ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜನಸಂಖ್ಯೆ

ವಿಕಿಸೋರ್ಸ್ದಿಂದ

ಪ್ರಪಂಚ ಜನಸಂಖ್ಯೆ ಒಂದು ದೇಶದಲ್ಲೋ ಅದರ ಒಂದು ಭಾಗದಲ್ಲೋ ಒಂದು ಪ್ರದೇಶದಲ್ಲೋ ಇರುವ ಜನರ ಅಥವಾ ನಿವಾಸಿಗಳ ಒಟ್ಟು ಸಂಖ್ಯೆ (ಪಾಪ್ಯುಲೇಷನ್). ಉದಾಹರಣೆ. 1971ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ 54,79,49,809. ಜನಸಂಖ್ಯೆಯನ್ನು ಕುರಿತ ಈ ಲೇಖನದಲ್ಲಿ ಕೆಳಗೆ ಕಾಣಿಸಿರುವ ವಿಭಾಗಗಳಿವೆ :

(I)ಪ್ರಪಂಚದ
 ಜನಸಂಖ್ಯಾಯ ಹಂಚಿಕೆ

(II) ಜನಸಂಖ್ಯಾ ಸಿದ್ಧಾಂತಗಳು (III) ಜನಸಂಖ್ಯಾ ವಿತರಣೆ (Iಗಿ) ಜನಸಂಖ್ಯಾ ಸಂಯೋಜನೆ (ಗಿ) ಜನಸಂಖ್ಯಾ ಬೆಳವಣಿಗೆ (ಗಿI) ಜನಸಂಖ್ಯಾ ಅನುಗಣನೆ ಮತ್ತು ಮುನ್ಸೂಚನೆ (ಗಿII) ಜನಸಂಖ್ಯಾ ನೀತಿ ಜನಗಣತಿ ಎಂಬ ಪ್ರತ್ಯೇಕ ಲೇಖವನ್ನೂ (ನೋಡಿ- ಜನಗಣಿತಿ)

I ಜನಸಂಖ್ಯಾ ಶಾಸ್ತ್ರ ಹುಟ್ಟು, ಮದುವೆ, ಆರೋಗ್ಯ, ಸಾವು ಇವೇ ಮೊದಲಾದ ಜೀವಾಳಾಂಕಗಳನ್ನು ಕುರಿತಂತೆ (ವೈಟಲ್ ಸ್ಟ್ಯಾಟಿಸ್ಟಿಕ್ಸ್) ಜನಸಂಖ್ಯೆಗಳ ಸಂಖ್ಯಾಕಲನೀಯ ಅಧ್ಯಯನ (ಡಿಮಾಗ್ರಫಿ) ಇದು ಸಾಮಾನ್ಯವಾಗಿ ಭೌತಪರಿಸ್ಥಿತಿಗಳಿಗೆ, ಇಲ್ಲವೇ ಮೇಲೆ ಹೇಳಿದ ಜೀವನಾಂಕಗಳಿಗೆ ಮಾತ್ರ ಸೀಮಿತವಾಗಿದ್ದರೂ ನೈತಿಕ ಮತ್ತು ಬೌದ್ಧಿಕ ಪರಿಸ್ಥಿತಿಗಳಿಗೆ ಕೂಡ ಇದನ್ನು ಅನ್ವಯಿಸಲಾಗುತ್ತದೆ. ಜನಗಣಿತಿಯಲ್ಲಿ ಸಂಗ್ರಹಿಸಲಾದ ದತ್ತಾಂಶಗಳೂ ಜೀವಾಳಾಂಕಗಳು ಪ್ರತಿದರ್ಶ ಸರ್ವೇಕ್ಷಣಗಳಿಂದ (ಸ್ಯಾಂಪಲ್ ಸರ್ವೇ) ಲಭ್ಯವಾದ ಸಾಮಗ್ರಿಯೂ ಈ ಅಧ್ಯಯನಕ್ಕೆ ಆಧಾರ. ಮಾನವ ಜನನ, ಮರಣ, ಜನಸಂಖ್ಯಾ ಚಲನೆ, ಜನಸಂಖ್ಯೆಯ ಬೆಳವಣಿಗೆ ಮುಂತಾದ ಮೂಲಪ್ರಕ್ರಿಯೆಗಳಲ್ಲಿ ಕಂಡು ಬರುವ ಸಾಮಾನ್ಯ ಪ್ರವೃತ್ತಿಗಳನ್ನೂ ಸೂತ್ರಗಳನ್ನೂ ಆವಿಷ್ಕರಿಸುವುದು. ಅವನ್ನು ಅಳೆಯುವುದು ಇದರ ಮುಖ್ಯ ಉದ್ದೇಶ. ಈ ವಿದ್ಯಮಾನಗಳನ್ನು ಅವುಗಳ ಸಾಮಾಜಿಕಾರ್ಥಿಕ ಹಾಗೂ ಜೈವಿಕ ಹಿನ್ನಲೆಗಳಲ್ಲಿ ಅಧ್ಯಯನ ಮಾಡಲಾಗುತ್ತದೆ. ಅನುಭವಜನ್ಯಸೂತ್ರಗಳನ್ನೂ ಸಂಖ್ಯಾಕಲನೀಯ ವಿಧಾನಗಳನ್ನು ಇಲ್ಲಿ ಬಳಸಲಾಗುತ್ತದೆ. ಸಮಾಜವಿಜ್ಞಾನದ ಇತರ ಶಾಖೆಗಳಂತೆ ಇಲ್ಲೂ ಗಣಿತದ ನೆರವನ್ನು ವಿಶೇಷವಾಗಿ ಪಡೆದುಕೊಳ್ಳಲಾಗುತ್ತದೆ. ಮಾನವಶಾಸ್ತ್ರ, ಮನಶ್ಯಾಸ್ತ್ರಗಳಂತೆ ಜನಸಂಖ್ಯಾಶಾಸ್ತ್ರ ಕೂಡ ಸಮಾಜವಿಜ್ಞಾನಗಳಿಗೂ ಜೀವವಿಜ್ಞಾನಗಳಿಗೂ ನಡುವಣ ಸೇತುವೆಯಂತಿದೆ.

	ಜನಸಂಖ್ಯಾ ಶಾಸ್ತ್ರದ ಶುದ್ಧ ಅಥವಾ ಸಂಪ್ರದಾಯಬದ್ಧ ವ್ಯಾಖ್ಯೆಯ ಪ್ರಕಾರ ಅದೊಂದು ನಿಷ್ಕøಷ್ಟವಾದ ಅಧ್ಯಯನಾಂಗ ; ಅದಕ್ಕೆ ಗಣಿತೀಯ ವಿಧಾನವೊಂದುಂಟು. ಜನಸಂಖ್ಯಾ ವ್ಯತ್ಯಾಸದ-ವಿಶೇಷವಾಗಿ ಜನನ, ಮರಣ, ಮತ್ತು ಸ್ವಲ್ಪಮಟ್ಟಿಗೆ ಜನವಲಸೆಯ-ವಿವಿಧಾಂಗಗಳ ವಿಶ್ಲೇಷಣೆ ಹಾಗೂ ಮಾಪನ ಮಾಡುವುದು ಮುಖ್ಯವಾಗಿ ಇದರ ಉದ್ದೇಶ. ಜನಸಂಖ್ಯೆಯ ಬದಲಾವಣೆಯನ್ನರಿತುಕೊಳ್ಳಲು ಈ ಅಧ್ಯಯನ ಸಾಧಕವಾಗುತ್ತದೆ.

ಸಮಾಜವಿಜ್ಞಾನಗಳಲ್ಲಿ ಗಣಿತೀಯ ಪಡಿಕಟ್ಟುಗಳನ್ನು (ಮಾಡೆಲ್ಸ್) ಅತ್ಯಂತ ಉಪಯುಕ್ತವಾದ ರೀತಿಯಲ್ಲಿ ಬಳಸುವುದು ಶುದ್ಧ ಜನಸಂಖ್ಯಾಶಾಸ್ತ್ರದಿಂದಾಗಿ ಸಾಧ್ಯವಾಗಿದೆ. ಜೀವವಿಮಾ ಮತ್ತು ಸಾಮಾಜಿಕ ಭದ್ರತಾ ವಿಮಾ ವ್ಯವಸ್ಥೆಗಳ ಜಾರಿಗೆ ಆಧಾರವಾದ ಜೀವಮಾನ ಸಾರಣೆಗಳು ಅಥವಾ ಜೀವಮಾನ ಕೋಷ್ಟಕಗಳು (ಲೈಫ್ ಟೇಬಲ್ಸ್) ಇಂಥ ನಮೂನೆಗಳಿಗೆ ಒಂದು ಉದಾಹರಣೆ. ದೀರ್ಘಕಾಲದಲ್ಲಿ ಜನನ ದರಗಳಲ್ಲಾಗಿರುವ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಅಗತ್ಯವಾದ ಪ್ರಜನ ನೈಜ ದರಗಳು (ಇಂಟ್ರಿನ್ಸಿಕ್ ರೇಟ್ಸ್ ಆಫ್ ರಿಪ್ರೊಡಕ್ಷನ್). ನಂಬಲರ್ಹವಾದ ಜೀವಾಳಾಂಕಗಳಾಗಲಿ ನಿಷ್ಕøಷ್ಟವಾದ ಜನಗಣಿತೀಯ ದತ್ತಾಂಶಗಳಾಗಲಿ ಇಲ್ಲವಾದಾಗ ಜನನ ದರಗಳನ್ನು ಮತ್ತು ಜನಸಂಖ್ಯಾ ಬೆಳವಣಿಗೆಯ ದರಗಳನ್ನು ಅಂದಾಜು ಮಾಡಲು ನೆರವಾಗುವ ಸ್ಥಿರ ಜನಸಂಖ್ಯಾ ವಿಶ್ಲೇಷಣೆ (ಸ್ಟೇಬಲ್ ಪಾಪ್ಯುಲೇಷನ್ ಅನಾಲಿಸಿಸ್), ಜನಸಂಖ್ಯಾ ವ್ಯತ್ಯಾಸಕ್ಕೆ ಕಾರಣವಾದ ವಿವಿಧಾಂಗಗಳ ಪ್ರವೃತ್ತಿಗಳ ವಿಶ್ಲೇಷಣೆಗೆ ಆಧಾರವಾದ ಜನಸಂಖ್ಯಾ ಅನುಗಣನೆಗಳು (ಪಾಪ್ಯುಲೇಷನ್ ಪ್ರೊಜೆಕ್ಷನ್ಸ್) ಇವು ಇಂಥ ಇನ್ನು ಕೆಲವು ಪಡಿಕಟ್ಟುಗಳು, ಆರ್ಥಿಕಾಭಿವೃದ್ಧಿ, ಮಾರುಕಟ್ಟೆಯ ಸಂಶೋಧನೆ ನಗರ ಯೋಜನೆ, ಶಿಕ್ಷಣಯೋಜನೆ, ಭವಿಷ್ಯದಲ್ಲಿ ಒದಗುವ ಕಾರ್ಮಿಕ ಸರಬರಾಯಿಯನ್ನು ಕುರಿತ ಅಂದಾಜು, ಉತ್ಪಾದಕರಾಗಿ ಮತ್ತು ಅನುಭೋಗಿಗಳಾಗಿ ಜನರು ಕೈಗೊಳ್ಳುವ ಚಟುವಟಿಕೆಯಗಳನ್ನು ಕುರಿತ ವಿವಿಧ ಅಧ್ಯಯನಗಳು -ಇವೆಕ್ಕಲ್ಲ ಜನಸಂಖ್ಯಾ ಅನುಗಣನೆಗಳು ಅಗತ್ಯವೆನಿಸಿವೆ. ಸ್ಥೂಲವಾದ ಹಾಗೂ ಜನಪ್ರಿಯವಾದ ಅರ್ಥದಲ್ಲಿ ಜನಸಂಖ್ಯಾಶಾಸ್ತ್ರದ ಸೀಮೆ ತುಂಬಾ ವಿಸ್ತøತವಾದ್ದು. ಸಾಮಾಜಿಕ ಹಾಗೂ ಜೈವಿಕ ಹಿನ್ನೆಲೆಗಳಲ್ಲಿ ಜನಸಂಖ್ಯಾ ಚರಗಳ (ವೇರಿಯಬಲ್ಸ್) ಅಧ್ಯಯನ ಕೂಡ ವ್ಯಾಪಕಾರ್ಥದಲ್ಲಿ ಜನಸಂಖ್ಯಾಶಾಸ್ತ್ರದ ಅಡಿಯಲ್ಲಿ ಬರುತ್ತದೆ. ಈ ದೃಷ್ಟಿಯಿಂದ ಜನಸಂಖ್ಯಾತ್ಮಕ ಬದಲಾವಣೆಗಳೂ ಅವುಗಳ ಸಾಮಾಜಿಕ ಪರಿಸರದ ಅಂಗವೆಂದು ಅದಕ್ಕೆ ಕಾರಣೀಭೂತವೆಂದು ಮತ್ತು ಅದರ ಪರಿಣಾಮವೆಂದು ಪರಿಗಣಿಸಲಾಗಿದೆ. ಜನಸಂಖ್ಯಾಶಾಸ್ತ್ರೀಯ ವಿಶ್ಲೇಷಣೆಯೆಂದರೆ ಜನಸಂಖ್ಯಾ ದತ್ತಾಂಶಗಳ ಸಂಖ್ಯಾಕಲಾತ್ಮಕ ಪ್ರಯೋಗ ಅಥವಾ ನಿರ್ವಹಣೆ ಮಾತ್ರವೇ ಅಲ್ಲ. ಅದಕ್ಕಿಂತ ಹೆಚ್ಚು ಮುಖ್ಯವಾಗಿ ಅನುಭವಜನ್ಯ ಸಮಸ್ಯೆಗಳನ್ನು ಬಿಡಿಸುವ ಒಂದು ವಿಧಾನವಾಗಿ ಅಂಥ ದತ್ತಾಂಶಗಳ ಅಧ್ಯಯನವೂ ಇಂದು ಜನಸಂಖ್ಯಾಶಾಸ್ತ್ರೀಯ ವಿಶ್ಲೇಷಣೆಯೆನಿಸಿದೆ. ಜನಸಂಖ್ಯೆಯ ಗಾತ್ರ ಮತ್ತು ಹಂಚಿಕೆ, ವಯೋಲಿಂಗಾನುಗಣವಾಗಿ ಅದರ ವಿಂಗಡಣೆ, ಅಳೆಯಬಹುದಾದ ಅದರ ಕೆಲವು ಸಾಮಾಜಿಕಾರ್ಥಿಕ ಗುಣಲಕ್ಷಣಗಳು ಮುಂತಾದ, ಜನಗಣಿತಿಯಲ್ಲಿ ಸಾಮಾನ್ಯವಾಗಿ ಸಂಗ್ರಹಿಸಲಾಗುವ, ಸಾಮೂಹಿಕ ಮಾಪನಗಳನ್ನೂ ಯಾದೃಚ್ಛಿಕವಾಗಿ ಜನಸಂಖ್ಯಾ ಶಾಸ್ತ್ರದ ಚರಗಳೆಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಜನಸಂಖ್ಯೆಯ ಗಾತ್ರ ಅದರ ಭೌಗೋಳಿಕ ವಿತರಣೆ, ವಯೋಲಿಂಗಾನುಗುಣ ವಿಂಗಡಣೆ, ವೈವಾಹಿಕ ಸ್ಥಾನಮಾನ-ಈ ಚರಗಳು ಸಾಮಾನ್ಯವಾಗಿ ಜನಸಂಖ್ಯಾಶಾಸ್ತ್ರದ ಸಾಮಾಗ್ರಿಯೆಂದು ಪರಿಗಣಿತವಾಗಿವೆ. ಇತರ ಸಾಮಾಜಿಕಾರ್ಥಿಕ ಗುಣಲಕ್ಷಣಗಳಾದ ಜನಾಂಗ, ಭಾಷೆ, ಧರ್ಮ, ವಿದ್ಯೆ ಕಸಬು, ವರಮಾನ ಮುಂತಾದವನ್ನು ಸ್ವತಂತ್ರವಾಗಿ-ಹಲವು ವೇಳೆ ಜನನದರ, ಮರಣದರ, ವಲಸೆ ಮುಂತಾದವಕ್ಕೆ ಸಂಬಂಧಿಸಿದಂತೆ-ವಿವಿಧ ಗುಂಪುಗಳ ನಡುವೆ ಇರುವ ವ್ಯತ್ಯಾಸಗಳ ದೃಷ್ಟಿಯಲ್ಲಿ ಅಧ್ಯಯಿಸುವುದುಂಟು. ಈ ರೀತಿಯಾಗಿ ಜನಸಂಖ್ಯಾಶಾಸ್ತ್ರಜ್ಞರೂ ಇತರ ಸಮಾಜವಿಜ್ಞಾನಿಗಳೂ ಜನಸಂಖ್ಯೆಗಳನ್ನು ಇತರ ಚರಗಳಿಗೆ ಸಂಬಂಧಿಸಿದಂತೆ ಅಧ್ಯಯಿಸುವರಾದ್ದರಿಂದ ಜನಸಂಖ್ಯಾಶಾಸ್ತ್ರ ಹಲವು ಶಾಸ್ತ್ರಗಳನ್ನೊಳಗೊಳ್ಳುವುದು ಅನಿವಾರ್ಯವಾಗುತ್ತದೆ. ಗ್ರಾಮೀಣ-ನಗರೀಯ ಜನವಲಸೆಯನ್ನು ಕುರಿತ ಅಧ್ಯಯನ ಇದಕ್ಕೆ ಒಂದು ಉದಾಹರಣೆ. ಅದನ್ನು ಕುರಿತ ಸಂಖ್ಯೆಗಳ ವಿವೇಚನೆ ಮಾತ್ರವೇ ಉದ್ದೇಶವಾದರೆ ಅಂಥ ಅಧ್ಯಯನ ಜನಸಂಖ್ಯಾಶಾಸ್ತ್ರಕವಾಗುತ್ತದೆ ; ವಲಸೆಯ ಆರ್ಥಿಕ ಕಾರಣ ಹಾಗೂ ಪರಿಣಾಮಗಳ ಅಧ್ಯಯನವಾದರೆ ಅದು ಆರ್ಥಿಕವೆನಿಸುತ್ತದೆ. ಸಾಮಾಜಿಕ ಕಾರಣ -ಪರಿಣಾಮಗಳನ್ನು ಕುರಿತ ಅಧ್ಯಯನವಾದರೆ ಅದು ಸಾಮಾಜಿಕವೆನಿಸುತ್ತದೆ. ಆದ್ದರಿಂದ ಈ ವಿವಿಧ ಬಗೆಯ ಚಿಂತನಗಳು ನಡುವೆ ಖಚಿತವಾದ ವಿಭಜನರೇಖೆಯೇನೂ ಇಲ್ಲ, ಇರಬೇಕೆಂದು ನಿರೀಕ್ಷಿಸುವುದು ಸರಿಯಲ್ಲ. ಒಟ್ಟಿನಲ್ಲಿ ಜನಸಂಖ್ಯಾಶಾಸ್ತ್ರದ ವ್ಯಾಪ್ತಿ ಹಾಗೂ ಉದ್ದೇಶವನ್ನು ಕುರಿತು ಇಷ್ಟು ಹೇಳಬಹುದು ; ಪರಿಮಾಣಾತ್ಮಕ ಅವಲೋಕನ ಮತ್ತು ಸಾರ್ವತ್ರೀಕರಣವನ್ನು ಆಧರಿಸಿದ ಜನಸಂಖ್ಯಾ ಸಿದ್ಧಾಂತಗಳು ಜನಸಂಖ್ಯಾ ಶಾಸ್ತ್ರದ ವ್ಯಾಪ್ತಿಯೊಳಗೆ ಬರುತ್ತವೆ. ಆದರೆ ಹೆಚ್ಚು ಅಮೂರ್ತವಾದ ಮತ್ತು ಚರ್ಚೆಯ ನೆಲೆಯಲ್ಲಿ ನಿಂತು. ಕಾರಣವನ್ನು ಹಿಡಿದು ಕಾರ್ಯವನ್ನು ತರ್ಕಿಸುವ-ಬುದ್ಧಿರೂಢವಾದ-ಸಿದ್ಧಾಂತಗಳು ಇದರ ಸೀಮೆಯಲ್ಲ. * ಜನಸಂಖ್ಯೆಯ ಬೆಳವಣಿಗೆ ಹಾಗೂ ವಿತರಣೆಗಳಲ್ಲಿ ಕಂಡುಬರುವ ನಿಯಮಬದ್ಧವಾದ ವರ್ತನೆಯನ್ನು ಗುರುತಿಸಿ ನಿಯಮಗಳನ್ನು ಸೃಷ್ಟಿಸುವುದೇ ಜನಸಂಖ್ಯಾಶಾಸ್ತ್ರದ ಧ್ಯೇಯವಾದ್ದರಿಂದ, ಈ ಧ್ಯೇಯವನ್ನು ಸಾಧಿಸಲು ಜನಸಂಖ್ಯೆಯ ಬಗ್ಗೆ ಅಂಕ-ಅಂಶಗಳನ್ನು ಸಂಗ್ರಹಿಸಬೇಕು. ಹೀಗೆ ಸಂಗ್ರಹಿಸಿದ ಅಂಕ-ಅಂಶಗಳನ್ನು ಸಂಖ್ಯಾಕಲನ ಶಾಸ್ತ್ರ ಹಾಗೂ ಗಣಿತಶಾಸ್ತ್ರದ ಸಲಕರಣೆಗಳ ಸಹಾಯದಿಂದ ವಿಶ್ಲೇಷಿಸಿ ಜನಸಂಖ್ಯೆಯ ಮುಖ್ಯಾಂಶಗಳ ನಿಯಮಬದ್ಧವಾದ ವರ್ತನೆಯನ್ನು ಗುರುತಿಸಲಾಗುವುದು. ಈ ಕಾರಣದಿಂದ ಜನಸಂಖ್ಯಾ ಶಾಸ್ತ್ರವನ್ನು ಒಂದು ಸಮೀಕ್ಷಾ ಶಾಸ್ತ್ರವೆಂದು ಕರೆಯಬಹುದು. ಇಲ್ಲಿ ಶೋಧನೆಗಾಗಿ ಬಳಸುವ ವಿಧಾನ ಪ್ರಯೋಗ ರೂಪದ್ದಲ್ಲ, ಅದು ಅನುಭವೈಕ ವಿಧಾನ. ಜನಸಂಖ್ಯಾಶಾಸ್ತ್ರ ಹೊಸದೇನೂ ಅಲ್ಲ ; ಇದು ಮೂರು ಶತಮಾನಗಳಿಗೂ ಹೆಚ್ಚು ಹಳೆಯದು. ಜಾನ್ ಗ್ರಾಂಟ್ ಎಂಬ ಆಂಗ್ಲ ವಿದ್ವಾಂಸ ಜನಸಂಖ್ಯಾಶಾಸ್ತ್ರದ ಜನಕನೆಂದು ಪರಿಗಣಿಸಲಾಗಿದೆ. ಇವನು 1662ರಲ್ಲಿ ಪ್ರಕಟಿಸಿದ ಒಂದು ಗ್ರಂಥದಲ್ಲಿ ಜನನ ಮತ್ತು ಮರಣಗಳ ನಿಯಮಬದ್ಧ ವರ್ತನೆಯನ್ನು ಗುರುತಿಸಿದ. ಗ್ರಾಂಟನ ಸ್ನೇಹಿತ ವಿಲಿಯಮ್ ಪೆಟಿ ಜನಸಂಖ್ಯೆಯ ಅಂಶಗಳನ್ನು ಆರ್ಥಿಕ ಸಮಸ್ಯೆಗಳಿಗೂ ರಾಜ್ಯದ ಧೋರಣೆಗಳಿಗೂ ಸಂಬಂಧಿಸಿದಂತೆ ಅಧ್ಯಯನ ಮಾಡಿದ. ಇವರಿಬ್ಬರ ಮಾದರಿಯನ್ನನುಸರಿಸಿ ಯೂರೋಪ್, ಅಮೆರಿಕ ಮತ್ತು ಇತರ ರಾಷ್ಟ್ರಗಳಲ್ಲಿ ಜನಸಂಖ್ಯೆಯ ಅಂಶಗಳನ್ನು ಕುರಿತ ಅಧ್ಯಯನಗಳನ್ನು ಕೈಗೊಳ್ಳಲಾಗಿ ಜನಸಂಖ್ಯಾಶಾಸ್ತ್ರ ಒಂದು ಸಾಮಾಜಿಕ ಶಾಸ್ತ್ರವಾಗಿ ವೃದ್ಧಿಹೊಂದಿತು. ಜನಸಂಖ್ಯೆ ಕುರಿತ ಅಂಶಗಳನ್ನು ಮೊಟ್ಟಮೊದಲು ಆರ್ಥಿಕ ದೃಷ್ಟಿಯಿಂದ ವಿವೇಚಿಸಿದವ ಥಾಮಸ್ ರಾಬರ್ಟ್ ಮಾಲ್ಥಸ್. ಈತ 1798ರಲ್ಲಿ ಪ್ರಕಟಿಸಿದ ಪುಸ್ತಕದಲ್ಲಿ ಜನಸಂಖ್ಯೆಯ ಸಿದ್ಧಾಂತವೊಂದನ್ನು ಪ್ರತಿಪಾದಿಸುತ್ತ ಆದಾಯಕ್ಕೂ ಜನಸಂಖ್ಯೆಯ ವೃದ್ಧಿಗೂ ನೇರವಾದ ಸಂಬಂಧವಿದೆಯೆಂದೂ ಹೇಳಿದ. ಅಲ್ಲದೆ ಜನಸಂಖ್ಯೆಗೆ ಆಹಾರವಸ್ತುಗಳಿಗಿಂತ ಅಧಿಕ ದರದಲ್ಲಿ ಬೆಳೆಯುವ ಪ್ರವೃತ್ತಿ ಇರುವುದರಿಂದ, ನಿರಂತರವಾಗಿ ಬೆಳೆಯು ಜನಸಂಖ್ಯೆಯೇ ಆರ್ಥಿಕ ಅಭಿವೃದ್ಧಿಯ ಪ್ರಯೋಜನವೆಲ್ಲವನ್ನೂ ಹೀರಿಕೊಳ್ಳುತ್ತದೆ ; ಆದಕಾರಣ ಆರ್ಥಿಕತೆಯಲ್ಲಿ ದಾರಿದ್ರ್ಯ ಉದ್ಭವಿಸುತ್ತದೆ-ಎಂಬ ಅಭಿಪ್ರಾಯವನ್ನು ಮಂಡಿಸಿದ. ಮಾಲ್ಥಸನ ಈ ಮೀಮಾಂಸೆ ಅಭಿಜಾತ ಅರ್ಥಶಾಸ್ತ್ರಜ್ಞರ ಮೇಲೆ ಪ್ರಭಾವ ಬೀರಿತು. ಆದರೆ 19ನೆಯ ಶತಮಾನದಲ್ಲಿ ಯೂರೋಪಿನಲ್ಲಿ ಜನಸಂಖ್ಯೆಗಿಂತ ಹೆಚ್ಚಿನ ದರದಲ್ಲಿ ಆರ್ಥಿಕ ಅಭಿವೃದ್ದಿ ಉಂಟಾದದ್ದರಿಂದ ಜೀವನಮಟ್ಟ ಏರಿಕೆಗೊಂಡರೂ ಜನನದರ ಏರುವುದಕ್ಕೆ ಬದಲು ಇಳಿದದ್ದರಿಂದ ಮಾಲ್ಥಸನ ಮೀಮಾಂಸೆಯ ತಳಹದಿಯನ್ನು ಉರುಳಿಸಿದಂತಾಯಿತು. ಆರ್ಥಿಕ ಅಭಿವೃದ್ಧಿಯ ಮೇಲೆ ಜನಸಂಖ್ಯೆಯ ಬೆಳವಣಿಗೆಯ ಪ್ರಭಾವ ಮಾಲ್ಥಸ್ ತಿಳಿದಷ್ಟು ಇಲ್ಲ ಎಂಬ ಅಭಿಪ್ರಾಯ ಈ ವೇಳೆಗಾಗಲೇ ಬೆಳೆದುಬಂದಿತ್ತು. ಆದರೆ ಒಂದನೆಯ ಮಹಾಯುದ್ಧದ ಅನಂತರ ಜನಸಂಖ್ಯೆಯ ವೃದ್ಧಿಯ ಮೇಲೆ ಪ್ರಭಾವ ಬೀರುವ ಅಂಶಗಳ ಬಗ್ಗೆ ಶೋಧನೆ ಪ್ರಾರಂಭವಾಯಿತು. ಜನನದರ ಸಾಮಾಜಿಕ ಪರಸರದಿಂದ ಪ್ರಭಾವಿತವಾಗುತ್ತದೆ-ಎಂಬ ಅಂಶ ಈ ಶೋಧನೆಗಳಿಂದ ಬೆಳಕಿಗೆ ಬಂತು. ಮುಂದುವರಿದ ಸಮಾಜಗಳಲ್ಲಿ ಕುಟುಂಬ ಯೋಜನೆಯ ಕ್ರಮಗಳನ್ನು ಸ್ವಇಚ್ಚೆಯಿಂದ ಅನುಸರಿಸುವರೆಂಬುದೂ ಜನನ ನಿಯಂತ್ರಣ ಕ್ರಮಗಳನ್ನು ಅನುಸರಿಸುವುದರಲ್ಲಿ ಮೊದಲಿಗರು ನಗರ ಮತ್ತು ಪಟ್ಟಣ ವಾಸಿಗಳು ಹಾಗೂ ವಿದ್ಯಾವಂತರು ಮತ್ತು ಹೆಚ್ಚು ಆದಾಯವುಳ್ಳವರು ಎಂಬುದೂ ಗೊತ್ತಾಯಿತು. ಈ ಶೋಧನೆಗಳನ್ನು ಮುಂದುವರಿಸಿ ಜನನ ಮತ್ತು ಮರಣ ದರಗಳನ್ನು ಕಾಲಾನುಗುಣವಾಗಿ ಹಾಗೂ ಕ್ಷೇತ್ರಾನುಗಣವಾಗಿ ಪರೀಕ್ಷಿಸಿ ನೋಡಿದಾಗ, ಅವುಗಳ ಬಗ್ಗೆ ಕೆಲವು ನಿಯಮಬದ್ಧವಾದ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಜನಸಂಖ್ಯೆಯ ಬೆಳವಣಿಗೆಯ ಬಗ್ಗೆ ಮತ್ತೊಂದು ಸಿದ್ಧಾಂತವನ್ನು ಮಂಡಿಸಲಾಯಿತು. ಇದೇ ಜನಸಂಖ್ಯಾವಸ್ಥಾ ಪರಿವರ್ತನ ಸಿದ್ಧಾಂತ. ಜನಸಂಖ್ಯೆಯ ಬೆಳವಣಿಗೆಯ ಮೇಲೆ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಬೀರುವ ಪ್ರಭಾವವನ್ನು ಈ ಸಿದ್ಧಾಂತ ತೋರಿಸಿಕೊಡುತ್ತದೆ. ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ರಾಷ್ಟ್ರದಲ್ಲಿ ಮೂಲಭೂತವಾಗಿ ವ್ಯಾವಸಾಯಿಕ ಆರ್ಥಿಕತೆ ಇರುತ್ತದೆ. ಅಲ್ಲಿ ಜನನದರ, ಮರಣದರ ಎರಡೂ ಅಧಿಕ, ಜನನದರ ಅಧಿಕವಾಗಿರಲು ಕಾರಣವಾಗುವ ಅಂಶಗಳು ಶೀಘ್ರ ಮದುವೆ ಹಾಗೂ ಜನನ ಸಾಮಾಜಿಕ ಮತ್ತು ಧಾರ್ಮಿಕ ಮನೋಭಾವ, ಅಸಮರ್ಪಕ ಆಹಾರ, ನೈರ್ಮಲ್ಯವಿಲ್ಲದ ವಾತಾವರಣ ಮತ್ತು ಸಾಕಷ್ಟು ಆರೋಗ್ಯ, ಸೌಲಭ್ಯ ಅಭಾವ- ಈ ಕಾರಣಗಳಿಂದಾಗಿ ಇಲ್ಲಿ ಮರಣದರವೂ ಹೆಚ್ಚಾಗಿರುತ್ತದೆ. ಆದ್ದರಿಂದ ಜನಸಂಖ್ಯೆಯ ಬೆಳವಣಿಗೆಯ ದರ ಅಷ್ಟು ಅಧಿಕವಾಗಿರುವುದಿಲ್ಲ. ಆದರೆ ಆರ್ಥಿಕ ಅಭಿವೃದ್ಧಿ ಆದಂತೆಲ್ಲ ರಾಷ್ಟ್ರದ ಆದಾಯ ಹೆಚ್ಚುವ ಕಾರಣ ಆಹಾರ, ನೈರ್ಮಲ್ಯ ಮತ್ತು ಆರೋಗ್ಯ ಸೌಲಭ್ಯಗಳು ಉತ್ತಮಗೊಳ್ಳುತ್ತವೆ. ಆದಕಾರಣ ಮರಣದರ ಕಡಿಮೆಯಾಗುತ್ತದೆ. ಆದರೆ ಜನರ ಸಾಮಾಜಿಕ ಮತ್ತು ಧಾರ್ಮಿಕ ಮನೋಭಾವಗಳು ಹಾಗೆಯೇ ಉಳಿಯುವುದರಿಂದದ ಜನನದರದಲ್ಲಿ ಇಳಿಕೆ ಕಂಡುಬರುವುದಿಲ್ಲ. ಆದ್ದರಿಂದ ಈ ಹಂತದಲ್ಲಿ ಜನಸಂಖ್ಯೆ ಹೆಚ್ಚಿನ ದರದಲ್ಲಿ ಬೆಳೆಯಲು ಪ್ರಾರಂಭವಾಗುತ್ತದೆ. ಆದರೆ ಮುಂದಿನ ಹಂತದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಪಾಶ್ಚಾತ್ಯ ರಾಷ್ಟ್ರಗಳ ಮಟ್ಟವನ್ನು ಮುಟ್ಟಿದರೆ ಜನರ ಮನೋಭಾವನೆಗಳಲ್ಲಿ ಬದಲಾವಣೆಗಳು ತೋರಿಬಂದು ಕುಟುಂಬಯೋಜನಾಕ್ರಮಗಳನ್ನು ಅನುಸರಿಸಲಾಗುವುದು. ಆಗ ಜನನ ದರವೂ ಇಳಿಕೆಗೊಳ್ಳುವುದು. ಜನನ ಮತ್ತು ಮರಣದರಗಳು ಒಂದು ಮಟ್ಟದಲ್ಲಿ ಸ್ಥಿರಗೊಂಡು ಜನಸಂಖ್ಯೆ ಕಡಿಮೆ ದರದಲ್ಲಿ ಬೆಳೆಯಲು ಪ್ರಾರಂಭಿಸುವುದು. ಈ ಸಿದ್ಧಾಂತ ಜನಸಂಖ್ಯಾಶಾಸ್ತ್ರದ ಬೆಳವಣಿಗೆಯನ್ನು ಅನೇಕ ರೀತಿಯಲ್ಲಿ ಪುಷ್ಟೀಕರಿಸಿತು. ಜನನ ಮತ್ತು ಮರಣದರಗಳ ಪ್ರವೃತ್ತಿಯನ್ನು ಸಮೀಕ್ಷಿಸಿ ಜನಸಂಖ್ಯೆಯ ಬೆಳವಣಿಗೆಯನ್ನು ಕಾಲ ಮತ್ತು ಕ್ಷೇತ್ರಗಳಿಗನುಸಾರವಾಗಿ ಅನುಗಣಿಸುವ (ಪ್ರೊಜೆಕ್ಟ್) ಕ್ರಮಗಳನ್ನು ಕಲ್ಪಿಸುವುದರಲ್ಲಿ ಸಹಾಯ ಮಾಡಿತು. ಹಾಗೂ ಈ ಕ್ರಮಗಳನ್ನು ಅನುಸರಿಸಿ ಜನನ ದರವನ್ನು ನಿರ್ಧರಿಸುವ ಅಂಶಗಳು ಯಾವುವೆಂಬುದನ್ನು ತೋರಿಸಿಕೊಡುವಂಥ ಅವಲೋಕನಗಳನ್ನು ಕೈಗೊಳ್ಳುವ ಸಾಧ್ಯತೆಯೂ ಉಂಟಾಯಿತು. ಈಚೆಗೆ ಜನಸಂಖ್ಯಾಶಾಸ್ತ್ರದಲ್ಲಿ ಆಗಿರುವ ಎರಡು ಗಮನಾರ್ಹ ವಿಕಾಸಗಳಿವು. 1 ಭವಿಷ್ಯದಲ್ಲಿ ಜನಸಂಖ್ಯೆಯಲ್ಲಿ ಆಗುವ ಬೆಳವಣಿಗೆಯನ್ನು ಅನುಗಣಿಸುವ ಕ್ರಮಗಳ ವೃದ್ಧಿ. 2. ಜನಸಂಖ್ಯೆಯ ಬೆಳವಣಿಗೆಯನ್ನುಂಟು ಮಾಡುವ ಅಂಶಗಳಾವುವು ಎಂಬುದನ್ನು ನಿರ್ಧರಿಸಲು ಸಹಾಯಕವಾದ ಅವಲೋಕನಗಳು. ಈ ಎರಡು ಅಂಶಗಳು ಜನಸಂಖ್ಯಾಶಾಸ್ತ್ರದ ಎರಡು ಮುಖಗಳನ್ನು ಪ್ರತಿನಿಧಿಸುತ್ತವೆ. ಮೊದಲನೆಯದು ಜನಸಂಖ್ಯಾಶಾಸ್ತ್ರಧ್ಯಯನಕ್ಕೆ ಬೇಕಾಗುವ ಸಲಕರಣೆಗಳನ್ನು ಒದಗಿಸಿದರೆ, ಎರಡನೆಯದು ಜನಸಂಖ್ಯಾಶಾಸ್ತ್ರದ ಅನ್ವಯಿಕ ಮುಖವನ್ನು ಸೂಚಿಸುತ್ತದೆ. ಈಚೆಗೆ ಆನ್ವಯಿಕ ಜನಸಂಖ್ಯಾಶಾಸ್ತ್ರವೆಂಬ ಒಂದು ಪ್ರತ್ಯೇಕ ಶಾಖೆಯೇ ವೃದ್ಧಿಗೊಂಡು, ರಾಷ್ಟ್ರದ ಜನಸಂಖ್ಯಾ ನೀತಿ ಹಾಗೂ ಕುಟುಂಬ ಯೋಜನೆಗೆ ಅಗತ್ಯವಾದ ಅಂಕ-ಅಂಶಗಳನ್ನು ಒದಗಿಸುವುದರಲ್ಲಿ ಸಮರ್ಥವಾಗಿದೆ. ಈ ಶಾಖೆ ಕುಟುಂಬ ಯೋಜನೆಗೆ ಆವಶ್ಯಕವಾದ ಭಾವನೆಯ ಅಧ್ಯಯನಗಳನ್ನೂ ಪ್ರಾಯೋಗಿಕ ಕಾರ್ಯಕ್ರಮಗಳನ್ನೂ ಕೈಗೊಳ್ಳುವುದರಲ್ಲಿ ಮಗ್ನವಾಗಿದೆ. ಹಿಂದೆ ಹೇಳಿದಂತೆ ಜನಸಂಖ್ಯಾಶಾಸ್ತ್ರ ಹಲವಾರು ಶಾಸ್ತ್ರಗಳ ಸಂಗಮಕ್ಷೇತ್ರ. ಅದಕ್ಕೆ ಸಮಾಜಶಾಸ್ತ್ರದಲ್ಲಿ ಆಳವಾದ ಬೇರು. ಅರ್ಥಶಾಸ್ತ್ರ, ಸಂಖ್ಯಾಕಲನಶಾಸ್ತ್ರ, ಭೂಗೋಳಶಾಸ್ತ್ರ, ಮಾನವಪರಿಸರಶಾಸ್ತ್ರ, ಜೀವಶಾಸ್ತ್ರ, ವೈದ್ಯಶಾಸ್ತ್ರ, ಮಾನವತಳಿಶಾಸ್ತ್ರ ಮುಂತಾದವುಗಳೊಂದಿಗೆ ಇದು ನಿಕಟ ಸಂಬಂಧ ಹೊಂದಿದೆ. ಇದನ್ನು ಸಂಪೂರ್ಣವಾಗಿ ಪ್ರತ್ಯೇಕ ಶಾಸ್ತ್ರವೆಂಬ ಪರಿಗಣಿಸುವುದು ವಿರಳ. ಈ ವಿವಿಧ ಶಾಸ್ತ್ರಗಳಿಗೆ ಶಾಖೆಯಾಗಿ ಅಥವಾ ಆನುಷಂಗಿಕವಾಗಿ, ಅವುಗಳ ಅಂತರವನ್ನು ತುಂಬುವ ವಿಷಯವಾಗಿ ಇದು ಬೆಳೆಯುತ್ತಿದೆ. ಜನಸಂಖ್ಯೆಯ ಸಮಸ್ಯೆಯ ಬಗ್ಗೆ ಸಾರ್ವಜನಿಕರಲ್ಲೂ ಸರ್ಕಾರಗಳಲ್ಲೂ ಉಂಟಾಗಿರುವ ಆಸಕ್ತಿಯ ಕಾರಣದಿಂದ ಜನಸಂಖ್ಯಾಶಾಸ್ತ್ರ ಇತ್ತೀಚೆಗೆ ಹೆಚ್ಚು ಪ್ರಾಮುಖ್ಯ ಪಡೆಯುತ್ತಿದೆ ಹಾಗೂ ಜನಪ್ರಿಯವಾಗುತ್ತಿದೆ. ಹಿಂದುಳಿದ ರಾಷ್ಟ್ರಗಳಲ್ಲಿ ಸಂಭವಿಸಿರುವ ಜನಸಂಖ್ಯಾ ಸ್ಫೋಟವೂ ಕುಟುಂಬಯೋಜನಾ ಕಾರ್ಯಕ್ರಮಗಳನ್ನು ಸರ್ಕಾರಗಳು ತೀವ್ರವಾಗಿ ಕೈಗೊಳ್ಳುತ್ತಿರುವುದೂ ಜನಸಂಖ್ಯಾಶಾಸ್ತ್ರಧ್ಯಯನಕ್ಕೆ ಹೊಸ ಪ್ರೇರಣೆ ನೀಡಿವೆ. ಅಲ್ಲದೆ ಸಾಮಾಜಿಕ ಮತ್ತು ಆರ್ಥಿಕ ಯೋಜನೆಗಳನ್ನು ಕೈಗೊಳ್ಳುತ್ತಿರುವ ರಾಷ್ಟ್ರಗಳು ಜನಸಂಖ್ಯಾಂಶಗಳ ಬಗ್ಗೆ ಅಂಕಗಳನ್ನು ಸಂಗ್ರಹಿಸುವುದರ ಆವಶ್ಯಕತೆಯನ್ನು ಮನಗಂಡು ಈ ಬಗ್ಗೆ ಸಂಶೋಧನೆಯನ್ನು ಉತ್ತೇಜಿಸಿವೆ. ಇನ್ನು ಮುಂದೆ ಜನಸಂಖ್ಯೆಯನ್ನು ಕುರಿತ ಅಂಕ-ಅಂಶಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚುವುದರಿಂದ ಜನಸಂಖ್ಯಾಶಾಸ್ತ್ರ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಪ್ರಾಮುಖ್ಯ ಪಡೆಯಬಹುದು. (ಎಬಿ.ಎ.) II ಜನಸಂಖ್ಯಾ ಸಿದ್ಧಾಂತಗಳು ಅರ್ಥಶಾಸ್ತ್ರದ ಅಧ್ಯಯನದಲ್ಲಿ ಜನಸಂಖ್ಯೆ ಮತ್ತು ಆರ್ಥಿಕ ಪರಿಸ್ಥಿತಿ ಇವುಗಳ ನಡುವೆ ಇರುವ ಪರಸ್ಪರ ಸಂಬಂಧದ ಪರಿಶೀಲನೆ ಒಂದು ಮುಖ್ಯ ಭಾಗವಾಗಿದೆ. ಕಾರ್ಮಿಕ ಬಲ, ಕಾರ್ಮಿಕರ ಉತ್ಪಾದನ ಸಾಮಥ್ರ್ಯ, ಉದ್ಯಮಶೀಲತೆ ಇತ್ಯಾದಿ ಅಂಶಗಳು ಜನರ ಸಂಖ್ಯೆ ಹಾಗೂ ಗುಣಗಳನ್ನು ಅವಲಂಬಿಸಿವೆ. ಈ ಅಂಶಗಳು ಅರ್ಥೋತ್ಪತ್ತಿಯಲ್ಲಿ ಮುಖ್ಯವಾಗಿವೆ. ಸರಕು ಮತ್ತು ಸೇವೆಗಳ ಬೇಡಿಕೆಯ ಪರಿಮಾಣ ಹಾಗೂ ಸ್ವರೂಪವನ್ನು ನಿರ್ಣಯಿಸಿವುದರಲ್ಲೂ ಜನಸಂಖ್ಯೆ ಹಾಗೂ ಇದಕ್ಕೆ ಸಂಬಂಧಪಟ್ಟ ವಿವರಗಳು ಮುಖ್ಯಾಂಶಗಳಾಗಿವೆ. ಹೀಗೆ ಜನಸಂಖ್ಯೆಗೆ ಸಬಂಧಪಟ್ಟ ಜನನ ಮರಣದರಗಳು, ಜನಸಂಖ್ಯಾ ಏರಿಕೆದರ, ವಯಸ್ಸು ಲಿಂಗ ವೃತ್ತಿಗಳಿಗೆ ಅನುಗುಣವಾಗಿ ಜನಸಂಖ್ಯೆಯ ಸಂಯೋಜನೆ, ಜನಸಂಖ್ಯೆಯ ವಿತರಣೆ ಮತ್ತು ಚಲನೆ-ಇವಕ್ಕೂ ಸರಕುಸೇವೆಗಳ ಉತ್ಪಾದನೆ ಮತ್ತು ಬೇಡಿಕೆಗಳಿಗೂ ನಿಕಟ ಸಂಬಂಧ ಇದೆ. ಈ ಸಂಬಂಧದ ಸ್ವರೂಪವನ್ನು ವಿಶ್ಲೇಷಿಷುವುದೇ ಜನಸಂಖ್ಯಾ ಸಿದ್ಧಾಂತಗಳ ಉದ್ದೇಶ. ಅರ್ಥಶಾಸ್ತ್ರ ಹುಟ್ಟಿದ ಕಾಲದಿಂದ ಇಂದಿನವರೆಗೆ ಅರ್ಥಶಾಸ್ತ್ರಜ್ಞರೂ ಜನಸಂಖ್ಯಾಶಾಸ್ತ್ರಜ್ಞರೂ ವಿವಿಧ ಜನಸಂಖ್ಯಾ ಸಿದ್ಧಾಂತಗಳನ್ನು ನಿರೂಪಿಸಿದ್ದಾರೆ. ಇವುಗಳಲ್ಲಿ ಮಾಲ್ಥಸನ ಸಿದ್ಧಾಂತ (ಮಾಲ್ಥೂಸಿಯಸ್ ತಿಯೊರಿ), ಅನುಕೂಲತಮ ಜನಸಂಖ್ಯಾ ಸಿದ್ಧಾಂತ (ತಿಯೊರಿ ಆರ್ಫ ಆಷ್ಟಿಯಮ್ ಪಾಪ್ಯುಲೇಷನ್), ಜನಸಂಖ್ಯಾ ಪರಿವರ್ತನ ಸಿದ್ಧಾಂತ (ತಿಯೊರಿ ಆಫ್ ಡಿಮೋಗ್ರಾಫಿಕ್ ಟ್ರಾನ್ಸಿಷನ್)-ಇವು ಹೆಚ್ಚು ಪ್ರಚುರವಾದ ಸಿದ್ಧಾಂತಗಳಾಗಿವೆ. ಮಾಲ್ಥಸನ್ ಸಿದ್ಧಾಂತ : ಥಾಮಸ್ ರಾಬರ್ಟ್ ಮಾಲ್ಥಸ್ (1766-1834) ಎಂಬ ಇಂಗ್ಲಿಷ್ ಅರ್ಥಶಾಸ್ತ್ರಜ್ಞ ಜನಸಂಖ್ಯಾ ತತ್ತ್ವ ಕುರಿತು 1798ರಲ್ಲಿ ಪ್ರಕಟಿಸಿದ ಒಂದು ಲೇಖನದಲ್ಲಿ ಜನಸಂಖ್ಯೆಯ ಬಗ್ಗೆ ತನ್ನ ವಿಚಾರಗಳನ್ನು ಮಂಡಿಸಿದ್ದಾನೆ. ಇವೇ ಮಾಲ್ಥಸನ ಜನಸಂಖ್ಯಾ ಸಿದ್ಧಾಂತ ಎಂದು ಅಂದಿನಿಂದಲೂ ಪ್ರಚುರವಾಗಿವೆ. ಆತನ ಸಿದ್ಧಾಂತದ ಮುಖ್ಯಾಂಶಗಳು ಇವು : ಜನರ ಪೋಷಣೆಗೆ ಅಗತ್ಯವಾದ ಸರಕುಗಳನ್ನು ಉತ್ಪಾದಿಸಲು ಭೂಮಿಗೆ ಇರುವ ಶಕ್ತಿಗಿಂತಲೂ ಜನಸಂಖ್ಯೆ ವೃದ್ಧಿಯಾಗುವ ಪ್ರವೃತ್ತಿ ಹೆಚ್ಚು ಪ್ರಬಲವಾಗಿದೆ. ನಿಸರ್ಗ ಧಾರಾಳಿಯಲ್ಲ. ಭೂಮಿಯಿಂದ ಫಸಲು ಪಡೆಯಲು ಶ್ರಮವಾಗಿದೆ. ನಿಸರ್ಗ ಧಾರಳಿಯಲ್ಲ. ಭೂಮಿಯಿಂದ ಫಸಲು ಹೆಚ್ಚುವುದಾದರೂ ಈ ಹೆಚ್ಚುವರಿಯ ದರ ಕಡಿಮೆಯಾಗುತ್ತ ಬರುತ್ತದೆ. ಆಹಾರಧಾನ್ಯಗಳ ಉತ್ಪಾದನೆ ಹೀಗೆ ಇಳಿಮುಖ ಪ್ರತಿಫಲ ನಿಯಮಕ್ಕೆ ಒಳಪಟ್ಟಿದೆ. ಆಹಾರ ಉತ್ಪಾದನೆ 1, 2, 3, 4, 5, 6, 7, 8, 9-ಹೀಗೆ ಸಮಾಂತರ ಶ್ರೇಢಿಯಲ್ಲಿ ಹೆಚ್ಚುಬಲ್ಲುದು. ಆದರೆ ಜನಸಂಖ್ಯೆ 1, 2, 4, 8, 16, 32, 64 - ಹೀಗೆ ಗುಣೋತ್ತರ ಶ್ರೇಢಿಯಲ್ಲಿ ಹೆಚ್ಚುವ ಪ್ರವೃತ್ತಿ ಬಲವಾಗಿರುವುದು, ಏಕೆಂದರೆ ಜನೋತ್ಪತ್ತ್ತಿ ಸಾಮಥ್ರ್ಯದ ರೀತಿಯೇ ಹೀಗಿದೆ. ಮಾನವನ ಲೈಂಗಿಕ ಇಚ್ಛೆಯ ಒತ್ತಡ, ಪ್ರಜನನ ದರ-ಇವೆರಡು ಈ ಪ್ರವೃತ್ತಿಗೂ ಕಾರಣವಾಗಿವೆ. ಆಹಾರೋತ್ಪತ್ತಿ, ಜನೋತ್ಪತ್ತಿ ಇವೆರಡೂ ಹೀಗೆ ಭಿನ್ನ ದರಗಳಲ್ಲಿ ಉಂಟಾಗುವುದರಿಂದ ಆಹರ ಸರಬರಾಜು ಮತ್ತು ಜನಸಂಖ್ಯೆಗಳ ನಡುವೆ ಇರಬೇಕಾದ ಸಮತೋಲ ತಪ್ಪುತ್ತ್ತದೆ. ಆಹಾರೋತ್ಪಾದನೆಯನ್ನು ಜನಸಂಖ್ಯೆ ಮೀರುವ ಪ್ರವೃತ್ತಿ ಇರುತ್ತದೆ. ಈ ಅಸಮತೋಲ ಪರಿಸ್ಥತಿ ಸಂಭವಿಸದಂತೆ ನೋಡಿಕೊಳ್ಳಬೇಕಾದರೆ ಜನರು ಜನಸಂಖ್ಯಾ ಏರಿಕೆಯ ವಿರುದ್ಧವಾಗಿ ನಿವಾರಕ ತಡೆಗಳನ್ನು ಅಸನುಸರಿಸಬೇಕೆಂಬುದು ಮಾಲ್ಥಸನ ಅಭಿಪ್ರಾಯವಾಗಿತ್ತು. ಬ್ರಹ್ಮಚರ್ಯೆ, ತಡವಾಗಿ ಮದುವೆಯಾಗುವುದು, ಮದುವೆಯಾದರು ಆತ್ಮಸಂಯಮದಿಂದ ನಡೆದುಕೊಂಡು ಹೆಚ್ಚು ಮಕ್ಕಳಾಗದಂತೆ ನೋಡಿಕೊಳ್ಳುವುದು-ಇವು ಮಾಲ್ಥಸ್ ಯೋಚಿಸಿದ್ದ ಇಂಥ ನಿವಾರಕ ತಡೆಗಳು. ಜನರು ವಿವೇಕದಿಂದ ನಿವಾರಕ ತಡೆರಗಳ ಮೂಲಕ ಜನವೃದ್ಧಿಯನ್ನು ಹತೋಟಿಯಲ್ಲಿ ಇಡದಿದ್ದರೆ ಪ್ರಕೃತಿ ತನ್ನದೇ ಆದ ಕ್ರೂರ ಪರಿಹಾರವನ್ನು ಮಾನವ ಜನಾಂಗದ ಮೇಲೆ ಹೇರುವುದೆಂದು ಮಾಲ್ಥಸ್ ಸಾರಿದ. ರೋಗರುಜಿನಗಳು, ಕ್ಷಾಮ ಹಾಗೂ ದುರ್ಭಿಕ್ಷ, ಪ್ರವಾಹ, ಭೂಕಂಪ, ಯುದ್ಧ ಮುಂತಾದವು ಪ್ರಾಕೃತಿಕ ತಡೆಗಳು. ಈ ತಡೆಗಳು ಮರಣದರವನ್ನು ಹೆಚ್ಚಿಸಿ ಜನಸಂಖ್ಯೆಯನ್ನು ಇಳಿಸುತ್ತವೆ. ಮೇಲೆ ಹೇಳಿದ ನಿವಾರಕ ತಡೆಗಳು ಜನನ ದರವನ್ನು ಕಡಿಮೆ ಮಾಡಿ, ಜನಸಂಖ್ಯೆ ಮಿತಿಮೀರುವುದನ್ನು ತಪ್ಪಿಸುವುವು. ಸಕಾಲದಲ್ಲಿ ನಿವಾರಕ ಉಪಾಯಗಳನ್ನು ಕೈಗೊಳ್ಳದಿದ್ದರೆ ಪ್ರಾಕೃತಿಕ ತಡೆಗಳು ತವಾಗಿಯೇ ಆಚರಣೆಗೆ ಬರುವುವೆಂಬುದು ಮಾಲ್ಥಸನ ವಾದ. ಪ್ರಾಕೃತಿಕ ತಡೆಗಳು ಆಚರಣೆಗೆ ಬರುವ ಪರಿಸ್ಥತಿಯನ್ನು ತಪ್ಪಿಸುವುದು ಉತ್ತಮ ಎಂಬುದು ಸುಸ್ಪಷ್ಟ. ಬರ, ರೋಗ, ಉಪವಾಸ ಇತ್ಯಾದಿ ಕಷ್ಟಗಳನ್ನು ತಪ್ಪಿಸುವ ದೃಷ್ಟಿಯಿಮದ ನಿವಾರಕ ತಡೆಗಳನ್ನು ಜನರು ಅಭ್ಯಸಿಸಬೇಕೆಂಬುದು ಮಾಲ್ಥಸನ ಉಪದೇಶ. ಜೀವನಾಧಾರವಾದ ಆಹಾರ ಪದಾರ್ಥಗಳ ಮಿತಿಯಿಂದಾಗಿ ಜನಸಂಖ್ಯೆಯ ಏರಿಕೆಗೆ ತಡೆಯುಂಟಾಗುವುದೆಂಬುದೂ ಆಹಾರ ಸರಬರಾಜನ್ನು ಹೆಚ್ಚಿಸುವ ಸಾಮಾಥ್ರ್ಯ ಮತ್ತು ಆರ್ಥಿಕ ಜೀವನ ಮಟ್ಟದ ಏರಿಕೆಯಿಂದ ಜನಸಂಖ್ಯೆಯ ಬೆಳವಣಿಗೆಯಾಗುವುದೆಂಬುದೂ ಮಾಲ್ಥಸನ ಭಾವನೆ. ಮಾಲ್ಥಸನ ಸಿದ್ಧಾಂತ ಸಾಮಾನ್ಯವಾಗಿ ಅಭಿಜಾತ ಆರ್ಥಿಕ ಪಂಥದ ಭಾವನೆಗಳನ್ನು ಪ್ರತಿಬಿಂಬಿಸುವುದೆಂದು ಹೇಳಬಹುದು. ಸಿದ್ಧಾಂತದ ದೋಷಗಳು : ಮಾಲ್ಥಸನ ಸಿದ್ಧಾಂತ ಅನೇಕ ಟೀಕೆಗಳಿಗೆ ಒಳಗಾಗಿದೆ. ಮಾಲ್ಥಸನ ಕಾಲದಲ್ಲಿ ಬೆಳೆಯುತ್ತಿದ್ದ ಬಂಡವಾಳಶಾಹಿ ಪದ್ಧತಿಯಲ್ಲಿ ಬಂಡವಾಳಗಾರರು ಕಾರ್ಮಿಕರಿಗೆ ಜೀವನ ನಿರ್ವಹಣ ಕೂಲಿ ಸಿದ್ಧಾಂತಕ್ಕೆ ಅನುಸಾರವಾಗಿ ಕಡಿಮೆ ಕೂಲಿ ಕೊಟ್ಟು ಅವರಿಂದ ಹೆಚ್ಚು ದುಡಿಸಿಕೊಳ್ಳುತ್ತಿಗಿದ್ದರು. ಕೂಲಿದರ ಜೀವನ ನಿರ್ವಹಣ ಮಟ್ಟಕ್ಕೆ ಹೆಚ್ಚಿದರೆ ಜನಸಂಖ್ಯೆ ವೇಗವಾಗಿ ಬೆಳೆಯಲು ಕಾರಣವಾಗುವುದೆಂದೂ ಹಗೆ ಬೆಳೆದರೆ ಕೂಲಿದರ ತಗ್ಗುವುದೆಂದೂ ವಾದಿಸಲು ಅಂದಿನ ಬಂಡವಾಳಗಾರರಿಗೆ ಮಾಲ್ಥಸನ ಸಿದ್ಧಾಂತ ಮಾರ್ಗ ಮಾಡಿಕೊಟ್ಟಿತೆಂದು ಆಕ್ಷೇಪಿಸಿಲಾಗಿದೆ. ಆಹಾರೋತ್ಪಾದನೆ ಸಮಾಂತರ ಶ್ರೇಢಿಯಲ್ಲೂ ಜನಸಂಖ್ಯೆ ಗುಣೊತ್ತರ ಶ್ರೇಢಿಯಲ್ಲೂ ಅಧಿಕವಾಗುವುದೆಂದು ಎಂದರೆ ಜನಸಂಖ್ಯೆ 25 ವರ್ಷಗಳಲ್ಲಿ ದ್ವಿಗುಣಿಸುವುದೆಂದೂ-ಮಾಲ್ಥಸ್ ಹೇಳಿರುವುದಕ್ಕೆ ವಾಸ್ತವ ಐತಿಹಾಸಿಕ ಆಧಾರವಿಲ್ಲದ್ದು ಆತನ ಸಿದ್ಧಾಂತದ ಒಂದು ದೋಷವೆಂದು ಹೇಳಲಾಗಿದೆ. ಆಹಾರೊತ್ಪಾದನೆ ಇಳಿಮುಖ ಪ್ರತಿಫಲ ನಿಯಮಕ್ಕೆ ಅನುಗುಣವಾಗಿ ಇರುವುದೆಂದು ಆತ ವಾದಿಸಿದಾಗ, ವೈಜ್ಞಾನಿಕ ಕ್ರಮಗಳಿಂದ ಕೃಷಿ ಉತ್ಪನ್ನವನ್ನು ಗಮನಾರ್ಹವಾಗಿ ಹೆಚ್ಚಿಸುವುದರ ಸಾಧ್ಯತೆಯನ್ನು ಮಾಲ್ಥಸ್ ಸಾಕಷ್ಟು ಗಣನೆಗೆ ತಂದು ಕೊಳ್ಳಲಿಲ್ಲ ಎಂದು ಹೇಳಬಹುದು. ಇದರಿಂದಾಗಿ. ಆತ ಊಹಿಸಿದ ಆಹಾರ ಮತ್ತು ಜನಸಂಖ್ಯೆ ಏರಿಕೆಗಳ ಸಂಬಂಧದ ಕಲ್ಪನೆ ಪೂರ್ತಿಯಾಗಿ ಸಮಂಜಸವಾಗಿಲ್ಲ ಎಂದು ತೋರಿಸಲಾಗಿದೆ. ಮಾಲ್ಥಸ್ ಆಹಾರೋತ್ಪಾದನೆಗೆ ಮಾತ್ರವೇ ಜನಸಂಖ್ಯಾ ಏರಿಕೆಯೊಂದಿಗೆ ಸಂಬಂಧ ಕಲ್ಪಿಸಿರುವುದು ತರ್ಕಬದ್ಧವಾಗಲಾರದೆಂಬುದು ಆತನ ಸಿದ್ಧಾಂತವನ್ನು ಕುರಿತ ಇನ್ನೊಂದು ಟೀಕೆ. ದೇಶ ಉತ್ಪಾದಿಸುವ ಎಲ್ಲ ಸರಕು ಸೇವೆಗಳ ಮೊತ್ತಕ್ಕೂ ಅಂದರೆ-ರಾಷ್ಟ್ರೀಯ ಉತ್ಪನ್ನಕ್ಕೂ-ಜನಸಂಖ್ಯೆಗೂ ಸಂಬಂಧ ಕಲ್ಪಿಸಿ ಇವುಗಳ ಪರಸ್ಪರ ಪರಿಣಾಮಗಳನ್ನು ಅಧ್ಯಯನ ಮಾಡುವುದು ಜನಸಂಖ್ಯಾ ಸಿದ್ಧಾಂತದ ಸಹಜವಾದ ಉದ್ದೇಶವಾಗಿರಬೇಕು. ಏಕೆಂದರೆ ಆಹಾರ ಸಾಮಾಗ್ರಿಯನ್ನು ಸಾಕಷ್ಟು ಉತ್ಪಾದಿಸದೆ ಉನ್ನತ ಜೀವನಮಟ್ಟವನ್ನು ಸಾಧಿಸುವುದು ಕೈಗಾಶರಿಕಭಿವೃದ್ಧಿ ಹೊಂದಿದ ದೇಶಳಿಗೆ ಸಾಧ್ಯ. ಈ ದೃಷ್ಟಿಯಿಂದ, ಮಾಲ್ಥಸನ ಸಿದ್ಧಾಂತದ ವ್ಯಾಪಕವಾದ್ದು ಪರಿಪೂರ್ಣವಾದ್ದು-ಎಂದು ಹೇಳಲಾಗುವುದಿಲ್ಲ. ಜನಸಂಖ್ಯೆ ತೀವ್ರವಾಗಿ ಏರಿದಾಗ ಕ್ಷಾಮ, ರೋಗರುಜಿನ ಮುಂತಾದುವುಗಳಿಂದ ಮಾನವ ಜನಸಂಖ್ಯೆಗೆ ಹಾನಿಯನ್ನುಂಟಾಗುವುದೆಂಬುದು ಮಾಲ್ಥಸನ ನುಡಿ. ಆದರೆ ಆತನ ಕಾಲದಿಂದ ಈಚೆಗೆ ಜನಸಂಖ್ಯೆಯ ತೀವ್ರವಾಗಿ ಬೆಳೆದಿರುವ ಶ್ರೀಮಂತ ರಾಷ್ಟ್ರಗಳಲ್ಲಿ ಜನರ ಜೀವನ ಮಟ್ಟ ಏರಿದೆ ಮತ್ತು ಸುಧಾರಿಸಿದೆ. ಅಂದಮೇಲೆ ಮಾಲ್ಥಸನ ಊಹೆ ಸುಳ್ಳಾಗಿದೆ ಎಂದು ಹೇಳಬಹುದು. ಆತನ ಸಿದ್ಧಾಂತ ಈ ದೃಷ್ಟಿಯಿಂದ ನಿರಾಶಾವಾದದ ಅಪವಾದಕ್ಕೆ ಗುರಿಯಾಗಿದೆ. ಬ್ರಹ್ಮಚರ್ಯೆ, ದಂಪತಿಗಳ ಆತ್ಮಸಂಯಮ ಇತ್ಯಾದಿ ನೈತಿಕ ನಿರ್ಬಂಧಗಳು ಜನ ಸಂಖ್ಯೆಯನ್ನು ನಿಯಂತ್ರಿಸುವ ಉಪಾಯವೆಂಬ ಆತನ ಬೋಧನೆ ಸಾಮಾನ್ಯ ಜನಕ್ಕೆ ಹಿಡಿಸುವುದು ಕಷ್ಟ. ಆದ್ದರಿಂದ ಆತನದು ಅವಾಸ್ತವಿಕ ಹಾಗೂ ಅವ್ಯಾವಹಾರಿಕ ದೃಷ್ಟಿ ಎಂದು ಹೇಳಲಾಗಿದೆ. ಸಂತತಿ ನಿಯಂತ್ರಣ ಸಾಧನಗಳು ಆತನ ಕಾಲದಲ್ಲಿ ಸೃಷ್ಟಿಯಾಗಿರಲಿಲ್ಲವಾದ್ದರಿಂದ ಮಾಲ್ಥಸನಿಗೆ ನೈತಿಕ ನಿರ್ಬಂಧಗಳನ್ನು ಒತ್ತಿ ಹೇಳುವುದೇ ಬಹುಶಃ ಏಕೈಕ ಮಾರ್ಗವಾಗಿತ್ತದೆಂದು ಈ ಆಕ್ಷೇಣೆಗೆ ಸಮಾಧಾನವಾಗಿ ಹೇಳಬಹುದು. ಅಲ್ಲದೆ ಅವನು ಕ್ರೈಸ್ತಪಾದ್ರಿಯಾಗಿದ್ದುರಿಂದ ಸಂತತಿನಿರೋಧ ಸಾಧನಗಳು ಅವನ ಧಾರ್ಮಿಕ ದೃಷ್ಟಿಗೆ ವಿರೋಧವೆನಿಸಿದ್ದುವು. ಜನನ ಜೀವನ ಮಟ್ಟ ಏರಿಕೆಯಾದಂತೆ, ಸಾಂಸ್ಕøತಿಕ ಮುನ್ನಡೆಯಾದಂತೆ ಒಂದು ದೇಶದ ಜನನ ದರ ಇಳಿಯುವ ಪ್ರವೃತ್ತಿ 19-20 ನೆಯ ಶತಮಾನದ ಇತಿಹಾಸದಲ್ಲಿ ವ್ಯಕ್ತವಾಗಿದೆ. ಆದ್ದರಿಂದ ಮಾಲ್ಥಸನ ಜನಸಂಖ್ಯಾ ಸ್ಫೋಟನದ ಭಾವನೆಗೆ ಐತಿಹಾಸಿಕ ಸಾಕ್ಷ್ಯ ದೊರೆತಿಲ್ಲವೆಂದು ಹೇಳಬಹುದು. ಮಾಲ್ಥಸನ ಸಿದ್ಧಾಂತದ ಪ್ರಾಮುಖ್ಯ ; ಮಾಲ್ಥಸನ ಸಿದ್ಧಾಂತ ಅನೇಕ ಟೀಕೆಗಳಿಗೆ ಒಳಗಾಗಿದೆಯಾದರೂ ಅದರ ಕೆಲವು ಮೂಲಭಾವನೆಗಳು ಇಂದಿಗೂ ಮನ್ನಣೆಗೆ ಅರ್ಹ. ಜನರ ನಿವಾರಕ ಕ್ರಮಗಳ ಮೂಲಕ ಜನಸಂಖ್ಯೆಯ ಏರಿಕೆಯನ್ನು ತಡೆಗಟ್ಟಬೇಕಾದ್ದರ ಪ್ರಾಮುಖ್ಯವನ್ನು ಆತನ ಸಿದ್ಧಾಂತದಲ್ಲಿ ಒತ್ತಿ ಹೇಳಲಾಗಿದೆ. ಇಂದು ಎಲ್ಲ ರಾಷ್ಟ್ರಗಳೂ ಪ್ರಚುರವಾಗಿರುವ ಮಿತಕುಟುಂಬ ಯೋಜನೆಯ ಭಾವನೆ ಇಲ್ಲಿ ಅಡಗಿದೆ. ಕೃಷಿ ಉದ್ಯಮದಲ್ಲಿ ಎಷ್ಟೇ ವೈಜ್ಞಾನಿಕ ಪ್ರಗತಿ ಆದಾಗ್ಯೂ ಈ ಉದ್ಯಮ ಇಳಿಮುಖ ಪ್ರತಿಫಲ ನಿಯಮಕ್ಕೆ ಒಳಪಡುವ ಹಂತ ಇಂದಲ್ಲ ನಾಳೆ ಬಂದಿತು, ಆದ್ದರಿಂದ, ಆಹಾರ ಉತ್ಪಾದನೆ ಒಟ್ಟಿನಲ್ಲಿ ಜನಸಂಖ್ಯೆಯ ಏರಿಕೆಗಿಂತ ಮಂದಗತಿಯುಳ್ಳದ್ದು-ಎಂದು ಮಾಲ್ಥಸ್ ನೀಡಿದ ಎಚ್ಚರಿಕೆ ವಿವೇಕಯುತವಾದ್ದು. ಭಾರತ, ಚೀನ, ಇತ್ಯಾದಿ ರಾಷ್ಟ್ರಗಳಲ್ಲಿ ಕೃಷಿ ಹಾಗೂ ಕೈಗಾರಿಕಾ ಉತ್ಪಾದನೆಗಿಂತ ಜನಸಂಖ್ಯೆ ಹೆಚ್ಚು ವೇಗವಾಗಿ ಬೆಳೆದಿರುವುದರ ಪರಿಣಾಮವಾಗಿ ರೋಗ, ಕ್ಷಾಮ, ಹಸಿವು ಮುಂತಾದವು ಸಂಭವಿಸಿರುವುದು ಮಾಲ್ಥಸನ ವಾದವನ್ನು ಸಮರ್ಥಿಸುವಂತಿದೆ. ಹೀಗೆ ಮಾಲ್ಥಸನ ಸಿದ್ಧಾಂತದಲ್ಲಿ ಕೆಲವು ಸತ್ಯಾಂಶಗಳಿವೆ ಎಂಬುದನ್ನು ಅಲಕ್ಷಿಸುವಂತಿಲ್ಲ. ಆದರೂ ಜನಸಂಖ್ಯೆ, ಆರ್ಥಿಕ ಪರಿಸ್ಥಿತಿ ಮತ್ತು ಅಭಿವೃದ್ಧಿ-ಇವುಗಳ ಪರಸ್ಪರ ಸಂಬಂಧ ವಿವರಣೆಗೆ ಮಾಲ್ಥಸನ ವಿಶ್ಲೇಷಣೆಯೊಂದೇ ಸಹಕಾರಿಯಾಗಲಾರದು. ಆದ್ದರಿಂದಲೇ ಇತರ ಜನಸಂಖ್ಯಾ ಸಿದ್ಧಾಂತಗಳ ವಿಕಾಸವಾಗಿದೆ. ಅನುಕೂಲತಮ ಜನಸಂಖ್ಯಾ ಸಿದ್ದಾಂತ : ಇದನ್ನು ಪ್ರತಿಪಾದಿಸಿದವನು ಎಡ್ವಿನ್ ಕ್ಯಾನನ್ ಎಂಬ ಇಂಗ್ಲಿಷ್ ಅರ್ಥಶಾಸ್ತ್ರಜ್ಞ. ಯಾವುದೇ ಕಾಲದಲ್ಲಿ ಒಂದು ದೇಶದಲ್ಲಿರುವ ಪ್ರಾಕೃತಿಕ ಸಾಧನಗಳು, ಬಂಡವಾಳ, ಅಲ್ಲಿ ಅನುಸರಿಸುತ್ತಿರುವ ಉತ್ಪಾದನ ಪದ್ಧತಿ-ಇವುಗಳಿಗೆ ಅನುಗುಣವಾದ ಯಾವುದೋ ಒಂದು ನಿರ್ದಿಷ್ಟ ಗಾತ್ರದ ಜನಸಂಖ್ಯೆ ಇದ್ದರೆ ಆ ದೇಶದ ತಲಾ ವರಮಾನ ಗರಿಷ್ಠವಾಗಿರುತ್ತದೆ. ಈ ಗಾತ್ರಕ್ಕೆ ಕಡಿಮೆಯಾಗಿ ಆಗಲಿ, ಹೆಚ್ಚಾಗಿ ಆಗಲಿ ಜನಸಂಖ್ಯೆ ಇದ್ದರೆ ಆ ದೇಶದ ತಲಾ ವರಮಾನ ಈ ಗರಿಷ್ಠ ಮಟ್ಟಕ್ಕಿಂತ ಕಡಿಮೆಯಾಗುತ್ತದೆ. ತಲಾ ವರಮಾನದ ಗರಿಷ್ಠವಾಗಿರಲು ಅವಶ್ಯವಾಗುವ ಜನಸಂಖ್ಯೆಯೇ ಅನುಕೂಲತಮ ಜನ ಸಂಖ್ಯೆ (ಆಪ್ಟಿಮಮ್ ಪಾಪ್ಯುಲೇಷನ್), ದೇಶದ ಸಂಪನ್ಮೂಲಗಳನ್ನು ಉತ್ಪಾದನೆಗೆ ರೂಢಿಸಲು ಇರುವ ಜನಬಲ ಅನುಕೂಲತಮ ಜನಸಂಖ್ಯೆಗಿಂತ ಕಡಿಮೆಯಾಗಿದ್ದರೆ, ಈ ಅನುಕೂಲತಮ ಮಟ್ಟ ತಲುಪುವ ವರೆಗೆ, ಏರುವ ಜನಸಂಖ್ಯೆಯ ದರಕ್ಕಿಂತ ಉತ್ಪಾದನೆಯ ಏರಿಕೆಯ ದರ ಅಧಿಕವಾಗಿರುತ್ತದೆ. ಜನಸಂಖ್ಯೆ ಈ ಮಟ್ಟವನ್ನೂ ಮೀರಿದರೆ ತಲಾ ವರಮಾನ ಅನುಕೂಲತಮ ಮಟ್ಟದ ತಲಾ ವರಮಾನಕ್ಕಿಂತ ಕಡಿಮೆಯಾಗುವುದು. ಅನುಕೂಲತಮ ಮಟ್ಟದ ತಲಾ ವರಮಾನಕ್ಕೆ ಅಗತ್ಯವಾದ್ದಕ್ಕಿಂತ ಕಡಿಮೆ ಜನಸಂಖ್ಯೆ ಇದ್ದರೆ ಅದು ಜನಸಂಖ್ಯೆಯ ಕೊರತೆ ಎನಿಸುತ್ತದೆ; ಆರ್ಥಿಕ ದೃಷ್ಟಿಯಿಂದ ಅನುಕೂಲ ತಮ ಜನಸಂಖ್ಯೆ ಆದರ್ಶಪ್ರಾಯವಾದ್ದು. ಇರತಕ್ಕ ಪರಿಸ್ಥಿತಿಗೆ ಅನುಗುಣವಾಗಿ ಗರಿಷ್ಠ ತಲಾ ವರಮಾನ ಸಾಧಿಸಬಲ್ಲ ಜನಸಂಖ್ಯೆ ಹೊಂದಿರುವುದೇ ಜನಸಂಖ್ಯಾ ನೀತಿಯ ಉದ್ದೇಶವಾಗಿರಬೇಕೆಂದು ಈ ಸಿದ್ಧಾಂತ ಸೂಚಿಸುತ್ತದೆ. ಅನುಕೂಲತಮ ಜನಸಂಖ್ಯೆಯ ಸಿದ್ಧಾಂತ ಮಾಲ್ಥಸನ ಸಿದ್ಧಾಂತಕ್ಕಿಂತ ಆರ್ಥಿಕ ದೃಷ್ಟಿಯಿಂದ ಹೆಚ್ಚು ವ್ಯಾಪಕವೂ ಸಮಂಜಸವೂ ಆಗಿದೆ ಎಂದು ಹೇಳಬಹುದು. ತಲಾವರಮಾನದ ಏರಿಕೆಯನ್ನು ಜನಸಂಖ್ಯಾ ಪರಿಸ್ಥಿತಿಯನ್ನು ಸಂಬಂಧಿಸಿ ವಿವೇಚಿಸುವುದು ಸೂಕ್ತ ವಿಧಾನ, ಆದರೂ ಈ ಸಿದ್ಧಾಂತ ಕೆಲವು ಟೀಕೆಗಳಿಗೆ ಗುರಿಯಾಗಿದೆ. ಚಲನಾತ್ಮಕವಾದ ವಾಸ್ತವ ಪ್ರಪಂಚದಲ್ಲಿ ಅನುಕೂಲತಮ ಜನ ಸಂಖ್ಯೆ ಎಷ್ಟೆಂಬುದನ್ನು ಗುಣಿಸುವುದು ಸಾಧ್ಯವಾಗಲಾರದು. ಆದ್ದರಿಂದ ಇದು ಕೇವಲ ಕಾಲ್ಪನಿಕವೇ ಹೊರತು ವಾಸ್ತವವಾಗಿ ಉಪಯುಕ್ತವಲ್ಲ-ಎಂಬುದು ಮುಖ್ಯ ಟೀಕೆ. ಪತ್ತೆ ಆಗಿರುವ ಸಾಧನ ಸಂಪತ್ತು , ಉತ್ಪಾದನ ತಂತ್ರ, ಉತ್ಪಾದನ ವ್ಯವಸ್ಥೆ, ಕಾರ್ಮಿಕರ ದಕ್ಷತೆ, ಉದ್ಯಮಶೀಲತೆ ಬಂಡವಾಳ ಲಭ್ಯತೆ ಮುಂತಾದವು ಬದಲವಣೆಯಾದಂತೆ ಅನುಕೂಲತಮ ಜನಸಂಖ್ಯೆಯೂ ಬದಲಾಯಿಸುವುದು. ಎಂದಮೇಲೆ ಅನಕೂಲತಮ ಮಟ್ಟ ಯಾವುದು ಎಂಬುದು ಗತಿಶೀಲ ಅಥವಾ ಚಲನಾತ್ಮಕ ಭಾವನೆ. ಅನುಕೂಲತಮ ಜನಸಂಖ್ಯೆಯ ಗಾತ್ರವನ್ನು ನಿಶ್ಚಿತವಾಗಿ ಇಷ್ಟೇ ಎಂದು ಹೇಳುವುದು ಕಷ್ಟವಾದ್ದರಿಂದ ಈ ಸಿದ್ಧಾಂತದ ವ್ಯವಹಾರಿಕ ಪ್ರಯೋಜನ ಕಡಿಮೆ ಎಂದು ಹೇಳಬೇಕಾಗುತ್ತದೆ. ಆದರೂ ಜನಸಂಖ್ಯೆ, ಆರ್ಥಿಕ ಪರಿಸ್ಥಿತಿ ಇವುಗಳ ಪರಸ್ಪರ ಸಂಬಂಧದ ಅಧ್ಯಯನ ದಲ್ಲಿ ಈ ಸಿದ್ಧಾಂತಕ್ಕೆ ಮಹತ್ತ್ವವಿದೆ. ಯಾವುದೇ ದೇಶದಲ್ಲಿ ಕಾರ್ಮಿಕ ಬಲಕ್ಕೆಲ್ಲ ಉದ್ಯೋಗವಿದ್ದು, ಜನರ ತಲಾ ವರಮಾನ ಹೆಚ್ಚುತ್ತಿದ್ದರೆ ಅಲ್ಲಿ ಅನುಕೂಲತಮ ಜನಸಂಖ್ಯೆಯ ಮಟ್ಟ ಇನ್ನೂ ತಲುಪಿಲ್ಲವೆಂದು ಹೇಳಬಹುದು. ತಲಾವರಮಾನ ಇಳಿಯುವ ಪ್ರವೃತ್ತಿ ಕಂಡುಬಂದಾಗ ಕೇವಲ ಆರ್ಥಿಕ ದೃಷ್ಟಿಯಿಂದ ಅನುಕೂಲತಮ ಜನಸಂಖ್ಯೆಯ ಮಟ್ಟ ತಲುಪಿತೆಂದು ಊಹಿಸಬಹುದು. ಜನಸಂಖ್ಯೆ ಕೇವಲ ಆರ್ಥಿಕ ಪ್ರಶ್ನೆ ಮಾತ್ರವಾಗಿಲ್ಲದಿರುವುದರಿಂದ ಆರ್ಥಿಕೇತರ ದೃಷ್ಟಿಗಳಿಂದಲೂ ಯಾವ ಗಾತ್ರದ ಜನಸಂಖ್ಯೆ ದೇಶಕ್ಕೆ ಅನುಕೂಲತಮವೆಂಬುದನ್ನು ಗಮನಿಸಬೇಕಾಗುತ್ತದೆ. ಅನುಕೂಲತಮ ಜನಸಂಖ್ಯೆಯ ಸಿದ್ಧಾಂತ ಆರ್ಥಿಕೇತರ ಅಂಶಗಳನ್ನು ಪರಿಗಣಿಸದಿರುವುದು ಅದರ ಒಂದು ಮಿತಿ ಎಂದು ಹೇಳಲಾಗಿದೆ. ಜನಸಂಖ್ಯಾ ಪರಿವರ್ತನ ಸಿದ್ಧಾಂತ : ಮಾಲ್ಥಸ್ ಮತ್ತು ಕ್ಯಾನನ್ ಸಿದ್ಧಾಂತಗಳು ಪ್ರಚುರವಾದ ತರುವಾಯ, ಜನಸಂಖ್ಯೆಗೂ ಆರ್ಥಿಕಾಭಿವೃದ್ಧಿಗೂ ಇರುವ ಪರಸ್ಪರ ಸಂಬಂಧಗಳನ್ನು ಕುರಿತ ಅನೇಕ ಅಧ್ಯಯನಗಳ ನಡೆದಿವೆ. ಆರ್ಥಿಕಾಭಿವೃದ್ಧಿಯ ಮೇಲೆ ಜನಸಂಖ್ಯೆಯೂ ಜನಸಂಖ್ಯೆಯ ಪ್ರವೃತ್ತಿಗಳ ಮೇಲೆ ಆರ್ಥಿಕಾಭಿವೃದ್ಧಿಯೂ ಪರಿಣಾಮ ಬೀರುತ್ತವೆ ಎಂಬುದು ನಿರ್ವಿವಾದ. ಆರ್ಥಿಕಾಭಿವೃದ್ಧಿಯ ವಿವಿಧ ಹಂತಗಳಲ್ಲಿ ಜನಸಂಖ್ಯೆಗೆ ಸಂಬಂಧಿಸಿದ ಪ್ರವೃತ್ತಿಗಳು ಹೇಗೆ ಸಾಗುವುವು ಎಂಬ ಬಗ್ಗೆ ಐತಿಹಾಸಿಕ ಪ್ರಮಾಣಗಳು ಮತ್ತು ತಾರ್ಕಿಕ ವಿಶ್ಲೇಷಣೆಗಳ ಆಧಾರದ ಮೇಲೆ ಅರ್ಥಶಾಸ್ತ್ರಜ್ಞರೂ ಜನಸಂಖ್ಯಾತಜ್ಞರೂ ಅನೇಕ ನಿರ್ಣಯಗಳನ್ನು ಸ್ಥಾಪಿಸಿದ್ದಾರೆ. ಆರ್ಥಿಕಾಭಿವ್ಧಿದ್ದಿಯ ವಿವಿಧ ಹಂತಗಳಲ್ಲಿ ಜನಸಂಖ್ಯೆಯ ಬಗ್ಗೆ ನಿರ್ದಿಷ್ಟ ಲಕ್ಷಣಗಳನ್ನು ಗುರತಿಸಿ ಬ್ಲಾಕರ್, ಥಾಂಪ್ಸನ್, ಕಾಗ್ವಿಲ್, ಲಾಂಡ್ರಿ ಮುಂತಾದ ಜನಸಂಖ್ಯಾತಜ್ಞರು ಜನಸಂಖ್ಯಾಪ್ರವೃತ್ತಿಗಳ ಕೆಲವು ಹಂತಗಳನ್ನು ಗುರುತಿಸಿದ್ದಾರೆ. ತತ್ಫಲವಾಗಿ ರೂಪಿತವಾದ್ದೀ ಜನಸಂಖ್ಯಾ ಪರಿವರ್ತನ ಸಿದ್ಧಾಂತ. ಯಂತ್ರ ಹಾಗೂ ಶಕ್ತಿ ಇವುಗಳ ಆಧಾರದ ಮೇಲೆ ರಚಿತವಾದ ಆಧುನಿಕ ಆರ್ಥಿಕಾಭಿವೃದ್ಧಿ ಆರಂಭವಾಗುವುದಕ್ಕೆ ಮುಂಚೆ ಇದ್ದ ಪ್ರಾಚೀನ ಮಾದರಿಯ ಕೃಷಿಯ ಪ್ರಧಾನ ಆರ್ಥಿಕತೆಯ ಪ್ರಥಮ ಹಂತದಲ್ಲಿ ಜನನದರ- ಮರಣದರಗಳೆರಡೂ ಹೆಚ್ಚಾಗಿರುವುವು. ಅಪೌಷ್ಟಿಕ ಆಹಾರ, ಸಾಂಕ್ರಾಮಿಕ ರೋಗಗಳ ಹಾವಳಿ, ವೈದ್ಯಕೀಯ ಹಾಗೂ ಆರೋಗ್ಯ ಸೇವೆಗಳ ಅಭಾವ ಇತ್ಯಾದಿ ಕಾರಣಗಳಿಂದ ಮರಣದರ ಹೆಚ್ಚಾಗಿರುತ್ತದೆ. ಬಾಲ್ಯವಿವಾಹ, ದೊಡ್ಡ ಕುಟುಂಬ ಬೆಳೆಸಲು ಪ್ರೋತ್ಸಾಹದಾಯಕವಾದ ಸಾಮಾಜಿಕ ಮತ್ತು ಮತೀಯ ಸಂಪ್ರದಾಯಗಳು, ಹೆಚ್ಚು ಜನರಿರುವ ಕುಟುಂಬಗಳಿರಬೇಕೆಂದು ಕೃಷಿಕ ಜನಾಂಗಗಳ ಅಪೇಕ್ಷೆ, ವೃದ್ಧಾಪ್ಯದಲ್ಲಿ ತಮ್ಮನ್ನು ನೋಡಿಕೊಳ್ಳಲು ಹೆಚ್ಚು ಮಕ್ಕಳಿರಬೇಕೆಂದು ಮಾತಾಪಿತೃಗಳ ಬಯಕೆ, ಮಕ್ಕಳ ಪೋಷಣೆ ಭಾರವೆನಿಸದಿರುವ ಪರಿಸ್ಥಿತಿ-ಇತ್ಯಾದಿ ಅಂಶಗಳಿಂದಾಗಿ ಜನನದರ ಹೆಚ್ಚಾಗಿರುತ್ತದೆ. ಈ ಪರಿಸ್ಥಿತಿಗಳಿದ್ದ, ಕ್ರಿಸ್ತಶಕೆಯ ಮೊದಲ 15 ಶತಮಾಶನಗಳಲ್ಲಿ ಮರಣದರ 1000 ಕ್ಕೆ 30-40ರಷ್ಟೂ ಜನದರವೂ ಸುಮಾರು ಇದೇ ಮಟ್ಟದಲ್ಲೂ ಇದ್ದುವು. ಪ್ರಪಂಚದ ಜನಸಂಖ್ಯೆಯ ವಾರ್ಷಿಕ ಏರಿಕಯ ದರ 100ಕ್ಕೆ 1 ಕ್ಕಿಂತ ಮೀರಿರಲಿಲ್ಲ ಎಂಬುದಾಗಿ ಆರ್ಥರ್ ಲೂಯಿಸ್ ಎಂಬ ಅರ್ಥಶಾಸ್ತ್ರಜ್ಞ ಆಧಾರ ಸಮೇತ ಹೇಳಿದ್ದಾನೆ. ಆರ್ಥಿಕಾಭಿವೃದ್ಧಿಯೊಡನೆ ತಲಾ ವರಮಾನದ ಏರಿಕೆಯೂ ಜನಜೀವನದ ಸಾಮಾನ್ಯ ಸ್ಥಿತಿಯಲ್ಲಿ ಮುಖ್ಯ ಬದಲಾವಣೆಗಳೂ ಉಂಟಾಗುವುವು. ಇವುಗಳ ಪರಿಣಾಮವಾಗಿ ಜನನ ಹಾಗೂ ಮರಣದರಳೆರಡೂ ಬದಲಾಯಿಸುವುವು. ಈ ಬದಲಾವಣೆಯಲ್ಲಿ ನಿರ್ದಿಷ್ಟ ಕ್ರಮವಿರುವುದನ್ನು ಜನಸಂಖ್ಯಾ ಪರಿವರ್ತನ ಸಿದ್ಧಾಂತ ತೋರಿಸಿದೆ. ಆರ್ಥಿಕಾಭಿವೃದ್ಧಿಯ ಪ್ರಥಮ ಹಂತದಲ್ಲಿ ಜನನದರ ಇಳಿಯದೆ ಮರಣದರ ಮಾತ್ರವೇ ಇಳಿಯುವ ಪ್ರವೃತ್ತಿ ತೋರಿಬರುತ್ತದೆಂಬುದು ಈ ಸಿದ್ಧಾಂತದ ಒಂದು ಅಂಶ ಮರಣದರ ಇಳಿಯುವುದಕ್ಕೆ ಅನೇಕ ಕಾರಣಗಳುಂಟು. ಜನರ ಆರೋಗ್ಯಮಟ್ಟ ಹೆಚ್ಚಿಸುವ ಅನೇಕ ಬದಲಾವಣೆಗಳ ಅಭಿವೃದ್ಧಿಯಿಂದ ಸಂಭವಿಸುತ್ತವೆ. ಆಹಾರ ಪದಾರ್ಥಗಳ ಉತ್ಪಾದನೆ ಹೆಚ್ಚುವುದೇ ಅಲ್ಲದೆ ಅವುಗಳ ವಿತರಣೆ ವವ್ಯಸ್ಥೆಯೂ ಉತ್ತಮವಾಗುವುದರಿಂದ ಜನರ ಆಹಾರ ಸೇವನೆಯ ಮಟ್ಟ ಏರುತ್ತದೆ. ಕ್ಷಾಮಭೀತಿ ಕಡಿಮೆಯಾಗುತ್ತದೆ. ಸಾಂಕ್ರಾಮಿಕಗಳನ್ನು ತಡೆಗಟ್ಟುವ ಏರ್ಪಾಡುಗಳು, ಆರೋಗ್ಯ ಹಾಗೂ ವೈದ್ಯಕೀಯ ಸೇವೆಗಳು, ನಗರ ನೈರ್ಮಲ್ಯ ಕಾರ್ಯಗಳು, ನೀರು ಸರಬರಾಯಿ-ಇವೆಲ್ಲವು ಆರ್ಥಿಕಾಭಿವೃದ್ಧಿಯೊಡನೆ ಹೆಚ್ಚು ವ್ಯವಸ್ಥಿತವಾಗುತ್ತ ಬರುತ್ತವೆ. ಹೀಗೆ ವಿವಿಧ ರೀತಿಯಲ್ಲಿ ಜನಜೀವನದ ವಾತಾವರಣ ಉತ್ತಮವಾಗುವುದರಿಂದ ಮರಣದರ ಇಳಿಯುವುದೆಂದು ಹೇಳಲಾಗಿದೆ. ಮರಣದರ ಇಳಿಯುವ ಅಭಿವೃದ್ಧಿಯ ಪ್ರಥಮ ಹಂತದಲ್ಲೇ ಜನನದರ ಇಳಿಯದಿರುವುದಕ್ಕೂ ಮುಖ್ಯ ಕಾರಣಗಳಿವೆ. ಮರಣದರ ಇಳಿಯುವಂತೆ ಮಾಡುವ ಕ್ರಮಗಳನ್ನು ಉತ್ಸಾಹದಿಂದ ಸ್ವಾಗತಿಸುವವರು ಜನನದರ ಇಳಿಯುವಂತೆ ಮಾಡುವ ಕ್ರಮಗಳನ್ನು ಕೈಗೊಳ್ಳುವುದರಲ್ಲಿ ಅಷ್ಟೇ ಆಸಕ್ತಿ ಹೊಂದಿರುವುದಿಲ್ಲ. ಬಹುಕಾಲದಿಂದಲೂ ನಡೆದು ಬಂದ ನಂಬಿಕೆಗಳು, ನಡೆವಳಿಕಗಳು, ಸಂಪ್ರದಾಯಗಳು, ಸಾಮಾಜಿಕ ಹಾಗೂ ಮತೀಯ ಕಟ್ಳೆಳೆಗಳು-ಇವೆಲ್ಲವೂ ಸುಲಭವಾಗಿ ಮತ್ತು ಶೀಘ್ರವಾಗಿ ಬದಲಾಯಿಸಲಾರವು. ಮಿತಕುಟುಂಬದ ಅಪೇಕ್ಷಣೀಯತೆಗಳನ್ನು ಜನರು ಅರಿತುಕೊಳ್ಳಲು ಕಾಲವಕಾಶ ಬೇಕಾಗುತ್ತದೆ. ಕ್ರಮೇಣ ಈ ಭಾವನೆ ಅವರಿಗೆ ಒಪ್ಪಿಗೆಯಾಗುವುದಾದರೂ ಸಂತಾನ ನಿಯಂತ್ರಣವನ್ನು ಕೈಗೊಳ್ಳಲು ಗರ್ಭನಿರೋಧಕಗಳ ಅಜ್ಞಾನ, ಅವುಗಳ ಅಭಾವ, ಅವನ್ನು ಆಚರಣೆಗೆ ತರಲು ಕಾರ್ಯತಃ ಅವರ ಬಡವಸತಿಳಲ್ಲಿರುವ ಅಡಚಣೆಗಳು ಇತ್ಯಾದಿ ಕಾರಣಗಳಿಂದಾಗಿ ಸಂತಾನ ನಿಯಂತ್ರಣ ಜಾರಿಗೆ ಬರುವುದು ನಿಧಾನ. ಆದ್ದರಿಂದ ಅಭಿವೃದ್ಧಿಯ ಪ್ರಥಮ ಹಂತದಲ್ಲಿ ಜನನದರ ಇಳಿಯುವುದಿಲ್ಲ. ಜನನದರ ಇಳಿಯದೆ ಮರಣದರವೊಂದೇ ಇಳಿಯುವುದರಿಂದ ಜನಸಂಖ್ಯಾ ಬೆಳೆವಣಿಗೆಯ ದರ ಹೆಚ್ಚುವುದು ಜನನಮರಣದರಗಳೊಳಗೆ ಹಿಂದೆ ಇದ್ದ ಸಮತೋಲ ಸ್ಥಿತಿಯನ್ನು ಅಭಿವೃದ್ಧಿ ಹೀಗೆ ತಪ್ಪಿಸಿದಂತಾಗುವುದು . ಆದರೆ ಅಭಿವೃದ್ಧಿ ಇನ್ನೂ ಮುಂದೆ ಸಾಗಿದಾಗ, ಹೀಗೆ ತಪ್ಪಿದ ಸಮತೋಲ ಹೊಸ ರೂಪದಲ್ಲಿ ಪುನಃ ಸ್ಥಾಪನೆಯಾಗುವುದು. ಆಗ ಜನನಮರಣದರಗಳೆರಡೂ ಕೆಳಮಟ್ಟದಲ್ಲಿ ನೆಲೆಸುತ್ತವೆ. ಆರ್ಥಿಕಾಭಿವೃದ್ಧಿ ಮೇಲೆ ಹೇಳಿದ ಮೊದಲನೆಯ ಹಂತದಲ್ಲಿ ಇನ್ನೊಂದು ಹಂತಕ್ಕೆ ಮುಂದುವರಿದಾಗ ಜನನದರವೂ ಇಳಿಯಲಾರಂಭಿಸುವುದು. ಕೆಲಕಾಲದವರೆಗೆ ಮರಣದರದ ಇಳಿತದ ದರ ಜನನದರದ ಇಳಿತದ ದರಕ್ಕಿಂತ ಹೆಚ್ಚಾಗಿರುವುದು. ಈ ಪ್ರವೃತ್ತಿಗಳು ಹೀಗೆ ಮುಂದುವರಿದ ಅನಂತರ ಮರಣದರ ಇನ್ನು ಕೆಳಗೆ ಇಳಿಯಲಾಗದ ಒಂದು ಘಟ್ಟವನ್ನು ತಲುಪುವುದು. ಆ ಮಟ್ಟದಲ್ಲಿ ಮರಣದರ ಒಂದು ಸ್ಥಿರತೆ ಪಡೆಯುತ್ತದೆ. ಜನನದರವೂ ಗಣನೀಯವಾಗಿ ಇಳಿಯುವುದಾದರೂ ಮರಣದರಂತೆ ಅದು ಸ್ಥಿರತೆ ಪಡೆಯುವುದಿಲ್ಲ. ಏಕೆಂದರೆ ಇದು ಜನರ ಸ್ವಯಂ ಪ್ರೇರಿತ ನಿರ್ಣಯಗಳಿಗೆ ಸ್ವಲ್ಪಮಟ್ಟಿನ ಏರಿಳಿತಕ್ಕೆ ಅವಕಾಶವಿರುತ್ತದೆ. ಆರ್ಥಿಕಾಭಿವೃದ್ಧಿಯ ಮುಂದುವರಿದ ಹಂತಗಳಲ್ಲಿ ಜನದರದಲ್ಲಿ ಏಕೆ ಇಳಿತವಾಗುವುದು ಎಂಬುದು ಕುತೂಹಲಕಾರಿಯಾದ ಪ್ರಶ್ನೆ. ಇದಕ್ಕೆ ಜನಸಂಖ್ಯಾ ಪರಿವರ್ತನ ಸಿದ್ಧಾಂತ ಸೂಕ್ತ ವಿವರಣೆ ನೀಡಿದೆ. ಯಾವೊಂದು ರಾಷ್ಟ್ರದಲ್ಲೂ ಆರ್ಥಿಕ ಬೆಳವಣಿಗೆಯೊಡನೆ ಜನನದರ ಏರದಿರುವುದೂ ವಾಸ್ತವವಾಗಿ ಅದು ಇಳಿಯುತ್ತ ಸಾಗಿರುವುದ ಇತಿಹಾಸಸಿದ್ಧ ವಿಷಯಗಳು. ಅಭಿವೃದ್ದಿ ಹೊಂದಿದ ಐರೋಪ್ಯ ರಾಷ್ಟ್ರಗಳಲ್ಲಿ ಕಳೆದ ಸುಮಾರು ಒಂದೂವರೆ ಶತಮಾನದಲ್ಲಿ ಜನನ ದರ 1000ಕ್ಕೆ ಸುಮಾರು 35 ರಿಂದ 1000ಕ್ಕೆ 15 ಇಳಿದಿದೆ. ಅಲ್ಲದೆ ಜನರ ಸಾಮಾಜಿಕ ನಡೆವಳಿಕೆ, ಮಾನಸಿಕ ಪ್ರವೃತ್ತಿಗಳು, ಆರ್ಥಿಕ ವ್ಯವಸ್ಥೆ ಇವುಗಳಲ್ಲಿ ಆರ್ಥಿಕಾಭಿವೃದ್ಧಿಯೊಡನೆ ಆಗುವ ಬದಲಾವಣೆಗಳು ಮಿತಕುಟುಂಬ ಭಾವನೆಗಳನ್ನು ಬೆಳೆಸುವು. ಪುರಾತನ ಕೃಷಿ ಆರ್ಥಿಕತೆಯಲ್ಲಿ ಉತ್ಪಾದನಘಕಟವಾಗಿದ್ದ ಕುಟುಂಬ ತನ್ನ ಪ್ರಾಮುಖ್ಯ ಕಳೆದುಕೊಳ್ಳುವುದು. ಜನರಲ್ಲಿ ವೈಯಕ್ತಿಕ ಧೋರಣೆ ಬೆಳೆಯುವುದು. ನಗರಗಳ ಸಂಖ್ಯೆ ಹೆಚ್ಚುವುದು. ವಿಸ್ತøತ ನಗರ ವಾತಾವರಣದಲ್ಲಿ ಗ್ರಾಮೀಣ ವಾತಾವರಣದಲ್ಲಿದ್ದಂತೆ ಹೆಚ್ಚು ಜನರಿರುವ ಕುಟುಂಬಗಳು ಲಾಭದಾಯಕವಾಗದಿರುವುದರಿಂದಲೂ ಕುಟುಂಬದ ಸಂಖ್ಯೆಯನ್ನು ಪರಿಮಿತಗೊಳಿಸುವ ಭಾವನೆ ಹುಟ್ಟುವುದು. ಸಾಂಪ್ರದಾಯಿಕ ಮೌಲ್ಯಗಳ ಹಾಗೂ ನಂಬಿಕೆಗಳ ಹಿಡಿತ ಸಡಿಲವಾಗಿ, ಮಿತ ಕುಟುಂಬದ ಪರವಾದ ವಿವೇಚನಾಯುತ ಧೋರಣೆ ಜನರಲ್ಲಿ ಬೆಳೆಯುವುದು ಆರ್ಥಿಕಾಭಿವೃದ್ಧಿಯೊಡನೆ ಸ್ತ್ರಿಯರ ಪಾತ್ರ ಕೇವಲ ಗೃಹಿಣಿಯ ಕರ್ತವ್ಯಗಳಿಗೆ ಸೀಮಿತವಾಗಿರದೆ, ಆರ್ಥಿಕತೆಯ ವಿವಿಧ ಕ್ಷೇತ್ರಗಳಿಗೆ ಹರಡುವುದರಿಂದ ಅವರ ಆರ್ಥಿಕ ಸಾಮಾಜಿಕ ಅಂತಸ್ತು ಹೆಚ್ಚುವುದು. ಹೊಸ ವ್ಯಕ್ತಿತ್ವ ಬೆಳೆಸಿಕೊಳ್ಳುವ ಸ್ತ್ರೀಯರು ತಮ್ಮ ಪೂರ್ವಜರಂತೆ ಚಿಕ್ಕವಯಸ್ಸಿನಲ್ಲೆ ಮದುವೆಯಾಗಲು ಹೆಚ್ಚು ಮಕ್ಕಳನ್ನು ಹೆರಲು ಬಯಸುವುದಿಲ್ಲ. ಅವಿವಾಹಿತರಾಗಿಯೆ ಉಳಿಯಬಯಸುವವರ ಸಂಖ್ಯೆ ಹೆಚ್ಚಬಹುದು. ಆರ್ಥಿಕಾಭಿವೃದಿಯೊಡನೆ ಜನರಲ್ಲಿ ವಿದ್ಯಾಭ್ಯಾಸವೂ ತಾರ್ಕಿಕ ಮನೋಭಾವವೂ ವಿಸ್ತರಿಸುವುವು. ಕುಟುಂಬದ ಗಾತ್ರದ ಬಗ್ಗೆಯೂ ಜನರು ತಾರ್ಕಿಕ ಧೋರಣೆ ಅನುಸರಿಸುವವರು. ಮಕ್ಕಳಿಂದ ನಿರೀಕ್ಷಿಸುವ ಅಥವಾ ಪಡೆಯುವ ಪ್ರಯೋಜನ ಮಕ್ಕಳ ಪೋಷಣೆಗೆ ತಗಲುವ ವೆಚ್ಚ ಇವನ್ನು ತಂದೆತಾಯಿಯರು ಲೆಕ್ಕ ಹಾಕುವರು. ಲೀಬಿನ್ ಸ್ಟಿನ್ ಎಂಬ ಅರ್ಥಶಾಸ್ತ್ರಜ್ಞ ಈ ಲೆಕ್ಕಚಾರದ ವಿಶ್ಲೇಷಣೆಯನ್ನು ಶಾಸ್ತ್ರೀಯವಾಗಿ ವಿವರಿಸಿದ್ದಾನೆ. ಆರ್ಥಿಕಾಶಭಿವೃದ್ಧಿಯ ಮಂದಿನ ಹಂತಗಳಲ್ಲಿ ಹೆಚ್ಚು ಮಕ್ಕಳಿಂದ ತಂದೆತಾಯಿಗಳು ಪಡೆಯಬಹುದಾದ ತುಷ್ಟಿಗುಣಕ್ಕಿಂತ ಮಕ್ಕಳ ಪೋಷಣೆಯ ವೆಚ್ಚವೇ ಹೆಚ್ಚುವುದರಿಂದ ಅವರು ಕುಟುಂಬವನ್ನು ಮಿತಿಗೆ ಒಳಪಡಿಸಲು ಬಯಸುತ್ತಾರೆ ಎಂದು ಆತ ಹೇಳಿದ್ದಾನೆ. ಭವಿಷ್ಯದಲ್ಲಿ ಕುಟುಂಬದ ಸಂಪಾದನೆಗೆ ತಮ್ಮ ಸಂಪಾದನೆಯನ್ನು ಸೇರಿಸುವುದರ ಮೂಲಕ ಮಾತಾಪಿತೃಗಳ ವೃದ್ಧಾಪ್ಯದಲ್ಲಿ ಅವರ ರಕ್ಷಕರಾಗಿರುವುದರ ಮೂಲಕ ತಂದೆತಾಯಿಗಳಿಗೆ ಮಕ್ಕಳು ನೀಡಬಲ್ಲ ತೃಷ್ಟಿಗುಣ-ವರಮಾನದ ಏರಿಕೆಯ ಫಲವಾಗಿ-ಇಳಿಯತ್ತದೆ. ಏಕೆಂದರೆ ಕುಟುಂಬದ ವರಮಾನಕ್ಕೆ ಹೆಚ್ಚು ಮಕ್ಕಳ ಉತ್ಪಾದನೆಯ ಪ್ರತಿಫಲದ ಆವಶ್ಯಕತೆ ಇರುವುದಿಲ್ಲ. ಮುಪಪ್ಪಿನ ಕಾಲಕ್ಕಾಗಿ ತಂದೆತಾಯಿಯರೇ ಸಾಕಷ್ಟು ಉಳಿತಾಯಮಾಡಬಲ್ಲವರಾಗುವುದರಿಂದಲೂ ಸರ್ಕಾರ ಈ ವರ್ಗದ ಜನಕ್ಕೆ ಸಾಮಾಜಿಕ ಭದ್ರತ ಸೌಲಭ್ಯಗಳನ್ನು ಒದಗಿಸುವುದರಿಂದಲೂ ದೇಶದ ಅನಭಿವೃದ್ಧಿಯ ಹಂತದಲ್ಲಿದಷ್ಟು ಮಟ್ಟಿಗೆ ಈಗ ತಂದೆತಾಯಿಯರು ತಮ್ಮ ಮಕ್ಕಳನ್ನು ಅವಲಂಬಿಸಬೇಕಾಗಿರುವುದಿಲ್ಲ. ಅಲ್ಲದೆ, ಮಕ್ಕಳ ಸಲುವಾಗಿ ಕುಟುಂಬ ವಹಿಸಬೇಕಾದ ವೆಚ್ಚ ಹೆಚ್ಚುತ್ತದೆ. ಅಭಿವೃದ್ಧಿಯ ಹಂತದಲ್ಲಿ ಮಕ್ಕಳಿಗೆ ಹಿಂದಿಗಿಂತ ಹೆಚ್ಚು ಕಾಲವಾಧಿಯ ವಿದ್ಯಾಭ್ಯಾಸವನ್ನೂ ಆಧುನಿಕ ಉತ್ಪಾದನಾ ವ್ಯವಸ್ಥೆಗೆ ಆವಶ್ಯಕವಾದ ತಾಂತ್ರಿಕ ಶಿಕ್ಷಣವನ್ನೂ ನೀಡಬೇಕಾಗುತ್ತದೆ. ತಲಾವರಮಾನದ ಏರಿಕೆಯ ಫಲವಾದ ಸಾಂಪ್ರದಾಯಿಕ ಜೀವನ ಮಟ್ಟ ಏರಿಕೆಯಿಂದಲೂ ಮಕ್ಕಳ ಪೋಷಣೆಯ ವೆಚ್ಚ ಹೆಚ್ಚುತ್ತದೆ. ಮಕ್ಕಳ ಪೋಷಣೆಯ ನೇರ ವೆಚ್ಚ ಹೆಚ್ಚುವುದು ಮಾತ್ರವೇ ಅಲ್ಲ ; ಹೆಚ್ಚು ಮಕ್ಕಳಾದರೆ ತಂದೆತಾಯಿಯರು ಅವರ ಪಾಲನೆಗಾಗಿ ತಮ್ಮ ಕಾಲವನ್ನು ಹೆಚ್ಚಾಗಿ ವ್ಯಯಮಾಡಬೇಕುತ್ತದೆ. : ತತ್ಫಲವಾಗಿ ಹೆಚ್ಚು ಸಂಪಾದನೆಯ ಅವಕಾಶಗಳನ್ನೂ ತ್ಯಜಿಸಬೇಕಾಗುತ್ತದೆ. ಆದ್ದರಿಂದ ಅಪ್ರತ್ಯಕ್ಷ ಅಥವಾ ಪರೋಕ್ಷ ವೆಚ್ಚವೂ ಹೆಚ್ಚುತ್ತದೆ. ಹೀಗೆ ಆರ್ಥಿಕಾಭಿವೃದ್ದಿಯೊಡನೆ ಮಕ್ಕಳ ತುಷ್ಟಿಗುಣ-ವೆಚ್ಚಗಳಲ್ಲಿ ಉಂಟಾಗುವ ಇಂಥ ಬದಲಾವಣೆಗಳಿಂದ ಜನರು ಮಿತ ಕುಟುಂಬದ ಭಾವನೆಯನ್ನು ಬೆಳೆಸಿಕೊಳ್ಳುವರೆಂಬುದು ಲೀಬನ್‍ಸ್ಟಿನನ ವಾದಸರಣಿ. ಒಟ್ಟಿನಲ್ಲಿ ಆರ್ಥಿಕಾಭಿವೃದ್ಧಿಯೊಡೆನೆ ಜನರಲ್ಲಿ ಉಂಟಾಗುವ ವಿದ್ಯಾಭ್ಯಾಸ ವಿಸ್ತರಣೆ, ತಾರ್ಕಿಕ ಮನೋಭಾವ, ತಲಾವರಮಾನ ಏರಿಕೆ-ಇವೆಲ್ಲವು ಸೇರಿ ಜನರ ಜೀವನಧ್ಯೇಯಗಳ ಬಗ್ಗೆ ಒಂದು ಆಂದೋಲನವೇ ಆಗುವುದು. ತಮ್ಮ ಆರ್ಥಿಕ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳುವುದರ ಕಡೆಗೆ ಅವರು ತೀವ್ರವಾಗಿ ಗಮನ ಹರಿಸುವರು. ಈ ಪ್ರಯತ್ನದ ಅಂಗವಾಗಿ ಅವರು ಮಿತಕುಟುಂಬ ಧ್ಯೇಯ ಅನುಸರಿಸುವರು. ಜನಸಂಖ್ಯಾ ಪರಿವರ್ತನಾ ಸಿದ್ಧಾಂತ ಜನಸಂಖ್ಯಾ ಪ್ರವೃತ್ತಿಗಳ ಮೇಲೆ ಆರ್ಥಿಕಾಭಿವೃದ್ಧಿಗಳ ಪರಿಣಾಮಗಳನ್ನು ಕುರಿತ ಜನಾದರಣೀಯ ಸಿದ್ಧಾಂತ. ಭಾರತವೇ ಮುಂತಾದ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಜನನದರಕ್ಕಿಂತಲೂ ಮೊದಲು ಮರಣದರ ಇಳಿದಿರುವುದು ಮತ್ತು ತತ್ಪರಿಣಾಮವಾಗಿ ಜನಸಂಖ್ಯೆ ಏರಿಕೆಯ ದರ ಹೆಚ್ಚಿರುವುದು ಸಿದ್ಧಾಂತದ ಒಂದು ಮುಖ್ಯಾಂಶವನ್ನು ಸಮರ್ಥಿಸುವುದು. ಅಭಿವೃದ್ಧಿಯ ಮುಂದಿನ ಹಂತದಲ್ಲಿ ಜನನದರ ಇಳಿಯುವ ಸೂಚನೆಗಳುಂಟು. ಹಿಂದೆ ಯೂರೋಪಿಯನ್ ರಾಷ್ಟ್ರಗಳಲ್ಲಿ ಆಧುನಿಕ ಗರ್ಭನಿರೋಧಕ ಉಪಾಯಗಳ ಆವಿಷ್ಕಾರಗಳು ಆದದ್ದು ಅಭಿವೃದ್ಧಿಯ ಮುಂದುವರೆದ ಹಂತಗಳಲ್ಲಿ. ಆದರೆ ಈಗ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅಭಿವೃದ್ಧಿಯ ಪ್ರಥಮ ಹಂತದಿಂದಲೇ ಈ ಉಪಾಯಗಳನ್ನನುಸರಿಸಲಾಗುತ್ತಿದೆಯೆಂಬುದು ಗಮನಿಸಬೇಕಾದ ಸಂಗತಿ. ಕೇನ್ಸ್ ವಾದಿಗಳ ದೃಷ್ಟಿ : ಅರ್ಥಶಾಸ್ತ್ರ ಅಧ್ಯಯನಕ್ಕೆ ಹೊಸ ಸ್ವರೂಪ ನೀಡಿದ ಇಂಗ್ಲೀಷ್ ಅರ್ಥಶಾಸ್ತ್ರಜ್ಞ ಜೆ.ಎಂ.ಕೇನ್ಸನ. ಅನುಯಾಯಿಗಳು ಅವನ ಮಾರ್ಗ ಅನುಸರಿಸಿ ಅನೇಕ ಸಿದ್ಧಾಂತಗಳನ್ನು ರೂಪಿಸಿದಿದ್ದಾರೆ. ಆರ್ಥಿಕ ಬೆಳವಣಿಗೆಯ ಮೇಲೆ ಜನಸಂಖ್ಯೆ ಪ್ರಭಾವ ಬೀರುವುದೆಂಬುದು ಅವರ ಆರ್ಥಿಕ ಬೆಳವಣಿಯ ಸಿದ್ಧಾಂತಗಳ ಒಂದು ಭಾಗ. ಜನಸಂಖ್ಯೆ ಬೆಳವಣಿಗೆ ಆರ್ಥಿಕಾಭಿವೃದ್ಧಿಗೆ ಸಹಾಯಕವಾದ ಅಂಶವೆಂದೂ ಜನಸಂಖ್ಯೆಯ ಇಳಿತ ದೀರ್ಘಕಾಲೀನ ಆರ್ಥಿಕ ಸ್ಥಗಿತತೆಗೆ ಒಂದು ಮುಖ್ಯ ಕಾರಣವೆಂದೂ ಕೇನ್ಸನ ವಿಶ್ಲೇಷಣೆಯ ಆಧಾರದ ಮೇಲೆ ಆಲ್ವಿನ್ ಹ್ಯಾನ್ ಸನ್ ಇತರ ಆರ್ಥಿಕ ಸ್ಥಗಿತವಾದಿಗಳು ಅಭಿಪ್ರಾಯಪಟ್ಟಿದ್ದಾರೆ. ಜನಸಂಖ್ಯೆ ಏರಿಕೆಯಿಂದ ಪರಿಣಾಮಕಾರಿ ಬೇಡಿಕೆಹೆಚ್ಚುವುದೆಂದೂ ಉದ್ಯಮಶೀಲರ ಬಂಡವಾಳದ ಸೀಮಾಂತ ನಿರೀಕ್ಷಿತ ಪ್ರತಿಫಲವನ್ನು ಇದು ಏರಿಸವುದರಿಂದ ಹೊಸ ಬಂಡವಾಳ ಹೂಡಿಕೆಗೆ ಮತ್ತು ಈ ಮೂಲಕ ಆರ್ಥಿಕ ಬೆಳವಣಿಗೆಗೆ ಜನಸಂಖ್ಯಾ ಏರಿಕೆ ಕಾರಣವಾಗುವುದೆಂದೂ ಹೇಳಲಾಗಿದೆ. ಜನಸಂಖ್ಯೆ ಇಳಿಯುವ ಪ್ರವೃತ್ತಿಯಿರುವಾಗ ಉದ್ಯಮಿಗಳು ತಮ್ಮ ಸರಕುಗಳಿಗೆ ಮಾರುಕಟ್ಟೆ ವಿಸ್ತರಿಸುವುದೆಂಬ ಆಶೆ ಹೊಂದಿರಲಾರರು. ಆದ್ದರಿಂದ, ಜನಸಂಖ್ಯೆ ಇಳಿತಾಯದಿಂದ ಆರ್ಥಿಕ ಬೆಳವಣಿಗೆಗೆ ತಡೆಯಾಗಬಹುದು. ಜನಸಂಖ್ಯೆ ಏರಿಕೆಯೊಡನೆ ಉಂಟಾಗುವ ಒಟ್ಟು ಬೇಡಿಕೆಯ ವಿಸ್ತರಣೆಯೊಡನೆಯೇ ಬೇಡಿಕೆಯ ರಚನೆಯಲ್ಲಿ ಆಗುವ ಬದಲವಣೆಗಳು ಆರ್ಥಿಕಾಭಿವೃದ್ಧಿಗೆ ಉತ್ತೇಜಕವಾಗುವುವೆಂದು ಹೇಳಲಾಗಿದೆ. ಜನಸಂಖ್ಯೆ ಹೆಚ್ಚುತ್ತಿರುವಾಗ ಕಟ್ಟಡಗಳ ನಿರ್ಮಾಣಕ್ಕೂ ಲೋಕೋಪಯೋಗಿ ಉದ್ಯಮಗಳಲ್ಲಿ ಬಂಡವಾಳ ಹೂಡಿಕೆಗೂ ಬೇಡಿಕೆ ಹೆಚ್ಚುವುದು. ಆದ್ದರಿಂದ ಆರ್ಥಿಕಾಭಿವೃದ್ಧಿಯ ಮುಖ್ಯವಾದ ಅಂಗವಾದ ಬಂಡವಾಳ ಸಂಚಯನದ ವೇಗ ಜನಸಂಖ್ಯಾ ಏರಿಕೆಯನ್ನು ಅವಲಂಬಿಸಿರುವುದು. ಬೃಹದ್ಗಾಗಾತ್ರ ಉತ್ಪಾದನೆಯ ಪ್ರತಿಫಲಗಳು ಜನಸಂಖ್ಯೆ ಏರಿಕೆಯಿಂದ ಲಭಿಸುವುವೆಂಬ ಇನ್ನೊಂದು ಮುಖ್ಯ ಅಂಶವನ್ನು ಆರ್ಥರ್ ಲೂಯಿಸ್ ಸೂಚಿಸಿದ್ದಾನೆ,. ಮಾರುಕಟ್ಟೆಯ ವಿಸ್ತಾರಕ್ಕೆ ಶ್ರಮವಿಭಜನೆ ಸೀಮಿತವಾಗಿರುತ್ತದೆ-ಎಂಬ ಆಡಂ ಸ್ಮಿತ್ತನ ನುಡಿಯ ಆಧಾರದ ಮೇಲೆ ಹೇಳುವುದಾದರೆ, ಹೆಚ್ಚು ಜನಸಂಖ್ಯೆಯಿಂದ ಸರಕುಸೇವೆಗಳಿಗೆ ಮಾರುಕಟ್ಟೆ ವಿಸ್ತರಿಸಲು ನೆರವಾಗುತ್ತದೆ. ತನ್ಮೂಲಕ ಆರ್ಥಿಕ ಬೆಳವಣಿಗೆಗೆ ಆಧಾರವಾದ ಶ್ರಮವಿಭಜನೆ ಮತ್ತು ವಿಶೇಷಜ್ಞತೆಗಳು ಆಂತರಿಕ ಹಾಗೂ ಬಾಹ್ಯ ಮಿತವ್ಯಯಗಳೂ ಬೆಳೆಯಲು ಕಾರಣವಾಗುವುವೆಂದು ವಿವರಿಸಲಾಗಿದೆ. ಹೆಚ್ಚು ಜನಸಂಖ್ಯೆಯ ಪರವಾಗಿ ಇನ್ನೊಂದು ವಿವರಣೆ ನೀಡಲಾಗಿದೆ. ಉದ್ಯಮಶೀಲತೆ, ಬಂಡವಾಳ, ತಂತ್ರಶಾಸ್ತ್ರ, ವ್ಯವಸ್ಥಾ ಸಾಮಥ್ರ್ಯ ಇವು ಉತ್ಪಾದನೆಯ ಏರಿಕೆಗೆ ಅನುಕೂಲವಾದರೂ ಸಾಕಷ್ಟು ಕಾರ್ಮಿಕ ಬಲ ಒದಗಿಸಬಲ್ಲ ಗಾತ್ರದ ಜನಸಂಖ್ಯೆ ಇಲ್ಲದಿರುವುದಾದರೆ ಆರ್ಥಿಕ ಬೆಳವಣಿಗೆ ಕಷ್ಟವಾಗುವುದು. ಅಂಥ ಸಂದರ್ಭದಲ್ಲಿ ಆರ್ಥಿಕ ಬೆಳವಣಿಗೆ ಸಾಧಿಸಲು ಬಂಡವಾಳಸಾಂದ್ರ ಉತ್ಪಾದನ ಕ್ರಮಗಳನ್ನು ಹುಡುಕಬೇಕಗುವುದು ; ಇವುಗಳ ಮಿತಿಗೆ ಅದು ಒಳಪಟ್ಟಿರಬೇಕಾಗುವುದು. ಹೆಚ್ಚು ಜನಸಂಖ್ಯೆಯು ಜನಸಂಖ್ಯಾ ಬೆಳವಣಿಗೆಯೂ ಹೀಗೆ ಸಾಮಾನ್ಯವಾಗಿ ಆರ್ಥಿಕ ಬೆಳವಣಿಗೆಗೆ ಅನುಕೂಲಕರವಾದ ಅಂಶವೆಂಬ ಅಭಿಪ್ರಾಯವನ್ನು ಮೇಲಿನ ವಾದಗಳಿಂದ ಸಮರ್ಥಿಸಲಾಗಿದೆ. ಆದರೆ, ಈ ಸಾಮಾನ್ಯ ವಿವರಣೆ ಇಂದಿನ ಜನ ನಿಬಿಡವಾದ, ಅಭಿವೃದ್ಧಿ ಹೊಂದ ರಾಷ್ಟ್ರಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪೆಂಗ್ಲರ್, ನೆಲ್ಸನ್ ಇತ್ಯಾದಿ ತಜ್ಞರು ಅಭಿಪ್ರಾಯಪಟಿದ್ದಾರೆ. ಬಹುಕಾಲದಿಂದ ಕೂಡಿಬಂದ ಅಪೂರ್ಣೋದ್ಯೋಗ ಹಾಗೂ ನಿರುದ್ಯೋಗ ಪರಿಸ್ಥಿತಿಯಲ್ಲಿ ಬಂಡವಾಳದ ಕೊರತೆ, ತಾಂತ್ರಿಕ ಜ್ಞಾನದ ಮತ್ತು ಉದ್ಯಮಶೀಲತೆಯ ಅಭಾವ, ನಿರಕ್ಷರತೆ, ಕಡಿಮೆ ಮಟ್ಟದ ವ್ಯವಸ್ಥಾದಕ್ಷತೆ, ಸಾಮಾಜಿಕ ನಿರ್ಬಂಧಗಳು ಇತ್ಯಾದಿ ಗುಣಲಕ್ಷಣಗಳು ಕೂಡಿರುವ ಸ್ಥಿತಿಯಲ್ಲಿ ಈ ದೇಶಗಳ ಜನಸಂಖ್ಯೆಯೂ ಅಲ್ಲಿ ಸಂಭವಿಸುತ್ತಿರುವ ಜನಸಂಖ್ಯಾಸ್ಫೋಟಗಳೂ ಅಭಿವೃದ್ಧಿಯ-ತಲಾವರಮಾನ ಏರಿಕೆಯ-ಗತಿಯನ್ನು ನಿಧಾನಗೊಳಿಸಿವೆ ಎಂಬುದು ಸ್ಪಷ್ಟವಾಗಿದೆ. ಈ ರಾಷಟ್ರ ಗಳ ವಿಶೇಷ ಪರಿಸ್ಥಿತಿಯಲ್ಲಿ ಜನಸಂಖ್ಯೆ ಏರಿಕೆ ತೀವರ ಅಭಿವೃದ್ಧಿಗೆ ಒಂದು ಹೊರೆಯಾಗಿದೆ ಎಂಬ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸಿದ್ದಾರೆ. ಇಂದು ಈ ರಾಷ್ಟ್ರಗಳಲ್ಲಿ ಮಿತ ಕುಟುಂಬದ ಯೋಜನೆ ಪ್ರಚಾರವಾಗುತ್ತಿರುವುದಕ್ಕೆ ಈ ಅಭಿಪ್ರಾಯವೇ ಆಧಾರವಾಗಿದೆ. ಜನಸಂಖ್ಯೆ ಸಮಸ್ಯೆಯನ್ನು ಮೇಲೆ ವಿವರಿಸಿರುವ ಆರ್ಥಿಕ ಸಿದ್ಧಾಂತಗಳ ದೃಷ್ಟಿಯಿಂದ ಮಾತ್ರವೇ ಪರಿಗಣಿಸಿ ಪರಿಹಾರ ಕೈಗೊಳ್ಳಲಾಗದೆಂಬ ಅಂಶವನ್ನು ಕೆಲವು ಅರ್ಥಶಾಸ್ತಜ್ಞರೇ ಸೂಚಿಸಿರುವುದು ಗಮನಾಶರ್ಹ. ಜನಸಂಖ್ಯೆ ಏರಿಕೆಯನ್ನು ದೀರ್ಘಕಾಲಾವಧಿಯ ಸ್ಥಳಾವಕಾಶ ದೃಷ್ಟಿಯಿಂದ ವಿವೇಚಿಸಬೇಕೆಂದು ಸೂಚಿಸಿ ಆರ್ಥರ್ ಲೂಯಿಸ್ ಈ ಬಗ್ಗೆ ಸ್ವಾರಸ್ಯಕರ ಲೆಕ್ಕಚಾರ ಹೇಳಿದ್ದಾನೆ. 5.6 ಕೋಟಿ ಚದರು ಮೈಲಿಗಳ ವಿಸ್ತೀರ್ಣದ ಭೂಭಾಗ ಹೊಂದಿರುವ ಈ ಪ್ರಪಂಚದಲ್ಲಿ ಜನಸಂಖ್ಯೆ ವರ್ಷಕ್ಕೆ ಸೇಕಡ 1ರಂತೆ ಬೆಳೆಯುತ್ತಾ ಹೋದರೆ 1120 ವರ್ಷಗಳ ತರುವಾಯ ಪ್ರಪಂಚದ ಜನರಲ್ಲಿ ಪ್ರತಿಯೊಬ್ಬನಿಗೆ ಒಂದು ಚದರ ಗಜ ಮಾತ್ರ ಸಿಗುವುದೆಂಬುದು ಲೂಯಿಸ್ ನ ಗಣನೆ. ತಾಂತ್ರಿಕ ಸಾಧ್ಯತೆಗಳ ಫಲವಾಗಿ ಇಷ್ಟು ಜನರಿಗೂ ಸರಕು ಸೇವೆಗಳನ್ನು ಒದಗಿಲಸಲು ಸಾಧ್ಯವಾಗಬಹುದದಾದರೂ ಸುಖಜೀವನಕ್ಕೆ ಅಡ್ಡಿ ತರಬಹುದಾದ ತೀವ್ರ ಸ್ಥಳ ಸಂಕೋಚ ಮೂಲಭೂತ ಪ್ರಶ್ನೆಯಾಗುತ್ತದೆ. ಮಿತಿಮೀರಿದ ಜನಸಾಂದ್ರತೆಯ ವಿವಿಧ ಪರಿಣಾಮಗಳನ್ನು ಅಭಿಜಾತ ಅರ್ಥಶಾಸ್ತ್ರಜ್ಞ ಜೆ.ಎಸ್. ಮಿಲ್ ಒಂದೂವರೆ ಶತಮಾನಗಳ ಹಿಂದೆಯೇ ಮನಗಾಣುವಂತೆ ವರ್ಣಿಸಿದ್ದಾನೆ. ವ್ಯಕ್ತಿಗೆ ಬೇಕೆನ್ನಿಸಿದಾಗ ಏಕಾಂತವಾಗಿ ಅಥವಾ ಗೋಪ್ಯವಾಗಿ ಇರಲು ತಕ್ಕ ಸ್ಥಳಾವಕಾಶ ಜೀವನದ ಸುಖದ ಸುಖಾನುಭವಕ್ಕೆ ಆವಶ್ಯಕ. ತೀವ್ರವಾದ ಸ್ಥಳಾಭಾವದಿಂದ ಯಾವಾಗಲೂ ಇತರರ ಮಧ್ಯಯೇ ಇರಬೇಕಾದ ಪರಿಸ್ಥಿತಿ ಒದಗಿಸಿದರೆ ವ್ಯಕ್ತಿಗಳ ಆಂತರಿಕ ಶಕ್ತಿಗಳ ವಿಕಾಸಕ್ಕೆ ಸ್ಫೂರ್ತಿ ಇರುವುದಿಲ್ಲ. ಜನರು ಸಮಾಜದಲ್ಲಿ ಪರಸ್ಪರ ಕಲೆತು ಇರುವುದು ವ್ಯಕ್ತಿತ್ವದ ಬೆಳವಣಿಗೆಗೆ ಎಷ್ಟೂ ಮುಖ್ಯವೋ, ಪ್ರತ್ಯೇಕವಾಗಿ ಧ್ಯಾನ ಹಾಗೂ ಉನ್ನತ ಆಲೋಚನೆಗಳಲ್ಲಿ ಆಸಕ್ತರಾಗಿರುವುದೂ ಅಷ್ಟೇ ಮುಖ್ಯ. ನಿಸರ್ಗ ಸೌಂದರ್ಯದ ವಾತಾವರಣದಲ್ಲಿ ವ್ಯಕ್ತಿ ಏಕಾಂತವಾಗಿ ಕಾಲ ಕಳೆಯುವ ಅವಕಾಶ ವ್ಯಕ್ತಿಯ ನೈತಿಕ ಔನ್ನತ್ಯಕ್ಕೆ ಮಾತ್ರವೇ ಅಲ್ಲದೆ ಸಮಾಜಕ್ಕೆ ಕಲ್ಯಾಣವಾಗುವ ಭಾವನಾಂತರಗಳು ಮತ್ತು ಆಕಾಂಕ್ಷೆಗಳು ಅಭಿವ್ಯಕ್ತವಾಗಲೂ ಕಾರಣವಾಗುವುದು. ಏಕಾಂತತೆಗೆ ಇರುವ ಅವಕಾಶಗಳು ನಿರ್ಮೂಲವಾದ ಪ್ರಪಂಚ ಹೀನ ಪ್ರಪಂಚವೇ ಸರಿ. ಪ್ರತಿಯೊಂದು ಎಕರೆ ಭೂಭಾಗವು ಆಹಾರ ಬೆಳೆಗಾಗಿ ಸಾಗುವಳಿಗೆ ಒಳಪಟ್ಟಿರುವ ಹುಲ್ಲು-ಮರ-ಹೂ ಗಿಡಗಳೇ ಮುಂತಾದ ಸ್ವಾಭಾವಿಕವಾಗಿ ಬೆಳೆಯುವ ಅರಣ್ಯ ಪ್ರದೇಶವೆಲ್ಲವೂ ನಾಶಮಾಡಲ್ಪಟ್ಟು ಈ ಭಾಗವೂ ಮಾನವನ ವಸತಿ ಮತ್ತು ಆಹಾರಗಳಿಗಾಗಿ ಉಪಯೋಗಿಸಲ್ಪಡುತ್ತಿರುವ, ಮಾನವನ ಪ್ರಯೋಜನಕ್ಕೆ ಬಾರದ ಪ್ರಾಣಿವರ್ಗವೆಲ್ಲವೂ ಉಚ್ಚಾಟಣೆ ಮಾಡಲ್ಪಟ್ಟಿರುವ ಒಟ್ಟಿನಲ್ಲಿ ನೈಸರ್ಗಿಕ ಚಲನವಲನಗಳು ಸ್ವತ ಏವ ವರ್ತಿಸಲು ಏನೂ ಅಸವಕಾಶವಿದಲ್ಲದಿರುವ ಪ್ರಪಂಚವನ್ನು ಸಮರ್ಪಕ ಪರಿಸ್ಥಿತಿಗಳಿರುವ ಪ್ರಪಂಚವೆಂದು ಪರಿಗಣಿಸಲಾಗುವುದಿಲ್ಲ. ಕೇವಲ ಅಧಿಕ ಜನಸಂಖ್ಯೆಯನ್ನು ಧರಿಸುವ ಸಲುವಾಗಿ ಭೂಮಿಯ ಪ್ರಕೃತಿದತ್ತ ಸೌಂದರ್ಯದ ಬಹುಭಾಗ ಹೀಗೆ ನಶೀಸಬೇಕಾಗುವುದಾದರೆ, ಭವಿಷ್ಯ ಪೀಳಿಗೆಯ ಉತ್ತಮ ಜೀವನದ ದೃಷ್ಟಿಯಿಂದ ಜನಂಖ್ಯೆ ಬೆಳೆಯದೆಯೇ ಸ್ಥಗಿತವಾಗಿರುವುದು ಅತ್ಯುತ್ತಮ. ಒಂದೂವರೆ ಶತಮಾನಗಳ ಹಿಂದೆ ಇದ್ದ ಜನಸಂಖ್ಯಾ ಪರಿಸ್ಥಿತಿ ಹಾಗೂ ಪ್ರವತ್ತಿಗಳ ಬಗ್ಗೆಯೇ ಮೇಲೆ ಹೇಳಿದಂತೆ ಆತಂಕಕಾರಿ ಭಾವನೆ ಹೊಂದಿದ ಮಿಲ್ ಇಂದಿನ ಪ್ರಪಂಚದ ಜನಸಂಖ್ಯಾ ಪರಿಸ್ಥಿತಿಯ ಬಗ್ಗೆ ಏನು ಹೇಳುತ್ತಿದ್ದನೆಂಬುದನ್ನು ಊಹಿಸಿಕೊಳ್ಳಬಹುದು. (ಎ.ಪಿ.ಎಸ್.) III ಜನಸಂಖ್ಯಾ ವಿತರಣೆ ಜನಸಂಖ್ಯೆ ಒಂದು ಪರಿಮಾಣಾತ್ಮಕ ಪರಿಕಲ್ಪನೆ. ನಾನ ಬಗೆಯ ಸಮಚ್ಚಯಗಳನ್ನು ಸೂಚಿಸಲು ಇದನ್ನು ಬಳಸಲಾಗುತ್ತದೆ. ಈ ಸಮಚ್ಚಯಗಳು ಒಂದು ಪ್ರದೇಶದಲ್ಲಿ ಯಾವರೀತಿ ವಿತರಣೆಯಾಗಿವೆಯೆಂಬುದನ್ನೂ ಆ ರೀತಿಯೇ ಏಕೆ ವಿತರಣೆಗೊಂಡಿವೆಯೆಂಬುದನ್ನು ಅರಿಯುವುದು. ಜನಸಂಖ್ಯೆ ವಿತರಣೆಯ ಅಧ್ಯಯನದ ಉದ್ದೇಶ. ಜನಸಂಖ್ಯೆಯ ಬೆಳವಣಿಗೆಯ ದರ ಮತ್ತು ಜನವಲಸೆಗೂ ಜನಸಂಖ್ಯೆಯ ವಿತರಣೆಗೂ ನೇರ ಸಂಬಂಧ ಉಂಟು. ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಮಾನವಶಾಸ್ತ್ರ, ರಾಜಶಾಸ್ತ್ರ ಮುಂತಾದವಕ್ಕೆ-ಜನಸಮುದಾಯಗಳು, ಪ್ರದೇಶಗಳು, ಆರ್ಥಿಕತೆಗಳೇ ಮೊದಲಾದ ಮಾನವ ವ್ಯವಸ್ಥೆಗಳನ್ನು ಕುರಿತ ಎಲ್ಲ ಶಾಸ್ತ್ರಗಳಿಗೆ-ಇದು ತಾತ್ತ್ವಿಕವಾಗಿಯೂ ಅನುಭವಿಕವಾಗಿಯೂ ತುಂಬಾ ಕುತೂಹಲಕರಿಯಾಗಿದ್ದು. ಜನಸಂಖ್ಯೆಯನ್ನು ಸಮಗ್ರವಾಗಿ ಅಥವಾ ಪ್ರಾದೇಶಿಕವಾಗಿ ಅಧ್ಯಯನ ಮಾಡುವುದು ಸಾಧ್ಯ. ಒಂದು ಸೀಮಿತ ಪ್ರದೇಶಕ್ಕೆ ಸಂಬಂಧಿಸಿದಂತೆ (ಉದಾ; ಒಂದು ಪ್ರಾಂತ್ಯ ಅಥವಾ ಒಂದು ನಗರ) ಜನಸಂಖ್ಯೆಯ ವಿತರಣೆಯ ಹೇಗಾಗಿದೆಯೆಂಬುದುನ್ನು ಅಧ್ಯಯನ ಮಾಡುವುದು ಹಿಂದಿನಿಂದ ಬೆಳೆದು ಬಂದಿರುವ ಪರಿಪಾಟಿ. ಅದು ಬಹುತೇಕ ವಿವರಣಾತ್ಮಕವಾಗಿರುತ್ತಿತ್ತು. ವಿಶ್ಲೇಷಣಾತ್ಮಕ ದೃಷ್ಟಿ ಈಚೆಗೆ ಬೆಳೆಯುತ್ತಿದೆ. ಒಂದು ಪ್ರಾಂತ್ಯದ ಅಥವಾ ಒಂದು ಜಿಲ್ಲೆಯ ಕಿರು ವಿಭಾಗಗಳ ಜನಂಖ್ಯೆಗಳ ಗಾತ್ರ ಮತ್ತು ಸಂಯೋಜನೆಗಳ, ಒಂದು ಸ್ಥಳದ ಜನಸಂಖ್ಯೆಯಲ್ಲಿ ಕಾಲಕ್ರಮದಲ್ಲಿ ಆಗಿರುವ ಬದಲಾವಣೆಗಳ ಅಧ್ಯಯನ ನಡೆದಿದೆ. ಜನಸಾಂದ್ರತೆ : ಒಂದು ಕಾಲದಲ್ಲಿ ಅಥವಾ ಒಂದು ಪ್ರದೇಶದಲ್ಲಿ ಜನಸಂಖ್ಯೆಯಲ್ಲಿ ಅಥವಾ ಅದರ ಗುಣಲಕ್ಷಣಗಳಲ್ಲ್ಲಿ ಆಗಿರುವ ಬದಲಾವಣೆಗಳನ್ನು ಅರಿಯುವ ಉದ್ದೇಶದಿಂದ ಜನಸಂಖ್ಯಾ ವಿತರಣೆಯನ್ನು ಮಾಪನ ಮಾಡಲಾಗುತ್ತದೆ. ಜನಸಂಖ್ಯಾ ವಿತರಣೆಯ ಅತ್ಯಂತ ಸರಳ ಮಾಪನೆವೆಂದರೆ ಒಂದು ಭೂ ಪ್ರದೇಶಕ್ಕೆ ಸಂಬಂಧಿಸಿದಂತೆ ಜನಸಂಖ್ಯೆಯ ನಿಷ್ಪತ್ತಿ (ರೇಷಿಯೊ). ಒಂದು ಪ್ರದೇಶದ ವಿಸ್ತೀರ್ಣದಿಂದ (ಐ)ಅಲ್ಲಿಯ ಜನಸಂಖ್ಯೆಯನ್ನು (ಓ)ಭಾಗಿಸಿದರೆ(ಓ/ಐ) ಬರುವುದೇ ಜನಸಂದ್ರಾತೆ (ಆ): ಆ= ಓ/ಐ ಭಾರತದ ವಿಸ್ತೀರ್ಣ 32,68,090 ಚ.ಕಿ.ಮೀ. ಜನಸಂಖ್ಯೆ 54,79,49,809 (1971). ಆದರೆ ಜನಸಾಂದ್ರತೆ ಚ.ಕಿ.ಮೀ.ಗೆ 168. ಆದರೆ ಜನಸಂಖ್ಯಾ ನಿಷ್ಪತ್ತಿ ಒಂದು ಸ್ಥೂಲಮಾಪನ ಮಾತ್ರ. ಇಡೀ ದೇಶ ಅಥವಾ ಪ್ರದೇಶಕ್ಕೆ ಸದಮಂಬಂಧಿಸಿದಂತೆ ಪ್ರತಿ ಚ.ಮೈ.ಯ ಅಥವಾ ಪ್ರತಿ ಚ.ಕಿ.ಮೀ.ನ ಜನಸಾಂದ್ರತೆಯ ಬದಲು, ವ್ಯವಸಾಯಯೋಗ್ಯ ಜಮೀನಿನ ಪ್ರತಿ ಚ.ಮೈ. ಅಥವಾ ಚ.ಕಿಮೀ. ಜನಸಾಂದ್ರಾತೆ ಯನ್ನು ಕಂಡುಹಿಡಿಯಬಹುದು. ಮೊದಲನೆಯದಕ್ಕಿಂತ ಇದು ಸ್ವಲ್ಪ ಸುಧಾರಿಸಿದ ಮಾಪನ. ಸಾಂದ್ರತೆಯ ನಿಷ್ಪತ್ತಿಗಳು (ಡೆನ್ಸಿಟಿ ರೇಷಿಯೊ) ಸರಾಸರಿಗಳು ಮಾತ್ರ. ಗಮನಾರ್ಹ ಆಂತರಿಕ ವ್ಯತ್ಯಾಸಗಳನ್ನು ಅವು ಸೂಚಿಸಲಾರವು. ಆದರೂ ದೇಶ, ಪ್ರಾಂತ್ಯ, ಪ್ರದೇಶ, ನಗರಗಳೇ ಮುಂತಾದವುಗಳ ಸಾಪೇಕ್ಷ ಜನಸಾಂದ್ರತೆ ಮತ್ತು ಜನ ಚದರಿಕೆಗಳನ್ನು ತೌಲನಿಕವಾಗಿ ಅಭ್ಯಸಿಸಲು ಅವುಗಳ ಜನಸಾಂದ್ರತಾ ನಿಷ್ಪತ್ತಿಗಳು ಸಹಾಯಕ. ಇಂಥ ಹೋಲಿಕೆಗಳನ್ನು ಮಾಡುವಾಗ ಎಚ್ಚರಿಕೆ ವಹಿಸಬೇಕಾದ್ದು ಅತ್ಯಾವಶ್ಯಕ. ಹೋಲಿಕೆಗೆ ಒಳಪಡಿಸಲಾದ ಪ್ರದೇಶಗಳು ಭೌಗೋಳಿಕ ಮತ್ತು ಸಾಂಸ್ಕøತಿಕವಾಗಿ ಸಮಾನವಾಗಿದ್ದಾಗ ಈ ಬಗೆಯ ಹೋಲಿಕೆ ಉಪಯುಕ್ತವೆನಿಸುತ್ತದೆ. ಭಾರತದ ಜನಸಾಂದ್ರತೆಯನ್ನು ಐಸ್ಲೆಂಡಿನ ಜನಸಾಂದ್ರತೆಯೊಡನೆ ಹೋಲಿಸುವುದು ಅರ್ಥ ಶೂನ್ಯ. ಭಾರತ ಐಸ್ಲೆಂಡ್ ಗಳೆರಡರಲ್ಲೂ ಬರ್ಫದಿಂದ ಆವೃತವಾದ ಪ್ರದೇಶಗಳಿವೆಂಬ ಕಾರಣದಿಂದಾಗಿಯೂ ಈ ಹೋಲಿಕೆ ಸರಿಯೆನಿಸದು. ಭಾರತ-ಐಸ್‍ಲೆಂಡ್‍ಗಳು ಭೌಗೋಳಿಕವಾಗಿ ಅತ್ಯಂತ ಭಿನ್ನವಾದವು. ಆದ್ದರಿಂದ ಅವುಗಳ ನೆಲಬಳಕೆಯ ವಿಧಾನಗಳು ಭಿನ್ನವಾಗಿರುವುದು ಅನಿವಾರ್ಯ. ವಾಸಿಸಲೂ ಜೀವನ ನಡೆಸಲೂ ಲಭ್ಯವಿರುವ ಸೌಲಭ್ಯಗಳಲ್ಲೂ ವ್ಯತ್ಯಾಸವಿರುತ್ತದೆ. ಆದ್ದರಿಂದ ಜನಸಂಖ್ಯಾ ವಿತರಣೆಯ ಸ್ವರೂಪದಲ್ಲೇ ಭಿನ್ನತೆ ಉಂಟಾಗುತ್ತದೆ. ಪ್ರಪಂಚದ ವಿವಿಧ ಪ್ರದೇಶಗಳ ಜನಸಾಂದ್ರತೆಗಳನ್ನು ಅವಲೋಕಿಸಿದಾಗ ಗೋಚರವಾಗುವ ಅಂಶಗಳು ಸ್ವಾರಸ್ಯಕರ. ಸನ್ನಿವೇಶ, ಭೌತಲಕ್ಷಣ, ವಾಯುಗುಣ ಮುಂತಾದ ಸ್ವಾಭಾವಿಕ ಅಂಶಗಳಿಗೆ ಅನುಗುಣವಾಗಿ ಜನಸಾಂದ್ರತೆ ತೀವ್ರ ಅಥವಾ ವಿರಳ ಆಗಿರುವುದಂತೂ ಸರಿ. ಹೆಚ್ಚು ಜನಸಂಖ್ಯೆಯಿರುವ, ಕಡಿಮೆ ಅಭಿವೃದ್ಧಿ ಹೊಂದಿದ ದೇಶಳಗಳಲ್ಲಿ ಫಲವತ್ತಾದ ಮೈದಾನಗಳೂ ಅವುಗಳ ಬಳಿಯ ದೊಡ್ಡ ವಾಣಿಜ್ಯಕ ಮತ್ತು ಕೈಗಾರಿಕಾ ನಗರಗಳೂ ಅತ್ಯಂತ ಜನಸಾಂದ್ರ ಪ್ರದೇಶಗಳಾಗಿರುತ್ತವೆ. ಆದರೆ ಅಲ್ಲಿಯ ಜನರ ಜೀವನ ಮಟ್ಟಗಳು ಬಲು ಕಡಿಮೆಯಾಗಿರುತ್ತವೆ. ಆಧುನೀಕೃತ ದೇಶಗಳಲ್ಲಿಯ ಪ್ರವೃತ್ತಿ ಬೇರೆ ತೆರ. ರಾಷ್ಟ್ರೀಯ ಮತ್ತು ಅಂತರರಾಷ್ಟೀಯ ವ್ಯಾಪಾರಕ್ಕೆ ನೆರವಾಗಿ ಸರಕು-ಸೇವೆಗಳ ವಿನಿಮಯಕ್ಕೆ ಅನುಕೂಲ ಇರುವ ಸ್ಥಳಗಳಲ್ಲಿ ನಗರಗಳು ಬೆಳೆಯುತ್ತವೆ. ಆ ನಗರಗಳ ಮತ್ತು ಅವುಗಳ ಸುತ್ತಣ ಪ್ರದೇಶಗಳ ಜನಸಾಂದ್ರತೆಗಳು ಅತ್ಯಂತ ಹೆಚ್ಚಿನವಾಗಿರುತ್ತವೆ. ಆ ನಗರಗಳಲ್ಲೂ ಪ್ರದೇಶಗಳಲ್ಲೂ ನೆಲಸಿರುವ ಜನರ ಜೀವನಮಟ್ಟ ಸಾಪೇಕ್ಷವಾಗಿ ಹೆಚ್ಚಿನವಾಗಿರುತ್ತವೆ. * ತಲಾನೆಲ : ಒಂದು ಪ್ರದೇಶದ ನೆಲವನ್ನು ಜನಸಂಖ್ಯೆಗೆ ಸಮವಾಗಿ ಹಂಚಿದಾಗ ಪ್ರತಿಯೊಬ್ಬನಿಗೂ ದೊರೆಯುವ ನೆಲಕ್ಕೆ ತಲಾನೆಲ (ಏರಿಯಾಲಿಟಿ) ಎಂದು ಹೆಸರು. ಎಂದರೆ ವಿಸ್ತೀರ್ಣವನ್ನು (ಐ) ಜನಸಂಖ್ಯೆಯಿಂದ (ಓ) ಭಾಗಿಸಿದರೆ ತಲಾನೆಲ(ಂ) ಗೊತ್ತಾಗುತ್ತದೆ. ಂ=ಓ/ಐ,ತಲಾನೆಲವೂ ಜನಸಾಂದ್ರತೆಯೂ (ಆ=ಓ/ಐ) ಪರಸ್ಪರ ವ್ಯುತ್ಕ್ರಮ ಉತ್ಪನ್ನಗಳು (ಂ.ಆ=1)ಚ.ಕಿ.ಮೀ.ಗೆ ಇಷ್ಟು ಜನ ಎಂಬುದು ಜನಸಾಂದ್ರತೆ. ಪ್ರತಿಯೊಬ್ಬನಿಗೆ ಎಷ್ಟು ನೆಲ (ಏರ್, ಚದರ ಡೆಕಾಮೀಟರ್) ಎಂಬುದು ತಲಾನೆಲ. ಭಾರತದ ನೆಲದ ವಿಸ್ತೀರ್ಣ ಸು. 32.68 ಚ.ಕಿ.ಮೀ. ತಲಾನೆಲ. 59.74 ಏರ್ ಗಳು (1971). 1961ರಲ್ಲಿದ್ದಂತೆ ತಲಾನೆಲ. 74.00 ಏರ್‍ಗಳು. ದೇಶದ ವಿಸ್ತೀರ್ಣ ಸ್ಥಿರವಾಗಿದೆ. ಜನಸಂಖ್ಯೆ ಹೆಚ್ಚಿದೆ. ಆದ್ದರಿಂದಲೇ ತಲಾನೆಲದಲ್ಲಿ ಇಳಿತಾಯವಾಗಿದೆ. ಕರ್ನಾಟಕದ ತಲಾನೆಲ 65.5 ಏರ್‍ಗಳು (1971). (ಎಂ.ವಿ.ಜೆ.) ಪ್ರಪಂಚದ ಜನಸಂಖ್ಯೆಯ ವಿತರಣೆ : ಪ್ರಪಂಚದ ಜನಸಂಖ್ಯೆಯ ವಿತರಣೆಯಲ್ಲಿ ಕಂಡು ಬರುವ ಗಮನಾರ್ಹ ಸಂಗತಿಯೆಂದರೆ, ಅದರ ಅಸಮತೆ, ಪ್ರಪಂಚದ ಒಟ್ಟು ಜನರಲ್ಲಿ ಸುಮಾರು ಹತ್ತನೆಯ ಒಂಬತ್ತರಷ್ಟು ಮಂದಿ ಒಟ್ಟು ವಿಸ್ತೀರ್ಣದ ಕಾಲುಭಾಗಕ್ಕಿಂತ ಕಡಿಮೆ ಪ್ರದೇಶದಲ್ಲಿ ವಾಸಿಸುತ್ತಾರೆ. ಹೆಚ್ಚು ಜನಸಾಂದ್ರತೆಯ ವಿಶಾಲ ಪ್ರದೇಶಗಳು ಮೂರು. ಇವುಗಳಲ್ಲಿ ಅತ್ಯಂತ ಮುಖ್ಯವಾದದ್ದು ಏಷ್ಯು. ಈ ಖಂಡದ ಜಪಾನ್, ದಕ್ಷಿಣಕೊರಿಯ ಚೀನ ಭೂಭಾಗ, ಟೈವಾನ್, ಜಾವ ಭಾರತ,ಬಾಂಗ್ಲಾದೇಶ-ಇವು ಹೆಚ್ಚು ಜನದಟ್ಟಣೆಯ ಪ್ರದೇಶಗಳು. ಯೂರೋಪಿನ ಪಶ್ಚಿಮಭಾಗ, ಅಮೆರಿಕ ಸಂಯುಕ್ತಸಂಸ್ಥಾನಗಳ ಈಶಾನ್ಯ ತೀರ ಮತ್ತು ಮಹಾಸರೋವರಗಳ ಕರೆಗಳು, ಕ್ಯಾರಿಬೀಯನ್ ಮತ್ತು ದಕ್ಷಿಣ ಅಮೆರಿಕ ತೀರ ಭಗಗಳು- ಇಲ್ಲೂ ಜನಸಾಂದ್ರತೆ ಹೆಚ್ಚು . ಏಷ್ಯದಲ್ಲಿ ಸೋವಿಯತ್ ದೇಶದ ಭಾಗನ್ನುಳಿದ ಪ್ರದೇಶ ಇಡೀ ಭೂಮಿಯ ಸೇಕಡ 20ರಷ್ಟು ಕ್ಕಿಂತ ಕಡಿಮೆ. ಆದರೆ ಪ್ರಪಂಚದ ಜನಸಂಖ್ಯೆಯ ಸೇಕಡ 60ರಷ್ಟು ಜನ ಅಲ್ಲಿದ್ದಾರೆ. ಈ ಸೇಕಡವಾರು ಹೆಚ್ಚುತ್ತಲೇ ಇದೆ ; ಪ್ರಪಂಚದಲ್ಲಿ ದಕ್ಷಿಣ ಅಮೆರಿಕದ ಭೂಬಾಗ ಸೇಕಡ 13 ; ಪ್ರಪಂಚದ ಜನಸಂಖ್ಯೆಯ ಸೇಕಡ 6 ರಷ್ಟು ಮಂದಿ ಇಲ್ಲಿ ವಾಸಿಸುತ್ತಿದ್ದಾರೆ. ಇಲ್ಲೂ ಜನಸಂಖ್ಯೆ ತೀವ್ರವಾಗಿ ಬೆಳೆಯುತ್ತಿದೆ. ಒಂದು ಪ್ರದೇಶದ ಜನಸಾಂದ್ರತೆಯ ಪ್ರಾಕೃತಿಕ ನಿರ್ಣಾಯಕಗಳು ಇವು ; 1.ವಾಯುಗುಣ, 2. ಫಲವತ್ತತೆ (ವಾಯುಗುಣವೂ ಇದರ ಮೇಲೆ ಪರಿಣಾಮ ಬೀರುತ್ತದೆ). 3. ಮೇಲ್ಮೈಯ ಲಕ್ಷಣ. ಆಧುನಿಕ ಪ್ರಪಂಚದಲ್ಲಿ ಅತ್ಯಂತ ತೀವ್ರ ಭೌಗೋಳಿಕ ಪರಿಸ್ಥಿತಿಗಳನ್ನು ಬಿಟ್ಟರೆ ಉಳಿದಂತೆ ಜನವಿತರಣೆಗೆ ಬಹುಮಟ್ಟಿಗೆ ಕಾರಣವಾದಗುವವು ಸಾಂಸ್ಕøತಿಕ ಅಂಶಗಳು. ವಿಶಿಷ್ಟ ಪ್ರದೇಶಗಳ ಜನವಸತಿಗೂ ಜನಸಂಖ್ಯೆಯ ಶೀಘ್ರ ಬೆಳೆವಣಿಗೆಗೂ ತತ್ ಕ್ಷಣದ ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆಯೇ ಕಾರಣವಾಗಬಹುದು. ಆದರೆ ಕಬ್ಬಿಣ ಅದುರು, ಕಲ್ಲಿದ್ದಲು ಮುಂತಾದ ಸಂಪನ್ಮೂಲಗಳನ್ನು ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಉಪಯೋಗಿಸಿಕೊಳ್ಳಲಾರದ ಸಂಸ್ಕøತಿಯ ದೃಷ್ಟಿಯಲ್ಲಿ ಅವಕ್ಕೆ ಏನೂ ಪ್ರಾಮುಖ್ಯ ಇರುವುದಿಲ್ಲ. ಕರಾವಳಿಯಲ್ಲಿ ಅಥವಾ ನದಿತೀರದಲ್ಲಿ ಜನಸಂಖ್ಯೆಯ ಬೆಳವಣಿಗೆಗೆ ಆ ಪ್ರದೇಶದ ವ್ಯಾಪಾರದ ಕೈಗಾರಿಕಾ ವಾಣಿಜ್ಯದ-ಅಭಿವೃದ್ಧೀ ಕಾರಣ. ಕೈಗಾರಿಕೆಗಳ ಕಚ್ಚಾ ಸಾಮಗ್ರಿ, ಪೂರ್ಣ ಸಿದ್ಧ ಸರಕುಗಳು ಇವುಗಳ ದೃಷ್ಟಿಯಿಂದ ಯಾವ ಪ್ರದೇಶ ಹೆಚ್ಚು ಅನುಕೂಲವಾಗಿರುತ್ತದೋ ಅಲ್ಲಿ ಜನಸಾಂದ್ರತೆ ಅಧಿಕವಾಗಿರುತ್ತದೆ. ಆರ್ಥಿಕ ವೆಚ್ಚಗಳು, ಸಾರಿಗೆಯ ಕಾಲ, ಸಂಚಾರ ಮಾರ್ಗಗಳ ಸೌಲಭ್ಯ, ಮಾರುಕಟ್ಟೆಯ ಆವಶ್ಯಕತೆಗಳು-ಇವೂ ಒಂದು ಪ್ರದೇಶದ ಜನಸಂಖ್ಯೆಯನ್ನು ಬಹುಮಟ್ಟಿಗೆ ನಿರ್ಣಯಿಸುತ್ತವೆ.

(ನೋಡಿ- ಕೈಗಾರಿಕೆಗಳ-ಸ್ಥಾನೀಕರಣ)

ನಗರಿಯ ಜನಸಂಖ್ಯಾ ವಿತರಣೆ : ಮಾನವ ಸಂಘಟನೆಯಲ್ಲಿಯ ಬದಲಾವಣೆಗಳನ್ನು ನಗರಗಳ ಬೆಳವಣಿಗೆಯಲ್ಲಿ ಕಾಣಬಹುದು. ಪ್ರಪಂಚದಲ್ಲಿ ಹತ್ತು ಲಕ್ಷಕ್ಕಿಂತ ಅಧಿಕ ಜನಸಂಖ್ಯೆಯ ನಗರಗಳ ಸಂಖ್ಯೆ 1900-1960ರಲ್ಲಿ 10ರಿಂದ 63 ಕ್ಕೆ ಏರಿತು. ಪ್ರಪಂಚದ ಜನರಲ್ಲಿ ಸೇಕಡ 20ರಷ್ಟು ಮಂದಿ ಒಂದು ಲಕ್ಷ ಅಥವಾ ಅದಕ್ಕಿಂತ ಅಧಿಕ ಜನಸಂಖ್ಯೆ ಇರುವ ನಗರಗಳಲ್ಲಿ ವಾಸಿಸುತ್ತಾರೆ. ನಗರಗಳ ಸಂಖ್ಯೆಯೂ ಅವುಗಳ ಜನಸಂಖ್ಯೆಯೂ ಬೆಳೆದಂತೆ, ಹಳ್ಳಿಗಳ ಜನಸಂಖ್ಯೆಯ ಅನುಪಾತ ಇಳಿಮುಖವಾಗಿದೆ. ಶೀಘ್ರ ನಗರೀಕರಣ, ಬೆಳೆಯುತ್ತಿರುವ ಅಧಿಕ ಸಂಖ್ಯೆಯ ನಗರಗಳಲ್ಲಿ ಜನಸಾಂದ್ರೀಕರಣ-ಇವುಗಳಿಂದಾಗಿ ಜನಸಂಖ್ಯಾ ನಮೂನೆಗಳ ಮೇಲೆ ತೀವ್ರ ಪರಿಣಾಮ ಉಂಟಾಗಿದೆ. ಫಲವತ್ತಾದ ಕೃಷಿ ಪ್ರದೇಶಗಳು ವಾಣಿಜ್ಯ ಅಥವಾ ಆಡಳಿತ ಕೇಂದ್ರಗಳಾಗಿ ಆ ಪ್ರದೇಶಗಳ ಸಂಪತ್ತನ್ನೇ ಅವಲಂಬಿಸಿ ಒಂಟೊಂಟಿಯಾಗಿ ನಗರಗಳು ಬೆಳೆದ ನಿದರ್ಶನಗಳು ಇತಿಹಾಸದಲ್ಲಿ ಹಲವು ಇವೆ. ಆದರೆ ಬಲೆಯಂತೆ, ಒಂದಕ್ಕೊಂದು ಸಮೀಪದಲ್ಲಿ, ದೊಡ್ಡ ನಗರಗಳು ಬೆಳೆಯುವುದು ಈ ಕಾಲದ ಒಂದು ಮುಖ್ಯ ಪ್ರವೃತ್ತಿ. ವ್ಯಾಪಕ ತಂತ್ರಜ್ಞತೆ, ನೆರೆಹೊರೆಯ ನಗರಗಳ ಮತ್ತು ಅವುಗಳ ಆಯ್ದ ಕೆಲವು ದೇಶಗಳ ಒಟ್ಟು ಜನಸಂಖ್ಯೆಗಳಲ್ಲಿ ಅವುಗಳ ನಗರೀಯ ಜನಸಂಖ್ಯೆಗಳ ಅನುಪಾತಗಳನ್ನು ಕೋಷ್ಟಕ 1ರಲ್ಲಿ ತೋರಿಸಿದೆ. ಕೋಷ್ಟಕ-1 ನಗರೀಕರಣದ ಆವರೋಹಿ ಕ್ರಮಸಂಖ್ಯೆ ದೇಶ ಜನಗಣಿತಿಯ(ಜ) ಅಥವಾ ಅಂದಾಜಿನ(ಅಂ) ದಿನಾಂಕ ಒಟ್ಟು ಜನಸಂಖ್ಯೆ ಒಟ್ಟು ನಗರೀಯ ಜನಸಂಖ್ಯೆ ಒಟ್ಟು ಜನಸಂಖ್ಯೆಂಯಲ್ಲಿ ನಗರೀಯ ಜನ ಸಂಖ್ಯೆಯಸೇಕಡ


1 2 3 4 5 6 7 8 9 10 ಗ್ರೇಟ್ ಬ್ರಿಟನ್ ಸಂಯುಕ್ತ ರಾಜ್ಯ ಕೆನಡ ಫ್ರಾನ್ಸ್ ಅಮೆರಿಕ ಸಂ.ಸಂ. ಜಪಾನ್ ಸೋವಿಯತ್ ಒಕ್ಕೂಟ ಅರಬ್ ಗಣರಾಜ್ಯ ಭಾರತ ಶ್ರೀಲಂಕಾ ಪಾಕಿಸ್ತಾನ1

1-7-1968 (ಅಂ) 1-6-1966 (ಜ) 1-3-1968 (ಜ) 1-4-1960 (ಜ) 1-10-1965 (ಜ) 1-7-1969 (ಅಂ) 1-7-1969 (ಅಂ) 1-4-1971 (ಜ) 8-7-1963 (ಜ) 1-2-1961(ಜ) 4,85,93,000 2,00,14,880 4,97,55,780 17,93,23,175 9,82,74,961 24,05,71,000 3,25,01,000 54,79,49,809 1,05,90,060 9,02,82,674


3,83,24,530 1,47,26,759 3,48,14,660 12,52,83,783 6,69,18,621 13,43,57,000 1,35,34,000 10,90,94,309 19,97,930 1,22,54,730 78.87 73.58 69.97 69.86 68.09 55.85 41.64 19.87 18.87 13.57



ಆಯ್ದ ಕೆಲವು ದೇಶಗಳ ಒಟ್ಟು ಜನಸಂಖ್ಯೆಯ, ನಗರೀಯ ಜನಸಂಖ್ಯೆಗಳು, ಒಟ್ಟು ಜನಸಂಖ್ಯೆಗಳಿಗೆ ನಗರೀಯ ಜನಸಂಖ್ಯೆಗಳ ಅನುಪಾತ 1 ಬಾಂಗ್ಲಾದೇಶವೂ ಸೇರಿದ್ದಂತೆ ಮತ್ತು ಅವುಗಳ ಹಿನ್ನಾಡುಗಳ ನಡುವೆಯೂ ಇತರ ನಗರಗಳ ಪ್ರದೇಶಗಳ ಮತ್ತು ದೇಶಗಳ ನಡುವೆಯೂ ನಾನಾ ಬಗೆಯ ಸರಕು-ಸೇವೆಗಳ ವಿನಿಮಯ-ಇವು ಈ ನಗರಗಳ ಬೆಳವಣಿಗೆಗೆ ಕಾರಣ. 1818-1918ರಲ್ಲಿ ಜಪಾನಿನ ಆರು ಅತ್ಯಂತ ದೊಡ್ಡ ನಗರಗಳ ಜನಸಂಖ್ಯೆ 25 ಲಕ್ಷದಿಂದ 60 ಲಕ್ಷಕ್ಕೆ ಏರಿತು. 1947-57ರಲ್ಲಿ ಸಿಂಗಪುರದ ಜನಸಂಖ್ಯೆ ಸುಮಾರು 21/2 ಲಕ್ಷದಷ್ಟು ಅಧಿಕವಾಯಿತು. ಇದರ ವಾರ್ಷಿಕ ಬೆಳೆವಣಿಗೆದರ 3%. ಈ ಬೆಳವಣಿಗೆಗೆ ಕಾರಣವಾದ್ದು ಸ್ಥಳೀಯ ನೈಸರ್ಗಿಕ ಸಂಪನ್ಮೂಲಗಳಲ್ಲ ; ಈ ಪ್ರದೇಶದ ವ್ಯಾಪಾರ ಕೇಂದ್ರವಾಗಿ ಸಿಂಗಪುರದ ಮಹತ್ತ್ವ. ನಗರಗಳ ಬೆಳವಣಿಗೆಗೆ ಕಾರಣಗಳು ತುಂಬ ಸಂಕೀರ್ಣವಾದವು. ಸಹಜವಾಗಿಯೇ ಅವುಗಳ ಜನಸಂಖ್ಯೆ ಕಾಲಕ್ರಮದಲ್ಲಿ ಅಧಿಕವಾಗುವುದುಂಟು. ಜನರ ವಲಸೆಯಿಂದಲೂ ಸಂಖ್ಯೆ ಅಧಿಕವಾಗುತ್ತದೆ. ಕೈಗಾರಿಕೆ, ಸಾರಿಗೆ, ಸಂಪರ್ಕ, ಕೃಷಿ ವಿಜ್ಞಾನ, ವೈದ್ಯ ಇವುಗಳ ಅಭಿವೃದ್ಧಿಯನ್ನೂ ನಗರಗಳ ಬೆಳವಣಿಗೆ ಅವಲಂಬಿಸುತ್ತದೆ. ಈ ಅಭಿವೃದ್ಧಿಗಳ ಫಲವಾಗಿ ಕೃಷಿಕಾರ್ಮಿಕರ ಆವಶ್ಯಕತೆ ಕಡಿಮೆಯಾಗುತ್ತದೆ. ದೂರದ ಹಾಗೂ ಸ್ಥಳೀಯ ಸಂಪನ್ಮೂಲಗಳ ಬಳಕೆ ಸಾಧ್ಯವಾಗುತ್ತದೆ. ವಲಸೆದಾರರಿಗೆ ನಗರಗಳು ಹಲವಾರು ಉದ್ಯೋಗಾವಕಾಶಗಳನ್ನು ನೀಡುತ್ತವೆ.ಸಾಂಕ್ರಾಮಿಕ ಜಾಡ್ಯಗಳ ನಿಯಂತ್ರಣ ಸಾಧ್ಯವಾಗುವುದರಿಂದ ಜನ ಒತ್ತೊತ್ತಾಗಿ ನಗರಗಳಲ್ಲಿ ವಾಸಿಸುವುದು ಸಾಧ್ಯವಾಗುತ್ತದೆ. ಜನ, ಆಹಾರ ಮತ್ತು ಇತರ ಸರಕುಗಳನ್ನು ಸಾಗಿಸಲು ಸಾರಿಗೆ ಸೌಲಭ್ಯ ಬೆಳೆಯುತ್ತದೆ. ಕೈಗಾರಿಕಾ ದೇಶಗಳಲ್ಲಿ ನಗರಗಳ ಜನಸಾಂದ್ರತೆ ತೀವ್ರವಾಗಿರುತ್ತದೆ. ಆರ್ಥಿಕವಾಗಿ ಸಂಪೂರ್ಣವಾಗಿ ಅಭಿವೃದ್ಧಿ ಹೊಂದದ ವ್ಯವಸಾಯ ದೇಶಗಳಲ್ಲೂ ಒಟ್ಟು ಜನಸಂಖ್ಯೆಯಲ್ಲಿ ನಗರಗಳ ಜನಸಂಖ್ಯೆಯ ಸೇಕಡ ಏರುತ್ತದೆ. ಉದಾಹರಣೆಗೆ, ಮಲಯದಲ್ಲಿ 1,000 ಅಥವಾ ಅದಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಕೇಂದ್ರಗಳಲ್ಲಿ ವಾಸಿಸುವ ಜನರ ಸಂಖ್ಯೆ 1947ರಲ್ಲಿ ಒಟ್ಟು ಜನಸಂಖ್ಯೆಯ 35.1% ಇದ್ದದ್ದು, 1957ರ ವೇಳೆಗೆ 50.5%ಕ್ಕೆ ಏರಿತು. ಎರಡನೆಯ ಮಹಾಯುದ್ಧದ ಅನಂತರ ನಗರಗಳ ಬೆಳೆವಣಿಗೆಯ ದರಗಳು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅತ್ಯಧಿಕವಾಗಿವೆ. ಒಟ್ಟಿನಲ್ಲಿ ನಗರಗಳ ಜನಸಾಂದ್ರೀಕರಣ ಒಂದು ಜಾಗತಿಕ ಪ್ರವೃತ್ತಿ. 1961ರಲ್ಲಿ ಇಂಗ್ಲೆಂಡ್ ವೇಲ್ಸ್‍ಗಳ ಜನಸಂಖ್ಯೆಯಲ್ಲಿ ಸೇಕಡ 80ರಷ್ಟು ನಗರೀಯವಾಗಿತ್ತು. ಒಟ್ಟು ಜನ ಸಂಖ್ಯೆಗಳಲ್ಲಿ ಸೇಕಡ 60ಕ್ಕಿಂತ ಹೆಚ್ಚು ಭಾಗ ನಗರೀಯವಾಗಿರುವ ಇತರ ದೇಶಗಳು (ಸಾಂದ್ರೀಕರಣದ ಅವರೋಹೀ ಕ್ರಮದಲ್ಲಿ) ಆಸ್ಟ್ರೇಲಿಯ, ಇಸ್ರೇಲ್, ಡೆನ್ಮಾರ್ಕ್, ಸ್ವೀಡನ್, ಪೂರ್ವ-ಪಶ್ಚಿಮ ಜರ್ಮನಿಗಳು, ಸ್ಕಾಟ್ಲೆಂಡ್, ಕೆನಡ, ಅಮೆರಿಕ ಸಂಯುಕ್ತ ಸಂಸ್ಥಾನಗಳು, ಚಿಲಿ, ನ್ಯೂಜೀóಲೆಂಡ್, ಜಪಾನ್, ಬೆಲ್ಜಿಯಮ್, ವೆನಿಜ್ವೀಲ. 1960ರಲ್ಲಿ ಘಾನ, ಕೀನ್ಯ, ಸೆನೆಗಲ್, ಸೂಡಾನ್, ಟಾಂಗನ್ಯೀಕ, ಟೋಗೋ, ಕಾಂಬೋಡಿಯ, ಭಾರತ, ಇಂಡೊನೇಷ್ಯ, ಪಾಕಿಸ್ತಾನ, ತೈಲೆಂಡ, ಉತ್ತರ ವಿಯೆಟ್ನಾಮುಗಳ ಒಟ್ಟು ಜನಸಂಖ್ಯೆಗಳಲ್ಲಿ ಸೇಕಡ 25ಕ್ಕಿಂತ ಕಡಿಮೆ ಮಂದಿ ನಗರಗಳಲ್ಲಿ ವಾಸಿಸುತ್ತಿದ್ದರು. ಭಾರತದ ವಿವಿಧ ರಾಜ್ಯಗಳು, ಒಕ್ಕೂಟ ಪ್ರದೇಶಗಳು (ಯೂನಿಯನ್ ಟೆರಿ ಟರೀಸ್) ಮತ್ತು ಇತರ ಪ್ರದೇಶಗಳ ಒಟ್ಟು ಜನಸಂಖ್ಯೆಗಳಿಗೆ ನಗರ ಜನಸಂಖ್ಯೆಗಳ ಅನುಪಾತಗಳನ್ನು ಕೋಷ್ಟಕ 2ರಲ್ಲಿ ಕೊಟ್ಟಿದೆ. ಕೋಷ್ಟಕ-2 ಭಾರತದ ವಿವಿಧ ರಾಜ್ಯಗಳು ಒಕ್ಕೂಟ ಪ್ರದೇಶಗಳು ಮತ್ತು ಇತರ ಪ್ರದೇಶಗಳ ಒಟ್ಟು ಜನಸಂಖ್ಯೆಗಳಿಗೆ ನಗರ ಜನಸಂಖ್ಯೆಗಳ ಅನುಪಾತಗಳು - 1961 ಮತ್ತು 1971 ರಾಜ್ಯಗಳು, ಪ್ರದೇಶಗಳು ಒಟ್ಟು ಜನಸಂಖ್ಯೆಗಳಿಗೆ ನಗರ ಜನಸಂಖ್ಯೆಗಳ ಸೇಕಡ ರಾಜ್ಯಗಳು, ಪ್ರದೇಶಗಳು ಒಟ್ಟು ಜನಸಂಖ್ಯೆಗಳಿಗೆ ನಗರ ಜನಸಂಖ್ಯೆಗಳ ಸೇಕಡ

    1961            1971

ರಾಜ್ಯಗಳು 1. ಆಂಧ್ರ ಪ್ರದೇಶ ......

2. ಅಸ್ಸಮ್           ...... 
3. ಬಿಹಾರ           ...... 
4. ಗುಜರಾತ್         ...... 
5. ಹರಿಯಾಣ        ......
6. ಹಿಮಾಚಲಪ್ರದೇಶ    ...... 
7. ಜಮ್ಮು ಮತ್ತು ಕಾಶ್ಮೀರ ......
8. ಕೇರಳ            ...... 
9. ಮಧ್ಯ ಪ್ರದೇಶ      .......

10. ಮಹಾರಾಷ್ಟ್ರ ...... 11. ಕರ್ನಾಟಕ ...... 12. ನಾಗಾಲ್ಯಾಂಡ್ ...... 13. ಒರಿಸ್ಸ ..... 14. ಪಂಜಾಬ್ ..... 15. ರಾಜಸ್ಥಾನ ...... 16. ತಮಿಳು ನಾಡು ...... 17. ನಾಗಾಲ್ಯಾಂಡ್ ...... 18. ಪಶ್ಚಿಮ ಬಂಗಾಳ ......


17.44 7.37 8.43 25.77 17.23 6.34 16.66 15.11 14.29 28.22 22.33 5.19 6.32 23.06 16.28 26.69 12.85 24.45

19.35 8.39 10.04 28.13 17.78 7.06 18.26 16.28 16.26 31.20 24.31 9.91 8.27 23.80 17.61 30.28 14.00 24.59


ಒಕ್ಕೂಟ ಪ್ರದೇಶಗಳು ಮತ್ತು ಇತರ ಪ್ರದೇಶಗಳು

1 ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 
2 ಚಂಡೀಗಢ	
3 ದಾದ್ರಾ ಮತ್ತು ನಗರ್ ಹವೇಲಿ	 
4 ದೆಹಲಿ	
5 ಗೋವ, ದಾಮನ್, ದೀವ್
6 ಲಕ್ಷದ್ವೀಪ	
7 ಮಣಿಪುರ	
8 ಮೇಘಾಲಯ
9 ನೇಫ

10 ಪುದುಚೇರಿ 11 ತ್ರಿಪುರ


22.15 82.80 - 88.75 16.06 - 8.69 12.48 - 24.11 9.02


22.78 90.67 - 89.75 26.30 - 13.35 13.02 3.12 42.06 7.82

ಭಾರತ 17.98 19.87


ಒಕ್ಕೂಟ ಪ್ರದೇಶಗಳನ್ನು ಬಿಟ್ಟರೆ ಭಾರತದ ಅತ್ಯಂತ ನಗರೀಕೃತ ರಾಜ್ಯ ಮಹಾರಾಷ್ಟ್ರ. ಅಲ್ಲಿಯ ಜನಸಂಖ್ಯೆಯಲ್ಲಿ ಸುಮಾರು ಮೂರನೆಯ ಒಂದರಷ್ಟು (30.28%) ನಗರೀಯ. ಎರಡನೆಯ ಸ್ಥಾನ ತಮಿಳು ನಾಡಿಗೆ (30.28%) ಒಟ್ಟು ಜನಸಂಖ್ಯೆಯ ಕಾಲುಭಾಗಕ್ಕಿಂತ ಹೆಚ್ಚು ನಗರೀಯವಾದ ಇನ್ನೊಂದು ರಾಜ್ಯವೆಂದರೆ ಗುಜರಾತ್ (28.13%). ಪಶ್ಚಿಮ ಬಂಗಾಲ ಮತ್ತು ಕರ್ನಾಟಕ ಅನಂತರ ಬರುತ್ತವೆ (24.59%ಮತ್ತು24.31%). ಈ ರಾಜ್ಯಗಳ ಕೈಗಾರಿಕೆಗಳ ಬೆಳೆವಣಿಗೆಯೇ ನಗರ ಜನಸಂಖ್ಯೆ ತಕ್ಕಮಟ್ಟಿಗೆ ಹೆಚ್ಚಲು ಮುಖ್ಯ ಕಾರಣ. ಅತ್ಯಂತ ಕಡಿಮೆ ನಗರೀಕೃತ ರಾಜ್ಯ ಹಿಮಾಚಲ ಪ್ರದೇಶ (7.06%). ಒಟ್ಟು ಜನಸಂಖ್ಯೆಯಲ್ಲಿ ಸೇಕಡ 10ಕ್ಕಿಂತ ಕಡಿಮೆ ನಗರ ಜನಸಂಖ್ಯೆ ಇರುವ ಇತರ ರಾಜ್ಯಗಳು ಒರಿಸ್ಸ (8.3%), ಅಸ್ಸಾಮ್ (8.4%). ನಾಗಾಲ್ಯಾಂಡ್ (9.9%). ಬಿಹಾರ (10%). ಈ ರಾಜ್ಯಗಳು ಆರ್ಥಿಕವಾಗಿ ಮುಂದುವರಿದಿಲ್ಲ. 1961ರಲ್ಲಿ ಪಟ್ಟಣಗಳೆಂದು ಪರಿಗಣಿತವಾದವುಗಳ ಸಂಖ್ಯೆ 2,700. 1971ರ ವೇಳೆಗೆ ಇವುಗಳ ಸಂಖ್ಯೆ 2,921ಕ್ಕೆ ಹೆಚ್ಚಿತು. 1971ರಲ್ಲಿದ್ದ ಒಟ್ಟು ನಗರೀಯ ಜನರಲ್ಲಿ ಸೇಕಡ 52.41ರಷ್ಟು ಮಂದಿ ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯ ನಗರಗಳಲ್ಲಿದ್ದರು. 50,000-99,999 ಜನಸಂಖ್ಯೆಯ ಪಟ್ಟಣಗಳಲ್ಲಿ ಒಟ್ಟು ಜನಸಂಖ್ಯೆಯ 12,15%ರಷ್ಟೂ 20,000-49,999 ಜನಸಂಖ್ಯೆಯ ಪಟ್ಟಣದಲ್ಲಿ 17.36%ರಷ್ಟೂ 10,000-19,999 ಜನಸಂಖ್ಯೆಯ ಪಟ್ಟಣಗಳಲ್ಲಿ 12.04%ರಷ್ಟೂ 5,000-9,999 ಜನಸಂಖ್ಯೆಯ ಪಟ್ಟಣಗಳಲ್ಲಿ 5.24%ರಷ್ಟೂ 5,000ಕ್ಕಿಂತ ಕಡಿಮೆ ಜನಸಂಖ್ಯೆಯ ಪಟಟಣಗಳಲ್ಲಿ 0.80%ರಷ್ಟೂ ಜನರಿದ್ದರು. 1971ರಲ್ಲಿ ಭಾರತದಲ್ಲಿ 1,00,000 ಮತ್ತು ಅದಕ್ಕಿಂತ ಹೆಚ್ಚು ಜನಸಂಖ್ಯೆಯ ನಗರಗಳು 142 ಇದ್ದುವು. 50,000-99,999 ಜನಸಂಖ್ಯೆಯ ಪಟ್ಟಣಗಳು 198 ಮತ್ತು 20,000-49,999 ಜನಸಂಖ್ಯೆಯ ಪಟ್ಟಣಗಳು 617 ಇದ್ದುವು. 1961ರಲ್ಲಿ ಈ ಗುಂಪುಗಳಲ್ಲಿದ್ದ ನಗರಗಳು ಮತ್ತು ಪಟ್ಟಣಗಳ ಸಂಖ್ಯೆಗಳು ಅನುಕ್ರಮವಾಗಿ 113, 138 ಮತ್ತು 484. 1951ರಲ್ಲಿ ಇವು ಅನುಕ್ರಮವಾಗಿ 81.102 ಮತ್ತು 353. ನಗರೀಯ ಜನಸಂಖ್ಯೆಗಳ ವ್ಯಾಖ್ಯೆ ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತದೆಯಲ್ಲದೆ ಕಾಲದಿಂದ ಕಾಲಕ್ಕೂ ವ್ಯತ್ಯಾಸವಾಗುತ್ತದೆ. ಕೈಗಾರಿಕಾ ಬೆಳೆವಣಿಗೆಗೆ ಅನುಗುಣವಾಗಿ ನಗರೀಯ ಜನಸಂಖ್ಯೆ ಬೆಳೆಯುತ್ತದೆಯೆಂಬುದು ನಿಜ. ಆದರೆ ಕೃಷಿಯನ್ನು ವಾಣಿಜ್ಯ ದೃಷ್ಟಿಯಿಂದ ಪ್ರಧಾನವೆಂದು ಪರಿಗಣಿಸಿರುವ ಡೆನ್ಮಾರ್ಕಿನಂಥ ದೇಶದಲ್ಲಿ ಈ ಕಾರಣದಿಂದಾಗಿ ನಗರೀಯ ಜನಸಂಖ್ಯೆ ಬೆಳೆದಿದೆ. ಅಭಿವೃದ್ಧಿ ಶೀಲ ದೇಶಗಳಲ್ಲಿ ಉದ್ಯೋಗಾವಕಾಶಗಳು ಬೆಳೆಯುವುದಕ್ಕಿಂತ ಹೆಚ್ಚಿನ ವೇಗದಲ್ಲಿ ನಗರಗಳು ಬೆಳೆಯುತ್ತಿವೆ. ಇದನ್ನು ಅತಿ ನಗರೀಕರಣವೆಂದು ಕರೆಯಲಾಗಿದೆ. ಕೃಷಿ ನೆಲದ ಮೇಲೆ ಜನಸಂಖ್ಯೆಯ ಒತ್ತಡ ಹೆಚ್ಚಾಗಿ, ಹೆಚ್ಚುವರಿ ಜನಸಂಖ್ಯೆ ನಗರಗಳಿಗೆ ತಳ್ಳಲ್ಪಡುವುದೆಂದು ಹೇಳಲಾಗಿದೆ. ಆದರೆ ಆ ದೇಶಗಳಲ್ಲಿ ಬಹು ಕಾಲದಿಂದಲೂ ಗ್ರಾಮೀಣ ಜನಸಂಖ್ಯೆಯ ಒತ್ತಡ ಹೆಚ್ಚಾಗಿದ್ದರೂ ಹಿಂದೆ ಜನರು ಹೆಚ್ಚುಸಂಖ್ಯೆಯಲ್ಲಿ ನಗರಗಳಿಗೆ ಏಕೆ ವಲಸೆ ಹೋಗುತ್ತಿರಲಿಲ್ಲವೆಂಬುದಕ್ಕೆ ಉತ್ತರ ದೊರಕದು. ನಗರಕ್ಕೆ ವಲಸೆ ಹೋಗುವವರಿಗೆ ನಗರಗಳಲ್ಲಿ ಉದ್ಯೋಗ ದೊರಕುವುದೆಂಬ ಆಸೆ ಈ ವಲಸೆಗೆ ಒಂದು ಆಕರ್ಷಣೆ. ದೇಶದ ಒಟ್ಟು ಜನಸಂಖ್ಯೆಯ ಅಥವಾ ಒಟ್ಟು ನಗರೀಯ ಜನಸಂಖ್ಯೆಯ ಪೈಕಿ, ಆ ದೇಶದ ಅತ್ಯಂತ ದೊಡ್ಡ ನಗರದಲ್ಲಿರುವ ಜನಸಂಖ್ಯೆಯೆಷ್ಟು ಎಂಬುದು ಕುತೂಹಲಕರವಾದ ಇನ್ನೊಂದು ಅಂಶ, ಇದರ ಸೇಕಡವಾರು ದೇಶದಿಂದ ದೇಶಕ್ಕೆ ವ್ಯತ್ಯಾಸವಾಗುತ್ತದೆ. 1960ರಲ್ಲಿ ನ್ಯೂ ಯಾರ್ಕ್ ನಗರದಲ್ಲಿ 1,40,00,000ಕ್ಕಿಂತ ಹೆಚ್ಚು ಜನರಿದ್ದರು. ಆದರೆ ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಈ ಸಂಖ್ಯೆ ಕೇವಲ 8% ಆದರೆ 1961ರಲ್ಲಿ ಗ್ರೀಸಿನಲ್ಲಿದ್ದ ಒಟ್ಟು ಜನಸಂಖ್ಯೆಯಲ್ಲಿ ಅಲ್ಲಿಯ ಅಥೆನ್ಸ್ ನಗರದ ಜನಸಂಖ್ಯೆ ಸೇಕಡ 22, ಉರಗ್ವೆಯ ಒಟ್ಟು ಜನಸಂಖ್ಯೆಯಲ್ಲಿ (1963) ಮಾಂಟೆವಿಡಯೋ ನಗರದ ಜನಸಂಖ್ಯೆ ಸೇಕಡ 46. ಅನೇಕ ದೇಶಗಳಲ್ಲಿ, ಮುಖ್ಯವಾಗಿ ಸಣ್ಣ ಹಾಗೂ ಮಧ್ಯಮ ಗಾತ್ರದ ದೇಶಗಳಲ್ಲಿ, ನಗರೀಯ ಜನಸಂಖ್ಯೆ ಕೇವಲ ಒಂದು ನಗರದಲ್ಲಿ ಕೇಂದ್ರೀಕೃತವಾಗುವ ಪ್ರವೃತ್ತಿ ಇರುವುದುಂಟು. ಇಂಥ ನಗರಗಳು ಆಗ್ರ ನಗರಗಳೆನಿಸಿಕೊಳ್ಳುತ್ತವೆ (ಪ್ರೈಮೇಟ್ ಸಿಟೀಸ್). ಈ ನಗರಗಳು ಆರ್ಥಿಕ, ಸಾಮಾಜಿಕ ರಾಜಕೀಯ ಕೇಂದ್ರಗಳೂ ಆಗುತ್ತವೆ. ಇವು ತಮ್ಮ ವಾಣಿಜ್ಯ, ಆಡಳಿತ, ಕೈಗಾರಿಕೆ, ಮನೋರಂಜನೆ ಮುಂತಾದ ಕಾರ್ಯಭಾರಗಳಿಂದಾಗಿ ಸ್ಥಳೀಯ ಜನಕ್ಕೆ ಜೀವನೋಪಾಯ ಒದಗಿಸುತ್ತವೆ. ಇವುಗಳೊಂದಿಗೆ ಸ್ಪರ್ಧಿಸಿ ಬೆಳೆಯುವ ಸಾಮಥ್ರ್ಯ ಇತರ ಸ್ಥಳಗಳಿಗೆ ಇರುವುದಿಲ್ಲ. ಹೀಗೆ ಬೆಳವಣಿಗೆಯ ಸಾಧನಗಳೆಲ್ಲ ಒಂದೇ ಕಡೆ ಕೇಂದ್ರೀಕೃತವಾಗುವುದರಿಂದ ರಾಷ್ಟ್ರೀಯ ಅಭಿವೃದ್ಧಿಗೆ ಅಡಚಣೆಯಾಗುವುದೆಂಬುದಾಗಿ ಒಂದು ವಾದವುಂಟು, ಆದರೆ ಬೆಳವಣಿಗೆಯ ಕಾರಕಗಳು ಒಂದೆಡೆಯಲ್ಲಿ ಕೇಂದ್ರೀಕೃತವಾಗುವುದರಿಂದ ಅಭಿವೃದ್ಧಿಗೆ ಪ್ರೋತ್ಸಾಹ ದೊರಕುವುದೆಂದೂ ಹೇಳಬಹುದು. ಆಗ್ರ ನಗರಗಳು ಸದಾ ಕಾಲದಲ್ಲೂ ತಮ್ಮ ಉನ್ನತ ಸ್ಥಾನವನ್ನು ಉಳಿಸಿಕೊಳ್ಳುವುದೆಂದು ಹೇಳುವಂತಿಲ್ಲ. ಒಂದು ನಗರದಲ್ಲಿರುವ ಜನ ಸಾಮೂಹಿಕವಾಗಿ ಅಲ್ಲಿಯ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ಒಂದು ಪ್ರದೇಶದಲ್ಲಿ ಜನಸಂಖ್ಯೆಯ ವಿತರಣೆ ಹೇಗಾಗಿದೆ ಎಂಬುದು ಆ ಜನರ ಆರ್ಥಿಕ ಸಂಘಟನೆ, ಜೀವನ ವಿಧಾನ ಇವನ್ನು ಅವಲಂಬಿಸಿರುತ್ತದೆ. ಸಂಕೀರ್ಣವಾದ ಹಾಗೂ ಸ್ಪಷ್ಟವಾಗಿ ವಿಂಗಡವಾದ ಜನಸಮುದಾಯಗಳು ಎಷ್ಟರ ಮಟ್ಟಿಗೆ ವಿಶೇಷಜ್ಞವೂ ಪರಸ್ಪರಾವಲಂಬಿಯೂ ಆಗಿವೆ-ಎಂಬುದನ್ನು ನಗರಗಳು ಸೂಚಿಸುತ್ತವೆ. ಈ ಸಮುದಾಯಗಳು ಸಾಪೇಕ್ಷವಾಗಿ ಹೆಚ್ಚು ಗತಿಶೀಲವಾಗಿರುತ್ತವೆ. * ಗಿI ಜನಸಂಖ್ಯಾ ಸಂಯೋಜನೆ ಒಂದು ಪ್ರದೇಶದ ಜನಸಂಖ್ಯೆಯಲ್ಲಿರುವ ವಿವಿಧ ಸಾಮಾಜಿಕ ಜೈವಿಕ ವರ್ಗಗಳಿಗೆ ಆ ಪ್ರದೇಶದ ಜನಸಂಖ್ಯಾ ಸಂಯೋಜನೆ (ಪಾಪ್ಯುಲೇಷನ್ ಕಾಂಪೋಸಿಷನ್) ಎಂದು ಹೆಸರು. ಯಾವುದೇ ಕಾಲದಲ್ಲಿ ಒಂದು ಜನಸಂಖ್ಯೆಯ ಸಂಯೋಜನೆ ಎಂಥದು ಎಂಬುದು ಅದರ ಸಾಮಾಜಿಕ ಇತಿಹಾಸವನ್ನೂ ಬರಲಿರುವ ವರ್ಷಗಳಲ್ಲಿ ಅದು ಎದುರಿಸಲಿರುವ ಸಾಮಾಜಿಕ ಸಮಸ್ಯೆಗಳ ಸ್ವರೂಪಗಳನ್ನೂ ಸೂಚಿಸುತ್ತದೆ. ಆದ್ದರಿಂದ ಜನಗಣಿತಿ, ಜನನ ಮರಣಗಳೇ ಮುಂತಾದ ಜೀವನಾಂಕಗಳ ದಾಖಲಾತಿ ಮುಂತಾದವುಗಳ ಮೂಲಕ ಜನಸಂಖ್ಯಾ ಸಂಯೋಜನೆಯನ್ನು ಕುರಿತ ಸಮಗ್ರ ಹಾಗೂ ನಿಷ್ಕøಷ್ಟ ಮಾಹಿತಿಯನ್ನು ಪಡೆಯುವುದು ಸರ್ಕಾರಗಳಿಗೆ ಆವಶ್ಯಕ, ಜನಸಂಖ್ಯಾ ಸಂಯೋಜನೆಯ ವಿಶ್ಲೇಷಣೆಯ ಕೆಲಸ ಜನಸಂಖ್ಯಾಶಾಸ್ತ್ರದ ಒಂದು ಅವಿಭಾಜ್ಯ ಅಂಗ. ಒಬ್ಬ ವ್ಯಕ್ತಿಗೂ ಇನ್ನೊಬ್ಬ ವ್ಯಕ್ತಿಗೂ ಲಕ್ಷಣಗಳಲ್ಲಿ ವ್ಯತ್ಯಾಸ ಇದ್ದೇ ಇರುವುದಾದರೂ ಜನರನ್ನು ಸ್ಥೂಲವಾಗಿ ವರ್ಗೀಕರಿಸುವುದು ಸಾಧ್ಯ. ಮೂಲ ಜನಸಂಖ್ಯಾ ಶಾಸ್ತ್ರೀಯ ಚರಗಳಾದ ವಯಸ್ಸು, ಲಿಂಗ, ವೈವಾಹಿಕ ಸ್ಥಿತಿ, ರಾಷ್ಟ್ರೀಯತೆ, ಜನಾಂಗ, ವರ್ಣ, ಭಾಷೆ, ಮತ, ವಿದ್ಯೆ, ದುಡಿಮೆ, ಕಸಬು, ಕೈಗಾರಿಕಾ ವರ್ಗೀಕರಣ-ಮುಂತಾದ ಮೂಲ ಆಧಾರಗಳ ಮೇಲೆ ಅವರನ್ನು ಸಾಮಾನ್ಯವಾಗಿ ವರ್ಗೀಕರಿಸಲಾಗುತ್ತದೆ. ಜನಗಣಿತಿ, ಜನನ ಮರಣ ವಿವಾಹಗಳೇ ಮುಂತಾದವುಗಳ ದಾಖಲಾತಿ-ಇವುಗಳ ಮೂಲಕ ಈ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಜನನ ಮರಣ ವಿವಾಹಗಳ ದಾಖಲಾತಿಗಳು ನಡೆಯುವುದು ವ್ಯಕ್ತಿಗೆ ಸಂಬಂಧಿಸಿದಂತೆ ಇಂಥ ಘಟನೆಗಳು ನಡೆದಾಗ ಮಾತ್ರ, ಆದರೆ ಅವುಗಳ ನೆರವಿನಿಂದ ಇಡೀ ಜನಸಂಖ್ಯೆಯ ಕೆಲವು ಗುಣಲಕ್ಷಣಗಳನ್ನು ಅರಿಯುವುದೂ ಅವುಗಳ ಅವ್ಯಾಹತ ದಾಖಲೆ ಇಡುವುದೂ ಸಾಧ್ಯ. ವಿವಿಧ ಜನಾಂಗಗಳ ಜನನ-ಮರಣಗಳ ದಾಖಲೆಯ ನೆರವಿನಿಂದ, ಒಟ್ಟು ಜನಸಂಖ್ಯೆಯಲ್ಲಿ ಯಾವಯಾವ ಜನಾಂಗ ಎಷ್ಟೆಷ್ಟಿದೆ ಎಂಬುದರ ಮಾಹಿತ ಇಡುವುದು ಸಾಧ್ಯ. ಒಂದು ಜನಗಣಿತಿಗೂ ಇನ್ನೊಂದು ಜನಗಣಿತಿಗೂ ನಡುವಣ ಅವಧಿಯಲ್ಲಿ ಈ ಜನಾಂಗಗಳ ಜನಸಂಖ್ಯಾ ಪ್ರವೃತ್ತಿಗಳನ್ನು ಅಂದಾಜು ಮಾಡಬಹುದು. ಜನಗಣಿತಿ ಮತ್ತು ಇತರ ಅಧಿಕೃತ ಸಂಖ್ಯಾಕಲನೀಯ ಅಂಕ-ಅಂಶಗಳಲ್ಲಿ ಸೇರಿಸಬೇಕಾಗುವ ಜನಸಂಖ್ಯಾ ಗುಣಲಕ್ಷಣಗಳೇನೆಂಬುದು ದೇಶದಿಂದ ದೇಶಕ್ಕೆ ವ್ಯತ್ಯಾಸವಾಗುತ್ತದೆ. ಒಂದೇ ಜನಾಂಗ ಇರುವ ದೇಶಗಳಲ್ಲಿ ಜನಾಂಗಗಳಿಗೆ ಸಂಬಂಧಿಸಿದ ವಿವರಗಳ ಅಗತ್ಯ ಇರುವುದಿಲ್ಲ. ಮುಂದುವರಿದ ದೇಶಗಳಲ್ಲಿ ಸಾಷರತೆಯ ವಿವರಗಳು ಬೇಕಿರುವುದಿಲ್ಲ. ಏಕೆಂದರೆ ಅಲ್ಲಿ ಬಹುತೇಕ ಎಲ್ಲರೂ ಅಕ್ಷರಸ್ಥರಾಗಿರುತ್ತಾರೆ. ಮತ್ತೆ ಕೆಲವು ದೇಶಗಳಲ್ಲಿ ಕೆಲವು ಮುಖ್ಯ ಗುಣಲಕ್ಷಣಗಳನ್ನು ಕುರಿತ ವಿವರಗಳನ್ನು ಉದ್ದೇಶಪೂರ್ವಕವಾಗಿಯೇ ಬಿಡಲಾಗುತ್ತದೆ. ಉದಾಹರಣೆಗೆ, ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಮತದ ಬಗ್ಗೆ ಪ್ರಶ್ನೆ ಕೇಳುವುದಿಲ್ಲ. ಸಂವೈಧಾನಿಕವಾಗಿ ರಾಷ್ಟ್ರವೂ ಮತವೂ ಪರಸ್ಪರ ಪ್ರತ್ಯೇಕವೆಂಬುದನ್ನು ಅಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಸ್ವಾತಂತ್ರ್ಯಾನಂತರ ಕಾಲದಲ್ಲಿ ಭಾರತದಲ್ಲಿ ವ್ಯಕ್ತಿಯ ಜಾತಿಯ ಬಗ್ಗೆ ಜನಗಣಿತಿಯಲ್ಲಿ ಮಾಹಿತಿ ಸಂಗ್ರಹಿಸುವುದನ್ನು ಬಿಡಲಾಗಿದೆ. ಲಿಂಗ : ಜನಸಂಖ್ಯಾತ್ಮಕವಾಗಿಯೂ ಸಾಮಾಜಿಕವಾಗಿಯೂ ಬಹಳ ಮುಖ್ಯವಾದ ಅಂಶಗಳಲ್ಲಿ ಜನಸಂಖ್ಯೆಯ ಲಿಂಗಾನುಗುಣ ವಿಂಗಡಣೆ ಒಂದು. ಇದನ್ನು ಬಹಳ ಸುಲಭವಾಗಿ ಮಾಪಿಸಬಹುದು. ಯಾವುದೇ ಪ್ರದೇಶದಲ್ಲಿ ಲಿಂಗಾನುಗುಣವಾಗಿ ಜನ ಸಂಖ್ಯೆಯ ವಿತರಣೆ ಅಸಮವಾಗಿರುತ್ತದೆ. ಜನಿಸುವ ಗಂಡು ಹೆಣ್ಣುಗಳ ಸಂಖ್ಯೆ ಸಮವಾಗಿರುವುದಿಲ್ಲ. ಹುಟ್ಟುವ ಮಕ್ಕಳ ಪೈಕಿ ಹೆಣ್ಣುಗಳಿಗಿಂತ ಗಂಡುಗಳೇ ಎಲ್ಲೆಲ್ಲೂ ಅಧಿಕ. ಆದರೆ ವಿವಿಧ ವಯಸ್ಸುಗಳಲ್ಲಿ ಸಾಯುವವರ ಪೈಕಿ ಸಾಯುವವರ ಪೈಕಿ ಹೆಣ್ಣುಗಳಿಗಿಂತ ಗಂಡುಗಳ ಸಂಖ್ಯೆಯೇ ಅಧಿಕ. ವಲಸೆಯ ದೃಷ್ಟಿಯಿಂದಲೂ ಸ್ತ್ರೀ-ಪುರುಷ ವಿಭಿನ್ನತೆ ಎದ್ದುಕಾಣುತ್ತದೆ. ದೂರ ಪ್ರದೇಶಗಳಿಗೆ ವಲಸೆ ಹೋಗುವವರ ಪೈಕಿ ಹೆಂಗಸರಿಗಿಂತ ಗಂಡಸರ ಸಂಖ್ಯೆ ಹೆಚ್ಚು. ಲಿಂಗಾನುಗುಣ ವಿಂಗಡಣೆಯ ಅಧ್ಯಯನದಲ್ಲಿ ಸಾಮಾನ್ಯವಾಗಿ ಬಳಸಲಾಗುವ ಮಾಪಕವೆಂದರೆ ಲಿಂಗನಿಷ್ಪತ್ತಿ (ಸೆಕ್ಸ್ ರೇಷಿಯೊ). ಪ್ರತಿ 100 ಮಂದಿ ಸ್ತ್ರೀಯರಿಗೆ ಎಷ್ಟು ಮಂದಿ ಪುರುಷರಿದ್ದಾರೆಂಬುದಾಗಿ ಅಳೆಯಲಾಗುತ್ತದೆ. ಒಟ್ಟು ಜನಸಂಖ್ಯೆಯಲ್ಲಿರುವ ಸ್ತ್ರೀಯರ ಸಂಖ್ಯೆಯಿಂದ ಅದರಲ್ಲಿರುವ ಪುರುಷರ ಸಂಖ್ಯೆಯನ್ನು ಭಾಗಿಸಿದರೆ ಲಬ್ಧವಾಗುವುದೇ ಲಿಂಗನಿಷ್ಪತ್ತಿ. ಯೂರೋಪಿಯನ್ ದೇಶಗಳಲ್ಲಿ ಪ್ರತಿ ನೂರು ಮಂದಿ ಪುರುಷರಿಗೆ ಎಷ್ಟು ಮಂದಿ ಸ್ತ್ರೀಯರಿರುತ್ತಾರೆಂದು ಕಂಡುಹಿಡಿಯುತ್ತಾರೆ. ಕೋಷ್ಟಕ 1ರಲ್ಲಿ ವಿವಿಧ ದೇಶಗಳಲ್ಲಿ ಪ್ರತಿ 100 ಮಂದಿ ಸ್ತ್ರೀಯರಿಗೆ ಎಷ್ಟು ಮಂದಿ ಪುರುಷರಿದ್ದಾರೆಂಬುದನ್ನು ಕೊಡಲಾಗಿದೆ. ಕೋಷ್ಟಕ-1 ದೇಶ ಜನಗಣಿತಿ ವರ್ಷ ಪ್ರತಿ 100 ಸ್ತ್ರೀಯರಿಗೆ ಪುರುಷರ ಸಂಖ್ಯೆ (ಲಿಂಗಾನಿಷ್ಪತ್ತಿ)

ಶ್ರೀ ಲಂಕಾ ಪಾಕಿಸ್ತಾನ ಲಿಬಿಯ ಟ್ಯೂನೀಷಿಯ ಇಸ್ರೇಲ್ ಮಲಯ ಭಾರತ ಆರ್ಜೆಂಟೀನ ಕ್ಯೂಬಾ ಆಸ್ಟ್ರೇಲಿಯ ಕೆನಡ ಪನಾಮಾ ಐರ್ಲೆಂಡ್ ನ್ಯೂ ಜೀಲೆಂಡ್ ದ. ಕೊರಿಯ ತೈಲೆಂಡ್ ಬ್ರಜಿóಲ್ ಬಲ್ಗೇರಿಯ ನಾರ್ವೇ ಬೆಲ್ಜಿಯಮ್ ಅಮೆರಿಕ ಸಂ. ಸಂ. ಚಿಲಿ ಇಟಲಿ ಹಂಗರಿ ಬ್ರಿಟನ್ ಫ್ರಾನ್ಸ್ ಪ. ಜರ್ಮನಿ ಆಸ್ಟ್ರಿಯ 1953 1961 1954 1956 1948 1957 1951 1947 1953 1954 1956 1960 1956 1956 1955 1960 1950 1956 1950 1947 1960 1952 1951 1960 1951 1954 1950 1951 111.2 110.7 107.9 107.2 106.9 106.4 105.6 105.1 105. 103.2 102.8 102.7 101.9 101.1 100.0 99.5 99.3 99.1 98.3 97.4 97.1 96.4 94.4 93.3 92.4 92.2 88.2 86.6


ಲಿಂಗನಿಷ್ಪತ್ತಿ 100ಕ್ಕಿಂತ ಹೆಚ್ಚಾಗಿರುವ ದೇಶಗಳಲ್ಲಿ ಎರಡು ಗುಂಪುಗಳುಂಟು. ಅಭಿವೃದ್ಧಿ ಹೊಂದುತ್ತಿರುವ ದೇಶಗಳದು ಒಂದು ಗುಂಪು. ಭಾರತ, ಪಾಕಿಸ್ತಾನ, ಶ್ರೀಲಂಕಾ, ಲಿಬಿಯ ಮುಂತಾದ ದೇಶಗಳಲ್ಲಿ, ಸಂತಾನ ಪ್ರಾಪ್ತಿಯ ವರ್ಷಗಳಲ್ಲಿ ಗಂಡಸರಿಗಿಂತ ಹೆಂಗಸರಲ್ಲಿ ಮರಣಸಂಖ್ಯೆ ಅಧಿಕ. ಅಧಿಕ ಸಂಖ್ಯೆಯಲ್ಲಿ ಜನರು ವಲಸೆ ಬಂದಿರುವ ದೇಶಗಳದು ಇನ್ನೊಂದು ಗುಂಪು. ವಲಸೆಗಾರರಲ್ಲಿ ಗಂಡಸರು ಅಧಿಕವಾಗಿರುತ್ತಾರೆ. ಇಸ್ರೇಲ್, ಮಲಯ, ಆರ್ಜೆಂಟೀನ, ಆಸ್ಟ್ರೇಲಿಯ, ಕೆನಡ, ನ್ಯೂಜೀಲೆಂಡ್, ಕ್ಯೂಬಾ ಮುಂತಾದ ದೇಶಗಳಲ್ಲಿ ಗಂಡಸರ ಸಂಖ್ಯೆ ಅಧಿಕವಾಗಿರಲು ಇದು ಕಾರಣ. ಈ ದೇಶಗಳು ತರುಣ ಕಾರ್ಮಿಕರನ್ನು ಆಕರ್ಷಿಸಿವೆ. ಐರ್ಲೆಂಡಿನಲ್ಲಿ ಪುರುಷರ ಸಂಖ್ಯೆ ಅಧಿಕವಾಗಿರಲು ಅಲ್ಲಿಯ ಸ್ತೀಯರು ಅಧಿಕವಾಗಿ ಇಂಗ್ಲೆಂಡಿಗೆ ಉದ್ಯೋಗಾರ್ಥವಾಗಿ ಹೋಗುವುದೇ ಕಾರಣವಿರಬೇಕು. ಲಿಂಗನಿಷ್ಪತ್ತಿ ಕಡಿಮೆಯಿರುವ ದೇಶಗಳೂ ಹಲವು ಉಂಟು. ಪುರಷರ ಸಂಖ್ಯೆ ಕಡಿಮೆಯಿರಲು ಕಾರಣಗಳು ಹಲವು; ಯುದ್ಧ, ಹೊರದೇಶಗಳಿಗೆ ವಲಸೆ ಮುಂತಾದವು. ವಲಸೆಗಾರ ಸಂಖ್ಯೆ ಹೆಚ್ಚಾಗಿಲ್ಲದ ದೇಶಗಳಲ್ಲಿ ಲಿಂಗನಿಷ್ಪತ್ತಿಯನ್ನು ನಿರ್ಣಯಿಸುವ ಮುಖ್ಯ ಅಂಶಗಳೆಂದರೆ ಜನನ ಮತ್ತು ಮರಣ ದರಗಳು, ಕೈಗಾರಿಕೆಯಲ್ಲಿ ಮುಂದುವರಿದ ದೇಶಗಳಲ್ಲಿ ಜನನ ಕಾಲದಲ್ಲಿ ಲಿಂಗನಿಷ್ಪತ್ತಿ 105-106 ಇರುತ್ತದೆ. ಆದರೆ ಮರಣ ದರಗಳು ಸ್ತ್ರೀಯರ ವಿಷಯದಲ್ಲಿ ಕಡಿಮೆ. ಆದ್ದರಿಂದ ಕ್ರಮೇಣ ಲಿಂಗ ನಿಷ್ಪತ್ತಿ ಕಡಿಮೆಯಾಗುತ್ತ ಸಾಗುತ್ತದೆ. 40, 50ನೆಯ ವಯಸ್ಸುಗಳ ನಡುವೆ ಇದು 100ಕ್ಕೆ ಇಳಿಯುತ್ತದೆ. ಒಟ್ಟು ಜನಸಂಖ್ಯೆಗೆ ಸಂಬಂಧಿಸಿದಂತೆ ಈ ದೇಶಗಳಲ್ಲಿ ಲಿಂಗನಿಷ್ಪತ್ತಿ 94-97ರಲ್ಲಿರುತ್ತದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲೂ ಹೆಚ್ಚಿನ ವಯಸ್ಸುಗಳಲ್ಲಿ ಸ್ತ್ರೀಯರ ಮರಣ ದರ ಕಡಿಮೆಯಾಗಿರುವುದಾದರೂ ಪ್ರಜನನ ವಯಸ್ಸುಗಳಲ್ಲಿ ಸ್ತ್ರೀಯರ ಮರಣ ಅಧಿಕವಾಗಿರುತ್ತದೆ. ಆದ್ದರಿಂದ ಈ ದೇಶಗಳ ಸರಾಸರಿ ಲಿಂಗನಿಷ್ಪತ್ತಿ ಸುಮಾರು 100. ಒಂದು ದೇಶದೊಳಗೆ ಲಿಂಗನಿಷ್ಪತ್ತಿಯ ಮೇಲೆ ಪರಿಣಾಮ ಬೀರುವ ಇನ್ನೊಂದು ಅಂಶವೆಂದರೆ ವಲಸೆ. ಅಂತರ್ದೇಶೀಯ ವಲಸೆ ಸಾಮಾನ್ಯವಾಗಿ ಹಳ್ಳಿಗಳಿಂದ ಪಟ್ಟಣಗಳೆಡೆಗೆ. ಭಾರತದಲ್ಲಿ ಸಾಮಾನ್ಯವಾಗಿ ಪಟ್ಟಣಗಳಿಗೆ ವಲಸೆ ಹೋಗುವವರಲ್ಲಿ ಸ್ತ್ರೀಯರಿಗಿಂತ ಪುರುಷರು ಅಧಿಕ. ಮುಂದುವರಿದ ದೇಶಗಳ ಪಟ್ಟಣಗಳಲ್ಲಿ ಸ್ತ್ರೀಯರಿಗೆ ಉದ್ಯೋಗಾವಕಾಶಗಳು ಅಧಿಕವಾಗಿರುತ್ತವೆ. ಆದರೆ ಉಕ್ಕು ಗಣಿಗಾರಿಕೆ ಮುಂತಾದ ಉದ್ಯಮಗಳು ಪ್ರಧಾನವಾದ ನಗರಗಳಲ್ಲಿ ಸ್ತ್ರೀಯರ ಸಂಖ್ಯೆ ಕಡಿಮೆಯಿರುತ್ತದೆ. ಒಂದು ಪ್ರದೇಶದ ಲಿಂಗನಿಷ್ಪತ್ತಿ ಅಲ್ಲಿಯ ವಿವಾಹಗಳ ಸಂಖ್ಯೆಯ ಮೇಲೆ ಮುಖ್ಯ ಪರಿಣಾಮ ಬೀರುತ್ತದೆ. ಒಂದು ನಗರ ಪ್ರದೇಶದಲ್ಲಿ ಸ್ತ್ರೀಯರು ಅಧಿಕ ಸಂಖ್ಯೆಯಲ್ಲಿದ್ದರೆ ಹೆಚ್ಚುವರಿ ಸಂಖ್ಯೆಯ ಸ್ತ್ರೀಯರ ವಿವಾಹಾವಕಾಶಗಳು ಕಡಿಮೆ. ಲಿಂಗ ಸಮತೋಲ ಇಲ್ಲದಲ್ಲಿ ವಿಳಂಬ ವಿವಾಹ, ಔರಸ ಜನನಗಳ ಸಂಖ್ಯೆಯ ಇಳಿತ ಮುಂತಾದವು ಸಂಭಿವಿಸುತ್ತವೆ. ಅಸಮ ಲಿಂಗನಿಷ್ಪತ್ತಿಯಿಂದಾಗಿ ಒಟ್ಟು ಮರಣ ದರದ ಮೇಲೂ ಪರಿಣಾಮ ಉಂಟಾಗುತ್ತದೆ. ವಯಸ್ಸು : ವಯಸ್ಸೂ ಲಿಂಗದಂತೆ ವ್ಯಕ್ತಿಗೆ ಸಂಬಂಧಿಸಿದ ಒಂದು ಮುಖ್ಯ ಲಕ್ಷಣ. ವಯಸ್ಸಿಗೂ ದೈಹಿಕ ಸಾಮಥ್ರ್ಯಕ್ಕೂ ಮಾನಸಿಕ ಪ್ರಬುದ್ಧತೆಗೂ ನೇರ ಸಂಬಂಧವುಂಟು. ಒಂದು ಸಮಾಜವ್ಯವಸ್ಥೆಯ ರಚನೆಯಲ್ಲಿ ವ್ಯಕ್ತಿಯ ವಯಸ್ಸೇ ಇಟ್ಟಿಗೆ. ವ್ಯಕ್ತಿಯ ವಯಸ್ಸಿಗೆ ಅನುಗುಣವಾಗಿ ಸಾಮಾಜಿಕ ಪಾತ್ರವೂ ಹೊಣೆಗಳೂ ಅವನಿಗೆ ಪ್ರಾಪ್ತವಾಗುತ್ತವೆ. ವಿವಿಧ ಸಾಮಾಜಿಕ ಕಲಾಪಗಳಿಗೆ ಲಭ್ಯವಿರುವ ಜನರ ಸಂಖ್ಯೆ ಎಷ್ಟು ಎಂಬುದು ಸಮಾಜದ ಜನರ ವಯೋಸಂಯೋಜನೆಯನ್ನೇ ಅವಲಂಬಿಸಿದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ, ಕಾರ್ಮಿಕ ಬಲದ ಗಾತ್ರ, ಮತ್ತು ಈ ಬಲವನ್ನೆ ಅವಲಂಭಿಸಿರುವ ಜನರ ಸಂಖ್ಯೆ. ವಯಸ್ಸಿಗೂ ಫಲವಂತಿಕೆಗೂ ಮರಣ ಸಂಖ್ಯೆಗೂ ನೇರ ಜೈವಿಕ ಸಂಬಂಧವುಂಟು. ವಯಸ್ಸಿಗೆ ಸಂಬಂಧಿಸಿದ ದತ್ತಾಂಶ, ಲಿಂಗಕ್ಕೆ ಸಂಬಂಧಿಸಿದ ದತ್ತಾಂಶದಷ್ಟು ವಿಶ್ವಸ್ತವಲ್ಲ. ಅನಕ್ಷರಸ್ಥ ಸಮಾಜಗಳಲ್ಲಿ ಅನೇಕರಿಗೆ ತಮ್ಮ ವಯಸ್ಸು ಗೊತ್ತೇ ಇರುವುದಿಲ್ಲ. ಅಂಥ ಸಂದರ್ಭಗಳಲ್ಲಿ ಜನಗಣಿತಿದಾರರು ವಯಸ್ಸುಗಳ ಅಂದಾಜು ಮಾಡಬೇಕಾಗುತ್ತದೆ. ಅಕ್ಷರಸ್ಥರೂ ತಮ್ಮ ವಯಸ್ಸುಗಳನ್ನು ಹೇಳುವಾಗ 0 ಅಥವಾ 5ರಿಂದ ಅಂತ್ಯವಾಗುವ ಅಂಕಗಳಲ್ಲಿ ಅಥವಾ ಸಮಸಂಖ್ಯೆಗಳಲ್ಲಿ ಹೇಳುವುದುಂಟು. ಇಂಥ ವಯೋರಾಶೀಕರಣದ ತಪ್ಪುಗಳನ್ನು ಸರಿಪಡಿಸಲು ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಯಾವುದೇ ಜನರ ಸರಿಯಾದ ವಯೋಸಂಯೋಜನೆಯ ಜನನ, ಮರಣ ಮತ್ತು ವಲಸೆಯ ದರಗಳನ್ನು ಅವಲಂಬಿಸಿರುತ್ತದೆ. ಹಲವು ದೇಶಗಳ ವಿವಿಧ ವಯೋಗುಂಪುಗಳನ್ನು ಹೋಲಿಸಿದಾಗ ಅವುಗಳಲ್ಲಿ ಬಹಳ ವ್ಯತ್ಯಾಸವಿರುವುದು ಗೋಚರವಾಗುತ್ತದೆ. ಏಷ್ಯ, ಆಫ್ರಿಕ, ಲ್ಯಾಟಿನ್ ಅಮೆರಿಕದ ಅಭಿವೃದ್ಧಿಶೀಲ ದೇಶಗಳಲ್ಲಿ ಜನನ-ಮರಣ ದರಗಳೆರಡೂ ಅಧಿಕ. ಇವುಗಳ ವಯೋಸಂಯೋಜನೆ ಒಂದೇ ರೀತಿ ಇರುತ್ತದೆ. ಇವುಗಳಲ್ಲಿ ಅನುಪಾತೀಯವಾಗಿ ಮಕ್ಕಳ ಸಂಖ್ಯೆ ಅಧಿಕ. ಒಟ್ಟು ಜನಸಂಖ್ಯೆಯ ಸೇಕಡ 40ರಷ್ಟು 0-14ರ ವಯೋಗುಂಪಿನಲ್ಲಿರುತ್ತದೆ. ಸುಮಾರು ಅರ್ಧದಷ್ಟು ಜನ 15-64ರ ಅಂತರದಲ್ಲಿರುವವರು. 65ಕ್ಕಿಂತ ಹೆಚ್ಚಿನ ವಯಸ್ಸಿನವರ ಅನುಪಾತ 4%ಕ್ಕಿಂತ ಕಡಿಮೆ. ಮಕ್ಕಳ ಅನುಪಾತ ಹೆಚ್ಚಾಗಿರುವುದರಿಂದ, ಆರ್ಥಿಕವಾಗಿ ಕಾರ್ಯಪ್ರವೃತ್ತರಾದವರನ್ನು ಅವಲಂಬಿಸಿರುವವರ ಸಂಖ್ಯೆ ಹೆಚ್ಚು. ಆರ್ಥಿಕವಾಗಿ ಮುಂದುವರಿದ ದೇಶಗಳಲ್ಲಿ ಜನನ ಮರಣ ದರಗಳೆರಡೂ ಕಡಿಮೆ. ಇಲ್ಲ 15 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳು ಒಟ್ಟು ಜನಸಂಖ್ಯೆಯ ಸುಮಾರು 1/5ರಷ್ಟು ಮಾತ್ರ. 2/3 ಮಂದಿ 15-64 ವಯಸ್ಸಿನವರು. 65ಕ್ಕಿಂತ ಹೆಚ್ಚು ವಯಸ್ಸಿನವರು ಸೇಕಡ 8-12. ಫಲವಂತಿಕೆಯ ಇಳಿತಾಯವೇ ಈ ವಯೋ ಸಂಯೋಜನೆಗೆ ಕಾರಣ. ವಸಲೆಯಿಂದಾಗಿ ಅಮೆರಿಕನ್ ದೇಶಗಳಲ್ಲಿ 15-64 ವಯೋಗುಂಪಿನ ಅನುಪಾತ ಹೆಚ್ಚಾಗಿದೆ. ಫಲವಂತಿಕೆ ಇಳಿಯುವುದರಿಂದ ಭವಿಷ್ಯದಲ್ಲಿ ಕಾರ್ಯಶೀಲ ವಯಸ್ಸುಗಳ ಜನರ ಸಂಖ್ಯೆ ಕಡಿಮೆಯಾಗುತ್ತದೆ. 65ಕ್ಕಿಂತ ಹೆಚ್ಚಿನ ವಯಸ್ಸಿನವರ ಸಂಖ್ಯೆ ಅಧಿಕವಾಗುತ್ತದೆ. ಇನ್ನು ಕೆಲವು ರಾಷ್ಟ್ರಗಳು ಪರಿವರ್ತನೆಯ ಹಂತದಲ್ಲಿವೆ. ಅವುಗಳಲ್ಲಿ ಮರಣ ಸಂಖ್ಯೆ ಇಳಿಮುಖವಾಗಿದೆ. ಫಲವಂತಿಕೆಯೂ ಇಳಿಯಲಾರಂಭಿಸಿದೆ. ಜಪಾನ್, ಪೂರ್ವ ಯೂರೋಪಿನ ದೇಶಗಳು ನಿದರ್ಶನ. ಕೋಷ್ಟಕ - 2 ಹಲವು ದೇಶಗಳ ಜನಸಂಖ್ಯೆಯ ವಯೋಗಣಾನುಗುಣ ವಿತರಣೆ ದೇಶ ಜನಗಣಿತಿ ವರ್ಷ ವಯೋಗಣ


0-14 15-64 65 ಮತ್ತು ಅಧಿಕ

ಡಾಮಿನಿಕನ್ ಗಣರಾಜ್ಯ ಪೆರಗ್ವೇ ವೆನಿಜ್ವೀóಲ ಮಲಯ ದ. ಕೊರಿಯ ಈಜಿಷ್ಟ್ ತುರ್ಕಿ ಜಪಾನ್ ಯೂಗೊಸ್ಲಾವಿಯ ಆಸ್ಟ್ರೇಲಿಯ ಅಮೆರಿಕ ಸಂ. ಸಂ. ಡೆನ್ಮಾರ್ಕ್ ಪ. ಜರ್ಮನಿ ಸ್ವಿಟ್‍ಜûರ್ಲೆಂಡ್ ಸ್ವೀಡನ್ ಬ್ರಿಟನ್ ಫ್ರಾನ್ಸ್ ಬೆಲ್ಜಿಯಮ್ 1950 1950 1950 1950 1952 1947 1950 1950 1951 1954 1950 1950 1950 1950 1950 1951 1954 1947 44.5 43.8 41.9 41.3 41.1 38.1 38.0 35.4 30.9 28.5 27.1 26.3 23.6 23.6 23.4 22.5 23.3 20.6 52.6 52.5 55.4 55.5 55.2 58.8 58.6 59.6 63.5 63.2 64.7 64.6 67.2 66.8 66.3 66.7 64.6 68.7 2.9 3.7 2.7 3.2 3.7 3.1 3.4 4.9 5.7 8.3 8.2 9.1 9.3 9.6 10.3 10.8 12.1 10.7


ಆರ್ಥಿಕವಾಗಿ ಮುಂದುವರಿದ ದೇಶಗಳಲ್ಲಿ ವೃದ್ಧಾಪ್ಯ ಒಂದು ಸಮಸ್ಯೆಯ ಸ್ವರೂಪ ತಳೆದಿದೆ. ಅಭಿವೃದ್ಧಿಶೀಲ ದೇಶಗಳಲ್ಲಿ ವೃದ್ಧರು ತಂತಮ್ಮ ಸಂಸಾರಗಳ ಅಂಗಗಳು. ಅವರ ಬಗ್ಗೆ ಸಾಮಾಜಿಕವಾಗಿ ಗೌರವ ಇರುತ್ತದೆ. ಅವರನ್ನು ನೋಡಿಕೊಳ್ಳುವುದು ಸಂಸಾರದ ಉಳಿದವರ ಹೊಣೆ. ಆದರೆ ಮುಂದುವರಿದ ದೇಶಗಳಲ್ಲಿ ಅವರು ಪ್ರತ್ಯೇಕವಾಗಿ, ಅನುಪಯುಕ್ತರಾಗಿ, ಸಾಮಾಜಿಕ ಹೊರೆಯಾಗಿ ಪರಿಣಮಿಸುತ್ತಾರೆ. ಯೋರೋಪಿನ ದೇಶಗಳಲ್ಲಿ ಜನನದರ ಈಚೆಗೆ ಏರುತ್ತಿರುವುದರಿಂದ ವೃದ್ಧಾಪ್ಯದ ಸಮಸ್ಯೆ ಸಾಪೇಕ್ಷವಾಗಿ ಕಡಿಮೆಯಾಗಿದ್ದರೂ ಒಟ್ಟಿನಲ್ಲಿ ವೃದ್ಧರ ಸಂಖ್ಯೆ ಬೆಳೆಯುತ್ತಲೇ ಇದೆ. ವೈವಾಹಿಕ ಸ್ಥಿತಿ : ಎಲ್ಲ ಜನಗಣಿತಿಗಳಲ್ಲೂ ವ್ಯಕ್ತಿಯ ವೈಹಾಹಿಕ ಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸಲು ಕ್ರಮ ಕೈಗೊಳ್ಳುವುದುಂಟು. ಕುಟುಂಬ ರಚನೆಯಲ್ಲಿ ಆಗುವ ಬದಲಾವಣೆಗಳನ್ನು ಜನಸಂಖ್ಯಾಶಾಸ್ತ್ರಜ್ಞರೂ ಸಮಾಜಶಾಸ್ತ್ರಜ್ಞರೂ ಅರ್ಥಶಾಸ್ತ್ರಜ್ಞರೂ ಬಹಳ ಎಚ್ಚರಿಕೆಯಿಂದ ಅಧ್ಯಯಿಸುತ್ತಾರೆ. ವೈವಾಹಿಕ ಸ್ಥಿತಿಯಲ್ಲಿಯೇ ಆದ ಬದಲಾವಣೆಗಳು ಫಲವಂತಿಕೆ, ಮೃತ್ಯುಸಂಖ್ಯೆ-ಇರೆರಡರ ಮೇಲೂ ಪರಿಣಾಮ ಬೀರುತ್ತವೆ. ಜನರು ಯಾವ ವಯಸ್ಸಿನಲ್ಲಿ ಮದುವೆಯಾಗುತ್ತಾರೆ-ಎಂಬುದು ಫಲವಂತಿಕೆಯನ್ನು ನಿರ್ಣಯಿಸುತ್ತದೆ. ಚಿಕ್ಕ ವಯಸ್ಸಿನಲ್ಲೇ ಮದುವೆ ಆಗುವ ಪದ್ಧತಿ ಇರುವಲ್ಲಿ ಮತ್ತು ವಿವಾಹಿತರ ಅನುಪಾತ ಅಧಿಕವಿರುವಲ್ಲಿ ಫಲವಂತಿಕೆಯೂ ಅಧಿಕವಾಗಿರುತ್ತದೆ. ವೈವಾಹಿಕ ಸ್ಥಿತಿಗೆ ಅನುಗುಣವಾಗಿ ಮರಣ ಸಂಖ್ಯೆಯೂ ವ್ಯತ್ಯಾಸವಾಗುತ್ತದೆ. ಒಂದು ವಯಸ್ಸಿನ ಅವಿವಾಹಿತರ ಮರಣ ದರಕ್ಕಿಂತ ಅದೇ ವಯಸ್ಸಿನ ವಿವಾಹಿತ ಪುರುಷರ ಮತ್ತು ಸ್ತ್ರೀಯರ ಮರಣ ದರ ಕಡಿಮೆಯಿರುತ್ತದೆ. ವಿವಾಹವನ್ನು ನಿರ್ಣಯಿಸುವ ಅಂಶಗಳಲ್ಲಿ ಆರೋಗ್ಯವೂ ಒಂದು ಮುಖ್ಯ ಅಂಶವಾದ್ದರಿಂದಲೂ ವಿವಾಹಿತ ಜೀವನ ನಡೆಸುವವರು ಹೆಚ್ಚು ಕ್ರಮಬದ್ಧ ಜೀವನ ನಡಸುವುದರಿಂದಲೂ ವಿವಾಹಿತರು ಅವಿವಾಹಿತರಿಗಿಂತ ಸಾಮಾನ್ಯವಾಗಿ ಹೆಚ್ಚು ದೀರ್ಘಾಯುಗಳಾಗಿರುತ್ತಾರೆ. ಮಾನವ ಸಮಾಜದಲ್ಲಿ ಕುಟುಂಬ ಒಂದು ಮೂಲ ಘಟಕ. ತಲೆಮಾರಿನಿಂದ ತಲೆಮಾರಿಗೆ ಜನಸಂಖ್ಯೆಯನ್ನು ಮುಂದುವರಿಸಿಕೊಂಡು ಹೋಗುವ ಹೊಣೆ ಕುಟುಂಬದ್ದು. ಕುಟುಂಬದ ಉದ್ದೇಶ ಪ್ರಜನನ ಮಾತ್ರವೇ ಅಲ್ಲ. ಮಕ್ಕಳು ಸಾಮಾಜಿಕವಾಗಿ ಉಪಯುಕ್ತ ಪಾತ್ರ ವಹಿಸುವಂತೆ ದೀರ್ಘಕಾಲ ಅವರನ್ನು ಬೆಳೆಸಿ ತರಬೇತು ಮಾಡುವುದೂ ಕುಂಟುಂಬದ ಕಾರ್ಯಭಾರ. ಆದ್ದರಿಂದಲೂ ಜನರ ವೈವಾಹಿಕ ಸ್ಥಿತಿಯನ್ನು ಕುರಿತ ಮಾಹಿತಿಯ ಸಂಗ್ರಹ ಮತ್ತು ಅಧ್ಯಯನಕ್ಕೆ ಹೆಚ್ಚಿನ ಪ್ರಾಧಾನ್ಯವಿದೆ. ವೈವಾಹಿಕ ಸ್ಥಿತಿಯ ದೃಷ್ಟಿಯಿಂದ ವಿವಿಧ ರಾಷ್ಟ್ರಗಳ ತೌಲನಿಕ ಅಧ್ಯಯನ ಮಾಡುವಾಗ ಎಚ್ಚರಿಕೆ ವಹಿಸುವುದು ಅವಶ್ಯ. ಕೆಲವು ದೇಶಗಳಲ್ಲಿ ಅನೇಕ ಗಂಡು ಹೆಣ್ಣುಗಳು ಸತಿಪತಿಗಳಂತೆ ಕೂಡಿ ಬಾಳು ನಡಸುತ್ತಿದ್ದರೂ ವಿವಾಹಿತರೆಂದು ಅಧಿಕೃತವಾಗಿ ಹೇಳಿಕೊಳ್ಳುವುದಿಲ್ಲ. ವಿವಾಹಿತ ಪುರುಷರ ಸಂಖ್ಯೆಯೂ ಸ್ತ್ರೀಯರ ಸಂಖ್ಯೆಯೂ ಸಾಮಾನ್ಯವಾಗಿ ಒಂದೇ ಸಮವಾಗಿರಬೇಕು. ಆದರೆ ಬಹುತೇಕ ದೇಶಗಳಲ್ಲಿ ಇವುಗಳಲ್ಲಿ ವ್ಯತ್ಯಾಸ ಇರುತ್ತದೆ. ಏಕೆಂದರೆ ವಿವಾಹವಾದ ಅನಂತರ ಕಾನೂನಿಕವಾಗಿಯೋ ವಾಸ್ತವವಾಗಿಯೋ ಪ್ರತ್ಯೇಕಗೊಂಡವರಲ್ಲಿ ಅನೇಕರು ಹಾಗೆಂದು ಹೇಳಿಕೊಳ್ಳದಿರಬಹುದು. ಭಾರತ, ತುರ್ಕಿ ಮುಂತಾದ ದೇಶಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ವಿವಾಹವಾಗುವ ಪ್ರವೃತ್ತಿಯುಂಟು, ಐರ್ಲೆಂಡ್, ಸ್ಪೇನ್, ಜಪಾನ್ ಮುಂತಾದ ದೇಶಗಳಲ್ಲಿ ವಿವಾಹವನ್ನು ಆದಷ್ಟು ಮುಂತಳ್ಳುವ ಅಭ್ಯಾಸವುಂಟು. ವಿವಿಧ ವಯಸ್ಸುಗಳ ವಿವಾಹಿತರ ಅನುಪಾತ ಒಂದು ದೇಶದ ಸಾಮಾಜಿಕ ವ್ಯವಸ್ಥೆ, ಸಾಂಸ್ಕøತಿಕ ಚೌಕಟ್ಟು ಇವುಗಳಿಗೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. ವೈವಾಹಿಕ ಸ್ಥಿತಿಗೂ ಸಾಮಾಜಿಕ ರಚನೆಗೂ ಇರುವ ಸಂಬಂಧ ತುಂಬ ಸಂಕೀರ್ಣವಾದ್ದರಿಂದ ಈ ಬಗ್ಗೆ ಸುಲಭ ಸಾರ್ವತ್ರೀಕರಣ ಸಾಧ್ಯವಿಲ್ಲ. ಸ್ಥೂಲವಾಗಿ ಹೇಳುವುದಾದರೆ, ಪುರುಷರಿಗಿಂತ ಕಡಿಮೆ ವಯಸ್ಸಿನಲ್ಲೆ ಸ್ತ್ರೀಯರಲ್ಲಿ ವಿವಾಹಿತರ ಸೇಕಡವಾರು ಗರಿಷ್ಠ ಸ್ಥಿತಿ ಮುಟ್ಟುತ್ತದೆ. ಕಸಬು : ಜನಸಂಖ್ಯೆಯ ಸಾಮಾಜಿಕ ಲಕ್ಷಣಗಳ ಪರಿಶೀಲನೆಯಲ್ಲಿ ವಿಶೇಷ ಗಮನಕ್ಕೆ ಅರ್ಹವಾದ ಅಂಶವೆಂದರೆ ಕಸಬು. ಮಾನವರಿಗೆ ಅನ್ನವೇ ಮುಖ್ಯವಲ್ಲ. ಆದರೆ ಎಲ್ಲ ಸಮಾಜಗಳಲ್ಲೂ ಜನಸಂಖ್ಯೆಯ ಒಂದು ಗಮನಾರ್ಹ ಭಾಗ ಜೀವನ ನಿರ್ವಹಣೆಗಾಗಿ ಸತತ ಶ್ರಮಿಸುತ್ತಿರುತ್ತದೆ. ಒಬ್ಬ ಕೆಲಸಗಾರನ ಜೀವನೋಪಾಯ ವಿಧಾನವೇ ಅವನ ಮತ್ತು ಅವನ ಕುಟುಂಬದ ಆರ್ಥಿಕ ಸಾಮಾಜಿಕ ಸ್ಥಿತಿಗೆ ಆಧಾರ. ಒಂದು ದೇಶದ ಜನಸಂಖ್ಯೆಯಲ್ಲಿ ಕೆಲಸಗಾರರ ಪ್ರಮಾಣ ಎಷ್ಟು ಎಂಬುದು ಬಲು ಮುಖ್ಯ. ಕೆಲಸಗಾರರನ್ನು ಕಸಬು ಮತ್ತು ಕೈಗಾರಿಕೆಗಳಿಗೆ ಅನುಗುಣವಾಗಿ ವರ್ಗೀಕರಿಸುವುದು ಉಪಯುಕ್ತ. ಇದರಿಂದ ಒಂದು ದೇಶದ ಆರ್ಥಿಕ ಅಭಿವೃದ್ಧಿಯನ್ನು ಅರಿಯಬಹುದಲ್ಲದೆ. ಆ ದೇಶದ ವಿವಿಧ ಪ್ರದೇಶಗಳ ಆರ್ಥಿಕ ಅಭಿವೃದ್ಧಿಯ ಮಟ್ಟವನ್ನು ಅಳೆಯಬಹುದು. ಒಂದು ದೇಶದ ಜನಸಂಖ್ಯೆಯನ್ನು ಆರ್ಥಿಕವಾಗಿ ಕಾರ್ಯಶೀಲವಾದ್ದು, ಇಲ್ಲದ್ದು ಎಂದು ಎರಡು ಭಾಗಗಳಾಗಿ ವಿಂಗಡಿಸಬಹುದು. ಮೊದಲನೆಯ ಭಾಗದ ಜನರೇ ಆ ದೇಶದ ಕಾರ್ಯಶೀಲ ಬಲ, ಅಥವಾ ಕಾರ್ಮಿಕ ಬಲ. ಹಿಂದುಳಿದ ಸಮಾಜಗಳಲ್ಲಿ, ಬಲು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬಹುತೇಕ ಎಲ್ಲರೂ ಉತ್ಪಾದನೆಯ ಕಾರ್ಯದಲ್ಲಿ ಭಾಗವಹಿಸುವುದರಿಂದ ಅಲ್ಲಿ ಈ ಬಗೆಯ ವಿಂಗಡಣೆ ಬಹು ಕಷ್ಟ. ಆದರೆ ಮಾರುಕಟ್ಟೆ ಆರ್ಥಿಕತೆ ಬೆಳೆದಂತೆ, ಸರಕು ಸೇವೆಗಳನ್ನು ಅನುಭೋಗಿಸುವ, ಆದರೆ ಅವುಗಳ ಉತ್ಪಾದನೆಯಲ್ಲಿ ಭಾಗವಹಿಸದ ಜನರ ಪ್ರಮಾಣ ಹೆಚ್ಚುತ್ತದೆ. ಅಂಥ ಸಮಾಜಗಳಲ್ಲಿ ಮೇಲೆ ಹೇಳಿದ ವರ್ಗೀಕರಣ ಸಾಧ್ಯ. ಆದರೂ ಅಂಥ ಸಮಾಜಗಳಲ್ಲೂ ಈ ವಿಂಗಡಣೆಗೆ ಸಮರ್ಪಕವಾದ ಸೂತ್ರ ರಚಿಸುವುದು ಸುಲಭವಲ್ಲ. ಜನಗಣಿತಿಯ ಮಾಹಿತಿಗಳಲ್ಲಿ ಕಾರ್ಮಿಕ ಬಲವನ್ನು ಕುರಿತ ಅಂಕೆ-ಅಂಶಗಳೂ ಇರುತ್ತವೆ. ಈ ಕುರಿತ ವರ್ಗೀಕರಣದ ರೀತಿನೀತಿಗಳು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತವೆ. ಒಂದು ದೇಶದಲ್ಲಿರುವ, ಆರ್ಥಿಕವಾಗಿ ಕ್ರಿಯಾಶೀಲವಾದ ಜನಸಂಖ್ಯೆಯ ಗಾತ್ರ ಅದರ ಒಟ್ಟು ಜನಸಂಖ್ಯೆಯ ವಯೋನುಗುಣ ಹಾಗೂ ಲಿಂಗಾನುಗುಣ ಸಂಯೋಜನೆಯನ್ನು ಬಹಳ ಮಟ್ಟಿಗೆ ಅವಲಂಬಿಸಿರುತ್ತದೆ. ಪ್ರತಿಯೊಂದು ದೇಶದಲ್ಲೂ ಎಲ್ಲ ಪುರುಷರು ಪ್ರಾಪ್ತವಯಸ್ಕರಾದಂದಿನಿಂದ ಮುದುಕರಾಗುವ ವರೆಗೆ ಸಾಮಾನ್ಯವಾಗಿ ಆರ್ಥಿಕವಾಗಿ ಕ್ರಿಯಾಶೀಲರಾದ ಸ್ತ್ರೀಯರು, ಯುವಕರು ಮತ್ತು ಮುದುಕರ ಸಂಖ್ಯೆ ಒಂದು ದೇಶದ ಸಾಂಸ್ಕøತಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸಿರುತ್ತದೆ. ಆರ್ಥಿಕ ಉತ್ಪಾನೆಯ ಸ್ವರೂಪ ಮತ್ತು ಉತ್ಪಾದನ ವ್ಯವಸ್ಥೆ, ವರಮಾನದ ಮಟ್ಟ, ಶಿಕ್ಷಣ ಮುಂತಾದವು ಕಾರ್ಮಿಕ ಬಲವನ್ನು ನಿರ್ಧರಿಸುವ ಅಂಶಗಳು, ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಕ್ಕಳೂ ದುಡಿಯುತ್ತಾರೆ. ಅನೇಕರು ಮುಪ್ಪಾದ ಮೇಲೂ ದುಡಿತ ಮುಂದುವರಿಸುವುದು ಅನಿವಾರ್ಯವಾಗಿರುತ್ತದೆ. ಆದರೆ ಕೈಗಾರಿಕಾಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಕ್ಕಳು ವಯಸ್ಕರಾಗುವ ವರೆಗೆ ಶಾಲೆಗೆ ಹೋಗುತ್ತಾರೆ. ಮುಪ್ಪಿನಲ್ಲಿ ಅವರು ನಿವೃತ್ತಿ ವೇತನ ಸೌಲಭ್ಯ ಪಡೆಯುತ್ತಾರೆ. ಅಲ್ಲಿ ಒಂದು ವಯಸ್ಸಾದ ಮೇಲೆ ನಿವೃತ್ತರಾಗುವುದು ಕಡ್ಡಾಯ. ಶಿಕ್ಷಣ ಮಟ್ಟ : ಕಸಬಿಗೂ ಶಿಕ್ಷಣಕ್ಕೂ ನೇರ ಸಂಬಂಧವುಂಟು. ವ್ಯಕ್ತಿಯ ಜೀವನಮಟ್ಟ, ಅವನ ಸಾಂಸ್ಕøತಿಕ ಚಟುವಟಿಕೆಗಳು, ಸಾಮಾಜಿಕ ಸ್ಥಾನಮಾನ ಇವು ಅವನ ಶೈಕ್ಷಣಿಕ ಮಟ್ಟವನ್ನು ಅವಲಂಬಿಸಿರುತ್ತವೆ. ಅವನ ಆಯುಸ್ಸು, ಮಾನಸಿಕ ಧೋರಣೆಗಳು, ಜೀವನದೃಷ್ಟಿ-ಇವೂ ಶಿಕ್ಷಣವನ್ನು ಆಧರಿಸರುತ್ತವೆ. ಒಂದು ಜನಾಂಗದ ಅಭಿವೃದ್ಧಿಯ ಮೇಲೆ ಪ್ರಭಾವ ಬೀರುವ ಅಂಶಗಳಿವು. ಒಂದು ಇಡೀ ಸಮಾಜದ ವರ್ಗಸಂಯೋಜನೆ, ಅದರಲ್ಲಿರುವ ವ್ಯಕ್ತಿಗಳ ಸಾಮಾಜಿಕ ಆರ್ಥಿಕ ಸ್ಥಿತಿ ಇವೆಲ್ಲವನ್ನೂ ಅರಿಯಲು ಶಿಕ್ಷಣಮಟ್ಟ ಬಲು ಸಹಾಯಕ. ಒಂದು ಜನಾಂಗದಲ್ಲಿ ಓದು ಬರಹ ಬಲ್ಲವರ ಪ್ರಮಾಣವೆಷ್ಟು ಎಂಬುದು ಅತ್ಯಂತ ಸರಳಮಾಪಕ. ಆದರೆ ಹಲವು ಮುಂದುವರಿದ ದೇಶಗಳ ಜನಗಣಿತಿಗಳಲ್ಲಿ ಸಾಕ್ಷರತೆಯ ಬಗ್ಗೆ ಪ್ರಶ್ನೆಗಳು ಅನಗತ್ಯವೆನಿಸಿವೆ. ಸಾಕ್ಷರತೆಯ ದರಗಳು ಅತ್ಯಂತ ಸ್ಥೂಲ ಮಾಪಕಗಳಾದ್ದರಿಂದ ಅನೇಕ ಜನಗಣಿತಿಗಳಲ್ಲಿ ಈ ಬಗ್ಗೆ ಪರಿಷ್ಕøತ ಮಾಹಿತಿ ಸಂಗ್ರಹ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಶಾಲೆಗೆ ಹಾಜರಾತಿ ಹಾಕಿದ ಅವಧಿ, ವಿವಿಧ ವಯೋಗಣಗಳಲ್ಲಿ ಶಾಲೆಗೆ ಹೋಗುತ್ತಿರುವವರ ಸಂಖ್ಯೆ ಮುಂತಾದವುಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ವಿವಿಧ ದೇಶಗಳ ಶಿಕ್ಷಣ ವ್ಯವಸ್ಥೆಗಳಲ್ಲಿ ವ್ಯತ್ಯಾಸ ಇರುವುದರಿಂದ ಈ ಬಗ್ಗೆ ಅಂತರರಾಷ್ಟ್ರೀಯ ತೌಲನಿಕ ಅಧ್ಯಯನ ಕಷ್ಟ. ಜನಾಂಗೀಯ ಮತ್ತು ಮತೀಯ ಸಂಯೋಜನೆ : ಸಾಂಸ್ಕøತಿಕ ಭಿನ್ನತೆಗಳು ಫಲವಂತಿಕೆ, ಮರಣ ಸಂಖ್ಯೆ, ವಲಸೆ, ವಿವಾಹ ಪದ್ಧತಿ, ವಿದ್ಯೆ, ಸಾಮಾಜಿಕಾರ್ಥಿಕ ಅಂತಸ್ತು ಮುಂತಾದವನ್ನು ನಿರ್ಣಯಿಸುತ್ತವೆ. ಆದ್ದರಿಂದ ಹಲವು ದೇಶಗಳಲ್ಲಿ ಜನರನ್ನು ಜನಾಂಗೀಯ ಹಾಗೂ ಮತೀಯವಾಗಿ ವಿಂಗಡಣೆ ಮಾಡುವುದು ಅವಶ್ಯ. ಮತೀಯ ಭಿನ್ನತೆಗಳು ಹಿಂಸೆ, ಪ್ರತ್ಯೇಕತೆ ಮುಂತಾದವಕ್ಕೆ ಕಾರಣವಾಗಬಹುದು. ಅನೇಕ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮತ ಈಗ ಅಷ್ಟೇನೂ ಪ್ರಧಾನ ಪಾತ್ರ ವಹಿಸುವುದಿಲ್ಲ. ಜನಾಂಗ ಗುಂಪುಗಳನ್ನು ಸಾಮಾನ್ಯವಾಗಿ ಕುಲ (ರೇಸ್), ವರ್ಣ (ಕಲರ್), ರಾಷ್ಟ್ರೀಯ ಮೂಲ, ಭಾಷೆ ಇವುಗಳಿಗೆ ಅನುಗುಣವಾಗಿ ವರ್ಗೀಕರಿಸವುದುಂಟು. ವಲಸೆ ದೇಶಗಳಲ್ಲಿ ಇವೆಲ್ಲ ಜನಜೀವನದ ಮೇಲೆ ಬಹಳ ಪ್ರಭಾವ ಬೀರುತ್ತವೆಯಲ್ಲದೆ ಅನೇಕ ಸಮಸ್ಯೆಗಳಿಗೆ ಕಾರಣವಾಗಿವೆ. ಕೈಗಾರಿಕಾಕರಣ. ನಗರೀಕರಣ ಮುಂತಾದ ಪ್ರಕ್ರಿಯೆಗಳಿಂದಾಗಿ ಕಾಲಕ್ರಮದಲ್ಲಿ ಜನಾಂಗ ಹಾಗೂ ಮತೀಯ ಭಿನ್ನತೆಗಳು ಮಾಯವಾಗಿ ಸಮಾನ ಸಾಮಾಜಿಕ ಆರ್ಥಿಕ ವ್ಯವಸ್ಥೆ ರೂಪುಗೊಳ್ಳಬಹುದು. * ಗಿ ಜನಸಂಖ್ಯೆಯ ಬೆಳವಣಿಗೆ ಜನಸಂಖ್ಯೆಯ ಬೆಳವಣಿಗೆ ಎಂದರೆ ಇಲ್ಲಿ ಜನಸಂಖ್ಯೆಯ ಏರಿಕೆ ಮಾತ್ರವಲ್ಲ. ಜನಸಂಖ್ಯೆಯ ಧನಾತ್ಮಕ ಏಕದಿಷ್ಟ ಬದಲಾವಣೆ ಮಾತ್ರವಲ್ಲದೆ ಅದರ ಇಳಿತಾಯ, ಏರಿಳಿತಗಳು, ತೀವ್ರ ಬದಲಾವಣೆಗಳು ಮುಂತಾದವನ್ನೂ ಈ ಶೀರ್ಷಿಕೆಯ ಅಡಿಯಲ್ಲಿ ಅಧ್ಯಯಿಸಲಾಗುತ್ತದೆ. ಜನಸಂಖ್ಯೆಯ ಸಹಜ ಏರಿಕೆ (ಜನನ ಕಳೆ ಮರಣ), ನಿವ್ವಳ ವಲಸೆ (ವಲಸೆ ಬಂದವರು ಕಳೆ ವಲಸೆ ಹೋದವರು)-ಇವುಗಳ ಮೊತ್ತವೇ ಜನಸಂಖ್ಯೆಯ ಬೆಳವಣಿಗೆ. ಈ ಸಿಲ್ಕುಗಳಲ್ಲಿ ಒಂದೊಂದೂ ಋಣಾತ್ಮಕವಾಗಿರುವುದು ಸಾಧ್ಯ. ನಿವ್ವಳ ವಲಸೆ ಇಲ್ಲದಾಗ ಅಥವಾ ಗಣನೆಗೆ ತೆಗೆದುಕೊಳ್ಳದಷ್ಟು ಅಲ್ಪವಾಗಿದ್ದಾಗ, ಸಹಜ ಏರಿಕೆಗೆ ಜನಸಂಖ್ಯೆಯ ಏರಿಕೆ ಸಮವಾಗಿರುತ್ತದೆ. ಕಾಲ ಮತ್ತು ದೇಶಗಳಲ್ಲಿ ಬೆಳವಣಿಗೆಯ ದರಗಳನ್ನು ಹೋಲಿಸುವುದರ ಮೂಲಕ ಜನಸಂಖ್ಯಾ ಬೆಳವಣಿಗೆಯ ಅಧ್ಯಯನ ಮಾಡಬಲಾಗುತ್ತದೆ. ಉದಾಹರಣೆಗೆ, ವಾರ್ಷಿಕ ಅಥವಾ ಸರಾಸರಿ ವಾರ್ಷಿಕ ಬೆಳವಣಿಗೆಯ ದರಗಳನ್ನು ಹೋಲಿಸಬಹುದು. ಹೀಗೆ ಮಾಡಬೇಕಾದರೆ, ಸುವ್ಯವಸ್ಥಿತ ಕಾಲಾನುಕ್ರಮಗಳನ್ನು (ಟೈಮ್ ಸೀಕ್ವೆನ್ಸಸ್) ಏರುಪೇರು ಮಾಡುವ ಯಾವ ಘಟನೆಗಳೂ ಸಂಭವಿಸಿರಬಾರದು. ಒಂದು ಪ್ರದೇಶದ ಆಕ್ರಮಣ, ಅಲ್ಪಸಂಖ್ಯಾತರ ನಿವಾರಣೆ ಅಥವಾ ಸ್ಥಾನಾಂತರಣ, ಕ್ಷಾಮಡಾಮರಗಳು-ಇವು ಇಂಥ ಘಟನೆಗಳು, ಇವುಗಳಿಂದ ಜನಸಂಖ್ಯೆಗೆ ಲಾಭ ಅಥವಾ ನಷ್ಟ ಉಂಟಾಗುತ್ತದೆ. ಇವು ಸಂಭವಿಸಿದ ಬಳಿಕ ಜನಸಂಖ್ಯೆಯ ಲಾಭನಷ್ಟ ತಃಖ್ತೆಯನ್ನು ತಯಾರಿಸಬಹುದು. ಆದರೆ ಇಂಥ ಘಟನೆಗಳಿಂದ ಜನಸಂಖ್ಯೆಯಲ್ಲಾದ ಬದಲಾವಣೆಗಳನ್ನೂ ಇತರ ಎಲ್ಲ ಬಗೆಯ ಬದಲಾವಣೆಗಳನ್ನೂ ಬೇರ್ಪಡಿಸುವುದು ಸಾಧ್ಯವಿಲ್ಲ. ಒಂದು ದೀರ್ಘ ಇತಿಹಾಸದ ವೀಕ್ಷಣೆಯಲ್ಲಿ ಎಲ್ಲ ಸಮಾಜಗಳೂ ಬಿಕ್ಕಟ್ಟುಗಳಿಗೆ ಒಳಗಾಗಿರುವುದನ್ನು ಕಾಣಬಹುದು. ಅಲ್ಪಕಾಲದಲ್ಲಿ ಅತಿಯೆನಿಸುವ ಮರಣಗಳು ದೀರ್ಘಕಾಲದಲ್ಲಿ ಒಂದು ಸಮಾಜದ ಪ್ರಸಾಮಾನ್ಯ ನಷ್ಟಸಂಭವಗಳೆಂದೇ ಪರಿಗಣಿತವಾಗುತ್ತವೆ. ಯುದ್ಧನಷ್ಟವೆಂದರೆ ಉದ್ದೇಶಪೂರ್ವಕ ಸೈನಿಕ ಕಾರ್ಯಾಚರಣೆಯಿಂದ ಸಂಭವಿಸಿದ ಮರಣಗಳು ಮಾತ್ರವೇ ಅಲ್ಲ; ಆಹಾರ, ವಸತಿ, ವೈದ್ಯ ಮುಂತಾದ ಸೌಲಭ್ಯಗಳ ಅಭಾವದಿಂದ ಸಂಭವಿಸಿದ ಹೆಚ್ಚಿನ ಮರಣಗಳೂ ಸೇನಾಜಮಾವಣೆ, ಸೆರೆ, ಭಾವೀ ತಂದೆಯರ ಮರಣ ಮುಂತಾದವುಗಳಿಂದ ಜನನದಲ್ಲಿ ಸಂಭವಿಸಿದ ಕೊರತೆಯೂ ಇದರಲ್ಲಿ ಸೇರುತ್ತವೆ. ಇಂಥ ನಷ್ಟಗಳನ್ನು ಎಣಿಸುವುದಕ್ಕಾಗುವುದಿಲ್ಲ. ಜನಸಂಖ್ಯೆಯ ಬೆಳವಣಿಗೆಗೆ ಸಂಬಂಧಿಸಿದಂತೆ ಎರಡು ಬಗೆಯ ದರಗಳನ್ನು ಬಳಸಲಾಗುತ್ತದೆ. ಪ್ರತಿ 1,000ಕ್ಕೆ ವರ್ಷಕ್ಕೆ ಇಷ್ಟು-ಎಂಬುದು ಘಾತೀಯ ದರ (ಎಕ್ಸ್‍ಪೊನೆನ್ಷಿಯಲ್ ರೇಟ್). ಇತರ ಜನಸಂಖ್ಯಾತ್ಮಕ ಅಳತೆಗಳೊಂದಿಗೆ ಹೋಲಿಸುವಾಗ ಘಾತೀಯ ದರಗಳನ್ನು ಬಳಸುತ್ತೇವೆ. ವರ್ಷಕ್ಕೆ ಸೇಕಡ ಇಷ್ಟು ಎಂಬುದು ಚಕ್ರಬಡ್ಡಿದರ (ಕಾಂಪೌಂಡ್ ಇಂಟರೆಸ್ಟ್ ರೇಟ್). ಜನಸಂಖ್ಯಾತ್ಮಕವಲ್ಲದ ಪರಿಮಾಣಗಳೊಂದಿಗೆ ಹೋಲಿಸುವಾಗ (ಉದಾಹರಣೆ: ವರಮಾನ) ಚಕ್ರಬಡ್ಡಿದರಗಳನ್ನು ಬಳಸುತ್ತೇವೆ. ಈ ದರಗಳ ಏಕಮಾನಗಳಲ್ಲಿ ಸ್ವಲ್ಪ ವ್ಯತ್ಯಾಸ ಇರುತ್ತದೆ. ವರ್ಷಮಧ್ಯದ ಜನಸಂಖ್ಯೆಗೆ ಅಥವಾ ಆ ಅವಧಿಯ ಮಾಧ್ಯಕಕ್ಕೆ ಸಂಬಂಧಿಸಿದ್ದು ಘಾತೀಯ ದರ. ಆದರೆ ಪ್ರತಿವರ್ಷದ ಆರಂಭದಲ್ಲಿದ್ದ ಜನಸಂಖ್ಯೆಗೆ ಸಂಬಂಧಿಸಿದ್ದು ಚಕ್ರಬಡ್ಡಿ ದರ. ಜಗತ್ತಿನ ಜನಸಂಖ್ಯೆಯ ಬೆಳವಣಿಗೆ : ಕಳೆದ ನೂರಾರು ಸಾವಿರ ವರ್ಷಗಳ ಮಾನವ ಇತಿಹಾಸದ ದೃಷ್ಟಿಯಿಂದ ನೋಡಿದಾಗ, ಪ್ರಪಂಚದ ಜನಸಂಖ್ಯೆ ಆರಂಭದಲ್ಲಿ ಬಹುಶಃ ಬಹಳ ಅಲ್ಪವಾಗಿತ್ತೆಂದೂ ವಾರ್ಷಿಕವಾಗಿ ಬಹುಶಃ ಸೇಕಡ 0.01-0.02ರ ದರದಲ್ಲಿ ಇದು ಬೆಳೆದು ಇಂದು ಅಗಾಧವಾಗಿದೆಯೆಂದೂ ಹೇಳಬಹುದು. ಆದರೆ ಇಷ್ಟು ಅಲ್ಪ ದರದಲ್ಲೇ ಜನಸಂಖ್ಯೆ ಬೆಳೆದಿರಬಹುದೆಂದು ಭಾವಿಸುವುದು ಸರಿಯಲ್ಲ. ವಿವಿಧ ಕಾಲಗಳಲ್ಲಿ ವಿವಿಧ ಪ್ರದೇಶಗಳಲ್ಲಿ ಜನಸಂಖ್ಯೆಗಳು ತೀವ್ರವಾಗಿ ಏರಿಳಿದರಿಬಹುದು. ಆದರೆ ಕೆಲವು ಪರ್ವಕಾಲಗಳಲ್ಲಿ ಜನಸಂಖ್ಯೆಯ ಇಳಿಕೆಗಿಂತ ಏರಿಳಿದರಿಬಹುದು. ಆದರೆ ಕೆಲವು ಪರ್ವಕಾಲಗಳಲ್ಲಿ ಜನಸಂಖ್ಯೆಯ ಇಳಿಕೆಗಿಂತ ಏರಿಕೆ ಗಮನಾರ್ಹವಾಗಿ ಅಧಿಕವಾಗಿರಬಹುದು. ಪ್ರಾಚೀನ ಶಿಲಾಸಂಸ್ಕøತಿಯ ಕಾಲದಲ್ಲಿ ಭೂಮಿಯ ಮೇಲೆ ಬದುಕು ಸಾಗಿಸುತ್ತಿದ್ದ ಜನರ ಸಂಖ್ಯೆ ಬಹುಶಃ ಕೆಲವೇ ಲಕ್ಷವಿದ್ದಿರಬೇಕು. ಆದರೆ ನವಶಿಲಾಯುಗದ ತಂತ್ರಜ್ಞತೆ ಮತ್ತು ಸಮಾಜ ವ್ಯವಸ್ಥೆಯಲ್ಲಿ ಜನ ತಕ್ಕ ಮಟ್ಟಿಗೆ ಅಧಿಕವಾಗಿದ್ದಿರಬೇಕು. ಯುಫ್ರೇಟಿಸ್, ನೈಲ್, ಸಿಂಧೂ ಮತ್ತು ಹಳದಿ ನದಿ ಪ್ರದೇಶಗಳಲ್ಲಿ ಬೆಳೆದಿದ್ದ ಆರಂಭದ ಮುಖ್ಯ ಲೋಹ ನಾಗರಿಕತೆಗಳ ಕಾಲದಲ್ಲಿ ಪ್ರತಿಯೊಂದು ನಾಗರಿಕತೆಯೂ ಲಕ್ಷಾಂತರ ಜನರಿಗೆ ಆಧಾರವಾಗಿದ್ದಿರಬಹುದು. ಅವರು ಆಕ್ರಮಣಗಳಿಗೆ ತುತ್ತಾಗುವ ಅಪಾಯವಿದ್ದೇ ಇತ್ತು. ಶಾಂತಿ ಭದ್ರತೆಗಳ ಸ್ಥಾಪನೆಯಾಗಿದ್ದ ಕಾಲದಲ್ಲಿ ಅಂದರೆ ಚೀನದ ಹ್ಯಾನ್ ಸಾಮ್ರಾಜ್ಯ, ಭಾರತದಲ್ಲಿ ಅಶೋಕನ ಸಾಮ್ರಾಜ್ಯ. ಮೆಡಿಟರೇನಿಯನ್ ಸಮುದ್ರದ ಸುತ್ತ ಹಬ್ಬಿದ್ದ ರೋಮನ್ ಸಾಮ್ರಾಜ್ಯ ಇವುಗಳಲ್ಲಿ ಶಾಂತಿಭದ್ರತೆಗಳು ನೆಲೆಸಿದ್ದಾಗ 5-10ಕೋಟಿಗಳಷ್ಟು ಜನರಿದ್ದರು. ಕ್ರಿಸ್ತಶಕ ಅರಂಭವಾದಾಗ ಜಗತ್ತಿನ ಜನಸಂಖ್ಯೆ ಸುಮಾರು 30 ಕೋಟಿಯಿತ್ತೆಂದು ಅಂದಾಜು ಮಾಡಲಾಗಿದೆ. ಸಾಮ್ರಾಜ್ಯ ಉರುಳಿದಾಗ ಜನಸಂಖ್ಯೆಯೂ ಇಳಿಯುತ್ತಿತ್ತು. ಮಧ್ಯ ಅಮೆರಿಕ, ಮೆಸೊಪೊಟೇಮಿಯ ಮತ್ತು ಆಗ್ನೇಯ ಏಷ್ಯಗಳ ನಾಗರಿಕತೆಗಳೂ ಈ ರೀತಿ ಬೆಳೆದು ಅಳಿದಾಗ ಜನಸಂಖ್ಯೆಗಳು ಕ್ಷೀಣಿಸಿವೆ. ಆದರೆ ಯೂರೋಪ್ ಚೀನಗಳ ಜನಸಂಖ್ಯೆಯನ್ನು ಕುರಿತ ಅಧ್ಯಯನ ನಡೆದಿರುವಂತೆ ಪ್ರಪಂಚದ ಇತರ ಭಾಗಗಳ ಜನಸಂಖ್ಯೆಯ ಅಧ್ಯಯನವಾಗಿಲ್ಲ. ಯೂರೋಪ್-ಚೀನಗಳ ಜನಸಂಖ್ಯೆಗಳ ಗತಿಗಳ ಬಗ್ಗೆ ತಕ್ಕಮಟ್ಟಿನ ಮಾಹಿತಿ ನಮಗೆ ಸಿಗುತ್ತದೆ. ಕ್ರಿ.ಶ. 1ರಲ್ಲಿ ಯೂರೋಪಿನ ಜನಸಂಖ್ಯೆ ಸುಮಾರು 3.3 ಕೋಟಿ. ಕ್ರಿ.ಶ. 600ರ ಹೊತ್ತಿಗೆ ಇದು 1.8 ಕೋಟಿಗೆ ಇಳಿಯಿತು ; 13ನೆಯ ಶತಮಾನದ ಕೊನೆಯ ಹೊತ್ತಿಗೆ 7ಕೋಟಿಗೆ ಏರಿತು. ಕಪ್ಪು ಮೃತ್ಯು ಎಂದು ಪ್ರಸಿದ್ಧವಾದ ಪ್ಲೇಗ್ ಜಾಡ್ಯದಿಂದ ಬಹುಶಃ ಸುಮಾರು 4ಕೋಟಿಗೆ ಕಡಿಮೆಯಾಯಿತು. ಕ್ರಿ.ಶ.2ರಲ್ಲಿ ಚೀನದ ಜನಸಂಖ್ಯೆ 7.1 ಕೋಟಿಯಿತ್ತೆಂಬದು ಒಂದು ಅಂದಾಜು. 705ರ ಹೊತ್ತಿಗೆ ಇದು 3.7 ಕೋಟಿಗೂ 13ನೆಯ ಶತಮಾನದ ವೇಳೆಗೆ 12 ಕೋಟಿಗೂ ಅಧಿಕವಾಯಿತು. ಮುಂದಿನ ಶತಮಾನದಲ್ಲಿ 6 ಕೋಟಿಗೆ ತಗ್ಗಿತು. ಯೂರೋಪ್-ಚೀನಗಳ ಜನಸಂಖ್ಯೆಯ ಏರಿಳಿತಗಳು ಹೆಚ್ಚು-ಕಡಿಮೆ ಏಕಕಾಲಗಳಲ್ಲಿ ಸಂಭವಿಸಿದುವೆಂಬುದು ಕುತೂಹಲಕರ. ಈ ಕಾಲದಲ್ಲಿ ಪ್ರಪಂಚದ ಇತರ ಭಾಗಗಳ ಈ ಜನಸಂಖ್ಯೆಗಳಲ್ಲಾದ ಬದಲಾವಣೆಗಳ ಬಗ್ಗೆ ಹೆಚ್ಚು ಸಂಗತಿ ನಮಗೆ ತಿಳಿದುಬಂದಿಲ್ಲ. ಆದ್ದರಿಂದ ಇಡೀ ಪ್ರಪಂಚದಲ್ಲಿ ಈ ಕಾಲದಲ್ಲಿ ಜನಸಂಖ್ಯೆಯಲ್ಲಿ ಆದ ವ್ಯತ್ಯಾಸಗಳ ಬಗ್ಗೆ ಖಚಿತವಾಗಿ ಹೇಳುವುದು ಸಾಧ್ಯವಿಲ್ಲ. 1650ರ ವೇಳೆಗೆ ಜಗತ್ತಿನ ಜನಸಂಖ್ಯೆ 54.5ಕೋಟಿಯಾಗಿತ್ತೆಂದೂ 1750ರ ವೇಳೆಗೆ 72.8 ಕೋಟಿಗೆ ಏರಿತೆಂದೂ ಕೆಲವರು ಅಂದಾಜು ಮಾಡಿದ್ದಾರೆ. ಕ್ರಿಸ್ತಶಕದ ಆರಂಭದ ಕೆಲವು ಶತಮಾನಗಳಲ್ಲೂ 14ನೆಯ ಶತಮಾನದಲ್ಲೂ ಜನಸಂಖ್ಯೆ ತೀವ್ರವಾಗಿ ಇಳಿದಿರಬಹುದೆಂದು ಊಹಿಸಲಾಗಿದೆ. 19ನೆಯ ಶತಮಾನದ ದ್ವಿತೀಯಾರ್ಧದ ವರೆಗೂ ಪ್ರಪಂಚದ ಜನಸಂಖ್ಯೆಯ ಬೆಳವಣಿಗೆಯ ವೇಗ ಪ್ರತಿ ಅರ್ಧ ಶತಮಾನದಲ್ಲೂ ನಿಧಾನವಾಗಿ ವರ್ಧಿಸುತ್ತಿದ್ದು. ಅನಂತರ ತೀವ್ರವಾಗಿ ಏರತೊಡಗಿತು. 19ನೆಯ ಶತಮಾನದಲ್ಲಿ ಮಂದಗೊಂಡಿದ್ದ ಏಷ್ಯದ ಜನಸಂಖ್ಯೆಯ ಏರಿಕೆಯ ವೇಗ 20ನೆಯ ಶತಮಾನದಲ್ಲಿ ವಿಶೇಷವಾಗಿ ಅಧಿಕವಾಯಿತು. ಯೂರೋಪಿನ ಪ್ರವೃತ್ತಿ ತದ್ವಿರುದ್ಧ : 19ನೆಯ ಶತಮಾನದಲ್ಲಿ ಅದರ ಜನಸಂಖ್ಯೆಯ ಏರಿಕೆಯ ವೇಗ ಅಧಿಕವಾಗಿದ್ದು 20ನೆಯ ಶತಮಾನದಲ್ಲಿ ಮಂದವಾಯಿತು. ನೀಗ್ರೋ ಗುಲಾಮರ ವ್ಯಾಪಾರ ಬಿರುಸಿನಿಂದ ನಡೆಯುತ್ತಿದ್ದ ಕಾಲದಲ್ಲಿ ಆಫ್ರಿಕದ ಜನಸಂಖ್ಯೆ ಬಹುಶಃ ಕ್ಷೀಣಿಸುತ್ತಿತ್ತು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಯತ್ನಗಳಿಂದ ಅದನ್ನು ತಡೆಗಟ್ಟಿದ ಮೇಲೆ ಅಲ್ಲಿಯ ಜನಸಂಖ್ಯೆ ತೀವ್ರವಾಗಿ ಏರುತ್ತಿದೆ. ಉತ್ತರ ಅಮೆರಿಕದಲ್ಲೂ ಓಷಿಯಾನಿಯದಲ್ಲೂ ಇದ್ದ ಸ್ಥಳೀಯ ಜನಸಂಖ್ಯೆ ಐರೋಪ್ಯ ವಲಸೆಗಾರರ ಪ್ರವಾಹದಿಂದಾಗಿ ಕೊಚ್ಚಿಯೇ ಕೋಷ್ಟಕ - 1 1750-1970ರಲ್ಲಿ ಪ್ರಪಂಚದ ಜನಸಂಖ್ಯೆ ಅಂದಾಜುಗಳು (ಕೋಟಿಗಳಲ್ಲಿ) ವರ್ಷ ಏಷ್ಯ ಯೂರೋಪು ಆಫ್ರಿಕ ಉತ್ತರ ಅಮೆರಿಕ ಲ್ಯಾಟಿನ್ ಅಮೆರಿಕ ಓಷಿಯಾನಿಯ ಪ್ರಪಂಚದ ಒಟ್ಟು ಜನಸಂಖ್ಯೆ

1750 1800 1850 1900 1910 1920 1930 1940 1950 1960 1970 47.9 60.2 74.9 93.7 101.8 104.4 114.9 127.8 141.7 170.6 210.4 14.0 18.7 26.6 40.1 45.0 46.1 50.5 54.1 53.6 59.3 71.1 9.5 9.0 9.5 12.0 13.5 14.3 16.4 19.1 22.2 27.3 35.4 0.13 0.57 2.60 8.10 10.00 11.50 13.40 14.40 16.60 19.80 22.90 1.11 1.89 3.30 6.30 7.50 9.00 10.70 13.00 16.20 21.20 29.10 0.2 0.2 0.2 0.6 0.75 0.88 1.04 1.15 1.32 1.63 2.00 72.8 90.6 117.1 160.8 178.6 186.2 206.9 229.6 251.6 299.8 370.9


ಕೋಷ್ಟಕ - 2 1750-1960ರಲ್ಲಿ ಪ್ರಪಂಚದ ಜನಸಂಖ್ಯೆ ಬೆಳವಣಿಗೆಯ ಸರಾಸರಿ ವಾರ್ಷಿಕ ಸೇಕಡ ದರಗಳು ವರ್ಷ ಏಷ್ಯ ಯೂರೋಪು ಆಫ್ರಿಕ ಉತ್ತರ ಅಮೆರಿಕ ಲ್ಯಾಟಿನ್ ಅಮೆರಿಕ ಓಷಿಯಾನಿಯ ಪ್ರಪಂಚದ ಒಟ್ಟು ಜನಸಂಖ್ಯೆ

1750-1800 1800-1850 1850-1900 1900-1950 1900-1910 1910-1920 1920-1930 1930-1940 1940-1950 1950-1960 0.5 0.4 0.4 0.8 0.8 0.3 1.0 1.1 1.0 1.9 0.6 0.7 0.8 0.6 1.2 0.2 0.9 0.7 -0.1 1.0 - - 0.5 1.2 1.2 0.6 1.4 1.5 1.5 2.1 3.0 3.1 2.3 1.4 2.1 1.4 1.5 0.7 1.4 1.8 1.1 1.1 1.3 1.9 1.8 1.8 1.8 2.0 2.2 2.7 - - 1.3 1.6 2.3 1.6 1.7 1.0 1.4 2.1 0.4 0.5 0.6 0.9 1.0 0.4 1.1 1.1 0.9 1.8


ಹೋಯಿತು. ವಲಸೆಗಾರರ ಸಂಖ್ಯೆ ತೀವ್ರವಾಗಿ ಏರಿತು. ಈಗ ಅದರ ಜನಸಂಖ್ಯೆಯ ಬೆಳವಣಿಗೆಯ ದರವೂ ಇಳಿಯುತ್ತಿದೆ. ದಕ್ಷಿಣ ಅಮೆರಿಕ ಖಂಡ ಸ್ಟ್ಯಾನಿಷರ ಆಕ್ರಮಣಕ್ಕೆ ಒಳಗಾದಾಗ ಅಲ್ಲಿಯ ಸ್ಥಳೀಯ ಜನರ ಸಂಖ್ಯೆ ಬಹಳ ಕ್ಷೀಣಿಸಿತು. ಸ್ಥಳೀಯ ಹಾಗೂ ವಲಸೆಗಾರ ಬಿಳಿಯರ ಸಂಕರದಿಂದ ಹೊಸ ತಳಿಯೊಂದು ಬೆಳೆಯತೊಡಗಿತು. ಬಿಳಿಯರೂ ಸಂಖ್ಯೆಯಲ್ಲಿ ಅಧಿಕವಾಗುತ್ತಿದ್ದಾರೆ. 20ನೆಯ ಶತಮಾನದ ಆದಿಯ ವೇಳೆಗೆ ಪ್ರಪಂಚದ ಜನಸಂಖ್ಯೆಯ ಏರಿಕೆಯ ವೇಗ ತೀವ್ರತರವಾಗಿತ್ತು. ಎರಡು ಮಹಾಯುದ್ಧಗಳು, ಇವುಗಳ ನಡುವಣ ಕಾಲದಲ್ಲಿ ವಿಶ್ವದಲ್ಲೆಲ್ಲ ಹಬ್ಬಿದ ಇನ್‍ಫ್ಲೂಯೆಂಜó ವ್ಯಾಧಿ ಮತ್ತು ಆರ್ಥಿಕ ಮುಗ್ಗಟ್ಟು-ಇವು ಕೂಡ ಈ ಏರಿಕೆಯನ್ನು ತಡೆಗಟ್ಟಲಿಲ್ಲ. 1950ರ ಅನಂತರವಂತೂ ಯಾವ ಅಡೆತಡೆಯೂ ಇಲ್ಲದೆ ಇದರ ವೇಗ ಇನ್ನೂ ವರ್ಧಿಸಿದೆ. 1750-1970ರಲ್ಲಿ ವಿವಿಧ ಖಂಡಗಳ ಮತ್ತು ಇಡೀ ಜಗತ್ತಿನ ಜನಸಂಖ್ಯೆಗಳ ಅಂದಾಜುಗಳನ್ನು ಕೋಷ್ಟಕ 1ರಲ್ಲೂ ಈ ಅವಧಿಯಲ್ಲಿ ಅವುಗಳ ವಾರ್ಷಿಕ ಜನಸಂಖ್ಯೆಯ ಏರಿಕೆ ದರವನ್ನು ಕೋಷ್ಟಕ 2ರಲ್ಲೂ 1950-60ರಲ್ಲಿ ಪ್ರಪಂಚದ ವಿವಿಧ ರಾಷ್ಟ್ರಗಳ ಜನಸಂಖ್ಯೆ, ವಿಸ್ತೀರ್ಣ, ಜನಸಂಖ್ಯೆಗಳ ಏರಿದೆ, ವಾರ್ಷಿಕ ಏರಿಕೆ ದರ ಇವನ್ನು ಕೋಷ್ಟಕ 3ರಲ್ಲೂ ತೋರಿಸಿದೆ. ಕೋಷ್ಟಕ-3 1950 ಮತ್ತು 1960ರ ಅಂದಾಜು ಜನಸಂಖ್ಯೆ, ಭೂವಿಸ್ತೀರ್ಣ, 1950-1960ರಲ್ಲಿ ಜನಸಂಖ್ಯೆಯ ಹೆಚ್ಚುವರಿ, ಪ್ರತಿ ಚದರ ಕಿಮೀ,ಗೆ ಹೆಚ್ಚಳ ಮತ್ತು ಸರಾಸರಿ ವಾರ್ಷಿಕ ಬೆಳವಣಿಗೆಯ ದರ ದೇಶ ಜನಸಂಖ್ಯೆ (ಕೋಟಿ) ಭೂ ವಿಸ್ತೀರ್ಣ ಲಕ್ಷ ಚ. ಕಿಮೀ. ಜನಸಂಖ್ಯೆಯ ಹೆಚ್ಚಳ ಸರಾಸರಿ ವಾರ್ಷಿಕ ಹೆಚ್ಚಳ


1950 1960

ಕೋಟಿ ಪ್ರತಿ ಚ.ಕಿಮೀ.


ಚೀನ ಭಾರತ ಸೋವಿಯೆತ್ ಒಕ್ಕೂಟ ಅಮೆರಿಕ ಸಂಯುಕ್ತ ಸಂಸ್ಥಾನಗಳು ಜಪಾನ್ ಇಂಡೊನೇಷ್ಯ ಪಾಕಿಸ್ತಾನ ಬ್ರಬಿóಲ್ ಗ್ರೇಟ್ ಬ್ರಿಟನ್ ಪಶ್ಚಿಮ ಜರ್ಮನಿ ಇಟಲಿ ಫ್ರಾನ್ಸ್ ನೈಜೀರಿಯ ಸ್ಪೇನ್ ಮೆಕ್ಸಿಕೋ ಪೋಲೆಂಡ್ ತುರ್ಕಿ ದಕ್ಷಿಣ ಕೊರಿಯ ಈಜಿಪ್ಟ್ (ಅರಬ್ ಒಕ್ಕೂಟ ಗಣರಾಜ್ಯ) ಪಿಲಿಪೀನ್ಸ್ ಥೈಲೆಂಡ್ ಬರ್ಮ ಪೂರ್ವ ಜರ್ಮನಿ ಆರ್ಜೆಂಟೀನ ಇತರ ದೇಶಗಳು 55.00 35.92 18.00 15.23 8.29 7.67 7.50 5.23 5.06 4.78 4.66 4.17 3.75 2.79 2.58 2.50 2.09 2.05 2.04 2.06 1.95 1.85 1.84 1.72 51.90 65.00 43.28 18.00 18.07 8.29 9.42 10.00 7.05 5.25 5.32 4.96 4.57 5.00 3.03 3.50 2.97 2.78 2.47 2.60 2.74 2.64 2.23 1.72 2.1 62.34 96 96 224 94 4 15 9 85 2 2 3 5 9 5 20 3 8 1 10 3 5 7 1 28 689 6.00 7.36 3.44 2.84 1.03 1.75 2.50 1.82 0.19 0.54 0.30 0.40 1.25 0.24 0.92 0.47 0.69 0.42 0.056 0.71 0.69 0.38 -0.12 0.38 10.44 9 25 2 3 26 12 28 2 10 27 10 8 14 5 5 16 9 42 6 24 14 5 -12 1 2 1.5 1.9 1.8 1.7 1.2 2.1 2.9 3.0 0.4 1.1 0.6 0.9 2.9 0.8 3.1 1.7 2.9 1.9 2.5 3.0 3.1 1.9 -0.7 2.0 1.9

ಪ್ರಪಂಚ (ಒಟ್ಟು) 251.60 289.80 1,358 48.20 4 1.8


ಪ್ರಪಂಚದ ಜನಸಂಖ್ಯೆ ದ್ವಿಗುಣಗೊಳ್ಳಲು ಇನ್ನೂರು ವರ್ಷಗಳಾದುವು. ಅಂದರೆ 1650ರಲ್ಲಿ ಸುಮಾರು54.5 ಕೋಟಿ ಇದ್ದ ಜನಸಂಖ್ಯೆ 1850ರ ವೇಳೆಗೆ 117.1 ಕೋಟಿ ಮುಟ್ಟಿತು ಎಂದು ಲೆಕ್ಕ ಹಾಕಲಾಗಿದೆ. ಮುಂದಿನ ಒಂದು ಶತಮಾನದಲ್ಲಿ (1850-1950) ಅದು 251.6 ಕೋಟಿಗೆ ಏರಿತು. 20ನೆಯ ಶತಮಾನದ ಕೊನೆಯ ವೇಳೆಗೆ ಇದು ಸುಮರು 650 ಕೋಟಿ ಮುಟ್ಟಬಹುದೆಂದು ವಿಶ್ವಸಂಸ್ಥೆಯ ಜನಸಂಖ್ಯಾ ಅಧ್ಯಯನ ಸಂಸ್ಥೆಯ ಒಂದು ಅಂದಾಜು. ಎಂದರೆ 35 ವರ್ಷಗಳಲ್ಲಿ ಪ್ರಪಂಚದ ಜನಸಂಖ್ಯೆ ಪುನಃ ದ್ವಿಗುಣಗೊಂಡಿತೆಂಬುದು ಭೀತಿ. ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಪ್ರತಿ ಸಾವಿರಕ್ಕೆ 15-20ರ ವರೆಗೆ ಇದೆ. ಆದರೆ ಮರಣ ದರ ಎಲ್ಲ ದೇಶಗಳಲ್ಲೂ ಪ್ರತಿ ಸಾವಿರಕ್ಕೆ ಸುಮಾರು 10-15. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜನಸಂಖ್ಯೆ ವರ್ಷಂಪ್ರತಿ ಸೇಕಡ 0.5-1ರಂತೆ ಬೆಳೆಯುತ್ತಿದ್ದರೆ, ಹಿಂದುಳಿದ ದೇಶಗಳಲ್ಲಿ ಸೇ. 2-3 ರಂತೆ ಬೆಳೆಯುತ್ತಿದೆ. ಸೇ. 3ರಷ್ಟು ಬೆಳೆವಣಿಗೆಯಾದರೆ ಜನಸಂಖ್ಯೆ 25 ವರ್ಷಗಳಲ್ಲಿ ಎರಡರಷ್ಟಾಗುತ್ತದೆ. ಭಾರತದ ಜನಸಂಖ್ಯೆಯ ಬೆಳವಣಿಗೆ: ಭಾರತದಲ್ಲಿ 20ನೆಯ ಶತಮಾನದಲ್ಲಿ ಆದ ಜನಸಂಖ್ಯೆ ಬೆಳವಣಿಗೆಯನ್ನು ಕೋಷ್ಟಕ 4ರಲ್ಲಿ ಕೊಡಲಾಗಿದೆ. ಕೋಷ್ಟಕ - 4 ವರ್ಷ ಭಾರತದ ಒಟ್ಟು ಜನಸಂಖ್ಯೆ ಪ್ರತಿ ದಶಕದಲ್ಲೂ ಆಗಿರುವ ಬದಲಾವಣೆ ಸೇಕಡವಾರು ಬದಲಾವಣೆ

1901 1911 1921 1931 1941 1951 1961 1971 23,83,96,237 25,20,93,390 25,13,21,213 27,89,77,238 31,86,60,580 36,10,88,065 43,92,34,771 54,79,49,809 - + 1,36,97,063 -7,72,177 + 2,76,56,025 + 3,96,83,342 + 4,24,27,485 + 7,81,46,706 +10,87,15,038 - + 5.75 -0,31 + 11,00 + 14,22 + 13.31 + 21.51 + 24.57


ಭಾರತದ ಜನಸಂಖ್ಯೆ ಪ್ರಪಂಚದ ಒಟ್ಟು ಜನಸಂಖ್ಯೆಯ ಸುಮಾರು 1/7ರಷ್ಟು (14%). ವಿಸ್ತೀರ್ಣದಲ್ಲಿ ಪ್ರಪಂಚದ ದೇಶಗಳ ಪೈಕಿ ಭಾರತದ್ದು ಏಳನೆಯ ಸ್ಥಾನವಾದರೂ ಜನಸಂಖ್ಯೆಯಲ್ಲಿ ಅದರದು ಎರಡನೆಯ ಸ್ಥಾನ (ಚೀನ ಪ್ರಥಮ). (ಎನ್.ಪಿ.ಎಸ್.) ಗಿI ಜನಸಂಖ್ಯಾ ಅನುಗಣನೆ ಮತ್ತು ಮುನ್ಸೂಚನೆ ವೈಜ್ಞಾನಿಕ ವಿವೇಚನೆಯಿಂದ ಕೆಲವು ಅಭಿಗೃಹೀತಗಳನ್ನು (ಅಸಂಪ್ಷನ್) ನಿರೂಪಿಸಿ, ಅವುಗಳ ಆಧಾರದ ಮೇಲೆ ಒಂದು ದೇಶದ ಅಥವಾ ಪ್ರದೇಶದ ಭವಿಷ್ಯದ ಜನಸಂಖ್ಯೆಯನ್ನು ಅಂದಾಜು ಮಾಡುವುದು ಜನಸಂಖ್ಯಾ ಅನುಗಣನೆ (ಪ್ರೊಜೆಕ್ಸನ್). ಅಭಿಗೃಹೀತಗಳನ್ನು ನಿರೂಪಿಸುವಾಗ ಪ್ರಸ್ತುತದ ಫಲವಂತಿಕೆ ಪರಿಸ್ಥಿತಿ, ಮರಣ ಸಂಖ್ಯಾ ಪರಿಸ್ಥಿತಿ, ಜನವಲಸೆ ಪರಿಸ್ಥಿತಿ ಎಂಬ ಪ್ರಾಚಲಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಭವಿಷ್ಯದಲ್ಲಿ ಅವುಗಳ ಗತಿ ಹೇಗೆ ಇರಬಹುದೆಂಬುದನ್ನು ಪರಿಶೀಲಿಸುವುದು ಅಗತ್ಯ. ಇದಕ್ಕೆ ದೇಶದ ಆರ್ಥಿಕ ಸಾಮಾಜಿಕ ರಾಜಕೀಯ ಪರಿಸ್ಥಿತಿಗಳ ಬದಲಾವಣೆಗಳನ್ನೂ ಗಮನಿಸಬೇಕಾಗುತ್ತದೆ. (ಎಂ.ಎಸ್.ಎಂಯು.) ಅನುಗಣನೆಗೂ ಮುನ್ಸೂಚೆನಗೂ (ಫೋರ್‍ಕ್ಯಾಸ್ಟ್) ವ್ಯತ್ಯಾಸವುಂಟು. ಒಂದು ವಿದ್ಯಮಾನದ ಮೇಲೆ ದತ್ತ ಪ್ರವೃತ್ತಿಗಳ ಪರಿಣಾಮಗಳೇನೆಂಬುದನ್ನು ತೋರಿಸುವುದು ಅನುಗಣನೆ. ಈ ಪ್ರವೃತ್ತಿಗಳ ಹೀಗೆ ಮುಂದುವರಿದರೆ ಆಗುವ ಪರಿಣಾಮವಿದು-ಎಂಬುದು ಅನುಗಣನೆ. ಇವು ಸಂಭಾವ್ಯವೇ ಅಲ್ಲವೇ ಎಂಬುದು ಮುಖ್ಯವಲ್ಲ. ಪ್ರವೃತ್ತಿಗಳ ಅಥವಾ ಬದಲಾವಣೆಗಳ ಸಂಭಾವ್ಯವೆಂದು ನಿರ್ಧರಿಸಲಾದ ಪರಿಣಾಮ ಮುನ್ಸೂಚನೆಯೆನಿಸಿಕೊಳ್ಳುತ್ತದೆ. ಆದ್ದರಿಂದ ಮುನ್ಸೂಚನೆ ಹೆಚ್ಚು ಸಂಗತವೆನಿಸುತ್ತದೆ. ಜನಸಂಖ್ಯಾ ಬೆಳವಣಿಗೆಯ ಗತಿವಿಜ್ಞಾನ ಒಂದು ಸಂಕೀರ್ಣ ವಿಷಯ. ಅದು ಸ್ವಯಂಪೂರ್ಣವಲ್ಲ. ಹಲವು ದಶಕಗಳ ಸರಣಿಯಲ್ಲಿ ಬೆಳವಣಿಗೆಯ ವಿಭವಗಳು (ಪೊಟೆನ್ಯಿಯಲ್ಸ್) ಜನಸಂಖ್ಯೆಯ ವಯೋಸಂಯೋಜನೆಯನ್ನು ಅವಲಂಬಿಸಿರುತ್ತವೆ. ಆದರೆ ಬೆಳವಣಿಗೆಯ ಕಾರಕಗಳಲ್ಲಿ ಬದಲಾವಣೆಯಾದಾಗ ವಯೋಸಂಯೋಜನೆಯಲ್ಲಿ ಬದಲಾವಣೆಗಳು ಸಂಭವಿಸುತ್ತವೆ. ಜನನ ದರದಲ್ಲಿ ಬದಲಾವಣೆಗಳು, ಸ್ವಲ್ಪ ಮಟ್ಟಿಗೆ ವಯೋನಿರ್ದಿಷ್ಟ ಮರಣ ಸಂಭವಗಳ ಸಾಪೇಕ್ಷ ವ್ಯತ್ಯಾಸಗಳು, ವಲಸೆಗಳು-ಇವೆಲ್ಲ ವಯೋಸಂಯೋಜನೆಗಳಲ್ಲಿ ಬದಲಾವಣೆಗಳನ್ನು ಉಂಟುಮಾಡುವುವು. ಸ್ಥೂಲ ಜನನ ದರಗಳೂ ಸ್ಥೂಲ ಮರಣ ದರಗಳೂ ಒಟ್ಟಿನಲ್ಲಿ ಫಲವಂತಿಕೆಯ ಮತ್ತು ಮರಣ ಸಂಖ್ಯೆಯ ಪ್ರವೃತ್ತಿಗಳನ್ನು ಸೂಚಿಸುತ್ತವೆ. ಇವೂ ತತ್ಫಲವಾಗಿ ಆದ ಸಹಜ ಬದಲಾವಣೆಗಳೂ ವಯೋಸಂಯೋಜನೆಯಲ್ಲಿ ವ್ಯತ್ಯಾಸಗಳನ್ನು ಉಂಟುಮಾಡುತ್ತವೆ. ಈ ದೃಷ್ಟಿಯಿಂದ ಇವನ್ನು ಅರ್ಥವಿಸಬೇಕು. ಮರಣಸಂಖ್ಯೆಯಲ್ಲಿ ಇಳಿತವಾದರೆ ಅದರಿಂದ ಜನಸಂಖ್ಯೆಯ ಬೆಳವಣಿಗೆಯ ಮೇಲೆ ನೇರ ಪರಿಣಾಮ ಉಂಟಾಗುತ್ತದೆ. ಉನ್ನತ ಫಲವಂತಿಕೆ ಇರುವ ಜನಸಂಖ್ಯೆಗಳಲ್ಲಿ ಇದರ ಪ್ರಭಾವ ಬಲು ತೀವ್ರ. ಮರಣ ಸಂಭವದಲ್ಲಿ ಆದ ಬದಲಾವಣೆಯಿಂದ ಸ್ಥೂಲ ಮರಣದರದಲ್ಲಿ ವ್ಯತ್ಯಾಸ ಸಂಭವಿಸುತ್ತದೆ. ಆಫ್ರಿಕ, ಏಷ್ಯ, ಲ್ಯಾಟಿನ್ ಅಮೆರಿಕಗಳಲ್ಲಿ ಈಗ ಜನಸಂಖ್ಯೆಯ ಏರಿಕೆಯ ವೇಗವರ್ಧನಕ್ಕೆ ಇದು ಕಾರಣ. ಫಲವಂತಿಕೆಯಲ್ಲಿ ಆದ ಬದಲಾವಣೆಯ ಪರಿಣಾಮ ಹಲವು ದಶಕಗಳ ವರೆಗೆ ಸಂಪೂರ್ಣವಾಗಿ ಗೊತ್ತಾಗುವುದಿಲ್ಲ. ಮಕ್ಕಳ ಸಂಖ್ಯೆಯಲ್ಲಿ ವ್ಯತ್ಯಾಸವಾದರೆ, ಅವರು ಸಂತಾನ ಪಡೆಯುವ ವಯಸ್ಸು ತಲಪಿದಾಗ ಜನನದರದ ಮೇಲೆ ತೀವ್ರ ಪರಿಣಾಮ ಉಂಟಾಗುತ್ತದೆ. ಇನ್ನೂ ದೀರ್ಘಕಾಲದಲ್ಲಿ ವೃದ್ಧರ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗಿ ಸ್ಥೂಲ ಮರಣದರವೂ ವ್ಯತ್ಯಾಸವಾಗುತ್ತದೆ. ವೃದ್ಧರ ಪ್ರಮಾಣ ಅಧಿಕವಾದಾಗ, ಉತ್ತಮ ಆರೋಗ್ಯ ಪರಿಸ್ಥಿತಿಗಳಿದ್ದಾಗ್ಯೂ, ಮರಣದರ ಅಧಿಕವಾಗುರುತ್ತದೆ. ಯೂರೋಪಿನ ದೇಶಗಳಲ್ಲಿ ಈ ಪ್ರವೃತ್ತಿಯನ್ನು ಕಾಣಬಹುದು. ಜನಸಂಖ್ಯೆಯನನು ಅನುಗಣಿಸುವಾಗ ಎದುರಾಗುವ ಜಟಿಲತೆಯೇನೆಂಬುದು ಮೇಲಣವಿವೇಚನೆಯಿಂದ ವ್ಯಕ್ತವಾಗುತ್ತದೆ. ಸಾಮಾಜಿಕ ಪರಿಸ್ಥಿತಿಗಳು, ಧೋರಣೆಗಳು ಮತ್ತು ಸಂಸ್ಕøತಿ ಬದಲಾವಣೆಯಾದಾಗಲೂ ಫಲವಂತಿಕೆ, ಮರಣ ಸಂಖ್ಯೆ, ಮತ್ತು ವಲಸೆ ವ್ಯತ್ಯಾಸವಾಗುವುವೆಂಬುದನ್ನೂ ನೆನಪಿನಲ್ಲಿಡಬೇಕು. ಜನಸಂಖ್ಯಾ ಅನುಗಣನೆ ಮೂರು ಬಗೆ : 1 ರಾಷ್ಟ್ರೀಯ ಜನಸಂಖ್ಯಾ ಅನುಗಣನೆ. ಒಂದು ರಾಷ್ಷ್ರದ ಜನಸಂಖ್ಯಾನುಗಣನೆಗೆ ಸಾಮಾನ್ಯವಾಗಿ ಹೆಚ್ಚು ಅಂಕ-ಅಂಶಗಳು ದೊರೆಯುತ್ತವೆ. ವಿದೇಶಗಳಿಗೆ ಹೋಗುವ ಹಾಗೂ ಅಲ್ಲಿಂದ ಬರುವ ವಲಸೆಗಾರರ ಸಂಖ್ಯೆ ಸಾಮಾನ್ಯವಾಗಿ ಹೆಚ್ಚು ಇರುವುದಿಲ್ಲವಾದ್ದರಿಂದ ಈ ಅನುಗಣನೆಗಳನ್ನು ಸಿದ್ಧಪಡಿಸುವುದು ಅಷ್ಟರಮಟ್ಟಿಗೆ ಸುಲಭವಾಗುತ್ತದೆ. 2 ಪ್ರಾದೇಶಿಕ ಜನಸಂಖ್ಯಾನುಗಣನೆ. ಒಂದು ರಾಷ್ಟ್ರದೊಳಗಿನ ನಗರ, ಪಟ್ಟಣ, ಹಳ್ಳಿ, ಪ್ರಾಂತ್ಯ ಮುಂತಾದವುಗಳ ಜನಸಂಖ್ಯಾನುಗಣನೆಗಳನ್ನು ತಯಾರಿಸಲು ಆಯಾ ಪ್ರದೇಶಗಳ ಅಂಕೆಅಂಶಗಳು ಬೇಕಾಗುತ್ತವೆ. ಇವು ದೊರೆಯುವುದು ಸುಲಭವಲ್ಲ. ಅಲ್ಲದೆ ಆಂತರಿಕವಾಗಿ ವಲಸೆಗಳು ಹೆಚ್ಚಾಗಿರುವುದುಂಟು. 3 ಜನಸಂಖ್ಯಾ ವಿಭಾಗಗಳ ಅನುಗಣನೆ. ಅನೇಕ ಕಡೆ ನಮಗೆ ಒಟ್ಟು ಜನಸಂಖ್ಯೆಯ ಅನುಗಣನೆಯ ಅಗತ್ಯ ಇರುವುದಿಲ್ಲ; ಜನಸಂಖ್ಯೆಯ ಒಂದು ಭಾಗವನ್ನು ಮಾತ್ರ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ವಿದ್ಯಾಖಾತೆಯಲ್ಲಿಯ ಯೋಜನೆಗಳನ್ನು ರೂಪಿಸಲು ಶಾಲಾಮಕ್ಕಳ ಸಂಖ್ಯೆಯ ಅನುಗಣನೆ ಮಾತ್ರ ಅಗತ್ಯ; ಉದ್ಯೋಗ ಯೋಜನೆಗೆ ಸಕ್ರಿಯರಾದ ಕೆಲಸಗಾರರ ಸಂಖ್ಯೆಯ ಅನುಗಣನೆ ಅಗತ್ಯ. ಅನುಗಣನೆಯ ವಿಧಾನಗಳು : ಜನಸಂಖ್ಯಾನುಗಣನೆಗಳನ್ನು ಸಿದ್ಧಗೊಳಿಸುವ ವಿಧಾನಗಳನ್ನು ಮುಂದೆ ವಿವೇಚಿಸಿದೆ. 1 ಆಲೇಖ ವಿಧಾನ (ಗ್ರಾಫಿಕ್ ಮೆಥಡ್); ಇದು ಅತ್ಯಂತ ಸುಲಭವಾದದ್ದು. ಹಲವು ನಿರ್ದಿಷ್ಟ ವರ್ಷಗಳಲ್ಲಿದ್ದ ಜನಸಂಖ್ಯೆಗಳ ತಿಳಿದಿದ್ದರೆ ಅವನ್ನು ಆಲೇಖ ರಚಿಸಿ, ಜನಸಂಖ್ಯೆಯ ಆ ರೇಖೆಯನ್ನು ಭವಿಷ್ಯ ವರ್ಷಗಳಿಗೆ ಮುಂದುವರಿಸಿ, ಬರಲಿರುವ ಯಾವುದೇ ವರ್ಷದ (ಆಲೇಖದ ಪರಿಮಿತಿಯೊಳಗೆ) ನಿರೀಕ್ಷಿತ ಜನಸಂಖ್ಯೆಯನ್ನು ಅರಿಯಬಹುದು. ಈ ವಿಧಾನ ಬಹಳ ಸ್ಥೂಲವಾದ್ದು. ಇದು ವ್ಯಕ್ತಿನಿಷ್ಠಾತ್ಮಕವಾದ್ದು. ಅಲ್ಲದೆ ಜನಸಂಖ್ಯೆಯ ವಯೋಸಂಯೋಜನೆ, ಲಿಂಗ ಸಂಯೋಜನೆ ಮುಂತಾದವನ್ನು ಅರಿಯುವುದು ಈ ವಿಧಾನದಿಂದ ಸಾಧ್ಯವಿಲ್ಲ. 2 ಗಣಿತವಿಧಾನ (ಮ್ಯಾಥ್‍ಮ್ಯಾಟಿಕಲ್ ಮೆಥಡ್): ಆಲೇಖ ವಿಧಾನದಲ್ಲಿಯ ವ್ಯಕ್ತಿನಿಷ್ಠಾತ್ಮಕ ಗುಣವನ್ನು ನಿವಾರಿಸಲು ಗಣಿತ ಉತ್ಪನ್ನಗಳನ್ನು (ಮ್ಯಾಥ್‍ಮ್ಯಾಟಿಕಲ್ ಫಂಕ್ಷನಲ್ ರಿಲೇಷ್ಸನ್), ಅವಕಲ ಸಮೀಕರಣ ಸಂಬಂಧ (ಡಿಫರೆನ್ಷಿಯಲ್ ಈಕ್ವೇಷನ್ ರಿಲೇಷನ್) ವೃದ್ಧಿಘಾತ ಪ್ರತಿರೂಪ ಸಂಬಂಧ (ಲಾಜಿಸ್ಟಿಕ್ ಮಾಡೆಲ್ ರಿಲೇಷನ್)-ಇವನ್ನು ಬಳಸಿಕೊಂಡು ಅನುಗಣನೆಗಳನ್ನು ಸಿದ್ಧಪಡಿಸುವುದು ರೂಢಿ, ಬೇರಾವ ರೀತಿಯ ಗಣಿತ ಉತ್ಪನ್ನಸಂಬಂಧವನ್ನಾದರೂ ಬಳಸಿಕೊಳ್ಳಬಹುದು. ಈ ವಿಧಾನದಿಂದಲೂ ಒಟ್ಟು ಜನಸಂಖ್ಯಾನುಗಣನೆಯನ್ನು ಮಾತ್ರ ಸುಲಭವಾಗಿ ಗುಣಿಸಬಹುದು. ವಯಸ್ಸು, ಲಿಂಗ ಮುಂತಾದ ವಿತರಣೆಗಳನ್ನು ಅಂದಾಜು ಮಾಡುವುದಕ್ಕೆ ಜಟಿಲವಾದ ಗಣಿತ ಉತ್ಪನ್ನಗಳನ್ನು ಬಳಸಬೇಕಾಗುತ್ತದೆ. ಆದರೆ ಯಾವ ಗಣಿತ ಪ್ರತಿರೂಪವನ್ನು ಬಳಸಬೇಕಾದರೂ, ಯುದ್ಧ, ಸಾಂಕ್ರಾಮಿಕ ರೋಗ, ಕ್ಷಾಮ ಮುಂತಾದ ಅಸಾಮಾನ್ಯ ಘಟನೆಗಳಿಗೆ ಜನಸಂಖ್ಯೆ ಬಲಿಯಾಗಿಲ್ಲವೆಂದು ಇಟ್ಟುಕೊಳ್ಳವುದು ಅವಶ್ಯವಾಗಿದೆ. ಇಂಥ ಘಟನೆಗಳು ತಲೆದೋರಿದ್ದ ಪಕ್ಷದಲ್ಲಿ ಈ ಪ್ರತಿರೂಪಗಳು ಸೂಚಿಸುವ ಅಂಕೆಅಂಶಗಳು ತಪ್ಪಾಗುತ್ತವೆ. 3 ಘಟಕ ವಿಧಾನ (ಕಾಂಪೊನೆಂಟ್ ಮೆಥಡ್) : ಒಂದು ಜನಸಂಖ್ಯೆಯಲ್ಲಿ ವಿವಿಧ ವಯಸ್ಸುಗಳ ಗುಂಪುಗಳಿಗೆ ನಿರ್ದಿಷ್ಟವಾಗಿ ಸಂಬಂಧಿಸುವ ಫಲವಂತಿಕೆ ಮತ್ತು ಮರಣದರಗಳನ್ನು ಅನ್ವಯಿಸಿ ಭವಿಷ್ಯದ ಒಂದು ಗೊತ್ತಾದ ಅವಧಿಯಲ್ಲಿ ಪರಿಣಮಿಸಬಹುದಾದ ಒಟ್ಟು ಜನಸಂಖ್ಯೆಯನ್ನು ಅಂದಾಜು ಮಾಡಬಹುದು. ಇಲ್ಲಿ ಮೂಲ ದತ್ತಾಂಶ ಶುದ್ಧವಾಗಿರಬೇಕಾದ್ದು ಅತ್ಯಾವಶ್ಯಕ. ಇರಬಹುದಾದ ತಪ್ಪುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಆಧಾರ ವರ್ಷದ ಅಥವಾ ಆರಂಭದ ವರ್ಷದ ಜನಸಂಖ್ಯೆಯ ವಯೋಸಂಯೋಜನೆ, ಲಿಂಗನಿಷ್ಪತ್ತಿ ಉಳಿವಿನ ನಿಷ್ಪತ್ತಿ (ಸರ್ವೈವಲ್ ರೇಷಿಯೋ) ಮುಂತಾದವನ್ನು ಖಾತರಿ ಮಾಡಿಕೊಳ್ಳಬೇಕು. 4 ಅರ್ಥಮಿತಿ ವಿಧಾನ (ಎಕನಾಮಿಟ್ರಿಕ್ಸ್ ಮೆಥಡ್) : ಜನಸಂಖ್ಯಾ ಬೆಳೆವಣಿಗೆಗೆ ಆರ್ಥಿಕ ಮತ್ತು ಸಾಮಾಜಿ ಪರಿಸ್ಥಿತಿಗಳು ಕಾರಣವಾಗುತ್ತವೆ ಎನ್ನುವ ತತ್ತ್ವವನ್ನು ಈ ವಿಧಾನ ಆಧರಿಸಿದೆ. ಈ ಪರಿಸ್ಥಿತಿಗಳು ಮುಖ್ಯವಾಗಿ ತಲಾವರಮಾನ (ಪರ್‍ಕ್ಯಾಪಿಟ ಇನ್‍ಕಮ್, ಇದು ಆಗಿರಲಿ), ಉದ್ಯಮಗಳ ಬೆಳೆವಣಿಗೆ ( ಆಗಿರಲಿ)ಮತ್ತು ಆಹಾರೋತ್ಪಾದನೆ (ಆಗಿರಲಿ). ಇಲ್ಲಿ ಕೈಗಾರಿಕಾಭಿವೃದ್ಧಿಗೆ ರಾಷ್ಟ್ರೀಯ ವರಮಾನದ ನಿಷ್ಪತ್ತಿ. ಈಗ ಣ ವರ್ಷಗಳಲ್ಲಿಯ ಜನಸಂಖ್ಯೆಯನ್ನು ಒಂದು ಗಣಿತೋತ್ಪನ್ನದಮೂಲದ,,ಚರಗಳಿಗೆ ಸಂಬಂಧಿಸಬಹುದು. ಇದು ಅಂಥ ಒಂದು ಸಾಮಾನ್ಯ ಉತ್ಪನ್ನ. ಇದನ್ನು ಸಹಜ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಜಟಿಲಗೊಳಿಸಬಹುದು. ಅಲ್ಲದೆ ಯಾದೃಚ್ಚಿಕ ಚರಗಳನ್ನು (ರ್ಯಾಂಡಮ್ ವೇರಿಯಬಲ್ಸ್) ಉಪಯೋಗಿಸಿ ಯಾದೃಚ್ಛಿಕ ಪ್ರತಿರೂಪವನ್ನು (ಸ್ಟೊಕ್ಯಾಸ್ಟಿಕ್ ಮಾಡೆಲ್) ರೂಪಿಸಿಕೊಳ್ಳಬಹುದು. ಈಗ,, ಮುಂತಾದ ಚರಗಳ ಭವಿಷ್ಯ ಅಂದಾಜುಗಳು ದೊರೆತಿದ್ದರೆ, ರೂಪಿತ ಉತ್ಪನ್ನದಿಂದ ಜನಸಂಖ್ಯಾನುಗಣನೆಯನ್ನು ಸಿದ್ಧಪಡಿಸಬಹುದು. ಈ ವಿಧಾನದಲ್ಲಿ ಒಂದು ಕಾಲಕ್ಕೆ ಸರಿಯೆನಿಸಿದ ಉತ್ಪನ್ನವೇ ಮುಂದುವರಿಯುತ್ತದೆಂದು ಭಾವಿಸಿಕೊಂಡಂತಾಗುತ್ತದೆ. ಇದಕ್ಕೆ ಬೇಕಾದ ವಿವಿಧ ಚರಗಳ ಪ್ರಸ್ತುತ ಬೆಲೆಗಳೇ ದೊರೆಯುವುದು ಕಷ್ಟವಾಗಿರುತ್ತದೆ ; ಅವುಗಳ ಭವಿಷ್ಯ ಬೆಲೆಗಳನ್ನು ಶೋಧಿಸುವುದು ಇನ್ನೂ ದುಸ್ತರವಾಗುತ್ತದೆ. ಆದ್ದರಿಂದಲೇ ಈ ವಿಧಾನದ ಬಳಕೆ ಬಹಳ ವಿರಳ. 5 ನಿಷ್ಪತ್ತಿ ವಿಧಾನ (ರೇಷಿಯೊ ಮೆಥಡ್) : ಪ್ರಾದೇಶಿಕ ಜನಸಂಖ್ಯಾನುಗಣನೆಗಳನ್ನು ಸಿದ್ಧಪಡಿಸಲೂ ಜನಸಂಖ್ಯಾ ವಿಭಾಗಗಳ ಅನುಗಣನೆಗಳನ್ನು ಗಣಿಸಲೂ ಇದೊಂದು ವಿಶಿಷ್ಟ ವಿಧಾನ. ಪರಿಸ್ಥಿತಿಗೆ ತಕ್ಕಂತೆ ಈ ವಿಧಾನದಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ಬಳಸಲಾಗುತ್ತಿದೆಯಾದರೂ ಮೂಲ ತತ್ತ್ವ ಎಲ್ಲೆಡೆಯಲ್ಲೂ ಒಂದೇ. ಇದರ ಪ್ರಕಾರ ಪ್ರಾದೇಶಿಕ (ಅಥವಾ ವಿಶಿಷ್ಟ ವಿಭಾಗದ) ಜನಸಂಖ್ಯೆಗೂ ರಾಷ್ಟ್ರೀಯ ಜನಸಂಖ್ಯೆಗೂ ಇರುವ ನಿಷ್ಪತ್ತಿಯನ್ನು ಕೆಲವು ವರ್ಷಗಳಿಗೆ ಶೋಧಿಸಿ ಆ ನಿಷ್ಪತ್ತಿಗಳ ಗತಿಯನ್ನು ಗಮನಿಸಿ ಭವಿಷ್ಯ ವರ್ಷಗಳಲ್ಲಿ ನಿಷ್ಪತ್ತಿಯ ಬೆಲೆಗಳನ್ನು ಪಡೆಯಲಾಗುತ್ತದೆ. ಹೀಗೆ ಲಬ್ದವಾದ ನಿಷ್ಪತ್ತಿಗಳಿಂದ ರಾಷ್ಟ್ರೀಯ ಜನಸಂಖ್ಯಾನುಗಣನೆಯನ್ನು ಗಣಿಸಿದರೆ ಅಪೇಕ್ಷಿತ ಪ್ರದೇಶದ ಅಥವಾ ವಿಶಿಷ್ಟ ವಿಭಾಗದ ಅನುಗಣನೆ ದೊರೆಯುತ್ತದೆ. ರಾಷ್ಟ್ರೀಯ ಜನಸಂಖ್ಯೆ ತಿಳಿದಿರುವ ಯಾವ ವರ್ಷಕ್ಕಾದರೂ ಪ್ರಾದೇಶಿಕ (ಅಥವಾ ವಿಶಿಷ್ಟ ವಿಭಾಗದ) ಜನಸಂಖ್ಯಾನುಗಣನೆ ಪಡೆಯಬಹುದು. ಈ ವಿಧಾನವನ್ನು ಜನಸಂಖ್ಯೆಯ ವಯೋಸಂಯೋಜನೆ, ಲಿಂಗಸಂಯೋಜನೆಗಳನ್ನು ತಿಳಿಯಲು ಬಳಸುವುದು ಶ್ರಮದ ಕೆಲಸ. ಜನಸಂಖ್ಯಾನುಗಣನೆಯನ್ನು ಸಿದ್ಧಪಡಿಸುವಾಗ ಕೆಲವು ಅಂಶಗಳನ್ನು ಗಮನಿಸಬೇಕು. ಆಧಾರವಾಗಿ ಉಪಯೋಗಿಸುವ ಅಂಕೆ-ಅಂಶಗಳು ದೋಷಮುಕ್ತವಾಗಿರುವುದು ಅವಶ್ಯ. ಅದಕ್ಕಾಗಿ ದೊರೆತ ಅಂಕೆ-ಅಂಶಗಳನ್ನು ಬಳಸುವ ಮೊದಲು ಅವನ್ನು ಪರಿಶೀಲಿಸಿ, ಸೂಕ್ತ ಕ್ರಮಗಳಿಂದ ದೋಷಗಳನ್ನು ಕಡಿಮೆ ಮಾಡಬೇಕು. ಭವಿಷ್ಯ ಅನಿಶ್ಚಿತವಾದ್ದರಿಂದ ಅನುಗಣನೆಗಳನ್ನು 15-20 ವರ್ಷಗಳಿಗಿಂತ ಹೆಚ್ಚು ವರ್ಷಗಳಿಗೆ ಸಿದ್ಧಪಡಿಸುವುದು ಸೂಕ್ತವಲ್ಲ. ಅಲ್ಲದೆ ಹೆಚ್ಚು ಹೆಚ್ಚು ವಿವರಗಳು ದೊರೆತಾಗ ಅನುಗಣನೆಗಳನ್ನು ಬದಲಾಯಿಸುತ್ತಿರುವುದು ಒಳ್ಳೆಯದು. ಒಂದೇ ಅಭಿಗೃಹೀತದ ಆಧಾರದಿಂದ ಅನುಗಣನೆಗಳನ್ನು ಗಣಿಸದೆ ಹೆಚ್ಚು ಪರ್ಯಾಯ ಅನುಗಣನೆಗಳನ್ನು ಬಳಸಿ ಅವುಗಳಲ್ಲಿ ನಾವು ಯಾವುದನ್ನು ಸೂಕ್ತವೆಂದು ಬಗೆಯುತ್ತೇವೆಂದು ನಿಷ್ಕರ್ಷಿಸಬಹುದು. ಜನಸಂಖ್ಯಾನುಗಣನೆಯಿಂದ ಹಲವು ಪ್ರಯೋಜನಗಳುಂಟು. ಪ್ರಜಾರಾಜ್ಯದ ಪ್ರತಿಯೊಂದು ಪ್ರಸಂಗದಲ್ಲೂ ಜನಸಂಖ್ಯೆಯ ಪ್ರವೃತ್ತಿಗಳ ಬಗ್ಗೆ ಅರಿತು ಕೊಳ್ಳುವುದು ಅವಶ್ಯ. ಚುನಾವಣಾ ಕ್ಷೇತ್ರಗಳ ಸೀಮಾನಿರ್ಧಾರಣ (ಡೀಲಿಮಿಟೇಷನ್ ಆಫ್ ಕಾನ್ಸ್ಟಿಟ್ಯೂಯೆನ್ಸೀಸ್) ಮಾಡಲೂ ಅಭಿವೃದ್ಧಿಯೋಜನೆಗಳನ್ನು ರೂಪಿಸಲೂ ಯೋಜನೆಗಳಿಂದ ಜನತೆಗೆ ಆಗುವ ಲಾಭ ಅರಿಯಲೂ ಆಡಳಿತ ಸಮಸ್ಯೆಗಳನ್ನು ಬಿಡಸಲೂ-ಹೀಗೆ ನಾನಾ ಉದ್ದೇಶಗಳಿಗೆ ಜನಸಂಖ್ಯಾನುಗಣನೆ ಉಪಯುಕ್ತವಾಗುತ್ತದೆ. (ಎಂಎಸ್.ಎಂಯು.) ಪ್ರಪಂಚದ ಭವಿಷ್ಯ ಜನಸಂಖ್ಯೆ : ವಿಶ್ವಸಂಸ್ಥೆ ಆಗಿಂದಾಗ್ಗೆ ಪ್ರಪಂಚದ ಭವಿಷ್ಯ ಜನಸಂಖ್ಯೆ ಕುರಿತ ಅನುಗಣನೆಗಳನ್ನೂ ಮುನ್ಸೂಚನೆಗಳನ್ನೂ ತಯಾರಿಸುತ್ತಿರುತ್ತದೆ. 1950ರ ದಶಕದ ಪ್ರರೂಪಿ (ಟಿಪಿಕಲ್) ಪ್ರಪಂಚ ಜನಸಂಖ್ಯಾ ಪ್ರವೃತ್ತಿಗಳ ದೀರ್ಘಕಾಲದ ಮುಂದುವರಿಕೆಯ ಪರಿಣಾಮವೇನು ಎಂಬುದನ್ನು ಕೋಷ್ಟಕ 1 ಮತ್ತು 2 ರಲ್ಲಿ ಕೊಡಲಾಗಿದೆ. ಫಲವಂತಿಕೆ ಏಕರೀತಿಯಾಗಿರುವುದು ಮತ್ತು ವಲಸೆ ಇರುವುದಿಲ್ಲ ಎಂಬ ಅಭಿಗೃಹೀತವನ್ನು ಆಧರಿಸಿ ಇದನ್ನು ರಚಿಸಲಾಗಿದೆ. ಅಲ್ಲದೆ ಮರಣಸಂಖ್ಯೆಯ ಇಳಿತದ ಗತಿ ಮುಂದುವರಿಯುವುದೆಂದೂ ಭಾವಿಸಲಾಗಿದೆ. ಪ್ರತಿಯೊಂದು ಪ್ರದೇಶದಲ್ಲೂ ಈ ಪ್ರವೃತ್ತಿಗಳು ಮುಂದುವರಿಯುವುವೆಂದು ಭಾವಿಸಿಕೊಂಡು ಜನಸಂಖ್ಯೆಯ ಮೇಲೆ ಅವುಗಳಿಂದ ಆಗುವ ಪರಿಣಾಮಗಳನ್ನು ಲೆಕ್ಕ ಹಾಕಿ, ತರುವಾಯ ಅವನ್ನು ಸಾರೀಕರಿಸಲಾಗುತ್ತದೆ. 1950ರ ದಶಕದ್ದಕ್ಕಿಂತ ಹೆಚ್ಚಿನ ದರದಲ್ಲಿ ಪ್ರಪಂಚದ ಜನಸಂಖ್ಯೆಯ ಬೆಳೆವಣಿಗೆ ತರುವಾಯದ ದಶಕಗಳಲ್ಲಿ ವರ್ಧಿಸುವುದೆಂದು ಮುನ್ನುಡಿಯಲಾಗಿದೆ. 2000ದ ವೇಳೆಗೆ ಜನಸಂಖ್ಯೆ 750 ಕೋಟಿ ಆಗಬಹುದು.

ಚಿತ್ರ-1

ಚಿತ್ರ 3. 1900-2000ರಲ್ಲಿ ಪ್ರಪಂಚದ ಜನಸಂಖ್ಯೆಯ ಬೆಳವಣಿಗೆ (ಅಂದಾಜು ಮತ್ತು ಅನುಗಣನೆ). (ಸೋವಿಯೆತ್ ದೇಶದ ಜನಸಂಖ್ಯೆ ಏಷ್ಯದ ಜನಸಂಖ್ಯೆಯಲ್ಲಿ ಸೇರಿಲ್ಲ; ಯೂರೋಪಿನ ಜನಸಂಖ್ಯೆಯಲ್ಲಿ ಸೇರಿದೆ) ಮರಣ ಸಂಖ್ಯೆಯಲ್ಲಿ ಆಗಬಹುದಾದ ಇಳಿತಾಯ. ಈಚಿನ ವಲಸೆ ಪ್ರವೃತ್ತಿಗಳು ಸ್ವಲ್ಪ ಮಟ್ಟಿಗೆ ಮುಂದುವರಿಯಬಹುದೆಂಬ ನಿರೀಕ್ಷೆ, ಪ್ರಪಂಚದ ವಿವಿಧ ಭಾಗಗಳಲ್ಲಿ ಎಂದಾದರೂ ಫಲವಂತಿಕೆಯಲ್ಲಿ ಇಳಿತಾಯ ಆಗುವ ಸಂಭಾವ್ಯತೆ-ಮುಂತಾಗಿ ಪ್ರಪಂಚದ ವಿವಿಧ ಭಾಗಗಳಿಗೆ ಪ್ರತ್ಯೇಕ ಪ್ರತ್ಯೇಕ ಅಭಿಗೃಹೀತಗಳನ್ನಿಟ್ಟುಕೊಂಡು ಮುನ್ಸೂಚನೆಗಳನ್ನು ಮಾಡಲಾಗಿದೆ. ಆಗಬಹುದಾದ ಅತ್ಯಂತ ಹೆಚ್ಚಿನ ಬೆಳೆವಣಿಗೆ. ಅತ್ಯಂತ ಕಡಿಮೆಯ ಬೆಳೆವಣಿಗೆ, ಇವೆರಡರ ನಡುವಣ ಅಥವಾ ಮಧ್ಯಸ್ಥ ಬೆಳೆವಣಿಗೆ-ಹೀಗೆ ಮೂರು ಗಣಗಳಲ್ಲಿ ಮುನ್ಸೂಚನಾಂಕಗಳನ್ನು ತಯಾರಿಸಲಾಗಿದೆ. 2000ದ ವೇಳೆಗೆ ಪ್ರಪಂಚದ ಜನಸಂಖ್ಯೆ ಹೆಚ್ಚೆಂದರೆ 700 ಕೋಟಿಯೂ ಅತ್ಯಂತ ಕಡಿಮೆಯೆಂದರೆ 540 ಕೋಟಿಯೂ ಮಧ್ಯಸ್ಥವಾಗಿ 600 ಕೋಟಿಯೂ ಆಗಿರುವುದೆಂಬುದು ಮುನ್ಸೂಚನೆ. ಸಾಮಾನ್ಯ ಪ್ರಕ್ರಿಯೆಗಳಿಂದ ಪ್ರಪಂಚ ಜನಸಂಖ್ಯೆಯ ಬೆಳೆವಣಿಗೆಯ ಪ್ರಚಲಿತ ಗತಿಯಲ್ಲಿ ಇಳಿತಾಯವಾಗಲು ಹಲವು ದಶಕಗಳೇ ಬೇಕಾದಾವು. ಈ ನಡುವಣ ಕಾಲದಲ್ಲಿ ಊಹೆಯನ್ನು ಮೀರಸುವಷ್ಟು ಮಟ್ಟಿಗೆ ಜನಸಂಖ್ಯೆ ಏರುತ್ತದೆ. ಹೀಗೆ ಏರಿದ ಜನಸಂಖ್ಯೆಯನ್ನು ನಿರ್ವಹಿಸುವಂಥ ದೃಢ ಸಮಾಜ ವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯವಾದೀತೆ? ಅಥವಾ ಕುಟುಂಬ ಯೋಜನೆಯಲ್ಲಿ ನಂಬಿಕೆಯೂ ಅದನ್ನು ಯಶಸ್ವಿಗೊಳಿಸುವ ಅಭಿಪ್ರೇರಣೆಯೂ ಜನರಲ್ಲಿ ಹಬ್ಬುವಂತೆ ಮಾಡಲಾದೀತೇ?-ಎಂಬುದು ಪ್ರಶ್ನೆ. ಕೋಷ್ಟಕ-1 1960-200ರಲ್ಲಿ ಪ್ರಪಂಚದ ಜನಸಂಖ್ಯೆ ಅನುಗಣನೆ ಮತ್ತು ಮುನ್ಸೂಚನೆ (ಕೋಟಿಗಳಲ್ಲಿ)

ಅಂದಾಜು ಅನುಗಣನೆ ಮಧ್ಯಸ್ಥ ಮುನ್ಸೂಚನೆ


1960 1980 2000 1980 2000

ದಕ್ಷಿಣ ಏಷ್ಯ ಪೂರ್ವ ಏಷ್ಯ ಯೂರೋಪ್ (ಸೋವಿಯೆತ್ ಒಕ್ಕೂಟ, ತುರ್ಕಿ ಬಿಟ್ಟು) ಆಫ್ರಿಕ ಸೋವಿಯೆತ್ ಒಕ್ಕೂಟ ಲ್ಯಾಟಿನ್ ಅಮೆರಿಕ ಉತ್ತರ ಅಮೆರಿಕ ಓಷಿಯಾನಿಯ 86.50 79.40 42.50

27.30 21.40 21.20 19.90 1.57 144.60 114.30 49.60

45.80 29.50 38.70 27.20 2.20 270.00 181.10 57.10

86.00 40.20 75.60 38.80 3.25 142.00 104.10 47.90

44.90 27.80 37.80 26.20 2.26 217.10 128.70 52.70

76.80 35.30 63.86 35.40 3.19

ಪ್ರಪಂಚ 299.80 451.90 752.20 433.00 613.00


ಕೋಷ್ಟಕ-2 1960-2000ದಲ್ಲಿ ಪ್ರಪಂಚ ಜನಸಂಖ್ಯೆಯ ಸರಾಸರಿ ವಾರ್ಷಿಕ ಬೆಳವಣಿಗೆ ದರಗಳ ಅನುಗಣನೆ ಮತ್ತು ಮುನ್ಸೂಚನೆ (ಸೇಕಡ)

ಅಂದಾಜು ಅನುಗಣನೆ ಮಧ್ಯಸ್ಥ ಮುನ್ಸೂಚನೆ


1950-1960 1960-1980 1980-2000 1960-1980 1980-2000

ದಕ್ಷಿಣ ಏಷ್ಯ ಪೂರ್ವ ಏಷ್ಯ ಯೂರೋಪ್ ಆಫ್ರಿಕ ಸೋವಿಯೆತ್ ಒಕ್ಕೂಟ ಲ್ಯಾಟಿನ್ ಅಮೆರಿಕ ಉತ್ತರ ಅಮೆರಿಕ ಓಷಿಯಾನಿಯ 2.2 1.5 0.8 2.1 1.7 2.7 1.8 2.1 2.6 1.8 0.8 2.6 1.6 3.1 1.6 1.7 3.1 2.3 0.7 3.2 1.6 3.4 1.8 2.0 2.5 1.4 0.6 2.5 1.3 2.9 1.4 1.8 2.1 1.1 0.5 2.7 1.2 2.7 1.5 1.7

ಪ್ರಪಂಚ 1.8 2.1 2.6 1.9 1.8

ಗಿII ಜನಸಂಖ್ಯಾ ನೀತಿ ಪ್ರಚಲಿತ ಜನಸಂಖ್ಯಾ ಪ್ರವೃತ್ತಿಗಳನ್ನು ರಾಷ್ಟ್ರದ ಉಳಿವು ಹಾಗೂ ಕಲ್ಯಾಣಕ್ಕಾಗಿ ಬದಲಾಯಿಸುವ ಉದ್ದೇಶದಿಂದ ಸರ್ಕಾರ ಕೈಗೊಳ್ಳುವ ವೈಧಾನಿಕ, ಪ್ರಶಾಸನಿಕ ಮತ್ತು ಇತರ ಕ್ರಮಗಳು ಜನಸಂಖ್ಯಾ ನೀತಿ ಎನಿಸಿಕೊಳ್ಳುತ್ತವೆ. ಅನೇಕ ಸಾರ್ವಜನಿಕ ನೀತಿಗಳೂ ಸಮಾಜ ಪರಿವರ್ತನ ಕ್ರಮಗಳೂ ಒಟ್ಟಿನಲ್ಲಿ ಜನಸಂಖ್ಯಾ ಪ್ರವೃತ್ತಿಗಳ ಮೇಲೆ ಪರಿಣಾಮ ಬೀರುತ್ತವೆ. ಆದರೆ ಅನಿಷ್ಟ ಜನಸಂಖ್ಯಾ ಪ್ರವೃತ್ತಿಗಳನ್ನು ತಡೆಗಟ್ಟಲು ಕೈಗೊಂಡ ಸಾರ್ವಜನಿಕ ಕ್ರಮಗಳು ಮಾತ್ರ ಜನಸಂಖ್ಯಾ ನೀತಿಯ ವ್ಯಾಪ್ತಿಯಲ್ಲಿ ಬರುತ್ತವೆ. ಒಂದು ದೇಶದ ಜನಸಂಖ್ಯೆಯ ಬೆಳವಣಿಗೆಯ ದರವನ್ನು ಉಳಿಸುವ, ಬೆಳೆಸುವ ಅಥವಾ ತಡೆಹಿಡಿಯುವ ಕ್ರಮಗಳಿಗೆ ಈಚೆಗೆ ವಿಶೇಷ ಗಮನ ಸಂದಿದೆ. ಜನಸಂಖ್ಯೆಯ ಗಾತ್ರವನ್ನು ನಿಯಂತ್ರಿಸುವುದು ಜನಸಂಖ್ಯಾ ನೀತಿಯ ಮುಖ್ಯ ಉದ್ದೇಶ. ಜನಸಂಖ್ಯೆಯ ಸಂಯೋಜನೆಯನ್ನೂ ಭೌಗೋಳಿಕ ವಿತರಣೆಯನ್ನೂ ಬದಲಿಸುವ ದೃಷ್ಟಿಯಿಂದಲೂ ಆಗಾಗ್ಗೆ ಕ್ರಮ ಕೈಗೊಳ್ಳಬಹುದು. ಆದರೆ ಜನಸಂಖ್ಯೆಯ ಗಾತ್ರ ಮತ್ತು ಬದಲಾವಣೆಯ ದರಗಳನ್ನು ಬದಲಿಸುವ ದೃಷ್ಟಿಯಿಂದ ರೂಪಿಸಲಾದ ಕ್ರಮಗಳ ವಿವೇಚನೆಯನ್ನು ಮಾತ್ರ ಇಲ್ಲಿ ಮಾಡಲಾಗಿದೆ. ಪರಿಮಾಣಾತ್ಮಕವಲ್ಲದ ಅಥವಾ ಗುಣಾತ್ಮಕವಾದ ಬದಲಾವಣೆಗಳನ್ನು ತರುವ ಕ್ರಮಗಳು ಸರ್ಕಾರದ ಸಮಗ್ರ ನೀತಿಯ ವ್ಯಾಪ್ತಿಗೆ ಒಳಪಡುತ್ತವೆ ಜನಸಂಖ್ಯೆಯ ಆನುವಂಶಿಕ ರಚನೆಯನ್ನು ನಿಯಂತ್ರಿಸುವ ಕ್ರಮಗಳೂ ಜನಸಂಖ್ಯಾ ನೀತಿಯ ಅಡಿಯಲ್ಲಿ ಬರುವುದೆಂದು ಹೇಳುವುದುಂಟು. ಗರ್ಭಪಾತ, ಸಂತಾನಶಕ್ತಿಹರಣ ಮುಂತಾದವಕ್ಕೆ ಕೆಲವು ಸಂದರ್ಭಗಳಲ್ಲಿ ಅವಕಾಶ ನೀಡುವ ಅಧಿನಿಯಮಗಳು ಕೆಲವು ದೇಶಗಳಲ್ಲಿ ಜಾರಿಗೆ ಬಂದಿವೆಯಾದರೂ ಇವುಗಳಿಂದ ಜನಸಂಖ್ಯೆಯ ಮೇಲೆ ಆಗುವ ಪರಿಣಾಮ ಸಾಮಾನ್ಯವಾಗಿ ಅಲ್ಪ. ಇತಿಹಾಸ : ಜನಸಂಖ್ಯೆಯ ವಿಚಾರದಲ್ಲಿ ಸರ್ಕಾರದ ಆಸಕ್ತಿ ಬಹಳ ಪ್ರಾಚೀನವಾದ್ದು. ಮದುವೆಗೆ ಪ್ರೋತ್ಸಾಹ, ಅವಿವಾಹಿತರ ತೆರಿಗೆ, ಮಕ್ಕಳಿರುವ ಕುಟುಂಬಗಳಿಗೆ ಸಹಾಯಧನ ನೀಡಿದೆ. ವಲಸೆಗಳ ನಿಯಂತ್ರಣ, ವಿವಾಹಕ್ಕೆ ಕನಿಷ್ಠ ವಯೋಮಿತಿ ನಿಗದಿ-ಮುಂತಾದ ಕ್ರಮಗಳಿಂದ ಸರ್ಕಾರ ಹಿಂದಿನಿಂದಲೂ ಈ ಕ್ಷೇತ್ರದಲ್ಲಿ ಕೈಹಾಕುತ್ತಲೇ ಬಂದಿದೆ. ಹೆಚ್ಚು ಜನಸಂಖ್ಯೆ ಇದ್ದಷ್ಟೂ ಹೆಚ್ಚು ಶಕ್ತಿ ಎಂಬುದು ಇಂಥ ಕ್ರಮಗಳ ಹಿಂದೆ ಇದ್ದ ತಾತ್ತ್ವಿಕ ದೃಷ್ಟಿ. ಭಾರತದಲ್ಲಂತೂ ಸಂತಾನಾಭಿವೃದ್ಧಿಗೆ ಹಿಂದಿನಿಂದಲೂ ಧಾರ್ಮಿಕ ಸ್ವರೂಪ ನೀಡಲಾಗಿದೆ. ಎರಡು ಮಹಾಯುದ್ಧಗಳ ನಡುವಣ ಕಾಲದಲ್ಲಿ ಜರ್ಮನಿ, ಇಟಲಿ ಮತ್ತು ಜಪಾನ್ ದೇಶಗಳು ಜನಸಂಖ್ಯೆಯನ್ನು ವಿಸ್ತರಿಸುವ ನೀತಿ ಅನುಸರಿಸುತ್ತಿದ್ದುವು. ಹೆಚ್ಚು ಮಕ್ಕಳನ್ನು ಹಡೆದವಳು ರಾಷ್ಟ್ರದ ಗೌರವಕ್ಕೆ ಪಾತ್ರಗಳಾಗುತ್ತಿದ್ದಳು. ಹೆಚ್ಚು ಮಕ್ಕಳ ಸಂಸಾರಗಳಿಗೆ ಹಣ ನೀಡಲಾಗುತ್ತಿತ್ತು. ಜನನನಿಯಂತ್ರಣವನ್ನು ನಿರುತ್ತೇಜಿಸಲಾಗುತ್ತಿತ್ತು. ಉತ್ತಮ ಸಂತಾನವೃದ್ಧಿಗಾಗಿ ಕಾನೂನುಗಳಿದ್ದುವು. ಶುದ್ಧ ದೇಶೀಯ ಜನಾಂಗವನ್ನು ಬೆಳೆಸುವುದು ಈ ನಿಬಂಧನೆಗಳ ಉದ್ದೇಶ. ಆ ದೇಶಗಳ ರಾಜ್ಯ ವಿಸ್ಥರಣಾಕಾಂಕ್ಷೆಯ ಕ್ರಮಗಳಿಗೆ ಇವೆಲ್ಲ ಪೂರಕವಾಗಿದ್ದುವು. ಇನ್ನು ಕೆಲವು ದೇಶಗಳಲ್ಲಿ ಜಾರಿಯಲ್ಲಿದ್ದ ಕ್ರಮಗಳ ಉದ್ದೇಶಗಳೇ ಬೇರೆ. ಆ ದೇಶಗಳಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದ್ದ ದರಕ್ಕಿಂತಲೂ ಫಲವಂತಿಕೆಯ ದರ ಕಡಿಮೆಯಿದ್ದುದರಿಂದ ಕಾಲಕ್ರಮದಲ್ಲಿ ಅಲ್ಲಿಯ ಜನಸಂಖ್ಯೆ ಕ್ಷಯಿಸಿಹೋಗಬಹುದೆಂಬ ಅಂಜಿಕೆಯಿತ್ತು. ಫ್ರಾನ್ಸ್ ಮತ್ತು ಆಸ್ಟ್ರೇಲಿಯ ದೇಶಗಳಲ್ಲಿ ಜನನಗಳಿಗಿಂತ ಮರಣಗಳು ಅಧಿಕವಾಗಿದ್ದುದಕ್ಕೆ ದಾಖಲೆಗಳಿವೆ. ಇಡೀ ಪಶ್ಚಿಮ ಯೂರೋಪಿನಲ್ಲೇ ಜನಸಂಖ್ಯೆ ಕ್ರಮೇಣ ಇಳಿಮುಖವಾಗುವುದೆಂದು ಭಾವಿಸಲಾಗಿತ್ತು. ಅದೇ ವಿರುದ್ಧ ರಕ್ಷಣೆ ನೀಡುವತ್ತ ಸರ್ಕಾರಗಳು ಗಮನ ನೀಡಬೇಕಾಗಿ ಬಂದುದರಿಂದ ಸಾಮಜಿಕ ನ್ಯಾಯದ ಹೊಸ ಪರಿಕಲ್ಪನೆಯೊಂದು ರೂಪುಗೊಳ್ಳುತ್ತಿತ್ತು. ಕೆಲಸಗಾರನನ್ನೆ ನಂಬಿದ ಕುಟುಂಬದ ಗಾತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ಕನಿಷ್ಠ ಕುಟುಂಬವೇತನ ನೀಡುವ ಕ್ರಮಗಳು ಜಾರಿಗೆ ಬರಲಾರಂಬಿಸಿದುವು. ಹೀಗಾಗಿ ಜನಸಂಖ್ಯೆಗೂ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೂ ಸಂಬಂಧ ಏರ್ಷಟ್ಟಿತು. ಯೂರೋಪಿನ ಆಗಿ ಜನನದರಗಳ ಇಳಿತಾಯ ಎಷ್ಟರಮಟ್ಟಿಗೆ ದೀರ್ಘಕಾಲಿಕ ಪ್ರವೃತ್ತಿಗಳ ಮುಂದುವರಿಕೆಯಾಗಿತ್ತೆಂಬುದಾಗಲಿ, ಎಷ್ಟರಮಟ್ಟಿಗೆ ಅದು ತಾತ್ಕಾಲಿಕವಾಗಿತ್ತೆಂಬುದಾಗಲಿ ಸ್ಪಷ್ಟವಾಗರಿರಲಿಲ್ಲ. ಆದ್ದರಿಂದ ವಿವಾಹ ಮತ್ತು ಫಲವಂತಿಕೆಯ ದರಗಳ ಇಳಿತಾಯಕ್ಕೆ ಆರ್ಥಿಕ ಕಾರಣಗಳಿದ್ದುವೆಂಬುದು ಆಗ ಇದ್ದ ಭಾವನೆ. ಆದ್ದರಿಂದ ಸಮಾಜ ಭದ್ರತಾ ಕಾರ್ಯಕ್ರಮಗಳನ್ನು ಜಾರಿಗೆ ತರುವುದರಿಂದ ಕುಟುಂಬಕ್ಕೆ ಭದ್ರತೆ ನೀಡಿ ಜನನದರಗಳನ್ನು ಏರಿಸಬಹುದೆಂದು ತಿಳಿಯಲಾಗಿತ್ತು. ಕುಟುಂಬಕ್ಕೆ ಸಹಾಯ ನೀಡುವ ಯೋಜನೆಗಳ ಮತ್ತು ಗರ್ಭಿಣಿ ಶಿಶುಪೋಷಣೆಯ ಕ್ರಮಗಳ ಹಿಂದೆ ಇದ್ದ ದೃಷ್ಟಿ ಎಂಥದು? ಅದು ಜನಸಂಖ್ಯಾದೃಷ್ಟಿಯೆ, ಕಲ್ಯಾಣದೃಷ್ಟಿಯೆ?-ಎಂಬುದನ್ನು ಖಚಿತವಾಗಿ ಹೇಳುವುದಕ್ಕಾಗುವುದಿಲ್ಲ. ಸೋವಿಯೆತ್ ದೇಶ ಮತ್ತು ಪೂರ್ವ ಯೂರೋಪಿನಲ್ಲೂ ಇಂಥ ಕಾರ್ಯಗಳು ರೂಪುಗೊಂಡಿವೆ. ಸಮಾಜವಾದಿ ಪ್ರಭುತ್ವವನ್ನು ರಚಿಸುವ ಪ್ರಯತ್ನದ ಅಂಗವಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮಾಲಸ್ಥಾನ ಜನಸಂಖ್ಯಾ ಸಿದ್ಧಾಂತವನ್ನು ಮಾಕ್ರ್ಸ್ ಒಪ್ಪುವುದಿಲ್ಲ. ಒಂದು ದೇಶದ ಜನಸಂಖ್ಯೆ ವಿಪರೀತವಾಗಿದೆಯೆಂದರೆ ಅಲ್ಲಿಯ ಸಾಮಾಜಿಕ ವ್ಯವಸ್ಥೆ ಕೆಟ್ಟಿದೆಯೆಂದೇ ಅರ್ಥ, ಉತ್ಪಾದನೆಯ ಮತ್ತು ವಿತರಣೆಯ ವ್ಯವಸ್ಥೆ ಸರಿಯಾಗಿದ್ದರೆ ಜನಸಂಖ್ಯೆ ಅತಿಯೆಂಬ ಪ್ರಶ್ನೆಯೇ ಬರುವುದಿಲ್ಲ ಎಂಬುದು ಮಾಕ್ರ್ಸನ ವಾದ. ಸೋವಿಯೆತ್ ದೇಶದ ಜನಸಂಖ್ಯಾ ನೀತಿ ಈ ದೋರಣೆಗೆ ಅನುಗುಣವಾದ್ದು. ಜನಸಂಖ್ಯೆಯನ್ನು ವೃದ್ಧಿಪಡಿಸುವತ್ತ ಅದರ ನೀತಿ ರೂಪುಗೊಂಡಿದೆ. ಎರಡನೆಯ ಮಹಾಯುದ್ಧದ ಅನಂತರ ಈ ಪ್ರಶ್ನೆಗೆ ಹೊಸ ತಿರುವು ಬಂತು. ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಿಗೆ ತಮ್ಮ ಆರ್ಥಿಕ ಸಮಸ್ಯೆಗಳ ಅರಿವು ಮೂಡಿತು. ಈ ದೇಶಗಳಲ್ಲಿ ಮರಣದ ಇಳಿಯುತ್ತಿತ್ತು. ಆದರೆ ಫಲವಂತಿಕೆ ಮಾತ್ರ ಉನ್ನತ ಮಟ್ಟದಲ್ಲೇ ಮುಂದುವರಿಯಿತು. ಈ ದೇಶಗಳಲ್ಲಿ ವಾರ್ಷಿಕವಾಗಿ 2.5%-3%ರಂತೆ ಜನಸಂಖ್ಯೆ ಬೆಳೆಯುತ್ತಿತ್ತು. ಒಂದು ತಲೆಮಾರಿನಲ್ಲಿ ಜನಸಂಖ್ಯೆ ಇಮ್ಮಡಿಸುವುದೆಂಬ ಅಂಜಿಕೆ ತಲೆದೋರಿತು. ಇಲ್ಲಿಯ ಜನರ ಜೀವನ ಮಟ್ಟವನ್ನು ಏರಿಸುವ ಪ್ರಯತ್ನವೆಲ್ಲ ಅಧಿಕ ಜನಸಂಖ್ಯೆಯ ಫಲವಾಗಿ ನಿಷ್ಪ್ರಯೋಜನಕವಾಗುವದೆಂಬ ಭಯ ಹುಟ್ಟಿತು. ಜನಸಂಖ್ಯಾ ಬೆಳವಣಿಗೆಯ ದರವನ್ನು ಇಳಿಸುವ, ಅಥವಾ ಅದು ಏರದಂತೆ ತಡೆಗಟ್ಟುವ ಕ್ರಮಗಳು ಅನೇಕ ದೇಶಗಳಲ್ಲಿ ಜಾರಿಗೆ ಬಂದುವು. ಜನಸಂಖ್ಯಾ ನೀತಿಯ ಮುಖ್ಯಾಂಶಗಳು. ಜನಸಂಖ್ಯಾ ನೀತಿಯ ಮುಖ್ಯಾಂಶಗಳು ಇವು : 1 ಹಿಂದಿನ ಮತ್ತು ಪ್ರಚಲಿತ ಜನಸಂಖ್ಯಾ ಪ್ರವೃತ್ತಿಗಳ ಮತ್ತು ಅವುಗಳ ಕಾರಣಗಳ ಪರಿಶೀಲನೆ, 2 ಈ ಪ್ರವೃತ್ತಿಗಳ ಫಲವಾಗಿ ಮುಂದೆ ಜನಸಂಖ್ಯೆಯಲ್ಲಿ ಆಗಬಹುದಾದ ಅಂದಾಜು. 3 ರಾಷ್ಟ್ರಹಿತದೃಷ್ಟಿಯಿಂದ ಅವುಗಳ ಸಾಮಾಜಿಕ ಆರ್ಥಿಕ ಪರಿಣಾಮಗಳ ಅರಿವು, 4 ಅಪೇಕ್ಷಿತ ಬದಲಾವಣೆಗಳನ್ನು ತರಲು ಅಥವಾ ಅನಪೇಕ್ಷಿತ ಬದಲಾವಣೆಗಳನ್ನು ನಿವಾರಿಸಲು ಕ್ರಮಗಳ ಜಾರಿ. ಜನಸಂಖ್ಯೆಯ ಫಲವಂತಿಕೆ, ಮರಣದರ, ವಲಸೆ-ಈ ಬಲಗಳ ಪರಸ್ಪರ ಸಂಬಂಧದಲ್ಲಿ ಆಗುವ ಬದಲಾವಣೆಗಳೇ ಜನಸಂಖ್ಯಾ ಪ್ರವೃತ್ತಿಗಳು. ಈ ಮೂರೂ ಪ್ರಕ್ರಿಯೆಗಳಲ್ಲಿಯ ಬದಲಾವಣೆಯ ಅಂಶಗಳನ್ನು ಅರಿಯುವುದರಲ್ಲಿ ಜನಸಂಖ್ಯಾ ನೀತಿ ನಿರ್ಧಾರಕರು ಆಸಕ್ತರಾಗಿರುತ್ತಾರೆ. ವಲಸೆ: ಹೆಚ್ಚು ಜನಸಾಂದ್ರತೆ ಇರುವ ದೇಶಗಳಿಂದ ಕಡಿಮೆ ಜನಸಾಂದ್ರತೆಯ ದೇಶಗಳಿಗೆ ವಲಸೆ ಏರ್ಪಡಿಸುವುದರಿಂದ ಜನಸಂಖ್ಯಾ ಹೊಂದಾವಣೆ ಸಾಧ್ಯ. ಆದರೆ ಇದು ಕಷ್ಟಸಾಧ್ಯ; ಅನೇಕ ವೇಳೆ ಅಸಾಧ್ಯ. ರಾಷ್ಟ್ರೀಯ ಭಾವನೆ, ರಾಜಕೀಯ ಭಿನ್ನತೆ, ಜನಾಂಗ ಭೇದ, ಪರಸ್ಪರ ಹೊಂದಾವಣೆಯ ಸಮಸ್ಯೆ-ಇವು ಇದಕ್ಕೆ ಮುಖ್ಯ ಕಾರಣಗಳು. ವಿವಿಧ ದೇಶಗಳ ಜನವಲಸೆ ಕಾನೂನುಗಳು ಬಲು ಕಟ್ಟು ನಿಟ್ಟಾಗಿರುತ್ತವೆ. ಜನವಲಸೆಯನ್ನು ಸ್ವಾಗತಿಸುವ ದೇಶಗಳು ಕೂಡ ಈ ಬಗ್ಗೆ ಹಲವು ನಿಯಮಗಳನ್ನು ರಚಿಸಿರುತ್ತವೆ. ಎರಡು ದೇಶಗಳ ನಡುವೆ ಒಪ್ಪಂದದ ಮೂಲಕ ಮಾತ್ರವೇ ವಲಸೆ ಸಾಧ್ಯ. ಒಂದು ದೇಶದೊಳಗೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಜನರು ವಲಸೆ ಹೋಗುವಂತೆ ಮಾಡುವುದೂ ಜನಸಂಖ್ಯಾನೀತಿಯ ವ್ಯಾಪ್ತಿಯಲ್ಲಿ ಬರುತ್ತದೆ. ಅನೇಕ ವೇಳೆ ಆಂತರಿಕ ವಲಸೆಗಳು ಆಯೋಜಿತವಾಗಿರುತ್ತವೆ. ಹಳ್ಳಿಯಿಂದ ಪಟ್ಟಣಕ್ಕೆ ಜನರು ವಲಸೆ ಹೋಗುವುದು ಒಂದು ನಿದರ್ಶನ. ಅಭಿವೃದ್ಧಿಶೀಲ ದೇಶಗಳಲ್ಲಿ ಇದು ಅನೇಕ ವೇಳೆ ಆಯೋಜಿತ. ಇದು ನಾನಾ ಬಗೆಯ ಸಮಸ್ಯೆಗಳಿಗೆ ಎಡೆಕೊಡುತ್ತದೆ. ಜನಸಂಖ್ಯಾ ವಿತರಣೆಗೂ ಆರ್ಥಿಕ ಕ್ರಮಗಳಿಗೂ ಹೊಂದಾವಣೆ ಏರ್ಪಡುವುದಾದರೆ ಇಂಥ ದೇಶಗಳ ಆರ್ಥಿಕ ಪ್ರಗತಿ ಹೆಚ್ಚು ಸುಸೂತ್ರವಾಗುತ್ತದೆ. ಮರಣ ದರ: ಮರಣ ದರದ ಮೇಲೆ ಪರಿಣಾಮ ಉಂಟು ಮಾಡುವ ಕ್ರಮಗಳೂ ಸ್ಥೂಲವಾಗಿ ಜನಸಂಖ್ಯಾನೀತಿಯ ಅಡಿಯಲ್ಲಿ ಬರುತ್ತವೆ. ಆದರೆ ಇಂಥ ಕ್ರಮಗಳು ಜನಾರೋಗ್ಯವನ್ನು ಉತ್ತಮಪಡಿಸುವ ಉದ್ದೇಶದಿಂದ ಕೂಡಿದವು; ಇವುಗಳದು ಜನಸಂಖ್ಯಾ ನಿಯಂತ್ರಣೋದ್ದೇಶವಲ್ಲ. ಜನಸಂಖ್ಯೆಯ ನಿಯಂತ್ರಣಕ್ಕಾಗಿ ಮರಣ ದರದ ಹಸ್ತಕ್ಷೇಪ ಮಾಡುವುದು ಸೂಕ್ತವಲ್ಲ. ಜನಸಂಖ್ಯೆಯನ್ನು ಏರಿಸುವ ಉದ್ದೇಶದಿಂದ ಮರಣ ದರವನ್ನು ಇಳಿಸಬಹುದೇ ವಿನಾ, ಜನಸಂಖ್ಯೆಯನ್ನು ಕಡಿಮೆ ಮಾಡುವ ಕೃಷ್ಟಿಯಿಂದ ಮರಣ ದರವನ್ನು ಏರಿಸಲು ಯಾರೂ ಕೈಹಾಕಲಾರರು. ಅದು ಸಾಮಾಜಿಕವಾಗಿ ಸ್ವಾಗತಾರ್ಹವೆನಿಸದು. ಅದು ಮಾನವತೆಗೆ ಎಸಗಿದ ಅಪಚಾರ. ಕೈಗಾರಿಕೆಯಲ್ಲಿ ಮುಂದುವರಿದ ದೇಶಗಳಲ್ಲಿ ಮರಣ ದರ ಈಗಾಗಲೇ ಬಲು ಕಡಿಮೆ ಮಟ್ಟದಲ್ಲಿದೆ. ಅಲ್ಲಿ ಇದನ್ನು ಇನ್ನೂ ಕಡಿಮೆ ಮಾಡುವುದರಿಂದ ಅಲ್ಲಿಯ ಜನಸಂಖ್ಯೆಯನ್ನೇರಿಸಲು ಹೆಚ್ಚು ಸಹಾಯವಾಗಲಾರದು. ಅಂತೂ ಯಾವ ದೃಷ್ಟಿಯಿಂದ ನೋಡಿದರೂ ಮರಣ ದರವನ್ನು ಜನಸಂಖ್ಯಾನೀತಿಯ ಅಂಗವೆಂದು ಪರಿಗಣಿಸಲಾಗುವುದಿಲ್ಲ. ಸಮಾಜ ಕಲ್ಯಾಣ ನೀತಿಯಲ್ಲಿ ಮರಣ ದರ ಇಳಿತಾಯ ಒಂದು ಮುಖ್ಯ ಕ್ರಮ. ಸಾರ್ವಜನಿಕ ಆರೋಗ್ಯ ಬೆಳಸಿ ಮರಣ ದರ ಇಳಿಸುವುದು ಇಂದು ಪ್ರತಿಯೊಂದು ನಾಗರಿಕ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಅದಕ್ಕೂ ಜನಸಂಖ್ಯಾ ನಿಯಂತ್ರಣಕ್ಕೂ ಸಂಬಂಧ ಕಲ್ಪಿಸಲಾಗದು. ಫಲವಂತಿಕೆಯ ನಿಯಂತ್ರಣ : ಆದ್ದರಿಂದ ಇಂದಿನ ಪರಿಸ್ಥಿತಿಯಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಫಲವಂತಿಕೆಯ ನಿಯಂತ್ರಣವೇ ಅತ್ಯಂತ ಮುಖ್ಯ ಸಾಧನವೆನಿಸಿದೆ. ಜನಸಂಖ್ಯೆಯನ್ನು ಬೆಳಸಬೇಕೆಂದು ಕಾರ್ಯೋನ್ಮುಖವಾಗಿರುವ ದೇಶಗಳಲ್ಲಿ ಫಲವಂತಿಕೆಯ ದರ ಬಹಳ ಕಡಿಮೆ ಮಟ್ಟದಲ್ಲಿದೆ. ಜನಸಂಖ್ಯೆಯ ಬೆಳವಣಿಗೆಯ ದರವನ್ನು ಇಳಿಸಬೇಕೆಂದು ಪ್ರಯತ್ನಪಡುತ್ತಿರುವ ದೇಶಗಳಲ್ಲಿ ಫಲವಂತಿಕೆಯ ದರ ಬಲು ಹೆಚ್ಚಿನ ಮಟ್ಟದಲ್ಲಿದೆ. ಭಾರತದಲ್ಲಿ : ಇಂದು ಪ್ರಪಂಚದಲ್ಲಿ ಮೂರು ರಾಷ್ಟ್ರಗಳು ವಾಸ್ತವವಾಗಿ ಸುಸಂಗತವಾದ, ವಿವೇಚನಾಯುತವಾದ, ಸ್ಪಷ್ಟವಾಗಿ ಘೋಷಿಸಿಕೊಂಡ ಜನಸಂಖ್ಯಾ ನೀತಿಗಳನ್ನು ಅನುಸರಿಸುತ್ತಿವೆ. ಅವು ಫ್ರಾನ್ಸ್, ಸ್ವೀಡನ್ ಮತ್ತು ಭಾರತ, ಫ್ರಾನ್ಸ್, ಸ್ವೀಡನ್‍ಗಳು ಜನಸಂಖ್ಯಾ ಬೆಳವಣಿಗೆಯ ದರವನ್ನು ಏರಿಸುವುದಕ್ಕೂ ಭಾರತ ಅದನ್ನು ಇಳಿಸುವುದಕ್ಕೂ ಕ್ರಮ ಕೈಗೊಂಡಿವೆ. ಆರ್ಥಿಕಾಭಿವೃದ್ಧಿ ಸಾಧಿಸಿ ಜನರ ಜೀವನ ಮಟ್ಟವನ್ನು ಏರಿಸಬೇಕಾದರೆ ಜನಸಂಖ್ಯೆಯನ್ನು ಹಿಡಿತಡಲ್ಲಿಡುವುದು ಅತ್ಯಾವಶ್ಯಕವೆಂದು ಭಾರತ ಮನಗಂಡಿದೆ. ಇಳಿಯುತ್ತಿರುವ ಮರಣ ದರಕ್ಕೂ ಏರುತತ್ತಿರುವ ಜನನ ದರಕ್ಕೂ ನಡುವಣ ಅಂತರವನ್ನು ಕಡಿಮೆ ಮಾಡಲು ಪ್ರತ್ನ ನಡೆಯುತ್ತಿದೆ. ಭಾರತದ ಪಂಚವಾರ್ಷಿಕ ಯೋಜನೆಗಳ ಅಡಿಯಲ್ಲಿ ಇದಕ್ಕಾಗಿ ಕಾರ್ಯಕ್ರಮ ಕೈಗೊಳ್ಳಲಾಗಿದೆ.

ಕುಂಟುಂಬ ಯೋಜನೆಗಾಗಿ ಪ್ರಚಾರ, ಅದನ್ನು ಕೈಗೊಳ್ಳಲು ಅಭಿಪ್ರೇರಣೆ, ಜನನ ನಿಯಂತ್ರಣದ ಬಗ್ಗೆ ಸಲಹೆ, ನಿಯಂತ್ರಣ ಸಾಧನಗಳ ಸರಬರಾಯಿ, ಕುಟುಂಬ ಯೋಜನಾ ಚಿಕಿತ್ಸಾಲಯಗಳ ಸ್ಥಾಪನೆ-ಇವು ಕೆಲವು ಕ್ರಮಗಳು. ನಿರೋಧ ತಯಾರಿಕೆ ಹಂಚಿಕೆಗಳಿಗೆ ಸರ್ಕಾರ ಸಹಾಯಧನ ನೀಡುತ್ತಿದೆ. ಕುಟುಂಬ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ವಿಶ್ವಸಂಸ್ಥೆಯ ಪರಿಣತರು ಅಭ್ಯಸಿಸಿ ಸಲಹೆ ನೀಡಿದ್ದಾರೆ. (ನೋಡಿ- ಕುಟುಂಬಯೋಜನೆ)

ಪರಿಣಾಮ : ಜನಸಂಖ್ಯಾ ನೀತಿಯ ಪರಿಣಾಮಗಳೇನೆಂಬುದನ್ನು ಖಚಿತವಾಗಿ ಹೇಳುವ ಕಾಲ ಇನ್ನೂ ಬಂದಿಲ್ಲ. ಫ್ರಾನ್ಸ್, ಸ್ವೀಡನ್, ಭಾರತ-ಈ ಮೂರು ದೇಶಗಳು ಮಾತ್ರ ಈ ಬಗ್ಗೆ ಸ್ಪಷ್ಟವಾದ ನೀತಿ ಅನುಸರಿಸುತ್ತಿವೆ. ಅವು ಇದರ ಫಲಾಫಲಗಳ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿಯನ್ನೇನೂ ಒದಗಿಸುವಂತಿಲ್ಲ. ಜನಸಂಖ್ಯೆ ಇಳಿಮುಖವಾಗಿದ್ದ ಐರೋಪ್ಯ ರಾಷ್ಟ್ರಗಳ ಈಚಿನ ಪ್ರವೃತ್ತಿಯೆಂದರೆ ಅದರ ಏರಿಕೆ. ಭಾರತದಲ್ಲಿ ಜನಸಂಖ್ಯೆಯ ಏರುವಿಕೆಯ ದರವನ್ನು ನೋಡಿದಾಗ ಅಲ್ಲಿ ಕುಟುಂಬ ಯೋಜನೆ ಇನ್ನೂ ಸಮಸ್ಯೆಯ ಅಂಚನ್ನೂ ತಾಕಿಲ್ಲವೆಂದೇ ಹೇಳಬಹುದಾಗಿದೆ.