ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೆಕ್ ಗಣರಾಜ್ಯ
ಜೆಟ್ ಎಂಜಿನ್ - ತರಲದ ಧಾರೆಯ ನಿಷ್ಕಾಸದ ಪರಿಣಾಮವಾಗಿ ಬಲವನ್ನು ಉತ್ಪಾದಿಸುವ ಯಂತ್ರ. ಇದೊಂದು ಅಂತರ್ದಹನ ಎಂಜಿನ್ ಆದರೆ ಇತರ ಎಲ್ಲ ಅಂತರ್ದಹನ ಎಂಜಿನ್ನುಗಳಿಗಿಂತಲೂ ಹಗುರವಾಗಿದೆ. ಅತಿ ಎತ್ತರ ಹಾಗೂ ವೇಗಗಳಲ್ಲಿ ಹೆಚ್ಚು ಕಾರ್ಯ ಮಾಡಬಲ್ಲುದು. ಇದರಲ್ಲಿನ ಚಲನಶೀಲ ಭಾಗಗಳು ಕಡಿಮೆ ಮತ್ತು ಇದರಲ್ಲಿ ಉಪಯೋಗಿಸುವ ಇಂಧನದ ಬೆಲೆ ಕಡಿಮೆ.
ಅಲ್ಲದೆ ಈ ಯಂತ್ರಕ್ಕೆ ಹೆಚ್ಚಿನ ದುರಸ್ತಿ ಅಗತ್ಯವಿಲ್ಲ. ಹೀಗಾಗಿ ಜೆಟ್ ಎಂಜಿನ್ನಿನ ಉಪಜ್ಞೆ ಆಧುನಿಕ ಸಾರಿಗೆಯಲ್ಲಿ ಕ್ರಾಂತಿಕಾರೀ ಪರಿಣಾಮಗಳನ್ನು ಉಂಟು ಮಾಡಿರುವುದು ಆಶ್ಚರ್ಯವಲ್ಲ. ವರ್ತಮಾನ ಕಾಲವನ್ನು ಜೆಟ್ ಯುಗವೆಂದೇ ಕರೆಯುವುದುಂಟು.
ಮೊತ್ತಮೊದಲಿಗೆ ಟರ್ಬೋ ಜೆಟ್ ಎಂಜಿನ್ ವಿಮಾನವನ್ನು ಜರ್ಮನಿಯ ಹ್ಸಾನ್ಸ್ ಫಾನ್ ಓಹೇನ್ ಎಂಬಾತ 1939ರ ಆಗಸ್ಟ್ 27ರಲ್ಲಿ ಹಾರಿಸಿದ. ಫ್ರಾಂಕ್ಸ್ ವ್ಹಿಟಲ್ 1941ರನೆಯ ಮೇ 15ರಂದು ಟರ್ಬೋ ಜೆಟ್ ಎಂಜಿನನ್ನು ಉಪಯೋಗಿಸಿ ವಿಮಾನವನ್ನು ಇಂಗ್ಲೆಂಡಿನಲ್ಲಿ ಹಾರಿಸಿದ. 1946ರಲ್ಲಿ ಅನಿಲ ತಿರುಬಾನಿ ಎಂಜಿನ್ನನ್ನು ವಿಮಾನಗಳಲ್ಲಿ ಉಪಯೋಗಿಸಲು ನಿರ್ಧರಿಸಿದರು.
1952ರಲ್ಲಿ ರೋಲ್ಸ್ ರಾಯ್ಸ್ ಅನಿಲ ತಿರುಬಾನಿ ಎಂಜಿನ್ನಿನಿಂದ ಚಾಲಿತವಾದ ನೋದಕದೊಂದಿಗೆ (ಪ್ರೊಪೆಲ್ಲರ್). ವಿಕರ್ಸ್ ವೈಕೌಂರ್ಟ ವಿಮಾನ ನಿರ್ಮಿತವಾಗಿ ಯಶಸ್ವಿಯಾಯಿತು. ಮುಂದೆ ಟರ್ಬೋ ಜೆಟ್ ಎಂಜಿನ್ನುಗಳನ್ನು ಡಿ. ಹೆವಿಲ್ಯಾಂಡ್ ಕಾಮೆಟ್ ವಿಮಾನಕ್ಕೆ ಉಪಯೋಗಿಸಲಾಯಿತು. 1955 ಜೆಟ್ ಎಂಜಿನ್ನುಗಳನ್ನು ಉಪಯೋಗಿಸಿ ಬೋಯಿಂಗ್ 707, ಡಗ್ಲಾಸ್, ಡಿ.ಸಿ. 8, ಫ್ರಾನ್ಸಿನ ಕ್ಯಾರ್‍ವಲೆ ವಿಮಾನಗಳನ್ನು ನಿರ್ಮಿಸಲಾಯಿತು. ಎಫ್. 86 ಸೇಬರ್ ಜೆಟ್ ಹಾಗೂ ಮಿಗ್ ವಿಮಾನ ಜೆಟ್ ಎಂಜಿನ್ನಗಳಿಂದ ಕೂಡಿವೆ. ರಷ್ಯದ ಎ.ಎನ್. 22 ವಿಮಾನದಲ್ಲಿ 15,000 ಪೌಂಡ್ ನೂಕುಬಲವುಳ್ಳ 4 ಟರ್ಬೋಪ್ರಾಪ್ ಎಂಜಿನ್ನುಗಳಿವೆ. ರಷ್ಯದ ಟರ್ಬೋಪ್ರಾಪ್ ಬಾಂಬರ್ ಟಿ.ಯು. ಅಮೆರಿಕದ ಬಿ 52 ಮುಂತಾದ ಅನೇಕ ಬಾಂಬರ್ ವಿಮಾನಗಳು ಮತ್ತು ಫೈಟರ್ ವಿಮಾನಗಳು ಜೆಟ್ ಎಂಜಿನ್ನಿನ ಬಳಕೆಯಿಂದ ಅತ್ಯಾಧುನಿಕವಾಗಿವೆ. ಹೆಲಿಕ್ಯಾಪ್ಟರುಗಳು ಜೆಟ್ ಎಂಜಿನ್ನುಗಳನ್ನು ರೈಲುಬಂಡಿಗಳಲ್ಲಿ ಬಳಸಲು ಪ್ರಯೋಗಗಳು ನಡೆಯುತ್ತಿವೆ. ಅಮೆರಿಕದಲ್ಲಿ ನ್ಯೂಯಾರ್ಕ್ ಮತ್ತು ಬಾಸ್ಟನ್ ನಗರ ನಡುವೆ ಓಡುತ್ತಿರುವ ಟರ್ಬೋ ರೈಲುಬಂಡಿ ಗಂಟೆಗೆ ಸರಾಸರಿ 270 ಞm ವೇಗದಲ್ಲಿ ಹೋಗುತ್ತದೆ.
ತತ್ತ್ವ : ಟರ್ಬೋ ಜೆಟ್ ಎಂಜಿನ್ನು ಬ್ರೇಟನ್ ಚಕ್ರದಲ್ಲಿ ಕೆಲಸ ಮಾಡುವ ಅಂತರ್ದಹನ ಎಂಜಿನ್. ಇದರ ಮುಂದಿರುವ ಕವಾಟದಲ್ಲಿ ನುಗ್ಗಿದ ವಾಯುವು ಸಂಕೋಚಕದಲ್ಲಿ ಸಂಕೋಚಿಸಲ್ಪಡುತ್ತದೆ.(1,2ಚಿತ್ರದಲ್ಲಿ) ಇಂಧನವನ್ನು ದಹನಕವಾಟದಲ್ಲಿ ಉರಿಸಿ ಈ ವಾಯುವಿಗೆ ಉಷ್ಣವನ್ನು ಸೇರಿಸಲಾಗುತ್ತದೆ (2, 3). ಅಧಿಕ ಸಂಮರ್ಧ ಹಾಗೂ ಉಷ್ಣತೆಯ ವಾಯು ಮತ್ತು ದಹನಕ್ರಿಯೆಯಿಂದ ಉತ್ಪನ್ನವಾದ ಅನಿಲಗಳ ಮಿಶ್ರಣ ತಿರುಬಾನಿಯಲ್ಲಿ ವಿಕಸಿಸಿ ಇದು ತಿರುಬಾನಿ ಹಾಗೂ ಅದರ ದಂಡಕ್ಕೆ ಜೋಡಿಸಿದ ಸಂಕೋಚವನ್ನು (ಕಂಪ್ರೆಸರ್) ತಿರುಗಿಸುತ್ತದೆ. (3, 4). ಉತ್ತರ ದಾಹಕದಲ್ಲಿ (ಆಫ್ಟರ್ ಬರ್ನರ್) ಇಂಧನವನ್ನು ಉರಿಸಿ ತಿರುಬಾನಿಯಿಂದ ಹೊರಗೆ ಬರುವ ಅನಿಲಕ್ಕೆ ಉಷ್ಣವನ್ನು ಸೇರಿಸಲಾಗುತ್ತದೆ. ( 4, 5). ವಾಯು ಮತ್ತು ಬಿಸಿದಾಹಕ ಅನಿಲಗಳ ಮಿಶ್ರಣ ಸೂಸುಮೂತಿಯಲ್ಲಿ (ನಾಜಲ್) ವಿಕಸಿಸಿ ಅಧಿಕ ಸಂಮರ್ದ ಹಾಗೂ ವೇಗಯುತ ಜೆಟ್ ಆಗಿ ಪರಿವರ್ತನೆ ಹೊಂದಿ ಸೂಸುಮೂತಿಯಿಂದ ಹೊರಬರುತ್ತದೆ (5, 6). ಇದರಿಂದ ಬೇಕಾದ ನೂಕುಬಲ ಉತ್ಪತ್ತಿಯಗುತ್ತದೆ. ಇದು ಜೆಟ್ ಇಂಜಿನ್ ಕೆಲಸ ಮಾಡುವ ಒಂದು ಚಕ್ರ.
ಟರ್ಬೋ ಜೆಟ್ ಇಂಜಿನ್ : ವಾಯುವಿನೊಂದಿಗೆ ಮಿಶ್ರಮಾಡಲ್ಪಟ್ಟ ಸೀಮೇಎಣ್ಣೆ ಮೊದಲಾದ ಇಂಧನ ಎಂಜಿನ್ನಿನ ದಹನ ಕಪಾಟಿನಲ್ಲಿ ಉರಿಯುತ್ತದೆ. ಆಗ ವಿಕಾಸವಾದ ಅನಿಲಗಳು ಹೊರದೂಡಲ್ಪಟ್ಟು ಹೊರ ಹಾಯುವಾಗ ಅವು ತಿರುಬಾನಿ ಹಲಗೆಗಳಿಗೆ ತಗಲಿ ತಿರುಬಾನಿ ತಿರುಗುತ್ತದೆ. ಸಂಕೋಚದ ರೋಟಾರನ್ನು (ತಿರುಗುವ ಭಾಗ) ತಿರುಬಾನಿ ತಿರುಗಿಸಿ ಅದರ ಅಲುಗುಗಳಿಂದ ಎಂಜಿನ್ನಿನ ಒಳಗೆ ಬರುತ್ತಿರುವ ವಾಯುವನ್ನು ಸಂಕೋಚಿಸುತ್ತದೆ. (ಚಿತ್ರ 2) ಹೊರಗಿನಿಂದ ಎಂಜಿನ್ನಿನ ಒಳಕ್ಕೆ ಹೊಕ್ಕ ವಾಯು ಸುಮಾರು ಒಂದಕ್ಕೆ ಹತ್ತರಷ್ಟು ಸಂಕೋಚಿಸಿಲ್ಪಟ್ಟು ಇಂಧನದ ಕಪಾಟಿನೊಳಕ್ಕೆ ನುಗ್ಗಿ ಇಂಧನದ ಜೊತೆ ಮಿಶ್ರವಾಗುತ್ತದೆ. ಈ ಮಿಶ್ರಣ ಹೊತ್ತಿ ಉರಿಯುವುದರಿಂದ ವಾಯು ಮತ್ತು ದಾಹಕ ಅನಿಲಗಳ ಉಷ್ಣತೆಯ ಮಟ್ಟ ಸುಮಾರು 6500-10900 ಅ ವರೆಗೆ ಹೆಚ್ಚುತ್ತದೆ. ಅಧಿಕ ಸಂಮರ್ಧ ಹಾಗೂ ಉಷ್ಣತಾಯುಕ್ತ ಮಿಶ್ರಣ ಅನಿಲ ತಿರುಬಾನಿಯ ಮೂಲಕ ವಿಕಸಿಸಿ ತಿರುಬಾನಿ ತಿರುಗುವಂತೆ ಮಾಡುತ್ತದೆ.
ಇದರ ಮೂಲಕ ಹಾದ ಮಿಶ್ರಣ ಇನ್ನೂ ಅಧಿಕ ಸಂಮರ್ಧವುಳ್ಳದಾಗಿದ್ದು ಇದು ನಿಷ್ಕಾಸನಾಳದಲ್ಲಿರುವ ಸೂಸುಮೂತಿಯಲ್ಲಿ ಹಾದು ಹೆಚ್ಚು ವೇಗದ ಜೆಟ್ ಆಗಿ ಪರಿಣಮಿಸುತ್ತದೆ.
ವಾಯುವಿನ ಪರಿಮಾಣ ಮತ್ತು ವೇಗದ ಪರಿಮಿತಿಯನ್ನು ಅನುಸರಿಸಿ ಎಂಜಿನ್ನಿನ ನೂಕುಬಲ ಉತ್ಪತ್ತಿಯಾಗುತ್ತದೆ. ಇದು ವಿಮಾನವನನು ಮುಂದಕ್ಕೆ ತಳ್ಳುವುದು. ವಿಮಾನದ ವೇಗ ಹೆಚ್ಚಿದಹಾಗೆಲ್ಲ ಎಂಜಿನ್ನಿನ ನೂಕುಬಲ ಹೆಚ್ಚುತ್ತದೆ. ಕಾರಣ ಹೆಚ್ಚು ವೇಗದಲ್ಲಿ ಹಾರುವಾಗ ಎಂಜಿನ್ನಿನ ಒಳನುಗಗುವ ವಾಯುವಿನ ಪರಿಮಾಣ ಹೆಚ್ಚುತ್ತದೆ. ಇದರಿಂದ ಹೆಚ್ಚು ಇಂಧನ ಉರಿಯಲು ಸಾಧ್ಯವಾಗಿ ಹೆಚ್ಚು ಸಾಮಾಥ್ರ್ಯ ಉತ್ಪತ್ತಿಯಾಗುತ್ತದೆ. ಹೊರಬೀಳುತ್ತಿರುವ ನಿಷ್ಕಾಸ ಅನಿಲಗಳಲ್ಲಿ ಇನ್ನೂ ಸ್ವಲ್ಪ ಆಕ್ಸಿಜನ್ ಉಪಯೋಗವಾಗದೆ ಉಳಿಯುವುದರಿಂದ ಕೆಲವು ಎಂಜಿನ್ನುಗಳಲ್ಲಿ ಇದನ್ನು ಪೋಲು ಮಾಡದಂತೆ ಹೊರಹೋಗುತ್ತಿರುವ ಅನಿಲಗಳ ಹಾದಿಯಲ್ಲಿ ಉತ್ತರದಾಹಕ ಎಂಬ ಇನ್ನೊಂದು ಕೋಣೆಯನ್ನು ಜೋಡಿಸಿ ಇನ್ನೂ ಸ್ವಲ್ಪ ಇಂಧನವನ್ನು ಸಿಂಪಡಿಸಿ ಉರಿಸಲಾಗುತ್ತದೆ. ಇದು ಎಂಜಿನ್ನಿನ ಇನ್ನಷ್ಟು ನೂಕುಬಲವನ್ನು ಒದಗಿಸುವುದು. ಎಂಜಿನ್ನಿನ ಹಿಂಭಾಗದಿಂದ ಉರಿದ ಅನಿಲಗಳು ನಿರ್ಗಮಿಸಿದಾಗ ಉಂಟಾಗುವ ಪ್ರತಿಕ್ರಿಯೆ ವಿಮಾನವನ್ನು ಮುಂದಕ್ಕೆ ತಳ್ಳುತ್ತದೆ. ಟಿರ್ಬೋಪ್ರಾಪ್ ಎಂಜಿನ್ : ಟಿರ್ಬೋಪ್ರಾಪ್ ಎಂಜಿನ್ನಿನಲ್ಲಿ ತಿರುಬಾನಿ ದಂಡಕ್ಕೆ ಗಿಯರಿನ ಮೂಲಕ ನೋದಕವನ್ನು ಜೋಡಿಸಲಾಗಿದೆ. (ಚಿತ್ರ 4,5) ಅಧಿಕ ಸಂಮರ್ದ ಹಾಗೂ ಉಷ್ಣತೆಯ ವಾಯು ಮತ್ತು ದಾಹಕ ಅನಿಲಗಳ ಮಿಶ್ರಣ ತಿರುಬಾನಿಯಲ್ಲಿ ಪೂರ್ಣ ವ್ಯಾಕೋಚಿಸುವುದರಿಂದ ತಿರುಬಾನಿಯಲ್ಲಿ ಪೂರ್ಣ ಬಲ ಉತ್ಪತ್ತಿಯಾಗುತ್ತದೆ. ನೋದಕವನ್ನು ತಿರುಗಿಸಲು ಈ ಬಲವನ್ನು ಉಪಯೋಗಿಸಲಾಗುತ್ತದೆ. ನೋದಕ ತಿರುಗಿದಾಗ ನೂಕುಬಲ ಉತ್ಪತ್ತಿಯಾಗುತ್ತದೆ. ಟಿರ್ಬೋಪ್ರಾಪ್ ಎಂಜಿನ್ ಇರುವ ವಿಮಾನ ಗಂಟೆಗೆ ಸುಮಾರು 880 ಞm ವೇಗದ ವರೆಗೂ ಮತ್ತು 12,000 ಮೀಟರ್ ಎತ್ತರದವರೆಗೂ ಹೋಗಬಲ್ಲುದು.
ಟಿರ್ಬೋಫ್ಯಾನ್ ಜೆಟ್ ಎಂಜಿನ್ : ಇದು ಅತ್ಯಂತ ದಕ್ಷತೆಯ ಎಂಜಿನ್. ಇದರಲ್ಲಿ ಎರಡು ತಿರುಬಾನಿಗಳಿವೆ. ಎರಡನೆಯದು ಎಂಜಿನ್ನಿನ ಮುಂಭಾಗದಲ್ಲಿರುವ ಬೀಸಣಿಗೆಯನ್ನು ತಿರುಗಿಸುತ್ತದೆ. ಇದರಿಂದ ಸಂಕೋಚಕದೊಳಗೆ ಹೆಚ್ಚು ವಾಯು ತಳ್ಳಲ್ಪಡುತ್ತದೆ. ಹೀಗೆ ತಳ್ಳಲ್ಪಟ್ಟ (ಸಂಕೋಚಿಸಲ್ಪಟ್ಟ) ವಾಯುವಿನ ಒಂದು ಭಾಗ ಎಂಜಿನ್ನಿನ ಹೊರಕೊಳವೆಯ ಮೂಲಕ ಹಾದು ನಿಷ್ಕಾಸ ಸೂಸುಮೂತಿಯ ಮೂಲಕ ಹೊರಬೀಳುತ್ತದೆ. ಇದರಿಂದ ಎಂಜಿನ್ನಿನ ನೂಕುಬಲ ಹೆಚ್ಚುತ್ತದೆ. ವಾಯುವಿನ ಉಳಿದ ಭಾಗ ಅಧಿಕ ಒತ್ತಡದ ಸಂಕೋಚದ ಮೂಲಕ ಹಾದು (ಚಿತ್ರ 6) ಸಂಕೋಚಿಸಲ್ಪಟ್ಟು ದಹನ ಕಪಾಟಿನೊಳಗೆ ನುಗ್ಗಿ ಇಂಧನದ ಜೊತೆಗೂಡಿ ಉರಿಯುತ್ತದೆ. ಹೀಗೆ ಅಧಿಕ ಸಂಮರ್ದ ಹಾಗೂ ಉಷ್ಣತೆಯಿರುವ ವಾಯು ಮತ್ತು ದಾಹಕ ಅನಿಲಗಳ ಮಿಶ್ರಣ ತಿರುಬಾನಿಗಳ ಮೂಲಕ ಹಾದು ನಿಷ್ಕಾಸದ ಸೂಸುಮೂತಿಯಿಂದ ಹೊರಬೀಳುತ್ತದೆ. ಈ ಪ್ರಕಾರ ಟಿರ್ಬೋಜೆಟ್ ಎಂಜಿನ್ನಿನಲ್ಲಿ ಬೀಸಣಿಗೆ ಜೋಡಣೆಯಿಂದ ಎಂಜಿನ್ನಿನ ಒಳಹೋಗುವ ವಾಯುವಿನ ಪರಿಮಾಣ ಹೆಚ್ಚಿ, ಹೆಚ್ಚು ನೂಕುಬಲ ಉತ್ಪತ್ತಿಯಾಗುತ್ತದೆ. ಕೆಲವು ಎಂಜಿನ್ನುಗಳಿಗೆ ಬೀಸಣಿಗೆಗಳು ಎಂಜಿನ್ನಿನ ಮುಂಭಾಗದಲ್ಲಿ ಇದ್ದರೆ ಕೆಲವು ಎಂಜಿನ್ನುಗಳಿಗೆ ಬೀಸಣಿಗೆಗಳು ಎಂಜಿನ್ನಿನ ಹಿಂಭಾಗದಲ್ಲಿರುತ್ತವೆ. ಇವು ಕಡಿಮೆ ಇಂಧನ ಬಳಸುತ್ತವೆ. ಅಡ್ಡಹಾದಿಯ ಮೂಲಕ ಹಾದು ಹೋಗುವ ವಾಯುವು ಸೂಸುಮೂತಿಯಿಂದ ಹೊರಬರುವ ಕಾದ ಅನಿಲಗಳ ಜೊತೆಗೆ ಸೇರುತ್ತದೆ. ಹಾಗೂ ಅವುಗಳ ವೇಗವನ್ನು ತಗ್ಗಿಸುವುದು. ಹೀಗೆ ಬೇರೆಬೇರೆ ವೇಗದ ಎರಡು ಅನಿಲಗಳ ಮಿಶ್ರಣದಿಂದ ಜೆಟ್ ನಿಧಾನವಾಗಿ ಹರಿಯುವುದು. ಇದರಿಂದ ಶಬ್ದವೂ ಕಡಿಮೆ, ಅದಿರುವುದೂ ಕಡಿಮೆ.
ರ್ಯಾಮ್ ಜೆಟ್ : ಸರಳ ರೀತಿಯ ಜೆಟೆಂಜಿನ್ ಜ್ವಾಲಕ ಹಾಗೂ ಜೆಟ್ ಸೂಸುಮೂತಿಗಳಿವೆ. ಎಂಜಿನ್ ಮುಂದೆ ಹೋದಂತೆ ವಾಯು ವಾಯು ಅತ್ಯಧಿಕ ವೇಗದಲ್ಲಿ ಒಳಕ್ಕೆ ಒತ್ತಲ್ಪಟ್ಟು ಸಾಕಷ್ಟು ಸಂಕೋಚಿಸುವುದರಿಂದ ಪ್ರತ್ಯೇಕ ಸಂಕೋಚಕ ಬೇಕಿಲ್ಲ. ಎಂಜಿನ್ನಿನ ತೂಕ ಸಹ ಕಡಿಮೆ. ಎಂಜಿನ್ ನಡೆಯಬೇಕಾದರೆ ವಾಯುವನ್ನು ಅತ್ಯಧಿಕ ವೇಗದಲ್ಲಿ ಒಳಕ್ಕೆ ತಳ್ಳುವುದು ಆವಶ್ಯಕ. ಎಂಜಿನ್ನಿನ ಮುಂಭಾಗದಲ್ಲಿರುವ ಅತಿಶಬ್ದ ಪ್ರಸರಕ (ಸೂಪರ್ ಸಾನಿಕ್ ಡಿಫ್ಯೂಸರ್) ಎಂಬ ಭಾಗ ವಾಯುವನ್ನು ಒಳಕ್ಕೆ ತಳ್ಳುತ್ತದೆ. ವಿಮಾನದ ವೇಗದಿಂದ ಸಂಕೋಚಿಸಿದ ವಾಯು ದಹನಕಪಾಟುಗಳನ್ನು ಸೇರಿ ಅಲ್ಲಿನ ಇಂಧನದೊಂದಿಗೆ ಮಿಶ್ರವಾಗಿ ಉರಿಯುತ್ತದೆ. ವಿಕಾಸವಾದ ಅನಿಲಗಳು ನಿಷ್ಕಾಸ ಕೊಳವೆಯ ಮೂಲಕ ಹೊರತಳ್ಳಲ್ಪಟ್ಟು ನೂಕುಬಲ ಉತ್ಪತ್ತಿಯಾಗುತ್ತದೆ. ವಿಮಾನ ನಿಂತಿರುವಾಗ ರ್ಯಾಮ್ ಜೆಟ್ ಎಂಜಿನ್ನು ನೂಕುಬಲವನ್ನು ಉತ್ಪತ್ತಿ ಮಾಡುವುದಿಲ್ಲ. ವಿಮಾನ ಅತಿವೇಗದಲ್ಲಿ ಹೋಗುವಾಗ ಮಾತ್ರ ವಾಯು ಎಂಜಿನ್ನಿನಲ್ಲಿ ಸಂಕೋಚಿಸಲ್ಪಟ್ಟು ಉಳಿದ ಕ್ರಿಯೆಗಳು ನಡೆಯುತ್ತವೆ. ಆದ್ದರಿಂದ ಈ ಎಂಜಿನ್ನುಗಳುಳ್ಳ ವಿಮಾನಗಳಲ್ಲಿ, ವಿಮಾನವನ್ನು ಹಾರಿಸಿ, ಹಾರುವ ವೇಗವನ್ನು ತಲುಪುವವರೆಗೆ ನಡೆಸಲು ಸಹಾಯಕವಾಗಿ ರಾಕೆಟ್ ಎಂಜಿನ್ನುಗಳನ್ನು ಬಳಸಬೇಕಾಗುತ್ತದೆ.
ರಾಕೆಟ್ ಎಂಜಿನ್ : ಇದು ವಾಯು ಇಲ್ಲದಿದ್ದರೂ ಅತಿ ಹೆಚ್ಚು ವೇಗದಿಂದ ಹೋಗುವ ಎಂಜಿನ್. ಸ್ವಂತ ಆಕ್ಸಿಜನ್ ಈ ಎಂಜಿನ್ನಿನೊಳಗೆ ಇರುತ್ತದೆ.
ಲೋಹಗಳು ; ಈ ಎಂಜಿನ್ನಿನೊಳಗೆ ಉಂಟಾಗುವ ಅತ್ಯಧಿಕ ಉಷ್ಣತೆಯಿಂದ ಯಾವ ಲೋಹವಾದರೂ ಕರಗುತ್ತದೆ. ತಿರುಬಾನಿ ಹಲಗೆಗಳಿಗೆ ಹೊಂದಿಕೆಯಾಗುವ ಲೋಹ ದೊರಕುವುದು ಕಷ್ಟ. ಅತ್ಯಧಿಕ ಉಷ್ಣತೆ, ಕ್ಷಿಪ್ರಭ್ರಮಣಗಳನ್ನು ಎದುರಿಸುವ ಕೆಲವು ಪ್ರಭಾವಶಾಲಿ ಮಿಶ್ರಲೋಹಗಳನ್ನು ವಿಜ್ಞಾನಿಗಳು ಉಪಜ್ಞಿಸಿ ಈಗ ಉಪಯೋಗಿಸುತ್ತಿದ್ದಾರೆ. ಭಾರತದಲ್ಲಿ ತಯಾರಿಕೆ : ಭಾರತದಲ್ಲಿ ತಯಾರಿಸಲಾಗುತ್ತಿರುವ ವ್ಯಾಂಪೈರ್ ಫೈಟರ್ ವಿಮಾನ, ನ್ಯಾಟ್ ವಿಮಾನ, ಎಚ್.ಎಫ್. 24 ವಿಮಾನಗಳು ಜೆಟ್ ಎಂಜಿನ್ನುಗಳಿಂದ ಕೂಡಿವೆ. ಭಾರತದ ಎಚ್.ಎ.ಎಲ್. ಕಾರ್ಖಾನೆಯಲ್ಲಿ ತಯಾರಿಸಲಾಗುತ್ತಿರುವ ಆಲೋತ್ ಹೆಲಿಕಾಪ್ಟರಿಗೆ ಟರ್ಬೋಜೆಟ್ ಆರ್‍ಕೋಸ್ತ್ ಎಂಜಿನನ್ನು ಎಚ್.ಎ.ಎಲ್.ನ ಎಂಜಿನ್ ವಿಭಾಗದಲ್ಲಿ ತಯಾರಿಸಲಾಗುತ್ತಿದೆ. 1956ರಲ್ಲಿ ಆರ್ ಫಿಯಸ್ ಟಿರ್ಬೋಜೆಟ್ ಎಂಜಿನನ್ನು ಹಿಂದುಸ್ತಾನ್ ವಿಮಾನ ಕಾರ್ಖಾನೆಯ ಎಂಜಿನ್ ವಿಭಾಗದಲ್ಲಿ ತಯಾರಿಸಲು ಪ್ರಾರಂಭಿಸಿದರು. ನ್ಯಾಟ್ ವಿಮಾನಕ್ಕೆ ಆರ್‍ಫಿಯಸ್ 701 ಎಂಜಿನ್, ಎಚ್.ಎಫ್. 24 ವಿಮಾನಕ್ಕೆ ಆರ್ ಫಿಯಸ್ 703 ಎಂಜಿನ್ನುಗಳನ್ನು
ಕೆಲವು ಮುಖ್ಯ ಟರ್ಬೋಜೆಟ್ ಎಂಜಿನ್ನುಗಳು ಹೆಸರು ನೂಕುಬಲ ಪೌಂಡುಗಳಲ್ಲಿ ತೂಕ ಪೌಂಡುಗಳಲ್ಲಿ
ವ್ಹಿಟಲ್ ಡಬ್ಲ್ಯೂ-1 850 623
ಜಂಕರ್ಸ್ 004 1,980 1,630
ರೋಲ್ಸ್ ರಾಯ್ಸ್-ಡರ್ ವೆಂಟ್ 4,000 1,250
ಬ್ರಿಸ್ಟೋಲ್ ಸಿಡ್ಲಿಸೆಫೈರ್ ಎ.ಎಸ್.ಎಸ್,ಎ.-7 ಪ್ರಾಟ್ ಮತ್ತು ವಿಟ್ನಿ ಜೆ-57 (ಜೆ.ಟಿ. 3.ಸಿ.6) 11,000 13,000 3,050 4,234
ರೋಲ್ಸ್ ರಾಯ್ಸ್ ಎವಾನ್ ಆರ್.ಎ. 28 10,000 2,890
ಜನರಲ್ ಎಲೆಕ್ಟ್ರಿಕ್ ಜೆ.79 11,000 3190,
ಕೆಲವು ಮುಖ್ಯ ಟರ್ಬೋಪ್ರಾಪ್ ಎಂಜಿನ್ನುಗಳು
ಹೆಸರು ಅಶ್ವ ಸಾಮಥ್ರ್ಯ ಅಶ್ವ ಸಾಮಥ್ರ್ಯ/ ಪೌಂಡ್
ರೋಲ್ಸ್ ರಾಯ್ಸ್-ಡಾರ್ಟ್ ಮಾರ್ಕ್ 525 1,990 1.6
ಬ್ರಿಸ್ಟೋಲ್ ಸಿಡ್ಲಿ ಪ್ರೊಟಿಯಸ್ 765 4,445 1.5
ಜನರಲ್ ಎಲೆಕ್ಟ್ರಿಕ್ ಟಿ. 58-ಜೆಇ-8 1,350 4.5
ಪ್ರಾಟ್ ಮತ್ತು ವಿಟ್ನಿ ಟಿ-34 ಪಿ-3 6,000 2.3
ಅಲಿಸಾನ್ 501 2-13 3,750 2.1
ಇಲ್ಲಿ ತಯಾರಿಸಲಾಗುತ್ತಿದೆ. ಆವ್ರೋ 748 ವಿಮಾನದ ಟರ್ಬೋಪ್ರಾಪ್ ಎಂಜಿನ್, ಡಾಟ್ 531 ಎಂಜಿನ್ನುಗಳನ್ನು ಹಿಂದುಸ್ತಾನ್ ವಿಮಾನ ಕಾರ್ಖಾನೆಯ ಎಂಜಿನ್ ವಿಭಾಗದಲ್ಲಿ ತಯಾರಿಸಲಾಗುತ್ತಿದೆ. ಕಿರಣ್ ವಿಮಾನಕ್ಕೆ ಬೇಕಾದ ಎಚ್.ಜೆ.ಇ 2500 ಎಂಬ ಹೆಸರಿನಲ್ಲಿ ಟರ್ಬೋ ಜೆಟ್ ಎಂಜಿನನ್ನು ತಯಾರಿಸಲಾಗಿದೆ. (ಎಚ್.ಎಸ್.ಆರ್.)