ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಠ
ಗೋಚರ
ಠ - ಕನ್ನಡ ವರ್ಣಮಾಲೆಯಲ್ಲಿ ಟ ವರ್ಗದಲ್ಲಿನ ಎರಡನೆಯ ಮಹಾಪ್ರಾಣಾಕ್ಷರ, ಅಶೋಕನ ಕಾಲದಿಂದ ಬಾದಾಮಿಯ ಚಾಳುಕ್ಯರವರೆಗಿನ ಕಾಲದಲ್ಲಿ ಕೇವಲ ಒಂದು ದೊಡ್ಡ ಸೊನ್ನೆಯಂತಿದ್ದ ಈ ಅಕ್ಷರಕ್ಕೆ ತಲೆಗಟ್ಟು ಬಂದುದು ಕಲ್ಯಾಣದ ಚಾಳುಕ್ಯರ ಕಾಲದಲ್ಲಿ. ಆಗಲೇ ಹೊಟ್ಟೆಯ ನಡುವಣ ಚುಕ್ಕೆಯೂ ಕಾಣಿಸಿಕೊಂಡಿತು. ಅಲ್ಲಿಂದ ಮುಂದೆ ಅದೇ ರೂಪ ಉಳಿದುಬಂದಿದೆ. ಈ ಅಕ್ಷರ ಅಘೋಷ ಸ್ಪರ್ಶ ಮೂಧ್ರ್ವನ್ಯ ಮಹಾಪ್ರಾಣ ಧ್ವನಿಯನ್ನು ಸೂಚಿಸುತ್ತದೆ. (ಎ.ವಿ.ಎನ್.)