ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದಿಗ್ವಿನ್ಯಾಸ

ವಿಕಿಸೋರ್ಸ್ದಿಂದ

ದಿಗ್ವಿನ್ಯಾಸ - ಕಾರ್ಬನಿಕ ಅಣುವೊಂದರ ಯಾವ ಭಾಗದಲ್ಲಿ ರಾಸಾಯನಿಕ ಕ್ರಿಯೆ ಸಂಭವಿಸುವುದು ಸಾಧ್ಯ ಎಂಬುದರ ಪರಿಶೀಲನೆ (ಓರಿಯೆಂಟೇಷನ್). ಉದಾಹರಣೆಗೆ ನೈಟ್ರೊಬೆನ್‍ಜಿûೀನನ್ನು ನೈಟ್ರೇಶನ್ನಿಗೆ ಒಳಪಡಿಸಿದರೆ ಎರಡನೆಯ ನೈಟ್ರೊ ಗುಂಪು 2, 3, 4, 5 ಅಥವಾ 6 ನೆಯ ಸ್ಥಾನಗಳಿಗೆ ಹೋಗಬಹುದು. ಆದರೆ ನೈಟ್ರೊಬೆನ್‍ಜಿûೀನಿನಲ್ಲಿ ಆಗಲೇ ಇರುವ ನೈಟ್ರೊಗುಂಪು ಆಗಮಿಸುವ ಎರಡನೆಯ ನೈಟ್ರೊಗುಂಪನ್ನು 3 ಅಥವಾ 5ನೆಯ ಸ್ಥಾನಗಳಿಗೆ ನಿರ್ದೇಶಿಸುವ ಸಾಮಥ್ರ್ಯವನ್ನು ಪಡೆದಿರುತ್ತದೆ. ಆದ್ದರಿಂದ ಬರುವ ಎರಡನೆಯ ನೈಟ್ರೊಗುಂಪು 3 ಅಥವಾ 5ನೆಯ ಸ್ಥಾನಗಳಿಗೆ ಹೋಗುವುದು. 3 ಮತ್ತು 5ನೆಯ ಸ್ಥಾನಗಳು ರಾಸಾಯನಿಕ ಕ್ರಿಯೆಯ ದೃಷ್ಟಿಯಿಂದ ಎಲ್ಲ ವಿಧಗಳಲ್ಲಿಯೂ ಸರಿಸಮಾನವಾದವು. ರಸಾಯನ ಶಾಸ್ತ್ರದ ಪರಿಭಾಷೆಯಲ್ಲಿ ಈ ಸ್ಥಾನಗಳ ಹೆಸರು ಮೆಟಸ್ಥಾನಗಳು (ಮೆಟಪೊಸಿಷನ್ಸ್). ಆದ್ದರಿಂದಲೇ ನೈಟ್ರೊ ಮತ್ತು ಆ ಬಗೆಯ ಉಳಿದ ಗುಂಪುಗಳನ್ನು ಮೆಟನಿರ್ದೇಶಕ ಗುಂಪುಗಳೆಂದು ಕರೆಯುತ್ತಾರೆ.

ನೈಟ್ರೊಬೆನ್‍ಜಿûೀನಿಗೆ ಬದಲಾಗಿ ಫೀನಾಲನ್ನು ತೆಗೆದುಕೊಂಡು ನೈಟ್ರೊ ಗುಂಪು ಇರುವೆಡೆ ಹೈಡ್ರಾಕ್ಸೈಲ್ ಗುಂಪು ಇರುವುದು. ಈ ಗುಂಪಿಗೆ ಬರುವ ನೈಟ್ರೊಗುಂಪನ್ನು 2, 6 ಅಥವಾ 4ನೆಯ ಸ್ಥಾನಗಳಿಗೆ ನಿರ್ದೇಶಿಸುವ ಸಾಮಥ್ರ್ಯ ಉಂಟು. 4ನೆಯ ಸ್ಥಾನವನ್ನು ಪ್ಯಾರ ಸ್ಥಾನವೆಂದೂ ರಸಾಯನ ಕ್ರಿಯೆಯ ದೃಷ್ಟಿಯಿಂದ ಸರಿಸಮಾನವಾಗಿರುವ 2 ಮತ್ತು 6ನೆಯ ಸ್ಥಾನಗಳನ್ನು ಆರ್ಥೊ ಸ್ಥಾನಗಳೆಂದೂ ಕರೆಯುತ್ತಾರೆ. ಆದ್ದರಿಂದಲೇ ಫೀನಾಲನ್ನು ನೈಟ್ರೇಶನ್ನಿಗೆ ಒಳಪಡಿಸಿದರೆ ದೊರೆಯುವ ನೈಟ್ರೊಗುಂಪು 2, 6 ಇಲ್ಲವೆ 4ನೆಯ ಸ್ಥಾನಕ್ಕೆ ಹೋಗುತ್ತದೆ. ಹೈಡ್ರಾಕ್ಸೈಲ್ ಮತ್ತು ಆ ಬಗೆಯ ಉಳಿದ ಗುಂಪುಗಳಿಗೆ ಆರ್ಥೊ ಮತ್ತು ಪ್ಯಾರ ನಿರ್ದೇಶಕ ಗುಂಪುಗಳೆಂದು ಹೆಸರು. (ಕೆ.ಎಸ್.ಎಸ್.ಡಿ.)