ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಾಚು ತೊಲೆ

ವಿಕಿಸೋರ್ಸ್ದಿಂದ

ಚಾಚು ತೊಲೆ

ಒಂದು ಕೊನೆ ಭದ್ರವಾಗಿ ಧರಿಸಲ್ಪಟ್ಟಿದ್ದು ಉಳಿದ ಭಾಗ ವಸ್ತುವನ್ನು ಹೊರಲು ಅಥವಾ ತೂಗು ಹೊರೆಯನ್ನು ಧರಿಸಲು ಮುಕ್ತವಾಗಿರುವ ತೊಲೆ (ಕ್ಯಾಂಟಿಲಿವರ್). ಕಿಟಕಿಗಳ ಮೇಲೆ ಹೊರಚಾಚಿಕೊಂಡಿರುವ ಚಜ್ಜ. ಕಾರ್ಖಾನೆ ರೈಲ್ವೆ ವಿಮಾನನಿಲ್ದಾಣ, ಮುಂತಾದೆಡೆಗಳಲ್ಲಿನ ಚಾವಣಿ, ವಿಶಿಷ್ಟ ನಮೂನೆಯ ಸೇತುವೆಗಳು, ತುಲಾ ಯಂತ್ರಗಳು ಇತ್ಯಾದಿಗಳನ್ನು ಚಾಚು ತೊಲೆ ತತ್ತ್ವವನ್ನು ಆಧರಿಸಿ ನಿರ್ಮಿಸಲಾಗಿದೆ.

ಚಿತ್ರ-1

ಕ್ವಿಬೆಕ್‍ನಲ್ಲಿರುವ ರೈಲು ಮಾರ್ಗದ ಸೇತುವೆ ಪ್ರಪಂಚದಲ್ಲಿನ ಅತಿ ಉದ್ದದ ಚಾಚು ತೊಲೆ ರಚನೆ (1918). ಇದರ ವಿಸ್ತøತಿ (ಸ್ಟ್ಯಾನ್) 548.64ಮೀ. ಜನ ಹಾಗೂ ದೊಡ್ಡ ವಾಹನಗಳ ಅನಿರ್ಬಂಧಿತ ಪ್ರವೇಶ, ನಿರ್ಗಮನ ಅವಿಚ್ಛಿನ್ನವಾಗಿ ನಡೆಯುತ್ತಿರುವಂಥ ರೈಲ್ವೇ ನಿಲ್ದಾಣ, ವಿಮಾಣನಿಲ್ದಾಣ, ಗೋದಾಮುಗಳು, ಕಾರ್ಖಾನೆಗಳು ಮುಂತಾದೆಡೆಗಳಲ್ಲಿ ಚಾಚು ತೊಲೆ ತತ್ತ್ವದ ಮೇಲೆ ಆಧರಿಸಿ ರಚಿಸಿದ ಚಾವಣಿಗಳು ಹೆಚ್ಚು ಉಪಯುಕ್ತ. ಈ ತತ್ತ್ವವನ್ನು ವಿಸ್ತರಿಸಿದ್ದೇ ಆದರೆ ಧ್ವಜಸ್ತಂಭ, ಗಡಿಯಾರ ಕಂಬ ಮುಂತಾದವನ್ನು ಕೂಡ ಊಧ್ರ್ವ ವಿನ್ಯಾಸದ ಚಾಚುತೊಲೆಗಳು ಎಂದು ಪರಿಗಣಿಸಬಹುದು. (ವಿ.ಡಿ.ಪಿ.)