ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಾನುವಾರು ಗಣತಿ
ಜಾನುವಾರು ಗಣತಿ - ಭಾರತದಲ್ಲಿ ಐದು ವರ್ಷಗಳಿಗೊಮ್ಮೆ ನಡೆಯುತ್ತದೆ. ಇದರಲ್ಲಿ ಸಂಗ್ರಹಿಸಲಾಗುವ ಮಾಹಿತಿಗಳು ಸ್ಥೂಲವಾಗಿ ಈ ಮುಂದಿನವು. 1. ದನಕರುಗಳ ಸಂಖ್ಯೆ: ಗಂಡು, ಹೆಣ್ಣು ಮತ್ತು ಸಣ್ಣಕರು ಎಂದು ವರ್ಗೀಕರಣ ಮಾಡಲಾಗಿದೆ. ಮೂರು ವರ್ಷ ಅಥವಾ ಅದಕ್ಕೊಳಪಟ್ಟಿದ್ದರೆ ಅವನ್ನು ಕರುಗಳೆಂದು ಪರಿಗಣಿಸಲಾಗುತ್ತದೆ. ಇವನ್ನು ಮತ್ತೆ ಈ ರೀತಿ ವಿಭಾಗಿಸಬಹುದು. (a) ಬೀಜದ ಹೋರಿಗಳು (b) ಕೆಲಸಕ್ಕೆ ಒದಗುವ ಎತ್ತುಗಳು ಮತ್ತು ದುಡಿಮೆಯ ರಾಸುಗಳು (C) ಕರಾವುಗಳು (D) ಕನ್ಯೆ ಆಕಳು ಮತ್ತು ಗೊಡ್ಡು ಆಕಳು (E) ಇತರ ದನಗಳು 2. ಎಮ್ಮೆಗಳ ಸಂಖ್ಯೆ: ಗಂಡು, ಹೆಣ್ಣು ಮತ್ತು ಸಣ್ಣಕರು, ಇವನ್ನು ಕೂಡ ಮೇಲಿನಂತೆ ಐದು ಉಪವಿಭಾಗಗಳಾಗಿ ವಿಭಾಗಿಸಬಹುದು. ಕುರಿಗಳು, ಮೇಕೆಗಳು ಕುದುರೆಗಳು, ಸಣ್ಣ ತಟ್ಟುಗಳು ಕತ್ತೆಗಳು, ಹೇಸರಕತ್ತೆಗಳು ಮತ್ತು ಒಂಟೆಗಳು ಹಂದಿಗಳು ಕೋಳಿಗಳು, ಹುಂಜಗಳು ಬಾತುಕೋಳಿಗಳು-ಗಂಡು, ಹೆಣ್ಣು ಮತ್ತು ಮರಿಗಳು ಹಾಲಿನ ಉತ್ಪಾದನೆ, ಮಾರಾಟವಾಗುವ ಹಾಲಿನ ಪರಿಮಾಣ ಬೆಣ್ಣೆ ಮತ್ತು ತುಪ್ಪದ ಉತ್ಪಾದನೆ ಕೋಳಿಮೊಟ್ಟೆ ಮತ್ತು ಬಾತಿನ ತತ್ತಿಗಳ ಉತ್ಪಾದನೆ ಉಣ್ಣೆ ಮತ್ತು ತುಪ್ಪಳ ರೈತವಾರಿ ಪ್ರದೇಶಗಳಲ್ಲಿ ಹಳ್ಳಿಯ ರೆವೆನ್ಯೂ ನೌಕರರು ಅಂದರೆ ಪಟವಾರಿ ಅಥವಾ ಶಾನುಬೋಗರು ಎಣಿಕೆ ಮಾಡುವರು. ಖಾಯಂ ಗುತ್ತಿಗೆ ಪ್ರದೇಶದಲ್ಲಿ ಪೋಲೀಸ್ ಪೇದೆಗಳು ಅಥವಾ ಚೌಕಿದಾರರು ಈ ಎಣಿಕೆ ಮಾಡುವರು. ಕೆಲವೆಡೆಗಳಲ್ಲಿ ಯಾರಿಂದಲೂ ಕ್ರಮವಾಗಿ ಎಣಿಕೆಯಾಗದೆ ಕೇವಲ ಅಂದಾಜಿನ ಮೇಲೆ ಅಂಕೆಗಳನ್ನು ಒದಗಿಸಲಾಗುವುದು. ಇದರಿಂದ ಅಂಕೆ ಅಂಶಗಳಲ್ಲಿ ತಪ್ಪು ಏರ್ಪಡುವುದು ಸಹಜ. ಆದರೆ ಆ ತಪ್ಪುಗಳು ಯಾದೃಚ್ಛಿಕವೆಂದೂ ಧನ ಮತ್ತು ಋಣ ತಪ್ಪುಗಳು ಒಂದನ್ನೊಂದು ಅಳಿಸುವುವೆಂದೂ ಭಾವಿಸಬಹುದು. ಎಣಿಕೆಯಲ್ಲೂ ವರ್ಗೀಕರಣದಲ್ಲೂ ರಾಜ್ಯಗಳಲ್ಲೆಲ್ಲ ಏಕರೀತಿಯ ವಿಧಾನವಿಲ್ಲದಿರುವುದು ಒಂದು ಕೊರತೆ. ಇನ್ನೊಂದು, ಎಲ್ಲ ರಾಜ್ಯಗಳಲ್ಲಿಯೂ ಜಾನುವಾರು ಗಣತಿಯಕಾಲ ಒಂದೇ ಆಗಿಲ್ಲದಿರುವುದು. ಉದಾಹರಣೆಗೆ, ಇತರ ರಾಜ್ಯಗಳಲ್ಲಿ 1961ರ ಇಸವಿಯ ಏಪ್ರಿಲ್ ತಿಂಗಳಲ್ಲಿ ಎಣಿಕೆ ನಡೆಯಿತು. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದದ್ದು ಅದೇ ವರ್ಷದ ನವೆಂಬರ್ ತಿಂಗಳಲ್ಲಿ. ಕೆಲವು ವೇಳೆ ದನಕರುಗಳ ಜಾತ್ರೆಯ ಮಧ್ಯೆ ಜನಗಣತಿಯನ್ನು ನಡೆಸುವುದು ಉಂಟು. ಆಗ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅಥವಾ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ದನಕರುಗಳು ವಲಸೆ ಹೋಗುವುವು. ಎಣಿಕೆಯಲ್ಲಿ ಸಮಾನತೆಯನ್ನು ತರುವುದರ ಜೊತೆಗೆ ಎಲ್ಲ ರಾಜ್ಯಗಳಲ್ಲೂ ಏಕಕಾಲದಲ್ಲಿ ಗಣತಿಯನ್ನು ನಡೆಸುವುದರಿಂದ ಈ ನ್ಯೂನತೆಗಳನ್ನು ಪರಿಹರಿಸಬಹುದು. ಸರ್ಕಾರಿ ಆಕಳುವಾಡಿಗಳಿಂದ (ಕ್ಯಾಟಲ್ ಫಾಮ್ರ್ಸ್) ಸಾರ್ವಜನಿಕರಿಗೆ ನೀಡಲಾದ ಆಕಳು, ಹೋರಿ, ಎಮ್ಮೆ, ಕೋಣ, ಕರುಗಳ ಸಂಖ್ಯೆಗಳನ್ನು ಸಹ ಸಂಗ್ರಹಿಸಲಾಗುವುದು.
ಆಡಳಿತ ಕ್ರಮದಲ್ಲಿ ಒದಗಿ ಬರುವ ಇನ್ನೂ ಹಲವಾರು ಮಾಹಿತಿಗಳನ್ನು ಕೂಡ ಸಂಗ್ರಹಿಸಲಾಗುವುದು. ಪಶುವೈದ್ಯಶಾಲೆಗಳು ಮತ್ತು ಚಿಕಿತ್ಸಾಲಯಗಳಿಗೆ ಸಂಬಂಧಪಟ್ಟ ಅಂಕೆಗಳು, ರೋಗ ತಗಲಿದ ದನಕರುಗಳು, ಚಿಕಿತ್ಸೆ ಪಡೆದ ಪ್ರಾಣಿಗಳ ಸಂಖ್ಯೆ, ಸರ್ಕಾರಿ ಪಶುವೈದ್ಯ ಶಾಲೆಗಳಲ್ಲಿ ಹಿಡಮಾಡಲಾದ ಹೋರಿಗಳು ಮತ್ತು ಕೋಣಗಳು, ಅಂಟುರೋಗಗಳಿಂದ ಮೃತಪಟ್ಟ ದನಕರುಗಳು, ಎಮ್ಮೆಗಳು, ಕುದುರೆಗಳು, ಕುರಿಗಳು, ಮೇಕೆಗಳು, ನಾಯಿಗಳು, ಕೋಳಿಗಳು ಹೀಗೆ ಪ್ರಾಣಿಗಳ ಸಾವುನೋವುಗಳ ಅಂಕೆ ಅಂಶಗಳನ್ನು ಸಂಗ್ರಹಿಸುತ್ತಾರೆ. ಪಶುಸಂಗೋಪನ ಇಲಾಖೆಯ ಇನ್ಸ್ಪೆಕ್ಟರುಗಳೂ ಇತರ ಸಿಬ್ಬಂದಿಗಳೂ ಹಳ್ಳಿಗಳಿಗೆ ಭೇಟಿಯಿತ್ತು ಚಿಕಿತ್ಸೆ ಮಾಡಿದ ಜಾನುವಾರುಗಳ ಸಂಖ್ಯೆ ಮತ್ತು ಹಿಡಮಾಡಿದ ಹೋರಿಕೋಣಗಳ ಅಂಕೆಅಂಶಗಳನ್ನೂ ಬೇರೆ ಬೇರೆಯಾಗಿ ಸಂಗ್ರಹಿಸುತ್ತಾರೆ. ಮುಂದೆ ಪಶುಸಂಗೋಪನ ಇಲಾಖೆಯವರು ಈ ಅಂಕೆಅಂಶಗಳನ್ನು ಕ್ರೋಡೀಕರಿಸಿ ಪ್ರಚುರಪಡಿಸುವರು. ಇವನ್ನೇ ಕೇಂದ್ರಿಯ ಸಾಂಖ್ಯಕೀ ಸಂಸ್ಥೆಯವರೂ ರಾಜ್ಯದ ಆರ್ಥಿಕ ಮತ್ತು ಸಾಂಖ್ಯಕೀ ಸಂಸ್ಥೆಯವರೂ ತಮ್ಮ ತಮ್ಮ ಸ್ಟ್ಯಾಟಿಸ್ಟಿಕಲ್ ಅಬ್‍ಸ್ಟ್ರಾಕ್ಟಿನಲ್ಲಿ (ಸಂಖ್ಯಾಕಲನೀಯ ಗೋಷ್ವಾರೆ) ಪ್ರಕಟಿಸುವರು. ಕರ್ನಾಟಕ ಆರ್ಥಿಕ ಮತ್ತು ಸಾಂಖ್ಯಕಿ ಬ್ಯೂರೋ ಸಾದರಪಡಿಸಿರುವ 1968ನೆಯ ಕರ್ನಾಟಕ ಸಾಂಖ್ಯಕಿಯ ರೂಪರೇಖೆ ಎಂಬ ಪ್ರಕಟಣೆಯಿಂದ ಉದಾಹರಣೆಗೆ ಕೆಲವು ಅಂಶಗಳನ್ನು ಇಲ್ಲಿ ಎತ್ತಿ ಬರೆಯಲಾಗಿದೆ. ಜಾನುವಾರು ಮತ್ತು ಕೋಳಿ ವಗೈರೆ ಗಣತಿಯ ಅಂಕೆಅಂಶಗಳು ಬಾಬುಗಳು ಜಾನುವಾರು 1956 1961 1966
ಸಂಖ್ಯೆಗಳು ಸಾವಿರಗಳಲ್ಲಿ
ದನಗಳು 3 ವರ್ಷಕ್ಕೆ ಮೇಲ್ಪಟ್ಟ ಹೋರಿಗಳು, ಎತ್ತುಗಳು 3 ವರ್ಷಕ್ಕೆ ಮೇಲ್ಪಟ್ಟ ಆಕಳು ಕರುಗಳು
ಮೊತ್ತ
3420 3209 2337
3729 3513 2431
3666 3572 2447
8966
9673
9685
ಎಮ್ಮೆಗಳು 3 ವರ್ಷಕ್ಕೆ ಮೇಲ್ಪಟ್ಟ ಕೋಣಗಳು 3 ವರ್ಷಕ್ಕೆ ಮೇಲ್ಪಟ್ಟ ಎಮ್ಮೆಗಳು ಎಮ್ಮೆಕರುಗಳು
ಮೊತ್ತ
281 1459 929
330 1682 1014
289 1707 950
2669
3026
2946
ಕುರಿಗಳು ಆಡುಗಳು ಕುದುರೆಗಳು ಮತ್ತು ತಟ್ಟುಗಳು ಇತರ ಜಾನುವಾರುಗಳು ಜಾನುವಾರು ಒಟ್ಟು ಜುಮ್ಲಾ ಕೋಳಿಬಾತುಗಳು 4059 2584 44 244 18568 7668 4765 2894 41 269 20668 8841 4748 2784 65 257 20485 8277
(ಎಂ.ಪಿ.ಜೆ.)