ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ರೆಗರೈನ

ವಿಕಿಸೋರ್ಸ್ದಿಂದ

ಗ್ರೆಗರೈನ

ಸ್ಪೋರೊಜೋóವ ವರ್ಗದ ಗ್ರೆಗರಿನಿಡ ಗಣಕ್ಕೆ ಸೇರಿದ ಒಂದು ಬಾಹ್ಯ ಪರೋಜೀವಿ. ಎಕಿನೋಡರ್ಮೇಟ, ಮಾಲಸ್ಕ, ಅನೆಲಿಡ, ಆತ್ರ್ರಾಪೊಡ, ಮುಂತಾದ ಅಕಶೇರುಕಗಳ ಅನ್ನನಾಳದಲ್ಲಿ ವಾಸಿಸುತ್ತದೆ. ಜೀವನ ಚಕ್ರದ ಮೊದಲ ಹಂತಗಳಲ್ಲಿ ಆತಿಥೇಯ ಪ್ರಾಣಿಯ ಜೀವಕೋಶಗಳೊಳಗೆ ಇದ್ದು ಪ್ರೌಢಾವಸ್ಥೆಗೆ ಬಂದಂತೆ ಅನ್ನನಾಳ ಇಲ್ಲವೆ ದೇಹಾಂತರಾವಕಾಶಕ್ಕೆ ಬರುತ್ತದೆ. ಸಂತಾನಾಭಿವೃದ್ಧಿ ಲೈಂಗಿಕ ರೀತಿಯಲ್ಲಿ ಮಾತ್ರ. ಪರಾವಲಂಬಿಯಾದರೂ ಇದರಿಂದ ಆತಿಥೇಯ ಪ್ರಾಣಿಗೆ ಅಪಾಯವಿಲ್ಲ. (ಎಸ್.ಬಿ.ಎಂ.)