ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತೌಲನಿಕ ಮನೋವಿಜ್ಞಾನ

ವಿಕಿಸೋರ್ಸ್ದಿಂದ

ತೌಲನಿಕ ಮನೋವಿಜ್ಞಾನ - ಇಂದು ವಿಸ್ತಾರವಾಗಿಯೂ ಸೊಂಪಾಗಿಯೂ ಬೆಳೆಯುತ್ತಿರುವ ಆಧುನಿಕ ಮನೋವಿe್ಞÁನ ವೃಕ್ಷದ ಪ್ರಮುಖ ಶಾಖೆಯೊಂದಾಗಿ ಬೆಳೆದು ಉಪಶಾಖೆಗಳನ್ನು ಹೊರಹೊಮ್ಮಿಸುತ್ತಿರುವ ಒಂದು ಶಾಸ್ತ್ರ. ವಿವಿಧ ಪ್ರಾಣಿಗಳನ್ನೂ ಒಳಗೊಂಡಂತೆ ಸರ್ವಜೀವಿಗಳ ವರ್ತನಾ ರೀತಿಗಳನ್ನು ಹೋಲಿಸಿ ನಿರ್ಧರಿಸುವುದೇ ಇದರ ಮುಖ್ಯ ಗುರಿ. ಈ ಶಾಸ್ತ್ರದ ಉಗಮದ ಬಗ್ಗೆ ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಇದು ಕಾಲಗರ್ಭದಿಂದ ಉದಿಸಿಬಂದಿದೆ ಎಂದು ಸುಲಭವಾಗಿ ಹೇಳಿಬಿಡಬಹುದು. ಆದರೂ ಇದರ ಪ್ರಥಮ ಕುರುಹುಗಳನ್ನು ನಾವು ಕಾಣುವುದು ಪ್ರಸಂಗನಿರೂಪಣೆಗಳಲ್ಲಿ. ಅನೇಕ ಜನರು ತಾವು ಸಾಕಿದ ಹಾಗೂ ತಮಗೆ ಪ್ರಿಯವಾದ ಪ್ರಾಣಿಗಳ ವರ್ತನೆಗಳಲ್ಲಿ ವಿಶೇಷತೆಗಳನ್ನು ಗುರುತಿಸಿ ಹಾಗೂ ಮಾನವ ವರ್ತನೆಗಳೊಂದಿಗೆ ಅವುಗಳಿಗಿರುವ ಹೋಲಿಕೆಗಳನ್ನು ಗಮನಿಸಿ ದಾಖಲು ಮಾಡಿರುವ ಹಲವು ದೃಷ್ಟಾಂತಗಳು ನಮಗೆ ಕಾಣಸಿಗುತ್ತವೆ. ಆದರೆ ಅಂಥ ಪ್ರಸಂಗನಿರೂಪಣೆಗಳಲ್ಲಿ ಮಾನವತ್ವಾರೋಪಣ ಮತ್ತು ವ್ಯಕ್ತಿಯೊಲವಿನ ದೋಷಗಳು ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ, ಅವುಗಳಲ್ಲಿ ವಸ್ತುನಿಷ್ಠತೆ ಬಹಳ ಕಡಿಮೆ. ತೌಲನಿಕ ಮನೋವಿe್ಞÁನದ ಉಗಮದಲ್ಲಿ ಒಂದು ಸ್ಪಷ್ಟ ಪಾದಮುದ್ರೆಯನ್ನು ನಾವು ಜಾಲ್ರ್ಸ್ ಡಾರ್ವಿನ್ನನ ಜೀವವಿಕಾಸ ಸಿದ್ಧಾಂತ ಪ್ರಕಟನೆಯಾದ ನಂತರದ ಸಂಶೋಧನೆಗಳಲ್ಲಿ ಕಾಣಬಹುದು. ಡಾರ್ವಿನ್ನನ ಸಿದ್ಧಾಂತ ಮತ್ತು ತೌಲನಿಕ ಅಂಗಾಂಗಶಾಸ್ತ್ರ ಹಾಗೂ ತೌಲನಿಕ ಶರೀರ ಶಾಸ್ತ್ರಗಳಲ್ಲಿ ಆದ ಪ್ರಗತಿ ಇವುಗಳ ತೌಲನಿಕ ಮನೋವಿe್ಞÁನಕ್ಕೆ ಪ್ರಚೋದನೆ ನೀಡಿದ್ದರಿಂದ ಈ ಕ್ಷೇತ್ರದಲ್ಲಿ ಪ್ರಾಯೋಗಿಕ ವಿಧಾನದ ಬಳಕೆ ಪ್ರಾರಂಭವಾಯಿತು. ತತ್ಫಲವಾಗಿ ತ್ವರಿತಗತಿಯ ಪ್ರಗತಿಯುಂಟಾದುದನ್ನು ಕಾಣಬಹುದು.

ಈ ಕ್ಷೇತ್ರದ ಐತಿಹಾಸಿಕ ಒಲವುಗಳನ್ನು ಹೀಗೆ ವರ್ಗೀಕರಿಸಲಾಗಿದೆ: 1. ಕಾಲಗರ್ಭದಿಂದ ಉದಿಸಿ ಬಂದ ತನ್ನದೇ ಆದ ವಿಶಿಷ್ಟತೆಯಿಂದ ಪ್ರಗತಿ ಹೊಂದುತ್ತಿರುವ ತೌಲನಿಕ ಮನೋವಿe್ಞÁನ ಡಾರ್ವಿನ್ನನ ಕಾಲಕ್ಕೆ ಮುಂಚೆ ಕೇವಲ ಪ್ರಾಣಿವರ್ತನಾ ಪ್ರಸಂಗ ನಿರೂಪಣೆಗಳಿಂದ ಕೂಡಿತ್ತು. 2. ವಿಕಾಸ ಸಿದ್ಧಾಂತ ಮತ್ತು ಅದರಲ್ಲಿ ಅಡಕವಾಗಿರುವ ತತ್ತ್ವಗಳನ್ನು ವಿe್ಞÁನ ಪ್ರಪಂಚ ಸ್ವೀಕರಿಸಿದ ಅನಂತರ ಈ ಕ್ಷೇತ್ರದಲ್ಲಿ ನಡೆದ ಅಂದೋಳನದಿಂದಾಗಿ ನಾನಾ ವಿಧವಾದ ವರ್ತನಾ ಸಮಸ್ಯೆಗಳ ಅಧ್ಯಯನ ಸಾಧ್ಯವಾಯಿತು. 3. ವಿಕಾಸ ಸಿದ್ಧಾಂತದ ಸ್ವೀಕಾರ ವೈಧಾನಿಕ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗೆ ಕಾರಣವಾಯಿತು. ಪ್ರಸಂಗನಿರೂಪಣೆಯ ಸ್ಥಾನದಲ್ಲಿ ಪ್ರಾಯೋಗಿಕ ವಿಧಾನ ಹೆಚ್ಚು ಬಳಕೆಗೆ ಬಂದುದಲ್ಲದೆ, ಇತರ ಪಾರಿಮಾಣಿಕ ವಿಧಾನಗಳೂ ಬಳಕೆಗೆ ಬಂದುದನ್ನು ಕಾಣಬಹುದು. ಈ ಒಲವಿನಲ್ಲಿ ವೈe್ಞÁನಿಕ ಅಭಿವ್ಯಕ್ತಿ ಮತ್ತು ವೈe್ಞÁನಿಕ ಮಾರ್ಗಗಳ ಬೆಳವಣಿಗೆ ಪ್ರತಿಫಲಿತವಾಗಿರುವುದನ್ನು ಕಾಣಬಹುದು.

ಚಾಲ್ರ್ಸ ಡಾರ್ವಿನ್ ತನ್ನ ಮಾನವನ ವಂಶ (ಡಿಸೆಂಟ್ ಆಫ್ ಮ್ಯಾನ್ 1871) ಮತ್ತು ಮನುಷ್ಯ ಮತ್ತು ಪ್ರಾಣಿಗಳಲ್ಲಿ ಸಂವೇಗದ ಪ್ರಕಟಣೆ (ದಿ ಎಕ್ಸ್‍ಪ್ರೆಷನ್ ಆಫ್ ಎಮೋಷನ್ ಇನ್ ಮ್ಯಾನ್ ಅಂಡ್ ಅನಿಮಲ್ಸ್ 1872) ಎಂಬ ಗ್ರಂಥಗಳಲ್ಲಿ ತೌಲನಿಕ ವಿಧಾನವನ್ನು ಅನುಸರಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ತನ್ನ ಜೀವಪ್ರಭೇದಗಳ ಉಗಮವನ್ನು ಕುರಿತ ಗ್ರಂಥದಲ್ಲಿ (ಆರಿಜಿನಲ್ ಆಫ್ ಸ್ಟೀಷೀಸ್) ರೂಪಿಸಿದ ತತ್ತ್ವಗಳನ್ನು ಆತ ಮಾನವನ ದೈಹಿಕ, ಮಾನಸಿಕ ಮತ್ತು ಸಂವೇದನಾತ್ಮಕ ಬೆಳವಣಿಗೆಗೆ ಅನ್ವಯಿಸಿರುವುದು ಮೇಲಿನ ಗ್ರಂಥಗಳಲ್ಲಿ ಕಾಣುತ್ತದೆ. ಮಾನವನ ವಂಶ ಗ್ರಂಥದಲ್ಲಿ ಮೊದಲು ದೈಹಿಕ ರಚನೆಯ ಬಗ್ಗೆ ಪ್ರಸ್ತಾಪಿಸಿ ಅನಂತರ ಮಾನಸಿಕ ಬೆಳವಣಿಗೆಯನ್ನು ಆತ ವಿವರಿಸಿದ್ದಾನೆ; ಮಾನವನೂ ಸೇರಿದಂತೆ ಎಲ್ಲ ಪ್ರಾಣಿಗಳ ನಡುವೆ ಇರುವ ವ್ಯತ್ಯಾಸಗಳು ಗುಣಾತ್ಮಕವಾಗಿರದೇ ಪಾರಿಮಾಣಿಕವಾಗಿರುತ್ತದೆ ಎಂಬುದನ್ನು ಪ್ರತಿಪಾದಿಸಿದ್ದಾನೆ. ಮನುಷ್ಯ ಮತ್ತು ಪ್ರಾಣಿಗಳು ಒಂದೇ ರೀತಿಯ ಇಂದ್ರಿಯಗಳು, ಮೂಲಪ್ರೇರಣಾತ್ಮಕ ವರ್ತನೆ ಮೂಲಭೂತ ಸಂವೇಗಗಳು ಮತ್ತು ಮೇಲ್ಮಟ್ಟದ ಮಾನಸಿಕ ಪ್ರಕ್ರಿಯೆಗಳಾದ ಅವಧಾನ, ಸ್ಮøತಿ, ಕಲ್ಪನೆ, ಆಯ್ಕೆಶಕ್ತಿ ಮುಂತಾದವನ್ನು ಪಡೆದಿರುತ್ತವೆ ಎಂಬುದೇ ಆತನ ಈ ನಿಬಂಧದ ಪ್ರಮುಖ ವಿಷಯ. ಮನುಷ್ಯನ ಬುದ್ಧಿಶ್ಕತಿಯಂತೆಯೇ ಕಾಣುವ ಬುದ್ಧಿಶಕ್ತಿಯನ್ನೂ ಪ್ರಾಣಿಗಳು ಪಡೆದಿರುತ್ತವೆ ಎಂದೂ ಆತ ವಾದಿಸಿದ್ದಾನೆ.

ಮನುಷ್ಯ ಮತ್ತು ಪ್ರಾಣಿಗಳಲ್ಲಿ ಸಂವೇಗದ ಪ್ರಕಟನೆ ಎಂಬ ಗ್ರಂಥದಲ್ಲಿ ಪ್ರಾಣಿಗಳಲ್ಲಿ ಸಂವೇಗ ಪ್ರಕಟವಾಗುವ ರೀತಿಯನ್ನು ವಿವರಿಸಿ, ಆ ಪ್ರಾಕ್ಕಲ್ಪನೆಯ ಮೂಲಕ ಮನುಷ್ಯನಲ್ಲಿ ಸಂವೇಗದ ಪ್ರಕಟನೆಯನ್ನು ವಿವರಿಸುವ ಸಾಧ್ಯತೆಯನ್ನು ಡಾರ್ವಿನ್ ಹೇಳಿದ್ದಾನೆ. ಇದಕ್ಕಾಗಿ ಆತ ರೂಪಿಸಿದ ತತ್ತ್ವಗಳು ಇವು : 1 ಸಹಯೋಗಿತ ಅಭ್ಯಾಸಗಳ ತತ್ತ್ವ 2. ವಿರೋಧನ್ಯಾಸ ತತ್ತ್ವ ಮತ್ತು 3 ತಂತುಮಂಡಲದ ನೇರಕ್ರಿಯಾ ತತ್ತ್ವ.

ಈ ತತ್ತ್ವಗಳು ಪ್ರಾಣಿಗಳ ಮತ್ತು ಮನುಷ್ಯರ ಸಂವೇಗ ಪ್ರಕಟನೆಯಲ್ಲಿ ಕಂಡುಬರುವ ಸಾದೃಶ್ಯವನ್ನು ಅರಿಯಲು ನೆರವಾಗುತ್ತವೆ. ಆದರೆ ಇಂದಿನ ಒರೆಗಲ್ಲುಗಳ ಪ್ರಕಾರ ಮನುಷ್ಯ ಮತ್ತು ಪ್ರಾಣಿಗಳ ನಡುವಣ ಸಂವೇಗಾತ್ಮಕ ವರ್ತನೆಯ ಸಾದೃಶ್ಯಕ್ಕೆ ಡಾರ್ವಿನ್ ಕೊಟ್ಟಿರುವ ಪುರಾವೆಗಳು ಅಷ್ಟಾಗಿ ಮಾನ್ಯತೆ ಪಡೆಯದಿರಬಹುದು. ಏಕೆಂದರೆ ಆತ ಕೇವಲ ಕೆಲವು ಶಿಶುಗಳು ಮತ್ತು ಪ್ರಾಣಿಗಳ ವರ್ತನೆಯ ಅವಲೋಕನವನ್ನು ಆಧರಿಸಿ ತನ್ನ ವಾದವನ್ನು ರೂಪಿಸಿದ್ದಾನೆ. ಆದರೂ ಈ ಕಾರ್ಯಕ್ಕಾಗಿ ಆತ ಛಾಯಾಚಿತ್ರಣ ಮತ್ತು ಭಿತ್ತಿಚಿತ್ರಣ ಪ್ರವಿಧಿಗಳನ್ನು ಬಳಸಿದ್ದ. ಜೀವೋತ್ಪತ್ತಿ ವಿಧಾನವನ್ನು ಆತ ಬಳಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಮುಂದೆ ಡಾರ್ವಿನ್ನನ ಅನಂತರ ನಡೆದ ಹಲವು ಸಂಶೋಧನೆಗಳಲ್ಲಿ ಮೇಲ್ಮಟ್ಟದ ಮಾನಸಿಕ ಪ್ರಕ್ರಿಯೆಗಳನ್ನು ತುಲನಾತ್ಮಕವಾಗಿ ಅಧ್ಯಯನ ಮಾಡುವ ಪ್ರಯತ್ನಗಳು ನಡೆಯಲೂ ವಿಕಾಸವಾದ ಪ್ರೇರಕ ಶಕ್ತಿಯಾಯಿತು. ಇದರಿಂದ ಮೂಡಿದ ಹೊಸಚೈತನ್ಯ ತೌಲನಿಕ ಮನೋವಿe್ಞÁನವನ್ನು ತತ್ತ್ವಶಾಸ್ತ್ರದ ಕಪಿಮುಷ್ಠಿಯಿಂದ ವಿಮುಕ್ತಗೊಳಸಿಲು ಬಹುಮಟ್ಟಿಗೆ ಕಾರಣವಾಯಿತು. ಅನೇಕ ಪ್ರತಿಸ್ಪರ್ಧಿಸಿದ್ದಾಂತಗಳೊಂದಿಗೆ (ಉದಾ ; ದೈವಸೃಷ್ಟಿವಾದ) ವಿಕಾಸವಾದ ಅವಿರತವಾಗಿ ನಡೆಸಿದ ಹೋರಾಟ ಇಲ್ಲಿ ಗಮಿಸಬೇಕಾದ ಅಂಶ. ಮೇಲೆ ಪ್ರಸ್ತಾಪಿಸಲಾದ ಒಲವುಗಳಿಗೆ ಸಂಬಂಧಿಸಿದಂತೆಯೇ ಸಂಶೋಧನಾ ಸಮಸ್ಯೆಗಳಲ್ಲಿಯೂ ಹೆಚ್ಚಳ ಕಂಡುಬಂದಿತು. ಮಾನವವರ್ತನೆಯ ಬಗ್ಗೆ ಕೇಳಲಾಗುತ್ತಿರುವ ಪ್ರತಿಯೊಂದು ಮೂಲ ಅಥವಾ ಪ್ರಮುಖ ಪ್ರಶ್ನೆಯನ್ನೂ ಇತರ ಪ್ರಾಣಿಗಳ ವರ್ತನೆಗಳ (ಉದಾ; ಕಲಿಕೆ, ಬುದ್ಧಿಶಕ್ತಿ, ಸಂಘಜೀವನ ಇತ್ಯಾದಿ) ಬಗ್ಗೆಯೂ ಕೇಳಲಾಯಿತು. ಈ ಕ್ಷೇತ್ರದಲ್ಲಿ ನಡೆದ ಅಧ್ಯಯನಗಳಿಗೆ ಸ್ಪಷ್ಟ ಉದ್ದೇಶಗಳು ರೂಪಗೊಂಡವು.

ಮೇಲೆ ಪ್ರಸ್ತಾಪಿಸಲಾದ ಒಲವುಗಳನ್ನು ವಿವರವಾಗಿ ಪರಿಶೀಲಿಸಿದಾಗ, ತೌಲನಿಕ ಮನೋವಿe್ಞÁನ ವಿವಿಧ ಪ್ರಾಣಿವರ್ತನೆಗಳ ಬಗ್ಗೆ ಮನುಷ್ಯ ನಡೆಸಿದ ಪ್ರಾಸಂಗಿಕ ಅವಲೋಕನಗಳಲ್ಲಿ ಅಂಕುರಿಸಿ ಜೀವವಿಕಾಸಸಿದ್ದಾಂತದಿಂದ ಪಚೋದಿತವಾಗಿ ಬೆಳೆದು ಪ್ರಾಯೋಗಿಕ ಮತ್ತು ಇತರ ಪಾರಿಮಾಣಿಕ ವಿಧಾನಗಳ ಪ್ರÀಯೋಗÀದಿಂದ ಪುಷ್ಟಿಗೊಂಡು ಸಮೃದ್ಧವಾಗಿ ಪ್ರಗತಿಹೊಂದುತ್ತಿರುವುದು ಕಂಡುಬರುತ್ತದೆ.

ತೌಲನಿಕ ಮನೋವಿe್ಞÁನದ ಪ್ರಮುಖ ಉದ್ದೇಶವೆಂದರೆ ಮನುಷ್ಯನೂ ಸೇರಿದಂತೆ ವಿವಿಧ ವರ್ಗದ ಪ್ರಾಣಿಗಳ ನಡುವೆ ವರ್ತನಾ ರೀತಿಗಳಲ್ಲಿರಬಹುದಾದ ಹೋಲಿಕೆ ಮತ್ತು ವ್ಯತ್ಯಾಸಗಳನ್ನು ಕಂಡುಹಿಡಿದು ತನ್ಮೂಲಕ ಮಾನಸಿಕ ಪ್ರಕ್ರಿಯೆಗಳ ಉಗಮ ಮತ್ತು ವಿಕಾಸಗಳಿಗೆ ಸಂಬಂಧಿಸಿದಂತೆ ಸಿದ್ದಾಂತಗಳನ್ನು ರೂಪಿಸುವುದು. ಅಲ್ಲದೇ, ಹಾಗೆ ರೂಪಸಲಾದ ಸಿದ್ಧಾಂತಗಳನ್ನು ಪ್ರಧಾನವಾಗಿ ಮಾನವ ವರ್ತನೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಈ ಕ್ಷೇತ್ರದ ಉದ್ದೇಶ ಪ್ರಾಣಿಮನೋವಿe್ಞÁನದ ಉದ್ದೇಶಕ್ಕಿಂತ ಸ್ವಲ್ಪ ಭಿನ್ನವಾಗಿರುವುದನ್ನು ಕಾಣಬಹುದು. ಪ್ರಾಣಿಮನೋವಿe್ಞÁನದ ಮುಖ್ಯ ಗುರಿ ವಿವಿಧ ಪ್ರಾಣಿಗಳ ವರ್ತನಾ ರೀತಿಗಳನ್ನು ಅರಿಯುವುದೇ ಆಗಿದ್ದರೆ, ತೌಲನಿಕ ಮನೋವಿe್ಞÁನದ ಮುಖ್ಯಗುರಿ. ಮೇಲೆಯೇ ಹೇಳಿರುವಂತೆ ವಿವಿಧ ಪ್ರಾಣಿವರ್ಗಗಳ ವರ್ತನಾ ರೀತಿಗಳನ್ನು ತುಲನಾತ್ಮಕವಾಗಿ ಪರಿಶೀಲಿಸುವುದು. ಈ ದೃಷ್ಟಿಯಿಂದ ನೋಡಿದಾಗ ಈ ಕ್ಷೇತ್ರದ ವ್ಯಾಪ್ತಿ ಹೆಚ್ಚು ವಿಶಾಲವಾಗಿರುವುದು ಕಂಡುಬರುತ್ತದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಮನುಷ್ಯರು ಹಾಗೂ ಪ್ರಾಣಿಗಳ ವರ್ತನಾ ರೀತಿಗಳನ್ನು ಮಾತ್ರವಲ್ಲದೇ, ಸಸ್ಯಗಳ ವರ್ತನಾರೀತಿಗಳ ಅಧ್ಯಯನಕ್ಕೂ ಈ ಕ್ಷೇತ್ರದಲ್ಲಿ ಅವಕಾಶವಿದೆ ಎಂಬುದು, ವಾರ್ಡನ್, ಜೆಂಕಿನ್ಸ್ ಮತ್ತು ವಾರ್ನರ್ ಇವರುಗಳ ತೌಲನಿಕ ಮನೋವಿe್ಞÁನ ಗ್ರಂಥಗಳಲ್ಲಿ ಸಸ್ಯವರ್ತನೆಗೆ ಸಂಬಂಧಿಸಿದಂತೆ ವಿಪುಲ ಮಾಹಿತಿಯನ್ನು ಕೊಡಲಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಕ್ಷೇತ್ರದಲ್ಲಿ ಸಸ್ಯಗಳು ಮತ್ತುಪ್ರಾಣಿಗಳು. ಪ್ರಾಣಿಗಳು ಮತ್ತು ಮನುಷ್ಯರು ಹಾಗೂ ಮನುಷ್ಯರು ಹಾಗೂ ಮನುಷ್ಯರಲ್ಲೇ ವಿವಿಧ ಸಮೂಹಗಳು. ಸಂಸ್ಕøತಿಗಳು ಮತ್ತು ಜನಾಂಗಗಳು ವರ್ತನಾರೀತಿಗಳಲ್ಲಿ ಕಂಡುಬರುವ ಹೋಲಿಕೆ ಮತ್ತು ವ್ಯತ್ಯಾಸಗಳ ಬಗ್ಗೆ ಸಂಶೋಧನೆಗಳನ್ನು ನಡೆಸಿ ಸಿದ್ಧಾಂತಗಳನ್ನು ರೂಪಸಿಲಾಗುತ್ತದೆ.

ಮೇಲೆ ಪ್ರಸ್ತಾಪಿಸಲಾದಂಥ ಅಧ್ಯಯನ ರೀತಿಗಳ ಹಿನ್ನೆಲೆಯಲ್ಲಿರುವ ವೈe್ಞÁನಿಕ ವಿವೇಚನೆಯೆಂದರೆ, ಜಟಿಲ ವರ್ತನಾ ರೀತಿಗಳನ್ನು ಅರ್ಥಮಾಡಿಕೊಳ್ಳಲು ಅವುಗಳ ಸರಳ ಮೂಲರೂಪಗಳನ್ನು ಭೇದಿಸುವುದು ಅವಶ್ಯಕ ಎಂಬುದು. ಇದೇ ರೀತಿಯ ವಿವೇಚನೆಯನ್ನು ಪ್ರಾಣಿಗಳ ದೇಹರಚನೆಗೆ ಸಂಬಂಧಿಸಿದ ತೌಲನಿಕ ಅಂಗಾಗಶಾಸ್ತ್ರ ಮತ್ತು ತೌಲನಿಕ ಶರೀರಶಾಸ್ತ್ರಗಳಲ್ಲಿ ಕಾಣಬಹುದು. ಒಟ್ಟಿನಲ್ಲಿ, ಇದರಿಂದ ವರ್ತನೆಯ ಮೂಲರೂಪಗಳ ನೇರವಾದ ಅಧ್ಯಯನ ಮಾಡಲು ಸಾಧ್ಯವಾಗುವುದಲ್ಲದೇ, ಪ್ರಾಯೋಗಿಕ ನಿಯಂತ್ರಣಕ್ಕೂ ಹೆಚ್ಚು ಆಸ್ಪದವಾಗುತ್ತದೆ. ಉದಾಹರಣೆಗೆ, ಮಾನವ ತಂತುವ್ಯವಸ್ಥೆಯ ರಚನೆ ಮತ್ತು ಮಾನವವರ್ತನೆಗಳ ನಡುವಣ ಸಂಬಂಧವನ್ನು ಅರಿಯಲು ಪ್ರಾಣಿಗಳ ಮೇಲೆ ನಡೆಸಲಾದ ಸಂಶೋಧನೆಗಳು ಮಹತ್ತರವಾದ ನೆರವು ನೀಡುವುದನ್ನು ಕಾಣಬಹುದು. ಹಲವು ಕಾರಣಗಳಿಂದ ಇದು ಸಾಧ್ಯವಾಗುತ್ತದೆ. ಮೊದಲನೆಯದಾಗಿ ಪ್ರಾಣಿಗಳನ್ನು ಸುಲಭವಾಗಿ ಪ್ರಾಯೋಗಿಕ ನಿಯಂತ್ರಣಗಳಿಗೆ ಒಳಪಡಿಸಬಹುದು. ಉದಾಹರಣೆಗೆ, ಲ್ಯಾಸ್ಲೆ ಮಾಡಿದ ರೀತಿಯಲ್ಲಿ, ಪ್ರಾಣಿಗಳ ಮಸ್ತಿಷ್ಕದ ಮೇಲೆ ಶಸ್ತ್ರಕ್ರಿಯೆ ನಡೆಸಿ ತತ್ಪರಿಣಾಮವಾಗಿ ಅವುಗಳ ವರ್ತನೆಯಲ್ಲಿ ಉಂಟಾಗುವ ಮಾರ್ಪಾಡುಗಳನ್ನು ತಿಳಿಯಬಹುದು. ಇಷ್ಟಲ್ಲದೇ ಮಸ್ತಿಷ್ಕವನ್ನು ವಿದ್ಯುತ್ ಅಥವಾ ಮದ್ದು ಪ್ರಚೋದನೆಗಳಿಗೆ ಒಳಪಡಿಸಿ, ನಿರ್ದಿಷ್ಟ ಅನುಕ್ರಿಯೆಗಳನ್ನು ನಿಯಂತ್ರಿಸಿ ನಿರ್ದೇಶಿಸುವ ಮಸ್ತಿಷ್ಕ ಪ್ರದೇಶಗಳನ್ನು ಗುರುತಿಸಬಹುದು. ಆದರೆ, ನೈತಿಕ ಕಾರಣಗಳಿಗಾಗಿ ಇಂಥ ಪ್ರಯೋಗಗಳನ್ನು ಮನುಷ್ಯರ ಮೇಲೆ ನಡೆಸಲಾಗುವುದಿಲ್ಲ. ಎರಡನೆಯದಾಗಿ, ಮಾನವ ವರ್ತನೆಯೊಂದಿಗೆ ಹೋಲಿಸಿದಾಗ ಪ್ರಾಣಿ ವರ್ತನೆ ಹೆಚ್ಚು ಸರಳರೂಪದಲ್ಲಿರುವುದರಿಂದ ವೈe್ಞÁನಿಕ ನಿಯಂತ್ರಣಕ್ಕೆ ಹೆಚ್ಚು ಅನುಕೂಲವಾಗುತ್ತದೆ. ಮೂರನೆಯದಾಗಿ, ಪ್ರಾಣಿವರ್ತನೆಯ ಅಧ್ಯಯನಗಳಲ್ಲಿ ವಿವಿಧ ನಿಯಂತ್ರಣ ಅವಲೋಕನ ಮತ್ತು ದಾಖಲು ಪ್ರವಿಧಿಗಳನ್ನು ಹೆಚ್ಚು ಉಪಯುಕ್ತವಾಗಿ ಬಳಸಿಕೊಂಡು ವಸ್ತುನಿಷ್ಠತೆಯನ್ನು ಕಾಯ್ದುಕೊಳ್ಳಲು ಹೆಚ್ಚು ಸಾಧ್ಯವಾಗುತ್ತದೆ. ಕೊನೆಯದಾಗಿ, ಪ್ರಾಯೋಗಿಕ ಅಧ್ಯಯನಗಳಿಗೆ ಅಗತ್ಯವಿರುವಷ್ಟು ಸಂಖ್ಯೆಯಲ್ಲಿ ಪ್ರಾಣಿಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಉದಾಹರಣೆಗೆ ಅನುವಂಶೀಯತೆ ಮತ್ತು ಪ್ರತ್ಯಾವರಣಗಳ ಪರಸ್ಪರ ಸಾಹಚರ್ಯವನ್ನು ಅರಿಯಲು ಬೇಕಾದ ನಿಯಂತ್ರಣವನ್ನು ಸಾಧಿಸುವಲ್ಲಿ ಪ್ರಾಣಿಗಳು ಮನುಷ್ಯರಿಗಿಂತ ಹೆಚ್ಚು ಉಪಯುಕ್ತವಾಗಬಲ್ಲವು. ಕಲಿಕೆ ಶಕ್ತಿಯ ಅನುವಂಶೀಯತೆಯನ್ನು ನಿರ್ಧರಿಸುವಲ್ಲಿ ಟ್ರೈಯಾನ್ ನಡೆಸಿದ ಪ್ರಯೋಗ ಇದಕ್ಕೆ ಜೀವಂತ ನಿದರ್ಶನ. ಚುರುಕಾದ ಇಲಿಗಳು ಚುರುಕಾದ ಮರಿಗಳಿಗೂ ಮತ್ತು ಮಂದವರ್ತನೆಯ ಇಲಿಗಳು ಮಂದವರ್ತನೆಯ ಮರಿಗಳಿಗೂ ಜನ್ಮಕೊಡುತ್ತವೆ ಎಂಬ ಸಿದ್ಧಾಂತವನ್ನು ರೂಪಿಸಲು ಆತ ಹದಿನೆಂಟು ಪೀಳಿಗೆಗಳ ಮೇಲೆ ಪ್ರಯೋಗ ನಡೆಸಲು ಸಾಧ್ಯವಾಯಿತು.

ಒಟ್ಟಿನಲ್ಲಿ ಹೇಳುವುದಾದರೆ, ಪ್ರಾಣಿಗಳ ಮೇಲೆ ನಡೆಸಲಾಗಿರುವ ಸಂಶೋಧನೆಗಳು, ಬುದ್ಧಿಶಕ್ತಿಯ ವಿಕಾಸ, ಕಲಿಕೆಯ ಪ್ರಕ್ರಿಯೆ ಮತ್ತು ಸ್ವಭಾವ ಹಾಗೂ ನಮ್ಮ ಮಾನಸಿಕ ಕ್ರಿಯೆಗಳ ಹಿನ್ನೆಲೆಯಲ್ಲಿರುವ ಶಾರೀರಿಕ ರಚನೆಗಳ ಬಗ್ಗೆ ಗಣನೀಯ ಒಳನೋಟಗಳನ್ನು ಒದಗಿಸಿವೆ. ಇದಕ್ಕಿಂತ ಹೆಚ್ಚಾಗಿ ಅಂಥ ಸಂಶೋಧನೆಗಳು, ಮಾನವವರ್ತನೆಯನ್ನು ಸಮೀಕ್ಷಿಸುವಲ್ಲಿ ಹೆಚ್ಚು ಫಲದಾಯಕ ಮಾರ್ಗಗಳನ್ನು ಸೂಚಿಸಿವೆಯಲ್ಲದೇ, ಒಂದು ಕಾಲದಲ್ಲಿ ಕೇವಲ ಅಂತರವಲೋಕನ (ನೋಡಿ- ಅಂತರವಲೋಕನ) ದಿಂದ ಮಾತ್ರ ಸಾಧ್ಯವೆಂಬಂತಿದ್ದ ಮಾನಸಿಕ ವ್ಯಾಪಾರಗಳ ವಿವರಗಳನ್ನು ಅರಿಯಲು ವಿಧಾನಗಳನ್ನು ಸೂಚಿಸಿರುವುದನ್ನು ಕಾಣಬಹುದು. ಉದಾಹರಣೆಗೆ ಇಂದು ಪ್ರಚಲಿತವಾಗಿರುವ ಕಲಿಕೆ ಸಿದ್ಧಾಂತಗಳು ಬಹುಮುಖ್ಯವಾಗಿ ಪ್ರಾಣಿಗಳ ಮೇಲಿನ ಅಧ್ಯಯನಗಳಿಂದ ರೂಪಿತವಾಗಿರುವುದಲ್ಲದೇ ಅವುಗಳ ಪರಿಶೀಲನೆಯೂ ಪ್ರಾಣಿಗಳ ಮೇಲೆ ನಡೆಸುವ ಪ್ರಯೋಗಗಳಿಂದಲೇ ಆಗುತ್ತದೆ. ವೈದ್ಯ ವಿದ್ಯಾರ್ಥಿ ಸರಳರೀತಿಯ ಪ್ರಾಣಿಗಳಾದ ಮೀನು, ಬೆಕ್ಕು ಮತ್ತು ನಾಯಿಗಳ ಮೇಲೆ ಶಸ್ತ್ರಕ್ರಿಯೆಗಳನ್ನು ನಡೆಸುವುದರ ಮೂಲಕ ಕೆಲವು ವಿವರಗಳನ್ನು ಅರಿಯಲು ಪ್ರಾರಂಭಿಸುವಂತೆ ಮನೋವಿe್ಞÁನದ ವಿದ್ಯಾರ್ಥಿ ಕೂಡ ಕಲಿಕೆಯ ಮೇಲಿನ ಅಧ್ಯಯನವನ್ನು ಸರಳ ಪ್ರಾಣಿಗಳಲ್ಲಿ ಕಂಡುಬರುವ ಕಲಿಕೆಯ ಅಧ್ಯಯನದಿಂದ ಪ್ರಾರಂಭಿಸುತ್ತಾನೆ. ಕೆಳ ಪ್ರಾಣಿಗಳ ಮೇಲೆ ನಡೆಸಲಾಗುವÀ ಇಂಥ ಅಧ್ಯಯನಗಳಿಂದ ದೊರೆತ e್ಞÁನದಿಂದ, ಮಾನವ ವರ್ತನೆಯ ಆದರ್ಶಗಳು, ಉದ್ದೇಶಗಳು ಅಭಿವ್ಯಕ್ತಿಗಳು ಮತ್ತು ಸಾಂಸ್ಕøತಿಕವಾಗಿ ಅನುಬಂಧಿತವಾಗಿರುವ ಜಟಿಲವರ್ತನೆಗಳ ಒಳಹೊಕ್ಕು, ಇತರ ಪ್ರಾಣಿವರ್ಗದೊಂದಿಗೆ ನಾವು ಹಂಚಿಕೊಂಡಿರುವ ವರ್ತನೆಗಳ ಆಧಾರಗಳೇನು ಎಂಬುದನ್ನೂ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಈ ವಿಧಾನದ ಅನುಸರಣೆಯಿಂದ ಹೆಚ್ಚು ಹೆಚ್ಚು ಜಟಿಲವಾದ ಮಾನವವರ್ತನೆಯನ್ನು ಅರಿತುಕೊಳ್ಳಲು ವಿe್ಞÁನಿ ಹೆಚ್ಚು ಶಕ್ತನಾಗುತ್ತಾನೆ.

ವಿಶಾಲ ವ್ಯಾಪ್ತಿಯುಳ್ಳ ಈ ಮನೋವಿe್ಞÁನ ಶಾಖೆ ಇತರ ಕೆಲವು ಶಾಖೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಅಂಥ ಶಾಖೆಗಳಲ್ಲಿ ಬಹು ಪ್ರಮುಖವಾದವುಗಳೆಂದರೆ ವಿಕಾಸಮನೋವಿe್ಞÁನ. ಪ್ರಾಣಿಮನೋವಿe್ಞÁನ, ಪ್ರಾಯೋಗಿಕ ಮನೋವಿe್ಞÁನ ಮತ್ತು ಅಪಸಾಮಾನ್ಯ ಮನೋವಿe್ಞÁನ. ಈ ಶಾಖೆಗಳಲ್ಲಿ ಆಗಿರುವ ಪ್ರಗತಿಗೆ, ತೌಲನಿಕ ಮನೋವಿe್ಞÁನ ಅಮೂಲ್ಯ ಕೊಡುಗೆಗಳನ್ನು ಕೊಟ್ಟಿದೆ. ಮನೋವಿe್ಞÁನ ಶಾಕೆಗಳೊಂದಗೆ ಮಾತ್ರವಲ್ಲದೇ ಇತರ ಕೆಲವು ವಿe್ಞÁನ ಕ್ಷೇತ್ರಗಳಾದ, ತೌಲನಿಕ ಅಂಗಾಂಗಶಾಸ್ತ್ರ, ತೌಲನಿಕ ಶರೀರಶಾಸ್ತ್ರ ಮತ್ತು ವಿಕಾಸವಿe್ಞÁನಗಳೊಂದಿಗೆ ಈ ಶಾಖೆ ಸಂಪರ್ಕಹೊಂದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ವಿಸ್ತಾರವಾಗಿ ಬೆಳೆಯುತ್ತಿರುವ ಈ ಶಾಖೆ ತೌಲನಿಕ ಪ್ರಾಯೋಗಿಕ ಮನೋವಿe್ಞÁನ, ಜೀವೋತ್ಪತ್ತಿ ವಿಕಾಸ ಮನೋವಿe್ಞÁನ, ತೌಲನಿಕ ಪ್ರಾಣಿ ಮನೋವಿe್ಞÁನ ಮುಂತಾದ ಉಪಶಾಖೆಗಳಿಗೆ ಜನ್ಮವಿತ್ತಿರುವುದು ಗಮನಾರ್ಹ ಅಂಶ. ಈ ಕ್ಷೇತ್ರದಲ್ಲಿಕಂಡುಬರುವ ಸಂಶೋಧನೆಯ ಸಮಸ್ಯೆಗಳು ವೈವಿಧ್ಯಪೂರ್ಣವಾಗಿವೆ. ನಾನಾರೀತಿಯ ಸಮಸ್ಯೆಗಳಲ್ಲಿ ಪ್ರಧಾನವಾದವುಗಳೆಂದರೆ, ಜೀವ ವಿಕಾಸ ಸರಣಿಯಲ್ಲಿ ಕಂಡುಬರುವ ಸಂಕಷ್ಟ ಹಂತಗಳು (ಕ್ರಿಟಿಕಲ್ಲ್ ಸ್ಟೇಜಸ್); ತಂತುವ್ಯವಸ್ಥೆ ಮತ್ತು ವರ್ತನಾವಿಕಾಸ ; ವ್ಯಕ್ತಿಯ ಉತ್ಪತ್ತಿ ವಿಕಾಸ ; ಮೂಲ ಪ್ರೇರಣೆಗಳು ; ಪರಿಪಕ್ವನ ಮತ್ತು ಕಲಿಕೆ ; ಸಸ್ತನಿಗಳ ಮಾನಸಿಕ ಹಿರಿಮೆ ; ವರ್ತನೆಯ ಜೈವಿಕ ಮೂಲಗಳು; ವರ್ತನೆಯ ಮೇಲೆ ಅನುಭವದ ಪ್ರಭಾವ ; ಅಂತ:ಸ್ರವಗಳು ಮತ್ತು ವರ್ತನೆ ; ಚೋದನೆ ಮತ್ತು ಅಭಿಪ್ರೇರಣೆ ; ಸಂವೇದಕತೆ ಮತ್ತು ಪ್ರತ್ಯಕ್ಷಣ; ಕಲಿಕೆಶಕ್ತಿಯ ಉಗಮ ಹಾಗೂ ವಿಕಾಸ ; ಬೌದ್ಧಿಕ ವರ್ತನೆ ಮತ್ತು ಅದರ ಒರೆಗಲ್ಲುಗಳು ; ಒಳನೋಟ ; ವಿವೇಚನೆ; ಮನುಷ್ಯ ಮತ್ತು ಇತರ ಪರಾಣಿಗಳ ನಡುವಣ ಹೋಲಿಕೆ ವ್ಯತ್ಯಾಸಗಳು; ಭಾಷೆ ಮತ್ತು ಸಂದೇಶ ವಿನಿಮಯ ಕ್ರಿಯೆ ; ಸಂವೇಗಶೀಲತೆ, ವ್ಯಕ್ತಿತ್ವ ಮತ್ತು ಅಪಸಾಮಾನ್ಯ ವರ್ತನೆ; ಪರಸ್ಪರ ವಿರೋಧವೆನಿಸುವ ಸಾಮಾಜಿಕ ರೀತಿನೀತಿಗಳು-ಇವೇ ಮುಂತಾದವು. ಈ ಸಮಸ್ಯೆಗಳನ್ನು ತುಲನಾತ್ಮಕವಾಗಿ ಪರಿಶೀಲಿಸಲಾಗುತ್ತದೆ.

ಇಲ್ಲಿ ಅನುಸರಿಸುವ ಸಂಶೋಧನಾ ವಿಧಾನ ತೌಲನಿಕ ಉಪಾಗಮದಿಂದ ಪ್ರೇರಿತವಾಗುತ್ತದೆ. ಹಿಂದೆಯೇ ತಿಳಿಸಿದಂತೆ, ಈ ಕ್ಷೇತ್ರದಲ್ಲಿ ಮೊದಮೊದಲು ಬಳಸಲಾದ ಪ್ರಸಂಗ ನಿರೂಪಣಾವಿಧಾನ ಐತಿಹಾಸಿಕ ಮಹತ್ತ್ವ ಪಡೆದಿದೆಯಷ್ಟೆ. ಇಂದೂ ಅದರ ಉಪಯೋಗ ಅಲ್ಪಸ್ವಲ್ಪವಿದ್ದರೂ ಆ ವಿದಾನದಲ್ಲಿರುವ ಆತ್ಮ ನಿಷ್ಠತೆಯಿಂದಾಗಿ, ಅದನ್ನು ನಿರ್ಣಾಯಕ ವಿಧಾನವೆಂದು ಪರಿಗಣಿಸಲಾಗಿಲ್ಲ. ಆದರೂ ಸಂಪದ್ಭರಿತ ಪ್ರಕ್ಕಲ್ಪನೆಗಳನ್ನು ಒದಗಿಸುವಲ್ಲಿ ಅದು ಮುಖ್ಯ ಪಾತ್ರವನ್ನು ವಹಿಸಬಲ್ಲದು ಎಂಬುದನ್ನು ಕಡೆಗಣಿಸುವಂತಿಲ್ಲ.

ಇಂದು ಈ ಕ್ಷೇತ್ರದಲ್ಲಿ ಪ್ರಾಯೋಗಿಕ ಮತ್ತು ಪಾರಿಮಾಣಿಕ ವಿಧಾನಗಳು ಹೆಚ್ಚು ಬಳಕೆಯಲ್ಲಿವೆ. ಪ್ರಾಯೋಗಿಕ ವಿಧಾನದ ಬಳಕೆಯಿಂದಾಗಿ ದೊರೆತ ತಥ್ಯಾಂಶಗಳ ವೈe್ಞÁನಿಕ ನಿರೂಪಣೆ, ಸಿದ್ಧಾಂತರೂಪಣೆ ಮತ್ತು ಪರಿಶೀಲನೆಗಳಿಗೆ ಬಹಳ ಅನುಕೂಲವಾದಂತಾಗಿದೆ. ಕಲಿಕೆ, ಅಭಿಪ್ರೇರಣೆ, ವಿವೇಚನೆ, ಬುದ್ಧಿಶಕ್ತಿ ಮುಂತಾದ ವರ್ತನಾ ರೀತಿಗಳಿಗೆ ಸಂಬಂಧಿಸಿದಂತೆ ಇಂದು ಸಂಗ್ರಹಿಸಲಾಗಿರುವ ವಿಪುಲ ತಥ್ಯಾಂಶಗಳು, ರೂಪಿತವಾಗಿರುವ ತತ್ತ್ವಗಳು ಮತ್ತು ಸಿದ್ಧಾಂತಗಳು ಪ್ರಾಯೋಗಿಕ ವಿಧಾನದ ಪ್ರತಿಫಲಗಳೆಂದು ಹೇಳಬಹುದು. ಅಲ್ಲದೇ ಇಂದು ನಿರ್ಮಿತವಾಗಿರುವ ಆಗುತ್ತಿರುವ ವಿವಿಧ ಪ್ರಯೋಗೋಪಕರಣಗಳೂ ಈ ವಿಧಾನದ ಪ್ರÀತಿಫಲಗಳೇ. ಇಂಥ ಪ್ರಯೋಗೋಪಕರಣಗಳಲ್ಲಿ ವ್ಯಾಪಕ ಉಪಯುಕ್ತತೆಯುಳ್ಳವುಗಳೆಂದರೆ, ವ್ಯೂಹಗಳು, ಒಗಟಿನ ಪೆಟ್ಟಿಗೆಗಳು, ದ್ವಿಪರ್ಯಾಯ ಪರಿಕರ, ಬಹುವರಣ ಪ್ರಯೋಗೋಪಕರಣ, ಚಟುವಟಿಕೆ ಪಂಜರ ಇತ್ಯಾದಿ. ಅಲ್ಲದೇ ಪ್ರಾಯೋಗಿಕ ಅವಲೋಕನವನ್ನು ಹೆಚ್ಚು ವಸ್ತುನಿಷ್ಠಗೊಳಿಸಲೋಸ್ಕರÀ ಅನೇಕ ಉಪಯುಕ್ತ ದಾಖಲು ಸಾಧನಗಳನ್ನೂ (ಉದಾಹರಣೆಗೆ ಚಲಚ್ಚಿತ್ರಣ) ಮತ್ತು ನಿಯಂತ್ರಣಗಳನ್ನು ಬಿಗಿಗೊಳಿಸಲು ಅನುಕೂಲವಾಗುವಂತೆ ಅವಲೋಕನ ಗುಮ್ಮಟಗಳಂಥ ನಿಯಂತ್ರಣ ಸಾಧನಗಳನ್ನೂ ಬಳಸಿಕೊಳ್ಳಲಾಗುತ್ತಿದೆ. ಇಷ್ಟು ಮಾತ್ರವಲ್ಲದೇ, ಪಾರಿಮಾಣಿಕ ವಿಶ್ಲೇಷಣೆಗೆ ಅನುಕೂಲವಾಗುವಂತೆ ದೊಡ್ಡ ಪ್ರಮಾಣದ ಪ್ರತಿದರ್ಶನಗಳ ಮೇಲೆ ಅಧ್ಯಯನಗಳು ನಡೆಯುತ್ತಿರುವುದು ಗಮನಾರ್ಹ ಸಂಗತಿ (ಉದಾ; ಅಂತರ ಸಾಂಸ್ಕøತಿಕ ಅಧ್ಯಯನಗಳು).

ಒಂದು ಘಟನೆಯ ಅರ್ಥನಿರೂಪಣೆ ವಸ್ತುನಿಷ್ಠಗಳ ಅವಲೋಕನದಿಂದ ದೊರೆತ ಮಾಹಿತಿಗಳನ್ನು ಅವಲಂಬಿಸಬೇಕೇ ಹೊರತು ದೃಷ್ಟಾಂತಗಳನ್ನಲ್ಲ. ಆದ್ದರಿಂದ, ಪ್ರಾಯೋಗಿಕ ಅವಲೋಕನಗಳಿಂದ ದೊರೆತ ದತ್ತಾಂಶಗಳನ್ನು ವಸ್ತುನಿಷ್ಠ ರೀತಿಯಲ್ಲಿ ಸಂಯೋಜಿಸಿ, ಅರ್ಥನಿರೂಪಣೆ ಕೊಡಲು ಅನುಕೂಲವಾಗುವಂತೆ ತೌಲನಿಕ ಮನೋವಿe್ಞÁನದಲ್ಲಿ ಪಾರಿಮಾಣಿಕ ಸಾಧನಗಳನ್ನು ಬಳಸಲಾಗುತ್ತಿದೆ. ಇದರಿಂದಾಗಿ ಸಂಶೋದನೆಗಳಲ್ಲಿ ಸಂಭವಿಸಬಹುದಾದ ಮಾನವತ್ವರೋಪಣೆ ಮತ್ತು ಪೂರ್ವಾಗ್ರಹ ಪೂರ್ಣ ನಿರೂಪಣೆಗಳು ಕಡಿಮೆಯಾಗಲು ಸಾಧ್ಯವಾಗಿದೆ. ಆದರೂ ಸಂಶೋಧನೆಗಳಲ್ಲಿ ಗಣನೀಯ ವಸ್ತುನಿಷ್ಠತೆ ಮತ್ತು ನಿಖರತೆಗಳನ್ನು ಸಾಧಿಸಲು ಇನ್ನೂ ಬಹಳ ಪ್ರಯತ್ನ ನಡೆಯಬೇಕಾಗಿದೆ. ಯಾವುದೇ ಪ್ರಾಣಿಯ ಅಥವ ಪ್ರಾಣಿವರ್ಗದ ವರ್ತನೆಯನ್ನು ವಸ್ತುನಿಷ್ಠವಾಗಿ ಸಮೀಕ್ಷಿಸಿ, ಇತರ ಪ್ರಾಣಿÂ ಅಥವಾ ಪ್ರಾಣಿವರ್ಗದ ವರ್ತನೆಯೊಂದಿಗೆಹೋಲಿಸಿ ನೋಡಬೇಕಾದರೆ ಅವೆರಡರ ಸ್ವಭಾವ, ಹೊಂದಾಣಿಕೆಯ ಮೌಲ್ಯ, ಸನ್ನಿವೇಶ ಮತ್ತು ಜೈವಿಕ ರಚನೆ ಹಾಗೂ ಆ ಪ್ರಾಣಿಗಳ ಅನುಭವದ ಹಿನ್ನೆಲೆಯಲ್ಲಿರುವ ಇತರ ನಿರ್ಧಾರಕಗಳು-ಇವನ್ನೆಲ್ಲ ಸಮಗ್ರವಾಗಿ ಪರಿಶೀಲಿಸಬೇಕಾಗುತ್ತದೆ.

ಕೆಲವು ಪ್ರಮುಖ ವಿಷಯಗಳು : ಮೊದಲು ತಂತುಮಂಡಲ ಮತ್ತು ವರ್ತನೆ; ವ್ಯಕ್ತಿಯ ವರ್ತನೆಗೆ ಪ್ರಧಾನ ದೈಹಿಕ ಆಧಾರವೆಂದರೆ ತಂತು ಮಂಡಲವೆಂಬುದು ಇಂದು ನಿರ್ವಿವಾದವಾದ ಸಂಗತಿ. ಮನುಷ್ಯ ಮತ್ತು ಇತರ ಪ್ರಾಣಿವರ್ಗಗಳ ವರ್ತನೆಯ ಜಟಿಲತೆಯಲ್ಲಿ ಕಂಡುಬರುವ ಹೋಲಿಕೆ ವ್ಯತ್ಯಾಸಗಳಿಗೆ ತಂತುಮಂಡಲ ಒಂದು ಪ್ರಮುಖ ಕಾರಕವಾಗಿದೆ. ಈ ದೈಹಿಕ ವ್ಯವಸ್ಥೆಯ ತೌಲನಿಕ ಅಧ್ಯಯನದಿಂದ ವರ್ತನೆಯ ಬಗ್ಗೆ ಮಹತ್ತ್ವಪೂರ್ಣವಾದ ಒಳನೋಟಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಎಲ್ಲ ರೀತಿಯ ಸಸ್ಯ ಮತ್ತು ಪ್ರಾಣಿಗಳು ಕೆಲವು ಸರಳ ರೂಪಗಳಿಂದ ಪ್ರಾರಂಭವಾಗಿ, ಆಯ್ಕೆ ಪ್ರಕ್ರಿಯೆಯ ಫಲವಾಗಿ ಕ್ರಮೇಣ ವಿಕಾಸ ಹೊಂದಿ ನಾನಾ ರೀತಿಯ ಜಟಿಲ ರೂಪಗಳಾಗಿ ಪರಿಣಮಿಸಿವೆ ಎಂಬುದು ವಿಕಾಸವಾದದ ತಿರುಳು. ಹೀಗೆ ಪರಿಣಮಿಸುತ್ತಿರುವ ವಿವಿಧ ದೈಹಿಕ ಮತ್ತು ಮಾನಸಿಕ ವ್ಯಾಪಾರಗಳನ್ನು ಸಂಘಟಿಸಿ ನಿರ್ದೇಶಿಸುವ ಪ್ರಧಾನ ವ್ಯವಸ್ಥೆ ತಂತುಮಂಡಲ. ಜೀವವಿಕಾಸದ ಮೊದಮೊದಲ ಹಂತಗಳಲ್ಲಿ ಅತಿ ಸರಳ ರಚನೆಯಾಗಿದ್ದು ಕ್ರಮೇಣ ಹೆಚ್ಚು ಹೆಚ್ಚು ಜಟಿಲವಾಗುತ್ತ ಹೋಗಿ, ಕಡೆಯಲ್ಲಿ ಅಂದÀರೆ ಮನುಷ್ಯರಲ್ಲಿ ಕಂಡುಬರುವ ಪ್ರಮಸ್ತಿಷ್ಕ ವಲ್ಕುಟದಲ್ಲಿ (ಸೆರೆಬ್ರಲ್, ಕಾರ್ಟೆಕ್ಸ್) ತನ್ನ ಜಟಿಲತೆಯ ತುತ್ತ ತುದಿಯನ್ನು ಮುಟ್ಟಿದೆ. ಇದರ ವಿಕಾಸಕ್ಕೆ ಅನುಗುಣವಾಗಿ ಜೀವಿ ವರ್ತನೆಯ ಜಟಿಲತೆಯಲ್ಲಿಯೂ ಕ್ರಮೇಣ ಹೆಚ್ಚು ಹೆಚ್ಚು ಜಟಿಲತೆ ಕಂಡುಬರುವುದು ಗಮನಾರ್ಹ ಅಂಶ. ಏಕಕೋಶ ಜೀವಿಗಳಲ್ಲಿ (ಉದಾ; ಅಮೀಬ) ಪ್ರತ್ಯೇಕ ತಂತುರಚನೆಯಿಲ್ಲ. ಆದರೆ ಬಹುಕೋಶಿ ಜೀವವರ್ಗದ ಮೂಲರೂಪವೆನಿಸಿದ ಸ್ಪಂಜುಸಂವೇದನ ಮತ್ತು ಸಂಕೋಚನ ಕ್ರಿಯೆಗಳಿಗೆ ಪ್ರತ್ಯೇಕ ಭಾಗಗಳನ್ನು ಹೊಂದಿರುತ್ತದೆ. ಮುಂದೆ ತಂತುಮಂಡಲದ ವಿಕಾಸದ ಎರಡು ನಿರ್ದಿಷ್ಟ ಹಂತಗಳನ್ನು ಸಿಲೆಂಟರೇಟುಗಳಲ್ಲಿ ಕಾಣಬಹುದು. ಅನಂತರ ಲೋಳೆ ಮೀನಿನಲ್ಲಿ ತಂತುಜಾಲ ರೂಪುಗೊಂಡು ಸಂವೇದನ ಮತ್ತು ವಿದಾಯಕ ವಿಭಾಗಗಳನ್ನು ಸಂಘಟಿಸುವುದರ ಜೊತೆಗೆ ಶಿಥಿಲ ರೂಪದ ವಹನ ಕಾರ್ಯವನ್ನು ನಿರ್ವಹಿಸುವುದನ್ನೂ ನಾವು ಕಾಣಬಹುದು.

ಮುಂದೆ ಮೇಲ್ವರ್ಗದ ಅಕಶೇರುಕಗಳನ್ನೆಲ್ಲ ಅಕ್ಷಾತ್ಮಕ ವ್ಯವಸ್ಥೆ ಕಾಣಿಸಿಕೊಂಡು ಅದರಲ್ಲಿ ಸ್ವತಂತ್ರ ಕ್ರಿಯಾಶಕ್ತಿಯುಳ್ಳ ತಂತುಕೋಶಗಳು ತುಂಬಿರುತ್ತವೆ. ಅಲ್ಲದೇ ಸ್ಥಾನೀಯ ಉದ್ದೀಪನೆಗಳಿಗೆ ಸ್ಥಾನೀಯ ಪ್ರತಿಕ್ರಿಯೆಗಳನ್ನುಂಟುಮಾಡಲು ಕಾರಣವಾಗುತ್ತದೆ. ಆದರೆ ಅಕಶೇರುಕಗಳಲ್ಲೇ ಹೆಚ್ಚು ವ್ಯವಸ್ಥಿತ ರೂಪದಲ್ಲಿರುವ ತಂತುವ್ಯವಸ್ಥೆಯೆಂದರೆ, ಪ್ರತಿಕ್ಷೇಪಚಾಪ,. ಇದು ಎರೆಹುಳುವಿನಂಥ ಜೀವಿಗಳಲ್ಲಿ ಕಂಡುಬರುತ್ತದೆ. ಈ ವ್ಯವಸ್ಥೆಯಲ್ಲಿ ತಂತು ವ್ಯವಸ್ಥೆಯಲ್ಲಿರಬೇಕಾದ ಮೂಲ ರಚನಾಂಶಗಳಿರುವುದು ಗಮನಾರ್ಹ. ಆ ರಚನಾಂಶಗಳೆಂದರೆ ಸಂವೇದನ ತಂತು, ವಿಧಾಯಕ ತಂತು ಮತ್ತು ಸಂದಾಯಕ ತಂತುಗಳು. ಮುಂದೆ ಈ ವ್ಯವಸ್ಥೆ ಸಂದಿಪದಿಗಳಲ್ಲಿ ಅಂಶಿಕ ಏಕತೆಯನ್ನು ಪಡೆದು ತಲೆಯ ಭಾಗದಲ್ಲಿ ಬೃಹತ್ ತಂತುಗುಚ್ಚಗಳು ರೂಪಗೊಂಡು ಮಸ್ತಿಷ್ಕವನ್ನು ಹೋಲುವ ರಚನೆಯುಂಟಾಗುತ್ತದೆ. ಜೀವಿಗಳಲ್ಲಿ ಆಗುತ್ತಿರುವ ವಿವಿಧ ಪ್ರತಿಕ್ರಿಯೆಗಳು ಸಂಘಟನೆಗೆ ಈ ವ್ಯವಸ್ಥೆ ಕಾರಣವಾಗುತ್ತದೆ. ಇದರ ನಾಶದಿಂದ ಜೀವಿಯ ಚಲನೆಯ ವೇಗ ಹಾಗೂ ಚಲನೆಯ ದಿಶೆಗಳಿಗೆ ತೀವ್ರ ಹಾನಿಯುಂಟಾಗುತ್ತದೆ. ಅತ್ಯುಚ್ಚ ಅಕಶೇರುಕ ವರ್ಗದಿಂದ, ಅತ್ಯಂತ ನಿಕೃಷ್ಟವಾದ ಕಶೇರುಕ ವರ್ಗಕ್ಕೆ ಬಂದಾಗ ತಂತುಮಂಡಲ ವಿಕಾಸದಲ್ಲಿ ಮಹತ್ತ್ವಪೂರ್ಣ ಪ್ರಗತಿ ಕಂಡುಬರುತ್ತದೆ. ಈ ಅವಸ್ಥೆಯಲ್ಲಿ ಮಿದುಳು ಬಳ್ಳಿ ತಂತು ಆವೇಗಗಳನ್ನು ನಿರ್ದೇಶಿಸುವುದಲ್ಲದೇ, ಪ್ರತಿಕ್ಷೇಪ ವರ್ತನೆಗಳ ಕೇಂದ್ರವೂ ಆಗಿರುತ್ತದೆ. ಮಸ್ತಿಷ್ಕವಾಗಿ ಪರಿಣಮಿಸುವ ಮಿದುಳುಬಳ್ಳಿಯ ಮೇಲ್ಭಾಗ ಕಶೇರುಕ ವಿಕಾಸದಲ್ಲಿ ಅದ್ಭುತ ಪ್ರಗತಿಯಿಂದ ಕೂಡಿರುತ್ತದೆ.

ಕಶೇರುಕಗಳಲ್ಲಿ ಕಂಡುಬರುವ ಮಸ್ತಿಷ್ಕ ವಿಕಾಸವೆಂದರೆ ಮಸ್ತಿಷ್ಕದ ವಿಕಾಸ. ಕಶೇರುಕ ಶ್ರೇಣಿಯನ್ನು ಏರಿದಂತೆಲ್ಲಾ ಮಸ್ತಿಷ್ಕದ ರೂಪರಚನೆಗಳ ಜಟಿಲತೆ ಹಾಗೂ ಸೂಕ್ಷ್ಮತೆಗಳಲ್ಲಿ ಹೆಚ್ಚು ಮಹತ್ತ್ವಪೂರ್ಣ ವಿಕಾಸವಾಗಿರುವುದನ್ನು ಕಾಣಬಹುದು. ಚಿತ್ರದಲ್ಲಿ ಕಾಣುವಂತೆ ಮೇಲುಕೋಲಿನ ಕಶೇರುಕಗಳಲ್ಲಿ, ಪ್ರಮಸ್ತಿಷ್ಕ ಮತ್ತು ಅನುಮಸ್ತಿಷ್ಕಗಳ ಗಾತ್ರ ಮತ್ತು ಜಟಿಲತೆಗಳಲ್ಲಿ ಮಹತ್ತ್ವಪೂರ್ಣ ವಿಕಾಸ ಕಂಡುಬರುತ್ತದೆ. ಅಲ್ಲದೇ ನಾಯಿ ಮತ್ತು ದೊಡ್ಡ ನರವನರರ ಮಸ್ತಿಷ್ಕಗಳೊಂದಿಗೆ ಹೋಲಿಸಿದಾಗ ಮಾನವ ಮಸ್ತಿಷ್ಕ ಗಾತ್ರ ಜಟಿಲತೆ ಮತ್ತು ಸೂಕ್ಷ್ಮತೆಗಳಲ್ಲಿ ಅತ್ಯಂತ ಬೃಹತ್ ಪ್ರಮಾಣದ ವಿಕಾಸವಾಗಿರುವುದು ಕಂಡುಬರುತ್ತÀದೆ. ಮಾನವ ಮಸ್ತಿಷ್ಕ ವಲ್ಕುಟ ಬಹುಮಟ್ಟಿಗೆ ಸಂವೇದನ ಕಾರ್ಯ ಸಂಘಟನೆಯಿಂದ ಬಹುಮಟ್ಟಿಗೆ ವಿಮುಕ್ತರಾಗಿ, ಉತ್ಕøಷ್ಟ ಹಾಗೂ ಜಟಿಲವಾದ ಆಲೋಚನೆ, ವಿವೇಚನೆ, ಸ್ಮರಣೆ ಮುಂತಾದ ಮನೋವ್ಯಾಪಾರಗಳಿಗೆ ಕೇಂದ್ರವಾಗಿರುವುದು ಕಂಡುಬರುತ್ತದೆ.

ಮೇಲೆ ಸಮಗ್ರವಾಗಿ ಪ್ರಸ್ತಾಪಿಸಲಾದ ತಂತುಮಂಡಲವಿಕಾಸದ ಅರಿವು ನಮಗೆ ದೊರೆತದ್ದು ತೌಲನಿಕ ಅಧ್ಯಯನದಿಂದ ಅಲ್ಲದೇ, ತಂತುಮಂಡಲ ವಿಕಾಸಕ್ಕೂ ಜೀವಿಯ ವರ್ತನಾ ವಿಕಾಸಕ್ಕೂ ನೇರ ಸಂಬಂಧವಿರುವ ಅರಿವೂ ತೌಲನಿಕ ಅಧ್ಯಯನದ ಪ್ರತಿಫಲ. ಅಮೀಬದಿಂದ ಸಂಧಿಪದಿಗಳ ವರೆಗಿನ ಅಕಶೇರುಕ ಜೀವವರ್ಗಗಳಲ್ಲಿ ಅಲ್ಲಿಂದ ಮುಂದೆ, ಮೀನಿನಿಂದ ಮಾನವನ ವರೆಗಿನ ಕಶೇರುಕ ಜೀವಿವರ್ಗಗಳಲ್ಲಿ ವಿಕಾಸ ಶ್ರೇಣಿಯಲ್ಲಿ ಮೇಲುಮೇಲೇರಿದಂತೆಲ್ಲ, ಹೆಚ್ಚು ಹೆಚ್ಚು ಜಟಿಲವಾಗುವ ತಂತುಂಡಲವನ್ನನುಸರಿಸಿ ಜೀವಿಗಳ ವರ್ತನೆಯ ಜಟಿಲತೆಯಲ್ಲಿಯೂ ಮಹತ್ತ್ವಪೂರ್ಣ ವಿಕಾಸವಾಗುವುದನ್ನೂ ಎಲ್ಲರೂ ಮನಗಾಣಬೇಕು. ಹೀಗಿರುವಲ್ಲಿ ಮಾನವನ ಮಟ್ಟದಲ್ಲಿ ಕಂಡುಬರುವ ವರ್ತನೆಯ ಜಟಿಲ ಜಾಲವನ್ನು ಬಿಡಿಸಲು ಕೆಳಪ್ರಾಣಿಗಳಲ್ಲಿ ಕಂಡುಬರುವ ಸರಳ ವರ್ತನಾರೂಪ ರಚನೆಗಳ ಅಧ್ಯಯನಗಳಿಂದ ಅಧಿಕ ನೆರವು ದೊರೆಯುವುದು ತೌಲನಿಕ ಅಧ್ಯಯನಗಳಿಗೆ ಪುಷ್ಟಿ ಕೊಡುತ್ತದೆ. ಕಲಿಕೆ : ಆಧುನಿಕ ಮನೋವಿe್ಞÁನದಲಿ ಕಲಿಕೆಗೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳು ನಡೆದಿವೆ. ಇವುಗಳಲ್ಲಿ ತೌಲನಿಕ ಅಧ್ಯಯನಗಳಿಗೆ ಕೊರತೆಯಿಲ್ಲ. ಪ್ರಾಣಿಗಳ ಮತ್ತು ಮಾನವಕಲಿಕೆಯ ತೌಲನಿಕ ಅಧ್ಯಯನಗಳು ಕಲಿಕೆ ಕ್ಷೇತ್ರ ಶ್ರೀಮಂತಗೊಳಿಸಿವೆ. ಕಲಿಕೆಗೆ ಸಂಬಂಧಿಸಿದಂಥೆ ಸಿದ್ದಾಂತಗಳನ್ನು ನಿಯಮಗಳನ್ನು ರೂಪಿಸುವಲ್ಲಿ ಬಹುಮಟ್ಟಿಗೆ ನೆರವಾಗಿವೆ.

ಕಲಿಕೆಗೆ ಸಂಬಂಧಿಸಿದಂತೆ ನಡೆಸಿರುವ ಪ್ರಯೋಗಗಳಲ್ಲಿ ಹೇಗೋ ಹಾಗೆ ಆ ಪ್ರಯೋಗಗಳಲ್ಲಿ ಬಳಸಲಾದ ಸಮಸ್ಯೆಗಳ ಹಾಗೂ ಪ್ರಯೋಗೋಪಕರಣಗಳಲ್ಲಿಯೂ ವೈವಿಧ್ಯವಿದೆ. ಮುಖ್ಯವಾಗಿ ನಾನಾ ರೀತಿಯ ವ್ಯೂಹಗಳು, ಸಮಸ್ಯಾಪೆಟ್ಟಿಗೆಗಳು ಮತ್ತು ಇತರ ಸಲಕರಣೆಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಏಕಕೋಶಪ್ರಾಣಿವರ್ಗದಿಂದ ಮೇಲ್ಮಟ್ಟ ಎಲ್ಲ ಪ್ರಾಣಿವರ್ಗಗಳಿಗೂ ಸಾಪೇಕ್ಷವಾಗಿ ಕಲಿಯುವ ಶಕ್ತಿ ಇರುತ್ತದೆ ಎಂಬುದು ತೌಲನಿಕ ಅಧ್ಯಯನಗಳಿಂದ ಹೊರಬಿದ್ದಿರುವ ಸತ್ಯ.

ಅಕಶೇರುಕಗಳನ್ನು ಪರಿಗಣಿಸಿದಾಗ ಪೆರಮೆಸಿಯಂತಂಥ ನಿಕೃಷ್ಟ ಜೀವಿಯಲ್ಲಿಯೂ ಅದರ ಎರಡಾಗುವ ಕ್ರಿಯೆಯಲ್ಲಿ ಒಂದು ಅನುಭವಕ್ಕಿಂತ ಮತ್ತೊಂದು ಅನುಭವ ಉತ್ತಮವಾದುದಕ್ಕೆ ಪ್ರಾಯೋಗಿಕ ಆಧಾರಗಳಿವೆ. ಎರೆಹುಳು ಮತ್ತು ಅದಕ್ಕೆ ಮೇಲ್ಪಟ್ಟ ವರ್ಗದ ಪ್ರಾಣಿಗಳಲ್ಲಿ ಕಲಿಯುವಿಕೆ ಇರುವುದರಲ್ಲಿ ಎರಡಭಿಪ್ರಾಯವಿಲ್ಲ. ಪ್ರಯೋಗವೊಂದರಲ್ಲಿ, ಒಂದು ಸರಳ ಆಕಾರದ ವ್ಯೂಹದಲ್ಲಿ ಎರೆಹುಳು ಬಲ ಮತ್ತು ಎಡಭಾಗಗಳಿಗೆ ತಿರುಗಲು ಮೊದಲು ಕಲಿತುದಲ್ಲದೇ ತಾನು ಕಲಿತದ್ದನ್ನು ಮೂರು ವಾರಗಳ ವರೆಗೆ ನೆನಪಿನಲ್ಲಿಟ್ಟುಕೊಳ್ಳಲು ಸಮರ್ಥವಾಗಿತ್ತು ಎಂಬುದು ಮರು ಪ್ರಯೋಗದಿಂದ ಸ್ಥಿರಪಟ್ಟಿತು. ಇದರಂತೆಯೇ ಚುಕ್ಕಿ ಮೀನು, ಬಸವನಹುಳು, ಜಿರಲೆ, ಇರುವೆ ಮುಂತಾದ ಅನೇಕ ಅಕಶೇರುಕ ಪ್ರಾಣಿಗಳು ಕಲಿಯುವ ಶಕ್ತಿಯನ್ನು ಹೊಂದಿರುವುದು ಪ್ರಯೋಗಗಳಿಂದ ಪ್ರಕಟವಾಗುತ್ತದೆ.

ಕಲಿಯುವ ಶಕ್ತಿ ಕಶೇರುಕಗಳಲ್ಲಿ ಗಣನೀಯವಾಗಿ ಪ್ರಕಟವಾಗುತ್ತದೆ. ಕಲಿಯುವುದರಲ್ಲಿ ವೈವಿಧ್ಯವೂ ಕಂಡುಬರುತ್ತದೆ. ತೌಲನಿಕ ಅಧ್ಯನಗಳಲ್ಲಿ ವ್ಯೂಹ ಬಹು ಉಪಯುಕ್ತವಾಗಿದೆ. ಪ್ರಯೋಗವೊಂದರಲ್ಲಿ ಇಲಿಗಳ ವ್ಯೂಹ ಕಲಿಕೆ ಮತ್ತು ಕಾಲೇಜು ವಿದ್ಯಾರ್ಥಿಗಳ ವ್ಯೂಹಕಲಿಕೆಗಳನ್ನು ಹೋಲಿಸಿ ನೋಡಿದಾಗ, ಮೂಲಭೂತ ವ್ಯತ್ಯಾಸಗಳು ಕಂಡುಬರದಿರುವುದು ಗಣನೀಯ ಸಂಗತಿ. ಇದಕ್ಕೆ ಬಹುಶ: ಸಮಸ್ಯೆಯ ಸರಳತೆ ಕಾರಣವಾಗಿದೆ ಎಂಬುದು ತಜ್ಞರ ಅಭಿಮತ. ಸರಳ ಸಮಸ್ಯೆಗಳ ಕಲಿಕೆಯಲ್ಲಿ, ಜೀವವಿಕಾಸ ಶ್ರೇಣಿಯ ವಿವಿಧ ಹಂತಗಳಲ್ಲಿ ಅದರಲ್ಲಿಯೂ ಹೆಚ್ಚಾಗಿ ಸಸ್ತನಿಗಳಲ್ಲಿ ಅಷ್ಟಾಗಿ ವ್ಯತ್ಯಾಸಗಳು ಕಂಡುಬರದಿದ್ದರೂ ಜಟಿಲ ಸಮಸ್ಯೆಗಳ ಕಲಿಕೆಯಲ್ಲಿ ವ್ಯಾಪಕ ವ್ಯತ್ಯಾಸಗಳಿರುವುದು ಕಂಡುಬರುತ್ತದೆ. ಉದಾಹರಣೆಗೆ ಜಂಕಿನ್ಸನ ಸಮಸ್ಯಾ ಪಟ್ಟಿಗೆಯ ಮರ್ಮವನ್ನು ಭೇದಿಸುವಲ್ಲಿ ವಿವಿಧ ಸಸ್ತನಿಗಳು ಗಣನೀಯ ವ್ಯತ್ಯಾಸಗಳನ್ನು ತೋರಿಸಿದವು. ಈ ಸಮಸ್ಯೆಯನ್ನು ಬಿಡಿಸುವಲ್ಲಿ ಗಿನಿ ಹಂದಿಗಳು ಸಂಪೂರ್ಣ ವಿಫಲವಾದರೆ, ಬೆಕ್ಕುಗಳು ಸ್ವಲ್ಪ ಯಶಸ್ಸು ಗಳಿಸಿದವು. ಆದರೆ ಮಂಗಗಳು ನಿಷ್ಕøಷ್ವವಾಗಿ ಕಲಿಯಲು ಸಮರ್ಥವಾದವು.

ಕಲಿಕೆಯ ಬಗ್ಗೆ ನಡೆದಿರುವ ವಿಕಾಸಾತ್ಮಕ ಹಾಗೂ ತೌಲನಿಕ ಸಂಶೋಧನೆಗಳನ್ನು ಆಧರಿಸಿ ಜುಬೆಕ್ ಮತ್ತು ಸೋಲ್‍ಬರ್ಗ್ ಹೀಗೆ ನಿರ್ಣಯಿಸಿದ್ದಾರೆ:

1 ಸರಳ ಸಮಸ್ಯೆಗಳ ಕಲಿಕೆಯ ವೇಗದಲ್ಲಿ ಜೀವವಿಕಾಸದ ಹಂತಗಳಲ್ಲಿ ಪರಸ್ಪರ ವ್ಯತ್ಯಾಸಗಳು ಕಂಡುಬರುವುದಿಲ್ಲ. 2 ಜೀವವಿಕಾಸ ಶ್ರೇಣಿಯ ಮೇಲುಮೇಲಿನ ಹಂತಗಳನ್ನು ಏರಿದಂತೆಲ್ಲ ಕಲಿಕೆಯಲ್ಲಿ ಹೆಚ್ಚು ಹೆಚ್ಚು ಜಟಿಲ ಸಾಂಕೇತಿಕ ಮನೋವ್ಯಾಪಾರಗಳಿರುವುದು ಕಂಡುಬರುತ್ತದೆ. 3 ಜೀವವಿಕಾಸ ಮುಂದುವರಿದಂತೆಲ್ಲ ಮೂಲ ಅಥವಾ ಮುಂಚಿನ ಕಲಿಕೆ ಹೆಚ್ಚು ಹೆಚ್ಚು ನಿಧಾನವಾಗುತ್ತದೆ.

ಹೀಗೆ ತೌಲನಿಕ ಅಧ್ಯಯನಗಳು, ಕಲಿಯುವಿಕೆಯ ಸ್ವಭಾವ ಮತ್ತು ರೀತಿಗಳ ಬಗ್ಗೆ ಅರ್ಥಪೂರ್ಣ ನಿರ್ಣಯಗಳಿಗೆ ಬರಲು ನೆರವಾಗುವುದರ ಜೊತೆಗೆ ಮಾನವನಲ್ಲಿ ಕಂಡುಬರುವ ಜಟಿಲ ರೂಪದ ಕಲಿಯುವಿಕೆಯನ್ನು ಅರ್ಥ ಮಾಡಿಕೊಂಡು ವ್ಯವಹರಿಸುವಲ್ಲಿ ಮಹತ್ತ್ವಪೂರ್ಣ ನೆರವು ನೀಡಬಲ್ಲವು. ಇಷ್ಟಲ್ಲದೇ ಕಲಿಯುವ ಶಕ್ತಿಯ ವಿಕಾಸ ಮತ್ತು ತಂತುಮಂಡಲ ವಿಕಾಸಗಳ ನಡುವೆ ನೇರ ಸಂಬಂಧವಿರುವುದೂ ತೌಲನಿಕ ಅಧ್ಯಯನಗಳಿಂದ ಹೊರಬಿದ್ದ ಸತ್ಯ.

ವಿವೇಚನೆ : ವಿವೇಚನೆ ಕೇವಲ ಮನುಷ್ಯನಲ್ಲೇ ಇರುವ ಶಕ್ತಿಯಲ್ಲ. ಪ್ರಾಣಿಗಳಲ್ಲಿಯೂ ಸಾಪೇಕ್ಷವಾಗಿ ಅದು ಕಂಡುಬರುತ್ತದೆ ಎಂಬುದು ತೌಲನಿಕ ಆಧ್ಯಯನಗಳಿಂದ ಬೆಳಕಿಗೆ ಬಂದಿದೆ. ಮನುಷ್ಯ ವಿವೇಚನಾಶೀಲ ಜೀವಿ ಎಂದು ಹೇಳುತ್ತ ಕೇವಲ ವಿವೇಚನೆಯ ಆಧಾರದ ಮೇಲೆಯೇ ಪ್ರಾಣಿಗಳಿಂದ ಮನುಷ್ಯ ವಿಭಿನ್ನನಾಗಿದ್ದಾನೆ ಎಂದು ಹೇಳುವುದಕ್ಕೆ ಆದಾರವಿಲ್ಲವೆಂಬುದು ಇಂದು ಸಿದ್ಧ ಸತ್ಯ. ತೌಲನಿಕ ಮನೋವಿe್ಞÁನಿಗಳು, ಪ್ರಾಣಿಗಳು ಮತ್ತು ಮನುಷ್ಯರನ್ನು ಸಾಪೇಕ್ಷವಾಗಿ ಸಮಾನವೆನಿಸುವ ಸನ್ನಿವೇಶಗಳಲ್ಲಿ ಪ್ರಯೋಗಗಳಿಗೆ ಒಳಪಡಿಸಿ ಅಲ್ಲಿ ಪ್ರಕಟವಾಗುವವಿವೇಚನಾ ವರ್ತನೆಯನ್ನು ತುಲನಾತ್ಮಕವಾಗಿ ಪರಿಶೀಲಿಸುವ ಪ್ರಯತ್ನದಲ್ಲಿ ಸ್ವಲ್ಪಮಟ್ಟಿಗೆ ಜಯಶಾಲಿಗಳಾಗಿದ್ದಾರೆ ಎಂದು ಹೇಳಬಹುದು.

ಮನುಷ್ಯರಲ್ಲಿರುವಂತೆ ಕೆಲವು ಪ್ರಾಣಿವರ್ಗಗಳಲ್ಲಿಯೂ ವಿವೇಚನೆಯಂಥ ಸಾಂಕೇತಿಕ ಮನೋವ್ಯಾಪಾರಗಳಿರುತ್ತವೆಂಬ ಪ್ರಾಕಲ್ಪನೆಯನ್ನು ಪರಿಶೀಲಿಸಲು ಅನೇಕ ಪ್ರಯೋಗಗಳು ನಡೆದಿವೆ. ಇವುಗಳಲ್ಲಿ ಪ್ರಮುಖವಾದದು ವಿಲಂಬಿತ ಅನುಕ್ರಿಯೆ ಪ್ರಯೋಗ. ಈ ಪ್ರಯೋಗಕ್ಕೆ ಹಂಟರನ ವಿಲಂಬಿತ ಅನುಕ್ರಿಯೆ ಪ್ರಯೋಗೋಪಕರಣ ಬಹು ಉಪಯುಕ್ತವೆನಿಸಿದೆ. ಇಂಥ ಉಪಕರಣವನ್ನು ಉಪಯೋಗಿಸಿಕೊಂಡು ವಿವಿಧ ಪ್ರಾಣಿಗಳು ಮತ್ತು ಮಾನವ ಶಿಶುಗಳ ಮೇಲೆ ನಡೆಸಲಾದ ತೌಲನಿಕ ಆಧ್ಯಯನಗಳಿಂದ ತಿಳಿದುಬಂದ ತಥ್ಯಾಂಶವೆಂದರೆ, ಸಾಂಕೇತಿಕ ಮನೋವ್ಯಾಪಾರ ಮೇಲ್ವರ್ಗದ ಪ್ರಾಣಿಗಳಲ್ಲಿಯೂ ಮನುಷ್ಯನಲ್ಲಿಯೂ ಕಂಡುಬರುವ ಮನೋವ್ಯಾಪಾರವೆಂಬುದು. ಇಲಿಗಳು ಮತ್ತುನಾಯಿಗಳಲ್ಲಿ ಅಷ್ಟರಮಟ್ಟಿಗೆ ಕಂಡುಬರದ ಈ ವ್ಯಾಪಾರ ಚಿಂಪಾಂಜಿಗಳು ಮತ್ತುಮಾನವ ಶಿಶುಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ.

ವಿವೇಚನಾ ವರ್ತನೆಗೆ ಸಂಬಂಧಿಸಿದಂತೆ, ಪ್ರಾಣಿಗಳು, ಮಕ್ಕಳು ಮತ್ತು ವಯಸ್ಕರ ಮೇಲೆ ತೌಲನಿಕ ಅಧ್ಯಯನಗಳು ನಡೆದಿವೆ. ಇಂಥ ಅಧ್ಯಯನಗಳ ಉದ್ದೇಶಗಳೆಂದರೆ 1 ಪ್ರಾಣಿಗಳ ಮಟ್ಟದಲ್ಲಿ ವಿವೇಚನಾ ಸಾಮಥ್ರ್ಯವಿರುವುದರ ಪ್ರತಿಪಾದನೆ, 2 ಪ್ರಾಣಿಗಳು ಮತ್ತು ಮನುಷ್ಯರ ವಿವೇಚನಾ ವ್ಯಾಪಾರಗಳನ್ನು ಪರಸ್ಪರ ಹೋಲಿಸಿ ನೋಡಲು ಅನುಕೂಲವಾಗುವಂತೆ ಸಾಪೇಕ್ಷವಾಗಿ ಒಂದೇ ರೀತಿಯ ಪ್ರವಿಧಿಗಳನ್ನು ಉಪಯೋಗಿಸಲು ಸಾಧ್ಯವೆಂಬುದನ್ನು ತೋರಿಸಿಕೊಡುವುದು ಮತ್ತು 3 ವಿವೇಚನೆಯ ಮೂಲ ಸ್ವಭಾವವನ್ನು ಅರಿಯುವುದು.

ವಿವೇಚನಾ ಪ್ರಕ್ರಿಯೆಯಲ್ಲಿ ಮುಖ್ಯವಾಗಿ ಮೂರು ತತ್ತ್ವಗಳು ಅಡಕವಾಗಿರುವುದು ಸಂಶೋಧನೆಗಳಿಂದ ಬೆಳಕಿಗೆ ಬಂದಿವೆ. ಅವು : (1) ಹಿಂದೆ ಕೆಲವು ಸಂದರ್ಭದಲ್ಲಿ ಕಂಡುಕೊಂಡ ಪರಿಹಾರಗಳನ್ನು ಅದೇ ರೀತಿ ಪುನರುತ್ಪಾದಿಸಿದಾಗ ಪ್ರಸಕ್ತ ಸಮಸ್ಯೆಗಳು ಪರಿಹಾರವಾಗದಿದ್ದಾಗ, ಹಿಂದಿನ ಪರಿಹಾರಗಳನ್ನು ಸೂಕ್ತ ರೀತಿಯಲ್ಲಿ ಸಮನ್ವಯಗೊಳಿಸುವುದರ ಮೂಲಕ ಪ್ರಸಕ್ತ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳವುದು. ಉದಾಹರಣೆಗೆ ಮೆಯರ್‍ನ ಪ್ರಯೋಗಗಳಲ್ಲಿ ಈ ತತ್ತ್ವವನ್ನು ಕಾಣಬಹುದು. ಇಲಿಗಳು ಮತ್ತು ಮಕ್ಕಳ ವಿವೇಚನೆಯನ್ನು ಕಂಡುಹಿಡಿಯಲು ಆತ ಬಳಸಿದ ಪ್ರಯೋಗೋಪಕರಣಗಳನ್ನು 4 ಮತ್ತು 5 ನೆಯ ಚಿತ್ರಗಳಲ್ಲಿ ಕಾಣಬಹುದು. (ಚಿತ್ರದಲ್ಲಿ ಇಲಿಗಳ ವಿವೇಚನೆ ಪರೀಕ್ಷಣ ಚಿತ್ರದಲ್ಲಿ ಮಕ್ಕಳ ಆಲೋಚನೆ ಪರೀಕ್ಷಣ); (2) ಸನ್ನಿವೇಶವೊಂದರಲ್ಲಿ, ಒಂದು ಪ್ರತಿಫಲನದೊಂದಿಗೆ ಸಂದರ್ಭೋಚಿತ ಸಂಬಂಧವನ್ನು ಹೊಂದಿರುವ ಅಂಶವೊಂದು, ಅದೇ ಸನ್ನಿವೇಶದ ಇತರ ಅಂಶಗಳೊಂದಿಗೆ ಯಾವಾಗಲೂ ಒಂದೇ ರೀತಿಯ ಸಂಬಂಧವನ್ನು ಹೊಂದಿರುತ್ತವೆ ಎಂಬ ತತ್ತ್ವವನ್ನು ಅರಿಯುವುದು. ಉದಾಹರಣೆಗೆ ಯರ್ಕೀಸನ ಪ್ರಯೋಗಗಳಲ್ಲಿ ಈ ತತ್ತ್ವ ಅಡಕವಾಗಿದೆ. ತನ್ನ ಪ್ರಯೋಗಗಳಿಗೆ ಆತ ಬಳಸಿದ ಪ್ರಯೋಗೋಪಕರಣಗಳನ್ನು 6 ಮತ್ತು 7ನೆಯ ಚಿತ್ರಗಳಲ್ಲಿ ಕಾಣಬಹುದು. (ಚಿತ್ರದಲ್ಲಿ ಯರ್ಕಿಸನ ಬಹುವರಣ ಪ್ರಯೋಗೋಪಕರಣ-ಪ್ರಾಣಿಗಳಿಗಾಗಿ; ಚಿತ್ರದಲ್ಲಿ ಯರ್ಕೀಸನ ಬಹುವರಣ ಪ್ರಯೋಗೋಪಕರಣ-ಮನುಷ್ಯರಿಗಾಗಿ ; ಮತ್ತು (3) ಕಲಾತ್ಮಕವಾಗಿ ಒಂದರೊಡನೊಂದು ವಿಶಿಷ್ಟ ಸಂಬಂಧ ಹೊಂದಿರುವ ಅನುಕ್ರಿಯೆಗಳ ಸರಣಿಯೊಂದನ್ನು ಉಂಟುಮಾಡಲು ಬೇಕಾಗುವ ಒಳನೋಟವನ್ನು ಪಡೆಯುವುದು. ಉದಾಹರಣೆಗೆ ಹಂಟರನ ಪ್ರಯೋಗಗಳಲ್ಲಿ ಈ ತತ್ತ್ವ ಅಡಕವಾಗಿದೆ. ತನ್ನ ಪ್ರಯೋಗಗಳಿಗೆ ಆತ ಬಳಸಿದ ಪ್ರಯೋಗೋಪಕರಣವನ್ನು 8ನೆಯ ಚಿತ್ರದಲ್ಲಿ ಕಾಣಬಹುದು.

ಸಾಪೇಕ್ಷವಾಗಿ ಪ್ರಾಣಿಗಳಲ್ಲಿಯೂ (ಅದರಲ್ಲಿಯೂ ಮೇಲ್ವರ್ಗದಸಸ್ತನಿಗಳಲ್ಲಿ) ವಿವೇಚನಾಶಕ್ತಿಯಿದೆ ಎಂಬ ತಥ್ಯಾಂಶವನ್ನು ಬೆಳಕಿಗೆ ತರಲು ಪ್ರಧಾನವಾಗಿ ತೌಲನಿಕ ಅಧ್ಯಯನಗಳು ಕಾರಣವಾದವು. ಈ ಕ್ಷೇತ್ರದ ಸಂಶೋಧÀಕರು ಪ್ರಾಣಿಗಳು ಹಾಗೂ ಮನುಷ್ಯರಿಗೆ ನಿರ್ಮಿಸಿದ ಪರಸ್ಪರ ಹೋಲಿಕೆಯುಳ್ಳ ಪರ್ಯಾಯರೂಪದ ಪ್ರಯೋಗೋಪಕರಣಗಳು, ಮೇಲೆ ಪ್ರಸ್ತಾಪಿಸಲಾದ ಮೂರು ತತ್ತ್ವಗಳ ಪರಿಶೀಲನೆಗೆ ಬಹಳ ನೆರವಾದವು.

ಬುದ್ಧಿಶಕ್ತಿ: ತೌಲನಿಕ ಮನೋವಿe್ಞÁನ ಪ್ರಕಾರ. ಸಮರ್ಪಕ ಹೊಂದಾಣಿಕೆಗಳನ್ನು ಸಾಧಿಸಿಕೊಳ್ಳಲು ಬೇಕಾದ ಕಾರ್ಯಗಳನ್ನು ನಿರ್ವಹಿಸುವ ಶಕ್ತಿಯೇ ಬುದ್ಧಿಶಕ್ತಿಯೆನಿಸುತ್ತದೆ. ಈ ದೃಷ್ಟಿಯಿಂದ ನೋಡಿದಾಗ, ಬುದ್ಧಿಶಕ್ತಿ ಕೇವಲ ಮನುಷ್ಯನಿಗೆ ಮೀಸಲಾಗಿಲ್ಲವೆಂಬುದು ವೇದ್ಯವಾಗುತ್ತದೆ. ಅಂದ ಮೇಲೆ ಪ್ರಾಣಿಗಳು ಮತ್ತು ಮನುಷ್ಯರ ಬುದ್ಧಿಶಕ್ತಿಯ ನಡುವಣ ಹೋಲಿಕೆ ಮತ್ತು ವ್ಯತ್ಯಾಸಗಳ ಪ್ರಮಾಣವೆಷ್ಟು ಎಂಬ ಪ್ರಶ್ನೆ ಏಳುತ್ತದೆ. ಈ ಪ್ರಶ್ನೆಗೆ ಉತ್ತರವನ್ನು ದೊರಕಿಸಿಕೊಳ್ಳಲು ನಾವು ತೌಲನಿಕ ವಿಧಾನವನ್ನು ಆಶ್ರಯಿಸದೆ ಗತ್ಯಂತರವಿಲ್ಲ. ಬುದ್ಧಿಶಕ್ತಿ ಮಾಪನಕ್ಕೆ ನೆರವಾದ ಎರಡು ಪ್ರಮುಖ ಧೃತಿಕಲ್ಪನೆಗಳು ಹೀಗಿವೆ : 1 ಶಕ್ತಿಸಾಮಥ್ರ್ಯದ ಮಟ್ಟ ವ್ಯಕ್ತಿಯ ವರ್ತನೆಯಲ್ಲಿ ಪ್ರತಿಫಲಿಸುತ್ತದೆ. ಹೀಗಿರುವುದರಿಂದ, ಪ್ರಕಟ ವರ್ತನೆಯ ಮೌಲ್ಯಮಾಪನ ಮಾಡುವುದರ ಮೂಲಕ ವ್ಯಕ್ತಿಯ ಶಕ್ತಿಸಾಮಥ್ರ್ಯವನ್ನು ಅಳೆಯಲು ಸಾಧ್ಯ ಮತ್ತು 2 ವಿವಿಧ ವ್ಯಕ್ತಿಗಳಿಗೆ ಸಮಾನಾವಕಾಶಗಳನ್ನು ಕೊಟ್ಟಾಗ ಹೆಚ್ಚು ಬುದ್ಧಿಶಾಲಿಯಾದ ವ್ಯಕ್ತಿ ತನ್ನ ಸಮವಯಸ್ಕರಿಗಿಂತ ತನ್ನ ನಿತ್ಯದ ಅನುಭವಗಳಿಂದ ಹೆಚ್ಚು ಲಾಭವನ್ನು ಪಡೆದುಕೊಳ್ಳುವನಲ್ಲದೇ, ಸಮಸ್ಯೆಗಳನ್ನು ಪರುಹರಿಸುವುದರಲ್ಲಿಯೂ ಹೆಚ್ಚು ಸಮರ್ಥನಾಗಿ ವರ್ತಿಸುತ್ತಾನೆ. ಈ ಧೃತಿಕಲ್ಪನೆಗಳ್ನನು ತೌಲನಿಕ ಅಧ್ಯಯನಗಳಲ್ಲೂ ಬಳಸಿಕೊಂಡು, ಬುದ್ಧಿಶಕ್ತಿಯ ವಿಕಾಸವನ್ನು ಪುನರ್ರಚಿಸಲಾಗಿದೆ.

ಹಿಂದೆಯೇ ತಿಳಿಸಿದಂತೆ, ಮನುಷ್ಯರು ಮತ್ತು ಪ್ರಾಣಿಗಳ ಅಂತರವನ್ನು ಕುಗ್ಗಿಸಿದ ಹಾಗೂ ಹಿಗ್ಗಿಸಿದ ಶ್ರೇಯಸ್ಸು ಜೀವವಿಕಾಸ ಸಿದ್ಧಾಂತಕ್ಕೆ ಸೇರಿದ್ದು. ಮನುಷ್ಯನ ಮಟ್ಟದಲ್ಲಿ ಸಾಮಾನ್ಯವಾಗಿ ಕಂಡುಬರುವ ಎಲ್ಲ ಗುಣಗಳ ಮೂಲ ಸ್ವರೂಪಗಳನ್ನೂ ಪ್ರಾಣಿಗಳ ಮಟ್ಟದಲ್ಲಿಯೇ ಕಾಣಲು ಸಾಧ್ಯವಿದೆ ಎಂಬ ವೈe್ಞÁನಿಕ ನಂಬಿಕೆಯ ಬೆಳವಣಿಗೆಗೆ ಮೇಲಿನ ಸಿದ್ಧಾಂತ ಕಾರಣವಾದುದು ಸರಿಯಷ್ಟೇ. ಇತರ ಕೆಲವುಗುಣಗಳಂತೆಯೇ ಮನುಷ್ಯನ ಬೌದ್ಧಿಕ ಶಕ್ತಿ ಸಾಮಥ್ರ್ಯಗಳೂ ಜೀವಜಾತಿ ವಿಕಾಸದ ಫಲಗಳು ಎಂದು ನಿರ್ಣಯಿಸಲು ತೌಲನಿಕ ಮನೋವಿe್ಞÁನದಲ್ಲಿ ನಡೆದಿರುವ ಸಂಶೋಧನೆಗಳು ಅಮೂಲ್ಯ ದತ್ತಾಂಶಗಳನ್ನು ಒದಗಿಸಿದೆ. ಬುದ್ಧಿಶಕ್ತಿಯ ಅಧ್ಯಯನಕ್ಕೆಂದೇ ತೌಲನಿಕ ಮನೋವಿe್ಞÁನದಲ್ಲಿ ನಡೆದಿರುವ ಸಂಶೋಧನೆಗಳ ಸಂಖ್ಯೆ ಬಹಳ ಕಡಿಮೆ ಇದ್ದರೂ ಕಲಿಕೆ ಮತ್ತು ವಿವೇಚನೆಗಳ ಮೇಲೆ ನಡೆಸಲಾಗಿರುವ ಅನೇಕ ಅಧ್ಯಯನಗಳು ಬುದ್ದಿಶಕ್ತಿಯ ವಿಕಾಸದ ಚಿತ್ರವನ್ನು ಪುನರ್ರಚಿಸುವಲ್ಲಿ ಕೆಲವು ಪುರಾವೆಗಳನ್ನು ಒದಗಿಸುತ್ತಿವೆ ಎಂದು ಹೇಳಬಹುದು. ಅಂಥ ಕೆಲವು ಪುರಾವೆಗಳನ್ನು ಸಮರ್ಥವಾಗಿ ಬಳಸಿಕೊಂಡುಬುದ್ಧಿ ಶಕ್ತಿಯ ವಿಕಾಸದ ಚಿತ್ರವೊಂದನ್ನು ಪುನರ್ರಚಿಸಿದ ಶ್ರೇಯಸ್ಸು ನಿಸೆನ್‍ಗೆ ಸೇರಬೇಕು. ಮನುಷ್ಯನೂ ಸೇರಿದಂತೆ ಪ್ರಾಣಿಪ್ರಪಂಚದಲ್ಲಿ ಕಂಡುಬರುವ ಬುದ್ಧಿಶಕ್ತಿ ವಿಕಾಸದ ಒಂದು ಸ್ಥೂಲ ಅಂದಾಜನ್ನು ಆತ ಮಾಡಿದ್ದಾನೆ (ಚಿತ್ರದಲ್ಲಿ). ಜೀವ ಜಾತಿ ವಿಕಾಸ ಮುಂದುವರಿದಂತೆ ಮೇಲ್ವರ್ಗದ ಪ್ರಾಣಿಗಳು ಹೆಚ್ಚು ಜಟಿಲ ಸಮಸ್ಯೆಗಳನ್ನು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಹಾಗೂ ಹೆಚ್ಚು ಶೀಘ್ರವಾಗಿ ಬಿಡಿಸಲು ಸಮರ್ಥವಾಗುತ್ತವೆ ಎಂಬುದರ ಒಂದು ಕಲ್ಪನೆಯನ್ನು ಈ ಚಿತ್ರದಲ್ಲಿ ಕಾಣಬಹುದು.

ಬುದ್ಧಿ ಶಕ್ತಿಯ ತುಲನಾತ್ಮಕ ಅಧ್ಯಯನ ನಡೆಸುವಾಗ ತೌಲನಿಕ ಮನೋವಿe್ಞÁನಿ ಗಮನದಲ್ಲಿಡುವ ಪ್ರಮುಖ ಅಂಶಗಳೆಂದರೆ, ಬುದ್ಧಿಯ ನಿಕಷಗಳು, ವರ್ತನೆಯಲ್ಲಿ ಕಂಡುಬರುವ ಒಳನೋಟಗಳು, ಪರೋಕ್ಷ ಪರಿಹಾರವನ್ನು ಪಡೆಯಲು ಇರುವ ಸಾಪೇಕ್ಷ ಅಭಿಕ್ಷಮತೆ, ವಿವೇಚನೆ, ಮನೋಮುದ್ರೆಗಳಿಂದ (ಸ್ಟೀರಿಯೋಟೈಪ್) ಸಾಪೇಕ್ಷ ಸ್ವಾತಂತ್ರ್ಯ - ಮುಂತಾದವುಗಳು. ಇಂಥ ಪ್ರಾಣಿಗಳ ಬುದ್ಧಿಶಕ್ತಿಯನ್ನು ಹೋಲಿಸಿನೋಡಲು ಸಾಧ್ಯವಾಗುತ್ತದೆ.

ಬುದ್ಧಿಶಕ್ತಿಯ ವಿಕಾಸವನ್ನು ಪುನರ್ರಚಿಸಲು ತೌಲನಿಕ ಮನೋವಿe್ಞÁನಿಗಳು ಬಳಸಿಕೊಂಡಿರುವ ಅಧ್ಯಯನಗಳಲ್ಲಿ ಪ್ರಧಾನವಾದವುಗಳೆಂದರೆ ಕೆಲವು ಕಲಿಕೆ ಹಾಗೂ ವಿವೇಚನಾ ಅಧ್ಯಯನಗಳು (ಉದಾ; ವ್ಯೂಹಕಲಿಕೆ, ಸಮಸ್ಯಾಪೂರಣ, ಬಹುವರಣ ಇತ್ಯಾದಿ ಸಮಸ್ಯೆಗಳಿಗೆ ಸಂಬಂಧಿಸಿದ ಅಧ್ಯಯನಗಳು. ಉದಾಹರಣೆಗೆ ಸಮಸ್ಯಾಪೆಟ್ಟಿಗೆಯನ್ನು ಒಂದು ಬುದ್ಧಿಶಕ್ತಿ ಪರೀಕ್ಷೆ ಎಂದು ಕೆಲವರು ಪರಿಗಣಿಸಿರಲು ಕಾರಣವೆಂದರೆ, ಸಮಸ್ಯೆಯನ್ನು ಬಿಡಿಸುವುದರಲ್ಲಿ ಕಂಡುಬರುವ ನಮ್ಯವರ್ತನೆ. ತಂತಿಯನ್ನು ಎಳೆಯುವುದು, ಅಗಳಿಯನ್ನು ನೂಕುವುದು ಮುಂತಾದ ಪ್ರಕ್ರಿಯೆಗಳಲ್ಲಿ ಸಾಂಕೇತಿಕ ಮನೋವ್ಯಾಪಾರಗಳಿರುವ ಸಾಧ್ಯತೆಯನ್ನು ಕೆಲವು ಸಂಶೋಧಕರು ಒಪ್ಪುತ್ತಾರೆ. ವಿಮೋಚನಾ ತಟ್ಟೆಗಳ ಸಂಖ್ಯೆಯನ್ನು ಹೆಚ್ಚಿಸುವುದರ ಮೂಲಕ ಜಂಕಿನ್ಸ್ ಒಂದು ಸಮಸ್ಯಾಪೆಟ್ಟಿಗೆಯ ಜಟಿಲತೆಯನ್ನು ಹೆಚ್ಚಿಸಿದ್ದನ್ನು ಇಲ್ಲಿ ಪ್ರಸ್ತಾಪಿಸಬಹುದು. ಇಂಥ ಸಮಸ್ಯೆಗಳನ್ನು ಬಿಡಿಸುವಾಗ ಅಧಿಕ ಬುದ್ಧಿ ಮತ್ತು ಮಂದಬುದ್ಧಿ ಪ್ರಾಣಿ ಸಮೂಹಗಳ ನಡುವೆ ಸ್ಪಷ್ಟವ್ಯತ್ಯಾಸವಿರುವುದನ್ನು ಕಾಣಬಹುದು.

ಸಮಸ್ಯಾಪೆಟ್ಟಿಗೆಗಳಂತೆಯೇ, ಕೊಯ್‍ಹ್ಲರ್ ಬಳಸಿದ ಪೆಟ್ಟಿಗೆ ಮತ್ತು ಕೋಲುಗಳ ಸಮಸ್ಯೆಗಳು, ಯರ್ಕೀಸನ ಬಹುವರಣ ಸಮಸ್ಯೆ, ಹಂಟರನ ದ್ವಿಪರ್ಯಾಯ ಸಮಸ್ಯೆ, ಮೆಯರ್ ಬಳಸಿದ ಸಮಸ್ಯೆಗಳು ಇವೇ ಮುಂತಾದವು ಬುದ್ಧಿಶಕ್ತಿಯ ತೌಲನಿಕ ಅಧ್ಯಯನಗಳಿಗೆ ಬಹು ಉಪಯುಕ್ತ ಸಾಧನಗಳೆನಿಸಿವೆ. ಕೊಯ್‍ಹ್ಲರನ ಅಧ್ಯಯನಗಳಲ್ಲಿ ಚಿಂಪಾಂಜಿಯೊಂದು ಎರಡು ಕೋಲುಗಳನ್ನು ಸೇರಿಸಿ ಸಮಸ್ಯೆಯನ್ನು ಬಿಡಿಸಿದ್ದು. ಒಳಮಾಳಿಗೆಯಲ್ಲಿ ನೇತುಬಿದ್ದಿದ್ದ ಬಾಳೆಯ ಹಣ್ಣನ್ನು ಮುಟ್ಟಲೋಸುಗ ಪೆಟ್ಟಿಗೆಗಳನ್ನು ಒಂದರ ಮೇಲೊಂದು ಸೇರಿಸಿದ್ದು, ಕಂಬಗಳನ್ನು ಹತ್ತುವ ಸಾಧನಗಳಾಗಿ ಪೆಟ್ಟಿಗೆಗಳನ್ನು ಬಳಸಿಕೊಂಡದ್ದು ಮುಂತಾದ ಅನೇಕ ಪ್ರಾಯೋಗಿಕ ನಿದರ್ಶನಗಳು ಪ್ರಾಣಿಗಳಲ್ಲಿ ಬುದ್ಧಿಶಕ್ತಿಯಿರುವುದನ್ನು ಸೂಚಿಸುತ್ತವೆಯಲ್ಲದೇ, ಅಂಥ ವರ್ತನೆಗಳನ್ನು ಇತರ ಪ್ರಾಣಿಗಳ ಹಾಗೂ ಮನುಷ್ಯರ ವರ್ತನೆಯೊಂದಿಗೆ ಹೋಲಿಸಿ ನೋಡಲೂ ಅನುವು ಮಾಡಿಕೊಡುತ್ತದೆ.

ಮನುಷ್ಯರಲ್ಲಿ ಕಂಡುಬರುವ ಬುದ್ಧಿಶಕ್ತಿ ಜೀವವಿಕಾಸದ ಫಲವೆಂಬುದರ ಬಗ್ಗೆ ಇಂದು ಸಂಶೋಧಕರಲ್ಲಿ ಅಷ್ಟಾಗಿ ಭಿನ್ನಾಭಿಪ್ರಾಯ ಕಂಡುಬರುತ್ತಿಲ್ಲ. ಅನೇಕ ದೃಷ್ಟಾಂತಗಳು ಬುದ್ಧಿಶಕ್ತಿಯ ವೈಕಾಸಿಕ ಹಿನ್ನೆಲೆಯನ್ನು ಪ್ರತಿಪಾದಿಸುತ್ತವೆ. ಹೀಗಿರುವುದರಿಂದ ಬುದ್ಧಿಶ್ಕತಿಯ ಆಧಾರದ ಮೇಲೆ ಮನುಷ್ಯ ಮತ್ತು ಪ್ರಾಣಿಗಳ ನಡುವೆ ಭೇದಮಾಡುವುದು ಸಮಂಜಸವೆನಿಸದು ಜೀವವಿಕಾಸ ಶ್ರೇಣಿಯ ಕೆಳ ಹಂತಗಳಲ್ಲಿ ಬುದ್ಧಿಶಕ್ತಿಯ ಪ್ರವರ್ತನೆ ಅಸ್ಪಷ್ವವಾಗಿದ್ದರೂ ಆ ಶ್ರೇಣಿಯ ಮೇಲೆ ಮೇಲೇರಿದಂತೆಲ್ಲ ಅದು ಹೆಚ್ಚು ಹೆಚ್ಚು ಪ್ರಕಟವಾಗುವುದನ್ನು ಕಾಣಬಹುದು. ಸಸ್ತನಿಗಳ ಮಟ್ಟದಲ್ಲಿ ಅದರಲ್ಲಿಯೂ ವಾನರರಲ್ಲಿ ಅದು ಸ್ಪಷ್ಟವಾಗಿ ಕಾರ್ಯನಿರ್ವಹಿಸುವುದನ್ನು ಕಾಣಬಹುದು. ಅಂದಮೇಲೆ ಮಾನವನಲ್ಲಿ ಕಂಡುಬರುವ ಜಟಿಲರೂಪದ ಬುದ್ಧಿಶಕ್ತಿಯ ಸರಳ ಮೂಲರೂಪಗಳು ಪ್ರಾಣಿಗಳ ಮಟ್ಟದಲ್ಲಿಯೇ ಕ್ರಿಯಾಶೀಲವಾಗಿರುತ್ತವೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಇತರ ವರ್ತನಾರೂಪಗಳು ; ಅಭಿಪ್ರೇರಣೆ, ಭಾವಜೀವನ, ಸಾಮಾಜಿಕ ಜೀವನ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆಯೂ ತೌಲನಿಕ ಅಧ್ಯಯನಗಳು ಅಲ್ಲಲ್ಲಿ ನಡೆದಿವೆ. ಮೂಲರೂಪದ ಅಭಿಪ್ರೇರಣೆ ಮತ್ತು ಸಂವೇಗಶೀಲತೆಗಳು ಜೀವವಿಕಾಸದ ಪ್ರತಿಫಲಗಳು ಎಂಬುದು ಹಲವು ಸಂಶೋಧಕರ ಅಭಿಮತ.

ಸಾಮಾಜಿಕ ವರ್ತನೆಯಲ್ಲಿಯೂ ಕೆಲವು ಗುಣಲಕ್ಷಣಗಳು ವೈಕಾಸಿಕ ಹಿನ್ನೆಲೆಯನ್ನು ಹೊಂದಿದೆ ಎಂಬುದು ಕೆಲವರ ಅಭಿಮತ. ಇವುಗಳಲ್ಲಿ ಮುಖ್ಯವಾಗಿ ಸಾಮಾಜಿಕ ಮಿಲನ, ಸಾಮಾಜಿಕ ಅನುಕೂಲನ, ದರ್ಪವೃತ್ತಿ ಸ್ನೇಹ, ಸಹಕಾರ ಮುಂತಾದ ಸಾಂಘಿಕ ವರ್ತನೆಗಳು ಮೇಲ್ವರ್ಗದ ಕಶೇರುಕಗಳಲ್ಲಿ ಅದರಲ್ಲಿಯೂ ಹೆಚ್ಚಾಗಿ ಮೇಲ್ವರ್ಗದ ಸಸ್ತನಿಗಳಲ್ಲಿ ಕಂಡುಬರುವುದು ಗಮನಾರ್ಹ ಅಂಶ ಸಾಮಾಜಿಕ ಮಿಲನ ಆಶ್ಚರ್ಯಕರವೆನಿಸುವ ರೀತಿಯಲ್ಲಿ ವಲಯವಂತ ಜೀವ ವರ್ಗದಲ್ಲಿ ಕಂಡುಬರುತ್ತದೆ. ಉದಾಹರಣೆಗೆ ಇರುವೆಗಳಲ್ಲಿ ಅದು ಚೆನ್ನಾಗಿ ವಿಕಾಸ ಹೊಂದಿರುವುದನ್ನು ಹ್ವೀಲರನ ಅಧ್ಯಯನಗಳು ಬೆಳಕಿಗೆ ತಂದಿವೆ. ಆದರೆ ವಿಕಾಸ ಶ್ರೇಣಿಯಲ್ಲಿ ಮೇಲೇರಿರುವ ಕೆಲವು ಪಕ್ಷಿಗಳಲ್ಲಿ ಇದು ಕಂಡುಬರದು. ಆದ್ದರಿಂದ ಸಾಮಾಜಿಕ ಮಿಲನದ ಮತ್ತು ಜೀವವಿಕಾಸಗಳ ನಡುವೆ ಸ್ಪಷ್ಟ ಸಹಸಂಬಂಧವಿರುವುದಕ್ಕೆ ನಿರ್ದಿಷ್ಟ ಆಧಾರಗಳು ಕಾಣವು.

ಮಾನವನಲ್ಲಿ ಸಾಮಾನ್ಯವಾಗಿ ಕಂಡುವರುವ ಸಾಮಾಜಿಕ ಅನುಕೂಲನ ಕೆಳ ಪ್ರಾಣಿವರ್ಗಗಳಲ್ಲಿರುವುದಕ್ಕೆ ಸ್ಪಷ್ಟನಿದರ್ಶನಗಳಿಲ್ಲ. ಆದರೆ ಕೆಳಗಿನ ಮತ್ತು ಮೇಲಿನ ಕಶೇರುಕಗಳಲ್ಲಿ ಆ ವರ್ತನೆ ಕಂಡುಬರುತ್ತದೆ. ಉದಾಹರಣೆಗೆ 2.4 ಅಥವಾ 8 ಮೀನುಗಳು ಒಟ್ಟಿಗೆ ಅಕ್ವೇರಿಯಂ ವ್ಯೂಹವನ್ನು ಹೆಚ್ಚು ಬೇಗ ಕಲಿಯುತ್ತವೆ. ಪಕ್ಷಿ, ಇಲಿ, ಬೆಕ್ಕು, ಕುರಿ ಮತ್ತು ಮಂಗಗಳು ಗುಂಪಗಳಲ್ಲಿ ಹೆಚ್ಚು ಆಹಾರವನ್ನು ಸೇವಿಸುವುದು ಗಮನಾರ್ಹ ಅಂಶ. ಸಾಮಾಜಿಕ ಅನುಕೂಲನದಂತೆಯೇ, ದರ್ಪವೃತ್ತಿಯೂ ಪ್ರಾಣಿಗಳಲ್ಲಿ ಕಂಡುಬರುತ್ತವೆ. ಕೆಲವು ಪ್ರಾಣಿವರ್ಗಗಳಲ್ಲಿ ಸಾಂಘಿಕ ಸಾಹಚರ್ಯದಲ್ಲಿ ಪ್ರಭುತ್ವ ಶಕ್ತಿಗನುಗುಣವಾಗಿ ಒಂದು ಅನುಕ್ರಮಶ್ರೇಣಿಯೇ ನಿರ್ಮಿತವಾಗಿರುವುದನ್ನು ಕಾಣಬಹುದು. ಷೆಲ್ಡರಪ್-ಎಬ್ ನಡೆಸಿದ ಕುಕ್ಕುವರ್ತನೆಯ (ಪೆಕಿಂಗ್ ಬಿಹೇವಿಯರ್) ಮೇಲಿನ ಅಧ್ಯಯನಗಳು ಕೋಳಿ ಮೀನು ಉರಗ ಬೆಕ್ಕು ನಾಯಿ ಅಡು ಕುರಿ ದನ ಸಿಂಹ ಮಂಗ ವಾನರ ಈ ಪ್ರಾಣಿಸಮೂಹಗಳಲ್ಲಿ ದರ್ಪವೃತ್ತಿ ಸ್ಪಷ್ಟವಾಗಿ ಅಸ್ತಿತ್ವದಲ್ಲಿರುವುದನ್ನು ಬೆಳಕಿಗೆ ತಂದಿವೆ. ಇದೇ ರೀತಿಯಲ್ಲಿ ಸ್ನೇಹ ಮತ್ತು ಸಹಕಾರವರ್ತನೆಗಳ ಸರಳರೂಪಗಳು ಮೇಲ್ಮಟ್ಟದ ಪ್ರಾಣಿವರ್ಗಗಳಲ್ಲಿ ಕಂಡುಬರುತ್ತವೆ ಎಂಬುದನ್ನು ತೌಲನಿಕ ಅಧ್ಯಯನಗಳು ಪ್ರತಿಪಾದಿಸುತ್ತವೆ. ಅಂತರ ಸಂಸ್ಕøತಿ ಅಧ್ಯಯನಗಳು : ತೌಲನಿಕ ಅಧ್ಯಯನಗಳು ಕೇವಲ ಪ್ರಾಣಿಗಳು ಮತ್ತು ಮನುಷ್ಯರ ವರ್ತನಾರೀತಿಗಳನ್ನು ಹೋಲಿಸಲು ಮೀಸಲಾಗಿರದೇ ಮಾನವನಲ್ಲೇ ಅಂತರ ಸಂಸ್ಕøತಿ ಹೋಲಿಕೆಗಳಿಗೂ ಉಪಯುಕ್ತವಾಗಿವೆ. ವಿವಿಧ ಸಂಸ್ಕøತಿಗಳು ಮತ್ತು ಉಪಸಂಸ್ಕøತಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮನೋಸಾಮಾಜಿಕ ವರ್ತನಾ ರೀತಿಗಳ ಬಗ್ಗೆ ಇಂದು ತೌಲನಿಕ ಮನೋವಿe್ಞÁನಿಗಳು ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದ್ಕಕಾಗಿಯೇ ಇಂದು ಅಂತರ ಸಾಂಸ್ಕøತಿಕ ಹಾಗೂ ಅಂತರ ರಾಷ್ಟ್ರೀಯ ಸಂಶೋದನಾ ಸಂಸ್ಥೆಗಳು ಅಸ್ತಿತ್ವಕ್ಕೆ ಬರುತ್ತಿವೆ. ಅಂತರ ಸಂಸ್ಕøತಿಯ ಅಧ್ಯಯನಗಳ ವ್ಯಾಪ್ತಿಗೆ ಸೇರುವ ಸಮಸ್ಯೆಗಳಲ್ಲಿ ಮುಖ್ಯವಾದವುಗಳೆಂದರೆ, ಅಭಿಪ್ರೇರಣೆಗಳು, ನಂಬಿಕೆಗಳು ಮತ್ತು ಜೀವನ ಮೌಲ್ಯಗಳು ಅಪಸಾಮಾನ್ಯವರ್ತನೆಗಳು, ಸಹಕಾರ, ಪ್ರತಿಸ್ಪರ್ಧೆಗಳಂಥ ಸಾಂಘಿಕ ವರ್ತನೆಗಳು ಇತ್ಯಾದಿ. ಅಮೆರಿಕದ ಮೆಕ್ಲಿಲ್ಯಾಂಡ್ ಪ್ರಾರಂಭಿಸಿದ ಸಾಧನಾಭಿಪ್ರೇರಣೆಯ (ಅಚೀವ್‍ಮೆಂಟ್ ಮೋಟಿವೇಷನ್) ಮೇಲಿನ ಅಧ್ಯಯನಗಳು ಇಂದು ವ್ಯಾಪಕ ರೀತಿಯ ಅಂತರ ಸಂಸ್ಕøತಿಯ ಅಧ್ಯಯನಗಳಾಗಿ ಪರಿಣಮಿಸಿರುವುದನ್ನು ಇಲ್ಲಿ ಪ್ರಸ್ತಾಪಿಸಬಹುದು. ಇತ್ತೀಚೆಗೆ ಲಿಂಡ್‍ಗ್ರೆನ್ ಮತ್ತು ಮರಾಷ್ ಎಂಬುವರು ಅಂತರ ಸಂಸ್ಕøತಿ ಒಳನೋಟ ಮತ್ತು ಅನುಭೂತಿಶಕ್ತಿಗೆ (ಎಂಪತಿ) ಸಂಬಂಧಿಸಿದಂತೆ ಅಮೆರಿಕನ್ನರು ಅರ್‍ಮೆನೀಯನ್ನರು ಮತ್ತು ಅರಬ್ಬರ ಮೇಲೆ ನಡೆಸಿದ ಅಧ್ಯಯನ ಅಂತರ ಸಂಸ್ಕøತಿ ಅಧ್ಯಯನಗಳಿಗೆ ಮತ್ತೊಂದು ಸ್ಪಷ್ಟನಿದರ್ಶನ. ಇಂದು ವಿಶ್ವಸಂಸ್ಥೆಯ ಶೈಕ್ಷಣಿಕ, ವೈe್ಞÁನಿಕ ಮತ್ತು ಸಾಂಸ್ಕøತಿಕ ವ್ಯವಸ್ಥೆ (ಯುನೆಸ್ಕೊ) ಮತ್ತು ವಿಶ್ವ ಆರೋಗ್ಯ ವ್ಯವಸ್ಥೆಗಳಂಥ ಹೂ) ಬೃಹತ್ ಸಂಸ್ಥೆಗಳು ಅಂತರ ಸಾಂಸ್ಕøತಿಕ ಅಧ್ಯಯನಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿರುವುದು ಮಾನವನ ವಿಶ್ವಬಾಂಧವ್ಯವನ್ನು ಬೆಳೆಸಲು ಪ್ರಯತ್ನವೆಂದು ಹೇಳಬಹುದು. ಈ ದೃಷ್ಟಿಯಿಂದ ನೋಡಿದಾಗ, ತೌಲನಿಕ ಮನೋವಿe್ಞÁನದ ಕೊಡುಗೆ ಮಾನವತೆಗೆ ಎಷ್ಟು ಅಮೂಲ್ಯವಾಗಬಲ್ಲದು ಎಂಬ ಅಂಶ ಸ್ಪಷ್ಟವಾಗುತ್ತದೆ.

ಮನೋವಿe್ಞÁನದ ಒಂದು ಪ್ರಮುಖ ಅಂಗಶಾಲೆಯಾಗಿ ಬೆಳೆಯುತ್ತಿರುವ ತೌಲನಿಕ ಮನೋವಿe್ಞÁನ ಮಾನವವರ್ತನೆಯ ಸ್ಪಷ್ಟಜ್ಞಾನವನ್ನು ಪಡೆಯುವಲ್ಲಿ ಸೈದ್ಧಾಂತಿಕವಾಗಿಯೂ ವ್ಯಾವಹಾರಿಕವಾಗಿಯೂ ಉತ್ತಮ ನೆರವು ನೀಡಬಲ್ಲದು. ಮಾನವವರ್ತನೆಯನ್ನು ಇತರ ಪ್ರಾಣಿವರ್ಗಗಳೊಂದಿಗೆ ಹೋಲಿಸಿ ನೋಡಿ ವೈಕಾಸಿಕ ಹಿನ್ನೆಲೆಯನ್ನು ಅರಿಯುವುದರ ಜೊತೆ ಜೊತೆಗೆ ಅಂತರ ಸಂಸ್ಕøತಿ ಅಧ್ಯಯನಗಳ ಮೂಲಕ ಮಾನವವರ್ಗದಲ್ಲಿಯೇ ಕಂಡುಬರುವ ವರ್ತನಾರೂಪ-ವಿರೂಪಗಳ ಹೋಲಿಕೆ ವ್ಯತ್ಯಾಸಗಳ ಬಗ್ಗೆಯೂ ಸೂಕ್ತ ಒಳನೋಟಗಳನ್ನು ಪಡೆಯಲೂ ಈ e್ಞÁನಕ್ಷೇತ್ರ ಪ್ರಮುಖ ಮಾರ್ಗವಾಗಬಲ್ಲದು. ಮಾನವನನ್ನು ಪ್ರಾಣಿಗಳೊಡನೆ ತುಲನೆ ಮಾಡುವಾಗ, ತೌಲನಿಕ ಮನೋವಿe್ಞÁನಿ ಪ್ರಮುಖವಾಗಿ ಕಾಲ ದೇಶ ಅಭಿಪ್ರೆರಣೆ ಮತ್ತು ಸಂವೇಗ ದೈಹಿಕ ಚಲನೆ ಭಾಷೆ ಸಂದೇಶವಿನಿಮಯ ಸಾಂಘಿಕ ಸಾಹಚರ್ಯ ಅಪಸಾಮಾನ್ಯವರ್ತನೆ ಮುಂತಾದ ಅಂಶಗಳಿಗೆ ಗಮನ ಕೊಡುತ್ತಾರೆ. ಅಂತರ ಸಂಸ್ಕøತಿಕ ಅಧ್ಯಯನಗಳಲ್ಲಿ ಆತನ ಗಮನ ಹೆಚ್ಚಾಗಿ ಸಾಂಸ್ಕøತಿಕ ಕಲ್ಪಿತಭಾವಗಳು. ಜೀವನಮೌಲ್ಯಗಳು ಮತ್ತು ಸಾಹಚರ್ಯಗಳ ಮೇಲೆ ಕೇಂದ್ರೀಕೃತವಾಗಿರುತ್ತವೆ. (ಡಿ.)