ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತೊರ್ಫಿನ್ ಕಾರ್ಲ್ಸೆವ್ನಿ
ಗೋಚರ
ತೊರ್ಫಿನ್ ಕಾರ್ಲ್‍ಸೆವ್ನಿ - ಐಸ್ಲೆಂಡಿಕ್ ನಾವಿಕ. ಭೂ ಪರಿಶೋಧಕ. 11 ನೆಯ ಶತಮಾನದಲ್ಲಿದ್ದ. ಗ್ರೀನ್ಲೆಂಡಿನಿಂದ ಹೊರಟು ಅಮೆರಿಕದ ಈಗಿನ ನ್ಯೂ ಇಂಗ್ಲೆಂಡಿನ ತೀರದ ಉದ್ದಕ್ಕೆ ಸಾಗಿ ಈಗಿನ ಆಗ್ನೇಯ ಮ್ಯಾಸಚೂಸೆಟ್ಸಿನಲ್ಲಿ ವಸಾಹತೊಂದನ್ನು ಸ್ಥಾಪಿಸಲು ಯತ್ನಿಸಿದ (1004-5). ಸಮುದ್ರಯಾನ ತಂಡವೊಂದಕ್ಕೆ ಈತ ನಾಯಕನಾಗಿದ್ದನೆಂದು ಹೇಳಲಾಗಿದೆ. ಈ ಯೋಜನೆಯನ್ನು 1006 ರಲ್ಲಿ ಕೈಬಿಡಲಾಯಿತು. (ಎಚ್.ಎಂ.ಎನ್.ಆರ್.)