿ.ಮೀ. ಆದ್ದರಿಂದ ಗುರುಕಕ್ಷೆಯ (ದೀರ್ಘವೃತ್ತದ) ಉತ್ಕೇಂದ್ರತೆ e = (ಜ2-ಜ1)/(ಜ2+ಜ1) ಎಂದರೆ 0.048 (ಭೂಮಿ 0.017). ಕಕ್ಷೆಯ ಅಂಡಾಕೃತಿ ಹೆಚ್ಚಾದಂತೆ, ಎಂದರೆ ದೀರ್ಘವೃತ್ತಾಕಾರದಲ್ಲಿ ದೀರ್ಘಾಕ್ಷ ಹಾಗೂ ಹ್ರಸ್ವಾಕ್ಷಗಳ ನಡುವಿನ ವ್ಯತ್ಯಾಸ ಏರಿದಂತೆ, ಉತ್ಕೇಂದ್ರತೆ ಹೆಚ್ಚಾಗುತ್ತದೆ. ಆದ್ದರಿಂದ ಭೂಮಿಕಕ್ಷೆಗೆ ಹೋಲಿಸುವಾಗ ಗುರುಕಕ್ಷೆ ಹೆಚ್ಚಿನ ದೀರ್ಘವೃತ್ತತ್ವವನ್ನು ಪ್ರದರ್ಶಿಸುತ್ತದೆ. ಉತ್ಕೇಂದ್ರತೆಯ ದೃಷ್ಟಿಯಿಂದ ಸೌರವ್ಯೂಹದ ಗ್ರಹಗಳ ಪೈಕಿ ಗುರುವಿಗೆ ನಾಲ್ಕನೆಯ ಸ್ಥಾನ (ಮೊದಲಿನ ಮೂರು ಅನುಕ್ರಮವಾಗಿ ಪ್ಲೂಟೋ, ಬುಧ, ಶನಿ). ಗುರುವಿನ ಕಕ್ಷಾತಲ ಕ್ರಾಂತಿ ವೃತ್ತತಲಕ್ಕೆ 10 18ಗಳಷ್ಟು ಬಾಗಿದೆ (ಅಬ್ಲೀಕ್ವಿಟಿ). (ಕ್ರಾಂತಿವೃತ್ತತಲವೇ ಭೂಮಿಯ ಕಕ್ಷಾತಲವೆಂಬುದನ್ನು ಗಮನಿಸಬೇಕು). ಯುರೇನಸ್ ಕಕ್ಷೆಯ (ಬಾಗು 00 46) ಬಳಿಕ ಕನಿಷ್ಠ ಬಾಗುವಿರುವುದು ಗುರುಕಕ್ಷೆಯೇ. ಭೂಮಿ ಮತ್ತು ಗುರು ಪರಸ್ಪರ ಅತಿ ಸಮೀಪ ಬಂದಾಗ ಅವುಗಳ ನಡುವಿನ ದೂರ ಸುಮಾರು 588 ಕಿ.ಮೀ ಸೆಕೆಂಡಿಗೆ 2,99,460ಕಿ.ಮೀ. ದೂರವನ್ನು ಕ್ರಮಿಸುವ ಬೆಳಕಿನ ಕಿರಣಕ್ಕೆ ಈ ಕನಿಷ್ಠ ದೂರವನ್ನು ಕ್ರಮಿಸಲು ಸುಮಾರು 33 ಮಿನಿಟುಗಳೇ ಬೇಕು ಎನ್ನುವಾಗ ಈ ದೂರದ ಅಗಾಧತೆಯ ಅರಿವಾದೀತು. ಗುರುವಿನ ಸರಾಸರಿ ಕಕ್ಷಾವೇಗ ಸೆಕೆಂಡಿಗೆ 13 ಕಿ.ಮೀ. (ಭೂಮಿ 18.5). ಗುರುವಿನ ವರ್ಷ (ಎಂದರೆ ಸೂರ್ಯನನ್ನು ಒಂದು ಸಲ ಪರಿಭ್ರಮಿಸಲು ಬೇಕಾಗುವ ಅವಧಿ) 11,862 ಭೂ ವರ್ಷಗಳು; ಆವರ್ತನಾವಧಿ (ಎಂದರೆ ತನ್ನ ಅಕ್ಷದ ಸುತ್ತ ಒಂದು ಸಲ ತಿರುಗಲು ಬೇಕಾಗುವ ಕಾಲ; ಭೂಮಿಯನ್ನು ಕುರಿತು ಹೇಳುವಾಗ ಇದನ್ನು ದಿವಸವೆನ್ನುತ್ತೇವೆ). 9 ಗಂ. 56 ಮಿ. (ಭೂಮಿಯ ಆವರ್ತನಾವಧಿ, ಎಂದರೆ ದಿವಸ, 23 ಗಂ. 56ಮಿ.) ಆದ್ದರಿಂದ ಗುರುಮಿನ ಆವರ್ತನ ವೇಗ ಬಲು ತೀವ್ರ. ಈ ದೃಷ್ಟಿಯಿಂದ ಗುರುವಿಗೆ ಸೌರವ್ಯೂಹದಲ್ಲಿ ಪ್ರಥಮ ಸ್ಥಾನ. ಹಿರಿಗಾತ್ರ; ಕ್ಷಿಪ್ರತಮ ಆವರ್ತನ ವೇಗ ಇವುಗಳ ಪರಿಣಾಮವಾಗಿ ಗುರುವಿನ ಚಪ್ಪಟೆತನ ಅಧಿಕವಾಗಿರುವುದು ಸಹಜ.

ಭೌತಸ್ಥಿತಿ : ಉಷ್ಣದ ಪ್ರಮುಖ ಆಕರವಾದ ಸೂರ್ಯ ಬಲು ದೂರದಲ್ಲಿರುವುದರಿಂದ ಗುರುವಿನಲ್ಲಿ ಅತಿ ಶೈತ್ಯ ಪರಿಸರವನ್ನು ನಿರೀಕ್ಷಿಸುವುದು ಸಹಜ. ಸ್ವತಃ ಬೆಳಕು ಇಲ್ಲದ ಈ ಗ್ರಹವನ್ನು ಕುರಿತ ಹೆಚ್ಚಿನ ಮಾಹಿತಿ ನಮಗೆ ದೊರೆಯುವುದು ಗುರು ಪ್ರತಿಫಲಿಸುವ ಸೌರ ಬೆಳಕಿನ ವೀಕ್ಷಣೆಯಿಂದ. ಪ್ರಕಾಶದ ದೃಷ್ಟಿಯಿಂದ ಸೌರವ್ಯೂಹದ ಗ್ರಹಗಳಲ್ಲಿ ಶುಕ್ರನಿಗೆ ಪ್ರಥಮ ಸ್ಥಾನ. ಮಂಗಳದ ಕೆಲವು ವಿಶೇಷ ಸನ್ನಿವೇಶಗಳಲ್ಲದಿದ್ದರೆ ಗುರುವಿಗೇ ದ್ವಿತೀಯ ಸ್ಥಾನ. ದೂರ ದರ್ಶಕವೀಕ್ಷಣೆಗೆ ಅರ್ಧಕ್ಕಿಂತ ಹೆಚ್ಚಿನ ಬಿಂಬವನ್ನು (ಉದಾ-ಶುದ್ಧ ಅಷ್ಟಮಿ ಚಂದ್ರ) ಸದಾ ಪ್ರದರ್ಶಿಸುವ ಗ್ರಹವಿದು. ಇದರ ಪ್ರತಿಫಲನ ಸಾಮಥ್ರ್ಯ (ಆಲ್ಬೆಡೊ) 0.51. ಗುರು ಬಿಂಬವನ್ನು ಬೆಳಕು ಮತ್ತು ಕತ್ತಲೆಯ ಪಟ್ಟೆಗಳು ಪರ್ಯಾಯ ಮೋಡಗಳೆಂದು ನಂಬಲಾಗಿದೆ. ಏಕೆಂದರೆ ಇವುಗಳಲ್ಲಿನ ವಿವರಗಳು ಕ್ರಮೇಣ ಬದಲಾಗುವುದು ಕಂಡುಬಂದಿದೆ, ಅಲ್ಲದೆ ಆವರ್ತನಾವಧಿ (ದಿವಸ) ಗುರುವಿನ ಒಂದೊಂದು ಭಾಗದಲ್ಲಿ ಒಂದೊಂದು ಬೆಲೆಯನ್ನು ಪಡೆದಿದೆ. ನಾವು ನೇರವಾಗಿ ಗ್ರಹದ ಘನ ತಲವನ್ನೇ ನೋಡುತ್ತಿದ್ದರೆ ಇಂಥ ದೃಶ್ಯಗಳು ಗೋಚರವಾಗುತ್ತಿರಲಿಲ್ಲ. ಮೇಲೆ ಹೇಳಿದ ಬೆಳಕಿನ ಪಟ್ಟೆಗಳು ಪೂರ್ಣ ಬಿಳಿಯಾಗಿಲ್ಲ- ಅರಿಸಿನ, ಕೆಂಪು ಮತ್ತು ಕೆಲವು ವೇಳೆ ನೀಲಿ ಬಣ್ಣಗಳನ್ನು ಪ್ರದರ್ಶಿಸುತ್ತವೆ. ಇಂಥ ವಿನ್ಯಾಸಗಳ ಪೈಕಿ ಅತ್ಯಂತ ವೈಶಿಷ್ಟ್ಯ ಪೂರ್ಣವಾದದ್ದೆಂದರೆ 1831 ರಷ್ಟು ಹಿಂದೆಯೇ ದೂರದರ್ಶಕದ ಮೂಲಕ ವೀಕ್ಷಿಸಿದ ಮಹಾ ಕೆಂಪು ಮಚ್ಚೆ. ಇದರ ಗಾತ್ರ ಮತ್ತು ಆಕಾರದಲ್ಲಿ ಮಾತ್ರವಲ್ಲ ಬಣ್ಣದಲ್ಲಿ ಕೂಡ ಅಲ್ಪಸ್ವಲ್ಪ ಬದಲಾವಣೆಗಳನ್ನು ಗಮನಿಸಲಾಗಿದೆ. ಮಚ್ಚೆಯ ಸರಾಸರಿ ಉದ್ದ 48,300ಕಿ.ಮೀ ಮತ್ತು ಅಗಲ 16100ಕಿ.ಮೀ ದ್ರವ ಅಥವಾ ಘನ ಕಣಗಳ ಒಂದು ಮಹಾ ತೇಲುದ್ವೀಪವೇ ಇದಾಗಿರಬಹುದೆಂದು ಊಹಿಸಿದ್ದುಂಟು. ಆದರೆ ಈ ಕಣಗಳ ಸ್ವರೂಪ ಏನು? ದ್ವೀಪ ತೇಲುತ್ತಿರುವುದಾದರೆ ಅದನ್ನು ಭರಿಸಿರುವ ವಸ್ತುವಿನ ಗತಿವೈಜ್ಞಾನಿಕ ಸ್ಥಿತಿ ಏನು ? ಇವೇ ಮುಂತಾದ ವಿಚಾರಗಳಿಗೆ ಪರಿಹಾರ ಲಭಿಸಿಲ್ಲ. ಗುರುವಿನ ಉಷ್ಣತೆ ಸುಮಾರು 1300 ಕೆ. ಹೈಡ್ರೊಜನ್ (80%) ಮತ್ತು ಹೀಲಿಯಂ (15%) ವಿಪುಲವಾಗಿಯೂ ನೈಟ್ರೊಜನ್, ನಿಯಾನ್ ಮತ್ತು ಇತರ ಜಡಾನಿಲಗಳು ಸಾಕಷ್ಟು ವ್ಯಾಪಕವಾಗಿಯೂ ಗುರುವಿನಲ್ಲಿ ಇವೆಯೆಂದು ನಂಬಲಾಗಿದೆ. ಗುರುವಿನಿಂದ ಬರುವ ಬೆಳಕಿನ ರೋಹಿತವೀಕ್ಷಣೆಯಿಂದ ಅಲ್ಲಿ ಅಮೋನಿಯ ಹಾಗೆ ಮೀಥೇನ್ ಯಥೇಚ್ಛವಾಗಿವೆಯೆಂದು ತಿಳಿದಿದೆ. ಗುರುವಿನ ಮೋಡಗಳನ್ನು ಭೇದಿಸಿ ಸುಮಾರು 242ಕಿ.ಮೀಗಳಷ್ಟು ಆಳಕ್ಕೆ ಇಳಿದರೆ ಗಟ್ಟಿ ತಳ ದೊರೆಯಬಹುದೆಂದು ಊಹೆ. ಆದರೆ ಈ ದಿಶೆಯಲ್ಲಿ ಯಾವ ಪ್ರತ್ಯಕ್ಷ ಪ್ರಯೋಗಗಳೂ ನಡೆದಿಲ್ಲ. ಉಪಕರಣಸಮೇತವಾದ ಅನ್ವೇಷಕ ಆಕಾಶನೌಕೆ ಗೆಲಿಲಿಯೊ ಗುರುವಿನ ತಳದಲ್ಲಿ ಇಳಿದು ಅಲ್ಲಿಂದ ರೇಡಿಯೋ ಸ್ಪಂದನಗಳನ್ನು ಪ್ರೇಷಿಸಿಲು ಪ್ರಯತ್ನಿಸಿತು. ಅಮೆರಿಕ ಹಾರಿಬಿಟ್ಟ ಪಯೋನೀರ್ ಆಕಾಶನೌಕೆಗಳು ಗುರುವಿನ ಅನ್ವೇಷಣೆ ನಡೆಸಿವೆ. ಗೆಲಿಲಿಯೊ ಎಂಬ ನೌಕೆ ಸುಮರು 10ವರ್ಷ ಅಧ್ಯಯನ ನಡೆಸಿತು.

ಉಪಗ್ರಹಗಳು : ಗುರುವಿಗೆ 12 ಉಪಗ್ರಹಗಳಿವೆ. ಈಗ (2004) ಈ ಸಂಖ್ಯೆ 60ನ್ನು ದಾಟಿದೆ; ಬೇರಾವ ಗ್ರಹಕ್ಕೂ ಇಷ್ಟು ಸಂಖ್ಯೆಯಲ್ಲಿ ಉಪಗ್ರಹಗಳಿಲ್ಲ. ಈ ಉಪಗ್ರಹಗಳ ಕೆಲವು ವಿವರಗಳನ್ನು ಮುಂದಿನ ಯಾದಿಯಲ್ಲಿ ಕೊಟ್ಟಿದೆ. ಗುರುವಿನಿಂದ ಉಪಗ್ರಹಗಳ ದೂರ ಏರತ್ತಿರುವ ಕ್ರಮದಲ್ಲಿ ಅವನ್ನು ಅಳವಡಿಸಿದೆ.

ಉಪಗ್ರಹದ ಹೆಸರು

ಆವಿಷ್ಕರ್ತೃ ಮತ್ತು ಆವಿಷ್ಕರಣ ವರ್ಷ ಗುರುವಿನಿಂದ ಸರಾಸರಿ ದೂರ ಕಿ.ಮೀ.ಗಳಲ್ಲಿ ಪರಿಭ್ರಮಣ ಅವಧಿ ದಿ-ಗಂ.-ಮಿ. ವ್ಯಾಸ ಕಿ.ಮೀ.ಗಳಲ್ಲಿ

ಐದನೆಯದು ಬಾರ್ನಾರ್ಡ್ 1892 1,81,930 1 11 53

    240?

I ಅಯೋ ಗೆಲಿಲಿಯೋ 1610 4,21,820 1 18 28 3,200

II ಯುರೋಪಾ ಗೆಲಿಲಿಯೋ 1610 6,71,370 3 13 14 2,880

III ಗನಿಮೀಡ್ ಗೆಲಿಲಿಯೋ 1610 10,72,260

7 3 43

4,960

Iಗಿ ಕಲಿಸ್ಟೊ ಗೆಲಿಲಿಯೋ 1610 18,83,700

16 16 32

4,480


ಆರನೇಯದು ಪೆರೈನ್ 1904 1,14,63,200 250 14

   160? 


ಏಳನೇಯದು ಪೆರ್ರೈನ್ 1905 1,17,36,900 259 14

     56?


ಹತ್ತನೆಯದು ನಿಕೊಲ್ಸನ್ 1938 1,17,53,000 260 12

     24?


ಹನ್ನೆರಡನೆಯದು ನಿಕೊಲ್ಸನ್ 1951 2,09,30,000 625

     22?


ಹನ್ನೊಂದನೆಯದು ನಿಕೊಲ್ಸನ್ 1938 2,25,40,000 700

     30?


ಎಂಟನೆಯದು ಮೆಲೋಟ್ 1908 2,35,06,000 739

      56?


ಒಂಬತ್ತನೆಯದು ನಿಕೊಲ್ಸನ್ 1914 2,36,67,000 758

      27?


ಗುರುವಿನ ಗಾತ್ರದೊಡನೆ ಹೋಲಿಸುವಾಗ ಈ ಉಪಗ್ರಹಗಳು ಯಾವುದಕ್ಕೂ ಭೂಮಿಯ ಗಾತ್ರದೊಡನೆ ಹೋಲಿಸುವಾಗ ಚಂದ್ರನಿಗೆ ಒದಗುವ ಹಿರಿಮೆ ಪ್ರಾಪ್ತವಾಗುವುದಿಲ್ಲ. ಕೆಳಗೆ ಬರೆದಿರುವ ಯಾದಿ ಈ ಅಂಶವನ್ನು ಸ್ಪಷ್ಟಪಡಿಸುತ್ತದೆ. ಉಪಗ್ರಹದ ಹೆಸರು ಮಾತೃಗ್ರಹದ ಹೆಸರು ಉಪಗ್ರಹದ


ವ್ಯಾಸ ಮೂ.ಗ್ರ. = 1 ದ್ರವ್ಯರಾಶಿ ಮೂ.ಗ್ರ. = 1 ಮಾತೃಗ್ರಹದಿಂದ ಸರಾಸರಿ ದೂರ ಮೂ.ಗ್ರ. = 1

ಚಂದ್ರ ಅಯೋ ಯುರೋಪಾ ಗನಿಮಿಡ್ ಕಲಿಸ್ಟೊ ಭೂಮಿ ಗುರು ಗುರು ಗುರು ಗುರು 0.28 0.02 0.02 0.04 0.03 0.01 0.00005 0.00003 0.00008 0.00005 30 3 5 8 13


ಗುರುವಿನ ಮೊದಲ ಐದು ಒಳ ಉಪಗ್ರಹಗಳಿಗೆ (ನಾಲ್ಕು ಗೆಲಿಲಿಯನ್ ಉಪಗ್ರಹಗಳನ್ನೂ ಒಳಗೊಂಡಂತೆ) ಸನ್ನಿಹಿತವಾಗಿ ವರ್ತುಳೀಯ ಕಕ್ಷೆಗಳಿವೆ. ಅವು ಗ್ರಹದ ಸಮಭಾಜಕೀಯ ತಲದ ಒತ್ತಿಗೆ ಇವೆ. ಉಳಿದ ಏಳು ಹೊರ ಉಪಗ್ರಹಗಳಿಗೆ ಉತ್ಕೇಂದ್ರಿಯ ಕಕ್ಷೆಗಳಿವೆ. ಕೆಲವು ಕಕ್ಷೆಗಳಂತೂ ಸಮಭಾಜಕೀಯ ತಲಕ್ಕೆ ವಿಪರೀತ ಬಾಗಿಕೊಂಡು ಕೂಡ ಇವೆ. ತೀರ ಹೊರಗಿನ ನಾಲ್ಕು ಉಪಗ್ರಹಗಳು ಗುರುವಿನ ಸುತ್ತ ಪೂರ್ವದಿಂದ ಪಶ್ಚಿಮಕ್ಕೆ ಪರಿಭ್ರಮಿಸುತ್ತವೆ. ಸೌರವ್ಯೂಹದ ಹೆಚ್ಚಿನ ಕಾಯಗಳ ಚಲನೆಗಿಂತ ಭಿನ್ನವಾದ ಚಲನೆಯಿದು. ಗುರುವಿನ ಉಪಗ್ರಹ ಗಾನಿಮಿಡ್‍ಗೆ ವಾಯುಮಂಡಲ ಇರುವುದು ಕಂಡುಬಂದಿದೆ.

ಪುರಾಣಗಳಲ್ಲಿ ಗುರು : ಒಂಬತ್ತು ಗ್ರಹಗಳಲ್ಲಿ ಒಂದು. ಜೀವ, ಆಂಗಿರಸ, ವಾಚಸ್ಪತಿ, ಬೃಹಸ್ಪತಿ, ಸೂರಿ, ಸುರಗುರು ಎಂಬ ಹೆಸರುಗಳೂ ಇವೆ. ಗುರು ದೇವತೆಗಳಿಗೆ ವಿದ್ಯೆಗಳನ್ನು ಉಪದೇಶ ಮಾಡುತ್ತಾನೆ. ಈತನನ್ನು ದೇವ ಗಂಧರ್ವ ಮನುಷ್ಯ ಮಾತ್ರದವರೆಲ್ಲ ಪೂಜಿಸುತ್ತಾರೆ. (ಎಸ್.ಎನ್.ಕೆ) ಪರಿಷ್ಕರಣೆ: ಡಾ|| ಬಿ. ಎಸ್. ಶೈಲಜಾ