ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತೆಲಂಗಾಣ

ವಿಕಿಸೋರ್ಸ್ದಿಂದ

ತೆಲಂಗಾಣ ಹಿಂದಿನ ಹೈದರಾಬಾದು ಸಂಸ್ಥಾನದಿಂದ ಆಂಧ್ರ ಪ್ರದೇಶಕ್ಕೆ ಸೇರಿದ 9 ಜಿಲ್ಲೆಗಳ ಪ್ರದೇಶವನ್ನು ತೆಲಂಗಾಣವೆಂದು ಕರೆಯುವುದು ರೂಢಿ. ಮಹಬೂಬ್‍ನಗರ, ಹೈದರಾಬಾದ್, ಮೆದಕು, ನಿಜಾಮಾಬಾದ್, ಆದಿಲಾಬಾದ್, ಕರೀಮ್‍ನಗರ, ವಾರಂಗಲ್, ಖಮ್ಮಮ್, ನಲ್ಗೊಂಡಾ - ಇವೇ ಈ ಜಿಲ್ಲೆಗಳು. ಈ ಪ್ರದೇಶ ಇಂದಿನ ಆಂಧ್ರ ಪ್ರದೇಶದ ಉತ್ತರಾರ್ಧವನ್ನು ವ್ಯಾಪಿಸಿದೆ. ವಿಸ್ತೀರ್ಣ 43,282 ಚ. ಮೈ. ದಖನ್ ಪ್ರಸ್ಥಭೂಮಿಯ ಭಾಗವಾಗಿರುವ ತೆಲಂಗಾಣದ ಸರಾಸರಿ ಎತ್ತರ ಸಮುದ್ರ ಮಟ್ಟದಿಂದ 1,500 ಅಡಿ. ಉತ್ತರ ಮತ್ತು ಈಶಾನ್ಯ ಭಾಗದಲ್ಲಿ ಸರಾಸರಿ 40"-45" ಮಳೆ ಆಗುತ್ತದೆ. ಗೋದಾವರಿ, ಕೃಷ್ಣಾ, ಮಂಜೀರ, ಮಾನೇರು, ಪ್ರಾಣಹಿತ, ಮೂಸೀ, ಪಲೇರು, ಮುನೇರು, ವೈರಾ - ಇವು ಇಲ್ಲಿಯ ಮುಖ್ಯ ನದಿಗಳು. ತೆಲಂಗಾಣದ ಪ್ರಮುಖ ನಗರವಾದ ಹೈದರಾಬಾದು ಆಂಧ್ರಪ್ರದೇಶದ ರಾಜಧಾನಿಯಾಗಿದೆ. (ನೋಡಿ- ಆಂಧ್ರ-ಪ್ರದೇಶ) (ಎಸ್.ಎಸ್.ಆರ್.ಎಂ.)