ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟೆರಿಡೊಸ್ಪರ್ಮೀ

ವಿಕಿಸೋರ್ಸ್ದಿಂದ

ಟೆರಿಡೊಸ್ಪರ್ಮೀ

ಪ್ರಾಚೀನ ಜೀವಿಕಲ್ಪದ (ಪೇಲಿಯೋಜೋಯಿಕ್) ಡಿವೋನಿಯನ್, ಕಾರ್ಬಾನಿಫೆರಸ್ ಮತ್ತು ಪರ್ಮಿಯನ್ ಯುಗಗಳಲ್ಲಿ ಜೀವಿಸಿದ್ದ ಸಸ್ಯಗಳ ಒಂದು ಗಣ. ಕಾರ್ಬಾನಿಫೆರಸ್ ಯುಗದಲ್ಲಿ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿದ್ದವೆಂದು ಹೇಳಲಾಗಿದೆ. ಸೈಕಡೋಫಿಲಿಕೇಲೀಸ್ ಪರ್ಯಾಯನಾಮ. ಈ ಸಸ್ಯಗಳು ತಮ್ಮ ಎಲೆಗಳ ಲಕ್ಷಣಗಳಲ್ಲೂ ಕಾಂಡದ ಒಳರಚನೆಯಲ್ಲೂ ಜರೀಗೀಡಗಳನ್ನು ಹೋಲುತ್ತಿದ್ದವಲ್ಲದೆ ಸೈಕ್ಯಾಡುಗಳಂತೆ ಬೀಜಗಳನ್ನೂ ಉತ್ಪಾದಿಸುತ್ತಿದ್ದವು. ಇದರಿಂದಾಗಿ ಇವು ಜರೀಗಿಡಗಳಿಗೂ ಸೈಕ್ಯಾಡುಗಳಿಗೂ ನಡುವಿನ ಹಂತವನ್ನು ಪ್ರತಿನಿಧಿಸುತ್ತವೆಂದು ಹೇಳಲಾಗಿದೆ. ಭಾರತದ ಗೊಂಡ್ವಾನ ಸಮುದಾಯದ ಶಿಲೆಗಳಲ್ಲಿ ಈ ಗುಂಪಿನ ಸಸ್ಯಗಳ ಫಾಸಿಲುಗಳಾದ ಸ್ಫೀನಾಪ್ಟರಿಸ್ ಮತ್ತು ಗ್ಲಾಸಾಪ್ಟರಿಸ್‍ಗಳು ಸಿಕ್ಕಿವೆ. 

(ಎಂ.ವಿ.ಎ.ಎಸ್)