ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತಲೆನೆತ್ತಿಯ ಗಜಕರ್ಣ
ಗೋಚರ
ತಲೆನೆತ್ತಿಯ ಗಜಕರ್ಣ
ಟ್ರೈಕೋಫೈಟಾನ್ ಮತ್ತು ಮೈಕ್ರೊಸ್ಪೊರಮ್ ಎಂಬ ಜಾತಿಯ ಅಣಬೆಗಳ ಸೋಂಕಿನಿಂದುಂಟಾದ ತಲೆನೆತ್ತಿಯ ಒಂದು ರೋಗ. ಇದು ಶಾಲೆ ವಯಸ್ಸಿನ ಹುಡುಗರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಚರ್ಮದ ಸಂಪರ್ಕದಿಂದ ಅಥವಾ ಸೋಂಕು ಹತ್ತಿದ ಟೋಪಿಗಳ, ಚೌಕಗಳ, ಕುಂಚಗಳ ಮತ್ತು ಬಾಚಣಿಗೆಗಳ ಮೂಲಕವೂ ಒಬ್ಬರಿಂದೊಬ್ಬರಿಗೆ ಈ ಅಣಬೆಗಳ ಸೋಂಕು ಹರಡುತ್ತದೆ. ರೋಗಪೀಡಿತವಾದ ತಲೆನೆತ್ತಿಯ ಮೇಲೆ ನವೆಯುಳ್ಳ ಹಗರಿನ ಮಚ್ಚೆಗಳು ಕಾಣುತ್ತವೆ. ಈ ಮಚ್ಚೆಗಳ ಮೇಲೆ ಹೊಳಪಿಲ್ಲದ ತುಂಡು ಕೂದಲುಗಳಿರುತ್ತವೆ. ಗ್ರೈಸೋಫಲ್ವಿನ್ ಮಾತ್ರೆಗಳ ಸೇವನೆ ಮತ್ತು ಅಣಬೆನಾಶಕ ಮುಲಾಮುಗಳನ್ನು ಹಚ್ಚುವುದರಿಂದ ಇದನ್ನು ಚಿಕಿತ್ಸಿಸಬಹುದು.